ಚಿತ್ರ ನೋಡಿ. ಆಟೋ ಸಿಸ್ಯ ಏನೋ ಸಂದೇಶ ಕೊಡ್ತಿದ್ದಾನೆ. ನಿನ್ನೆ ಟ್ರಾಫಿಕ್ ಸಿಗ್ನಲ್ಲಲ್ಲಿ ನಿಂತಾಗ ಎದುರುಗಡೆ ಕಾಣಿಸಿತು. ತಕ್ಷಣ ಕಟ್ಟೆ ಶಂಕ್ರ ಅವರು ಮೈಮೇಲೆ ಬಂದಂತಾಗಿ ಫೋನ್ ಕ್ಯಾಮೆರಾದಿಂದ ಫೋಟೋ ತೆಗೆದುಕೊಂಡೆ. :) "ಊರಿಗೇ ಒಂದು ದಾರಿಯಾದರೆ ಈ ಪೋರನಿಗೇ ಒಂದು ದಾರಿಯಂತೆ " ಅನ್ನುವ ಹಾಗಿದೆ ಇದು. ಹಿಂಗಾದ್ರೆ ಆ ತಿರುಪತಿ ಎಂಕಟ್ರಮಣನೇ ಕಾಪಾಡ್ಬೇಕು.
ಆದ್ರೂ...ಟ್ರಾಫಿಕ್ ಸಿಗ್ನಲ್ಲಲ್ಲಿ ಇಂತವೆಲ್ಲ ಇದ್ರೆ ಕಾಯೋದಕ್ಕೂ ಬೇಜಾರಾಗೋಲ್ಲ ಅಲ್ವಾ? :)
(ಫೋಟೋ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣುತ್ತದೆ)
16 ಕಾಮೆಂಟ್ಗಳು:
ಸೂಪರ ವಿಕಾಸ .... ಕಟ್ಟೆ ಶಂಕ್ರ will be proud of you ... ಆದರೆ ಮುಂದೆ ಮಾತ್ರ ಅಟೋ ಫೊಟೋ ತೆಗಿಯಕೊಡದು... ಅದಕ್ಕೆ ಶಂಕ್ರನ್ ಎಕ್ಸಕ್ಲುಸಿವ ರಾಯಿಟ್ಸ್ ಇದೆ :).... ಫೊಟೋ ನೋಡಿ ನಕ್ಕು ನಕ್ಕು ಹೊಟ್ಟೆ ನೋಯಿಸ್ತಾ ಇದೆ. ಆ ಮಾರಯಾ ಎನೋ ಹೇಳಕ್ಕೆ ಹೋಗಿ dangerous messege ಕೊಟ್ಟಿದ್ದಾನೆ... karnataka state pollution control board ge picture kalisbekittu... :))
Good One...
ಚೆನ್ನಾಗಿದ್ದು... K750i ಇಟ್ಗಂಡು ಕಮ್ಮಿ ರೆಸೊಲ್ಯುಶನ್ (640x480) ನಲ್ಲಿ ಎಂತಕ್ಕೆ ತೆಗದ್ದೆ ಅಂತ ಗೊತ್ತಾಗಲ್ಲೆ!!
aa driver sikkare.. vichaarisi koLLabEku
ಫೋಟೋ ಚೆನ್ನಾಗಿದೆ.. ಅದಕ್ಕಿಂತ ಅದರಲ್ಲಿ ಬರೆದಿರೋದು ನೋಡಿ ತಲೆ ಚಚ್ಚಿಕೊಳ್ಳೋ ಹಾಗಾಯ್ತು ಮಾರಾಯ. ಈ ಡ್ರೈವರ್ ಬರೆಸೋ ಜೋಷಲ್ಲಿ, ಪೈಂಟರ್ ಬರೆಯೋ ಜೋಷಲ್ಲಿ ಇದ್ರು ಅನ್ಸುತ್ತೆ. ಅದ್ಸರಿ, ಎಲ್ಲಿ ಕಂಡಿದ್ದು ಇದು ನಿಂಗೆ? kalash_siya ಹೇಳಿದ ಹಾಗೆ ಇನ್ಮೇಲೆ ಆಟೋಗಳ ಫೋಟೋ ತೆಗೀಬ್ಯಾಡ. ನನ್ನ ನಾಮಕರಣ ಆಗೋಗಿದೆ "ಆಟೋ ಶಂಕ್ರ" ಅಂತಾ...
ಕಟ್ಟೆ ಶಂಕ್ರ ಅಲಿಯಾಸ್ ಆಟೋ ಶಂಕ್ರ
ವಿಕಾಸ್,
ಅವತ್ತು ಆ ಆಟೋ ಡ್ರೈವರ್ ಯಾರ್ ಮುಖ ನೋಡಿ ಎದ್ದಿದ್ನನ ಮಾರಾಯಾ.. ನಿನ್ನ ಕೈಗೆ ಸಿಕ್ಕಿ ಬಿದ್ದ. Mostly ಪಾಪ "ಎನ್ನಡ" ಮಾತಾಡುವಂವ ಆಗಿರವು. ಅದ್ಕೇಯಾ ಬರ್ದಿದ್ದು ಅವಂಗೇ ಅರ್ಥ ಆಜಿಲ್ಲೆ. ;-)
ನಮಸ್ಕಾರ,
ಸೂಪರ್ ಚಿತ್ರ.
ಇನ್ನು ಮೇಲೆ ಆಟೋ ನೋಡಿ ಗೋವಿಂದಾ ಗೋವಿಂದಾ ಅನ್ಬೇಕು. ಮುಂದೆ ಬರಲಿರುವ ಚಿತ್ರ ಯಾವುದು?
ಚೆ! ಏನಪ್ಪ ಇದು.. ಬಹಳ ಬೇಜಾರ್ ಆಯ್ತು...
@Kalash
ಸಾರ್, ಶಂಕ್ರಣ್ಣ ಅವ್ರದ್ದು ಬರೇ ಮಾಮೂಲಿ ಆಟೋಗೆ ಮಾತ್ರ rights ಇರೋದು. ಇದು ಲಗೇಜ್ ಆಟೋ :)
@chandru
ya.. gud one :)
@ಹರೀಶ್
ಜಾಸ್ತಿ ರೆಸೊಲ್ಯೂಷನ್ ಇಟ್ರೆ ಝೂಮ್ ಮಾಡಲ್ಲಾಗ್ತಿಲ್ಲೆ . ಆದೂ ಅಲ್ದೇ ಟ್ರಾಫಿಕ್ ಸಿಗ್ನಲ್ ನಲ್ಲಿ ಇದ್ದಿದ್ರಿಂದ ಅದ್ನೆಲ್ಲಾ ಸೆಟ್ ಮಾಡಲ್ಲೆ ಹೋಜ್ನಿಲ್ಲೆ. ಸುಮ್ನೆ ತೆಗ್ದುಬಿಟ್ಟಿ.
@ಅಂತರ್ವಾಣಿ
ಸಿಕ್ಕಿದ್ದ.. ವಿಚಾರಿಸಲಿಲ್ಲ ಅಷ್ಟೆ.. ಹಸಿರು ದೀಪ ಬಿದ್ದುಬಿಟ್ಟಿತ್ತು :)
@ಶಂಕರ್
ಸರಿ ಸಾರ್, ಆ ಟೈಟಲ್ಲು ನಿಮ್ಗೇ ಇರಲಿ.
ನಾವೂ ಇದನ್ನ ನಿಮಗೇ ಅರ್ಪಿಸುತ್ತಿದ್ದೇವೆ :)
@ತೇಜಕ್ಕ
:-) ಅಕ್ಷರ, ವ್ಯಾಕರಣ, ಭಾಷೆ ಏನೂ ತಪ್ಪಿಲ್ಲ. ಆದ್ರೆ ಎಲ್ಲದಕ್ಕಿಂತ ದೊಡ್ಡ ತಪ್ಪು ಆಗೋಗಿದೆ :)
@ಜೋಮನ್
ಮುಂದೆ ಇಂತ ಚಿತ್ರಗಳು ಬರದೇ ಇರಲಿ ಅಂತ ಹಾರೈಸಿ ಗೋವಿಂದಾ! :)
@ಕಾರ್ತಿಕ್
ಬೇಜಾರು.. ಹುಂ.. ಆಗ್ಬೇಕಾದ್ದೇ :)
ಇದು ಜನರು ಕುಳಿತುಕೊಳ್ಳುವ ಅಟೋನ ಆಥವಾ ವಸ್ತುಗಳನ್ನು ತೆಗೆದುಕೊಂಡು ಹೋಗುವ ಅಟೋನ
ಪದ್ಮಾವತಿ ಜೋಶಿ
ನಮಸ್ತೆ,
ವಸ್ತುಗಳನ್ನ ತೆಗೆದುಕೊಂಡು ಹೋಗುವಂತ ಆಟೋ ಇದು.
ಲಗೇಜ್ ಆಟೋ.
ಆಟೋರಾಜ ತನಗೆ ಸರಿ ಅನಿಸಿದ್ದನ್ನೇ ಹೇಳಿದ್ದಾನೆ!
ಸೂಪರ್ !:)
ಪರಿಸರ ಮಾಲಿನ್ಯಕ್ಕೆ ನಾವೆಲ್ಲ ಹೊಣೆ ಅಂತ ಬರೆಯಲು ಹೊರಟಿದ್ದ ಅಂತ ಕಾಣ್ಸುತ್ತೆ ಪಾ.....ಪ.
ವಿಕಾಸ್..ಈಗ ನಾನು ನಗಬೇಕ ಅಳಬೇಕ? ಅಥವ ತಲೆ ಚಚ್ಕೊಬೇಕ? ಪ್ಲೀಸ್ ನೀನೆ ಹೇಳಿಬಿಡು.....
@ಶ್ರೀ, ಸುನಾಥಕಾಕ, ಕಾಮತ್, ಚೋಮು
thanQ.
ಚೋಮು, ನೀ ಏನ್ ಮಾಡಿದ್ರೂ ಒ.ಕೆ.ನಪ್ಪ :)
ಕಾಮೆಂಟ್ ಪೋಸ್ಟ್ ಮಾಡಿ