Wikimedia Foundation, Wikimedia logo family complete-2022, CC BY-SA 3.0 |
ವಿಕಿಮೀಡಿಯನ್ ಸಮುದಾಯ ಆಗಾಗ ಭೇಟಿಯಾಗುವುದು ವಾಡಿಕೆ. ಸಾಮಾನ್ಯವಾಗಿ ಒಂದಿಷ್ಟು ಸಕ್ರಿಯ ವಿಕಿಮೀಡಿಯನ್ನರು ಒಂದೆಡೆ ಸೇರಿ ಆ ಯೋಜನೆಗಳ ಬಗ್ಗೆ ಚರ್ಚಿಸುವುದು, ಸಮುದಾಯವನ್ನು ಬೆಳೆಸುವ ಬಗ್ಗೆ ಕಾರ್ಯಯೋಜನೆ ರೂಪಿಸುವುದು, ಪರಸ್ಪರ ಮಾಹಿತಿ ವಿನಿಮಯ, ತರಬೇತಿ, ಕಾರ್ಯಾಗಾರಗಳು ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗುವ ಅಭ್ಯಾಸವಿದೆ. ಆಯಾ ಭಾಷಾ ಸಮುದಾಯಗಳು ಅಥವಾ ನಿರ್ದಿಷ್ಟ ಕಾರ್ಯಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಬಳಕೆದಾರರ ಗುಂಪುಗಳು ಕೂಡ ಉದ್ದೇಶಿತ ಕೆಲಸಗಳಿಗಾಗಿ ಭೇಟಿಯಾಗುತ್ತವೆ.
ಈಗೊಂದು ಎರಡ್ಮೂರು ವರ್ಷಗಳಿಂದ ಕೋವಿಡ್ ಮುಂತಾದ ಕಾರಣಗಳಿಂದ ಭೌತಿಕ ಭೇಟಿ ಸಾಧ್ಯವಾಗದೇ ಹೋಗಿತ್ತು. ಈ ಸಂದರ್ಭದಲ್ಲಿ ಮೂರ್ನಾಲ್ಕು ಬಾರಿ ಆನ್ ಲೈನ್ ಸಭೆಗಳನ್ನು ನಡೆಸಿದ್ದೆವು. ಆ ಸಭೆಯಲ್ಲಿ ಚರ್ಚಿಸಿದಂತೆ ಈ ಬಾರಿ ಒಂದು ಭೌತಿಕ ಸಮ್ಮಿಲನವನ್ನು ಉಡುಪಿಯಲ್ಲಿ ನಡೆಸುವುದು ಎಂದು ತೀರ್ಮಾನವಾಯಿತು.
Pavanaja, Kannada Wiki Sammilana 2023 Udupi 02, CC BY-SA 4.0 |
ದಿನದ ಸಮ್ಮಿಲನವನ್ನು ನಡೆಸಿದೆವು. ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನಡೆದ ಈ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿದವರು ನಾಡೋಜ ಕೆ.ಪಿ.ರಾವ್ ಅವರು.
ಅನಂತರ ಹಲವು ವಿಕಿಮೀಡಿಯನ್ನರಿಂದ ಹಲವು ವಿಷಯಗಳ ಬಗ್ಗೆ ಸೆಮಿನಾರ್, ಪ್ರೆಸೆಂಟೇಶನ್ ಗಳು ನಡೆದವು. ವಿಕಿಮೀಡಿಯ ಕ್ವಿಜ್ ನಡೆಸಲಾಯಿತು, ಮಾಹಿತಿ ವಿನಿಮಯ ಚರ್ಚೆಗಳು ನಡೆದವು. ಬೇರೆ ಬೇರೆ ಊರುಗಳಿಂದ , ಹೆಚ್ಚಾಗಿ ಕರಾವಳಿಯ ಊರುಗಳಿಂದ ಹಲವು ಹಳೆ ಹೊಸ ವಿಕಿಮೀಡಿಯನ್ನರು ಪಾಲ್ಗೊಂಡಿದ್ದ ಈ ಸಮ್ಮಿಲನವು ಬಹಳ ದಿನಗಳ ನಂತರ ಪರಸ್ಪರ ಭೇಟಿಯಾಗುವ ಅವಕಾಶ ಕಲ್ಪಿಸಿತು. ಡಾ. ಯು.ಬಿ. ಪವನಜರ ಮಾರ್ಗದರ್ಶನದಲ್ಲಿ ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರು ಸಭಾಂಗಣದ ತಯಾರಿಯನ್ನು ಚೆನ್ನಾಗಿ ಮಾಡಿ ಚಟುವಟಿಕೆಯಿಂದ ಪಾಲ್ಗೊಂಡರು.
ಕಾರ್ಯಕ್ರಮದ ವಿವರಗಳು: ವಿಕಿಪೀಡಿಯ ಪುಟದಲ್ಲಿ -
ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿPavanaja, Kannada Wiki Sammilana 2023 Udupi 65, CC BY-SA 4.0 |
ಮಟ್ಟು - ಪಡುಕೆರೆ ಬೀಚ್ ರಸ್ತೆ , ಉಡುಪಿ |
ಮಟ್ಟು - ಪಡುಕೆರೆ ಬೀಚ್ , ಉಡುಪಿ |