ವಾರದ ಕೊನೆಯಲ್ಲಿ ಎರಡು ದಿನ ಬಿಡುವಿದ್ದುದರಿಂದ ಹೋಟೇಲ್ ನಲ್ಲಿ ಕೂತು ಕಾವು ಕೊಡುವುದು ತರವೆಲ್ಲವೆಂದು ಶನಿವಾರ ರೋಮ್ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದೆ. ನಾಪೋಲಿಯಿಂದ ರೋಮ್ ೧೯೦ ಕಿ.ಮಿ. ದೂರ. ರೈಲಿನಲ್ಲಿ ಆರಾಮಾಗಿ ಹೋಗಬಹುದೆಂದು ಗೆಳೆಯರು ಹೇಳಿದ್ದರು. ಅಂತೆಯೇ ಹಿಂದಿನ ದಿನ ಶುಕ್ರವಾರ ಇಂಟರ್ನೆಟ್ಟಿನಲ್ಲಿ ರೈಲುಗಳ ವೇಳೆಗಳನ್ನು ನೋಡಿಕೊಂಡೆ. ಒಂದೇ ದಿನದಲ್ಲಿ ರೋಮ್ ನಗರ ಪೂರ್ತಿ ನೋಡುವುದು ಅಸಾಧ್ಯವೆಂದು ತಿಳಿದಿದ್ದರೂ ವೆಬ್ ಸೈಟುಗಳಲ್ಲಿ ಒಂದಷ್ಟು ಮಾಹಿತಿ ತಿಳಿದುಕೊಂಡು ನೋಡಲೇಬೇಕಾದ ಕೆಲವು ಹಾಗೂ ನನ್ನ ಆಸಕ್ತಿಯ ಕೆಲವು ಸ್ಥಳಗಳನ್ನು ಗುರುತಿಸಿಕೊಂಡೆ. ಶನಿವಾರ ಬೆಳಗ್ಗೆ ಇಲ್ಲಿಂದ ಹೊರಟಾಗ ನನ್ನ ಕೈಲಿದ್ದುದ್ದು ವಿಕಿಮ್ಯಾಪಿಯಾದಿಂದ ತೆಗೆದುಕೊಂಡಿದ್ದ ರೋಮ್ ನಗರದದ ನಕಾಶೆ ಮತ್ತು ಅಲ್ಲಿನ ಮೆಟ್ರೋ ರೈಲಿನ ಹಾದಿ ನಕಾಶೆಯ ಪ್ರಿಂಟ್ ಗಳು ಮಾತ್ರ. ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲ ರೋಮ್ ನಂತಹ ನಗರದಲ್ಲಿ ಹೇಗೆ ತಿರುಗುವುದು ಎಂಬ ದುಗುಡವಿತ್ತು.
ಅಂತೆಯೇ ಇಲ್ಲಿಂದ ಹೊರಟು ಎರಡೂ ಕಾಲು ತಾಸಿನಲ್ಲಿ ರೋಮ್ ಸೇರಿಕೊಂಡೆ. ರೈಲ್ವೆ ಸ್ಟೇಷನ್ನಿನಲ್ಲಿ ಇಳಿದವನೇ ಒಂದು ದಿನದ ಪಾಸನ್ನು ಕೊಂಡುಕೊಂಡೆ. ಇಲ್ಲಿ ’ಟಬಾಕಿ’ ಎನ್ನುವ ಸಿಗರೇಟು ಅಂಗಡಿಗಳಲ್ಲಿ ಬಸ್ಸು, ರೈಲು ಮುಂತಾದ ಟಿಕೇಟುಗಳು ಸಿಗುತ್ತವೆ. ಆ ಒಂದು ದಿನದ ಪಾಸಿನಲ್ಲಿ ಮೆಟ್ರೋ ರೈಲು, ಸಿಟಿ ಬಸ್ಸುಗಳಲ್ಲಿ ರಾತ್ರಿ ಹನ್ನೆರಡೂ ವರೆ ವರೆಗೆ ಎಲ್ಲಿಂದ ಎಲ್ಲಿಗೆ ಎಷ್ಟು ಬೇಕಾದರೂ ತಿರುಗಾಡಬಹುದು. ಹೆಜ್ಜೆ ಹೆಜ್ಜೆಗೂ ಹಾಕಿರುವ ಸೂಚನೆಗಳು, ಅಲ್ಲಿನ ವ್ಯವಸ್ಥೆಗಳು, ಅಚ್ಚುಕಟ್ಟುತನದಿಂದಾಗಿ ತಿರುಗಾಡುವುದು ಒಂದಿಷ್ಟೂ ಕಷ್ಟವಾಗಲಿಲ್ಲ. ಯಾರನ್ನೂ ಅದು ಇದು ಕೇಳುವ ಪ್ರಮೇಯವೇ ಬರಲಿಲ್ಲ. ಇಟಾಲಿಯನ್ ಬರದವನೂ, ಇಂಗ್ಲೀಷು ಬರದವನೂ, ಕೊನೆಗೇ ಮಾತೇ ಬರದವನೂ ಕೂಡ ಒಬ್ಬನೇ ಆರಾಮಾಗಿ ತಿರುಗಾಡುವಂತಿದೆ. ಮೆಟ್ರೋ ಟ್ರೈನಿನ ಸ್ಟೇಶನ್ನುಗಳನ್ನು, ನಿಲುಗಡೆಗಳನ್ನು ಪ್ರೇಕ್ಷಣೀಯ ಸ್ಥಳಗಳ ಹತ್ತಿರ ಹತ್ತಿರದಲ್ಲೇ ಮಾಡಿದ್ದಾರೆ. ಅಂತೆಯೇ ನಾನು ಗುರುತುಹಾಕಿಕೊಂಡಿದ್ದ ಸ್ಥಳಗಳನ್ನೆಲ್ಲಾ ಮೆಟ್ರೋ ಟ್ರೈನಿನಲ್ಲಿ ಪ್ರಯಾಣಿಸಿಯೇ ನೋಡಿದೆ.
ರೋಮ್ ನ ಸರಿಯಾದ ಹೆಸರು ’ರೋಮಾ’ ಎಂದು. ಯೋರೋಪಿನ ಇತಿಹಾಸದ ಮತ್ತು ಕ್ರಿಶ್ಚಿಯಾನಿಟಿಯ ಅತಿ ಪ್ರಮುಖ ಸ್ಥಳವಾದ ಈ ರೋಮಾ ನಗರ ಬಹಳ ವಿಸ್ತಾರವಾಗಿರುವ ನಗರ. ಪ್ರಾಚೀನತೆಗೆ ಒಂದಿಷ್ಟೂ ಧಕ್ಕೆಯಾಗದಂತೆ ಆಧುನಿಕವಾಗಿ ಈ ನಗರ ಬೆಳೆದು ನಿಂತಿರುವುದನ್ನು ಕಂಡು ಖುಷಿಯಾಯಿತು. ರೋಮಾ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಪ್ರಾಚೀನ ಕಟ್ಟಡಗಳೂ, ಅದರ ಅವಶೇಷಗಳೂ, ಕಲಾ ಶಿಲ್ಪಗಳೂ ಕಂಡುಬರುತ್ತವೆ. ಇದುವರೆಗೂ ಎಲ್ಲೆಲ್ಲೋ ಕೇಳಿದ್ದ, ಓದಿದ್ದ ಮೈಕಲ್ಯಾಂಜೆಲೋ, ರಾಫೆಲ್ ಮುಂತಾದ ಅಪ್ರತಿಮ ಕಲಾವಿದರನ್ನು ಭೇಟಿಯಾಗುವ ಅವಕಾಶ ಅವರ ಶಿಲ್ಪಕಲೆ, ಚಿತ್ರಕಲೆಗಳ ಮೂಲಕ ಒದಗಿ ಬಂತು. ಪುಸ್ತಕಗಳಲ್ಲಿ ಓದಿ, ಗ್ಲಾಡಿಯೇಟರ್ ಸಿನೆಮಾ ನೋಡಿ 'ಕೋಲೋಸಿಯಮ್' ಹೇಗಿರಬಹುದು ಎಂದು ಇಷ್ಟುದಿನ ಕಲ್ಪಿಸಿಕೊಂಡದ್ದು ನಿನ್ನೆ ಕಣ್ಣ ಮುಂದೆಯೇ ನಿಂತಿತ್ತು. ಕ್ರಿಶ್ಚಿಯನ್ನರ ಕಾಶಿ ವೆಟಿಕನ್, ಸೇಂಟ್ ಪೀಟರ್ ಚರ್ಚು ನನ್ನ ಜೊತೆಯೇ ಮಳೆಯಲ್ಲಿ ತೋಯುತ್ತಿತ್ತು. ರೋಮನ್ನರ ಕಲೆಯ ಪ್ರತೀಕವಾಗಿರುವ ದೊಡ್ಡ ದೊಡ್ಡ ಕಾರಂಜಿಗಳು ಅಧ್ಭುತ ಶಿಲ್ಪಗಳೊಡನೆ ತಣ್ಣನೆಯ ನೀರನ್ನು ಚಿಮ್ಮಿಸುತ್ತಿದ್ದವು. ರೋಮನ್ನರ ಕಲೆಗಳು ನಮ್ಮಲ್ಲಿರುವಂತೆ ಸೂಕ್ಷ್ಮ ಕಲಾಕುಸುರಿ ಕೆಲಸಗಳಲ್ಲ. ಬದಲಾಗಿ ದೊಡ್ಡ ದೊಡ್ಡ ಆಕಾರದ ಶಿಲ್ಪಗಳು, ಚಿತ್ರಕಲೆಗಳು. ಕ್ರಿಸ್ತಪೂರ್ವದಲ್ಲಿಯೇ ಕಟ್ಟಿದ ವರ್ತುಲಾಕಾರದ ನಾಲ್ಕು ಅಂತಸ್ತುಗಳುಳ್ಳ ಕೊಲೋಸಿಯಮ್ ಎಂಬ ಆಗಿನವರ ವಿನೋದದ ಅಂಗಣದ ಕಲ್ಪನೆ, ವಿನ್ಯಾಸ, ಅದನ್ನು ಕಟ್ಟಿರುವುದೂ ಒಂದು ಪರಮ ಅದ್ಭುತ. ಮ್ಯೂಸಿಯಮ್ಮನ್ನು ನೋಡಲು ಇಡೀ ದಿನ ಸಾಲದು. ನೋಡುತ್ತಾ ನಿಂತರೆ ಒಂದೊಂದು ಶಿಲ್ಪಗಳೂ, ಒಂದೊಂದು ಚಿತ್ರಗಳೂ ಒಂದೊಂದು ಕಥೆ ಹೇಳುತ್ತವೆ. ರೋಮ್ ನೋಡುವವರು ರೋಮನ್ನರ ಇತಿಹಾಸ ಹಾಗೂ ಇತಿಹಾಸ ಪುರುಷರ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡು ಹೋಗುವುದು ಅವಶ್ಯಕ. ಇಲ್ಲದಿದ್ದರೆ ರಾಮಾಯಣ, ಮಹಾಭಾರತ, ಭಾಗವತ ಸ್ವಲ್ಪವೂ ಗೊತ್ತಿಲ್ಲದವನು ನಮ್ಮ ಬೇಲೂರು, ಹಳೇಬೀಡು ನೋಡಿದಂತೆ ಆಗುತ್ತದೆ. ಶನಿವಾರವಾದುದರಿಂದ ಬಹಳ ಜನ ಪ್ರವಾಸಿಗರಿದ್ದರು. ಮಾತಿಗೆ ಸಿಕ್ಕ ಅರ್ಜೆಂಟೈನಾದವಳೊಬ್ಬಳು "ಓಹ್, ಇಂಡಿಯನ್, ನಮಸ್ತೆ" ಎಂದಳು. "ಅಕ್ಕಾ ನಿಂಗ್ ಹೆಂಗೆ ಗೊತ್ತು ಇದು?" ಅಂತ ಕೇಳಿದಾಗ ಸುಮ್ಮನೆ ನಕ್ಕಳು.
ಹೀಗೆ ನೋಡುತ್ತಾ ಸಂಜೆಯಾಗಿತ್ತು. ಒಂದು ಕಾಫಿ ಕುಡಿದು ಸ್ವಲ್ಪ ಕತ್ತಲಾದ ಮೇಲೆ ರೋಮಿನ ರಸ್ತೆಗಳಲ್ಲಿ ಅಲೆದೆ. ಬೆಳಗ್ಗಿಂದ ಅಲೆದು ಕಾಲುಗಳು ಒಂದೇ ಸಮನೆ ಪದ ಹೇಳುತ್ತಿದ್ದವು. ಮತ್ತೊಮ್ಮೆ ರೋಮಾ ನಗರಕ್ಕೆ ಬರಬೇಕು, ಉಳಿದುದ್ದನ್ನೆಲ್ಲ ನೋಡಬೇಕು ಎಂದುಕೊಳ್ಳುತ್ತ ಅನಂತರ ಮತ್ತೆ ರೈಲಿನಲ್ಲಿ ಹೊರಟು ರಾತ್ರಿ ನಮ್ಮ ’ನಾಪೋಲಿ’ಗೆ ಬಂದು ಸೇರಿಕೊಂಡೆ.
********
'ರೋಮಾ'ದ ಕೆಲ ಫೋಟೋಗಳು ಇಲ್ಲಿವೆ.
ಮಾಹಿತಿಗಾಗಿ ಜಾಲತಾಣ.
ವಿಕಿಮ್ಯಾಪಿಯಾ ಕೊಂಡಿ.
26 ಕಾಮೆಂಟ್‌ಗಳು:
ಮಗಾ.. ಫೋಟೋಗಳು ಚೆನ್ನಾಗಿವೆ.
ಜೊತೆಗೆ ರೋಮ್ನಲ್ಲಿ ರೋಮಾಂಚನ ಆಗೋ ಥರ ರೋಮಾನ್ಸ್ ಇದ್ಯಾ ?
ಲೇಖನ ಚೆನ್ನಾಗಿ ಬಂದಿದೆ.
ಕಟ್ಟೆ ಶಂಕ್ರ
photo galu chennagide, roam nalli raoming madikondu banni.
ರೋಮ್ ನಗರದ ಬಗ್ಗೆ ಮಾಹಿತಿ ಮತ್ತು ನಿಮ್ಮಾ ಸುತ್ತಾಟದ ಲೇಖನ ಚೆನ್ನಾಗಿದೆ, ಮತ್ತು ಫೋಟೊಗಳು ಚೆನ್ನಾಗಿವೆ.
ನಂಗೊತ್ತಿರದು ಗಣೇಶಂಗೆ "ಅರಮನೆ"ಯಲ್ಲಿ "ಕಣ್ಣಲ್ಲೇ ಪರಿಚಯ" ಆದ ರೋಮಾ ಮಾತ್ರ :-(
ಓದಿ ’ರೋಮಾಂ’ಚನವಾಯ್ತು!
Very good city..........
ವಿಕಾಸ್,
ಸೂಪರ್ ಆಗಿದೆ ನಿಮ್ ಲೇಖನ... :)
ಫೋಟೋಗಳೂ ಚೆನ್ನಿವೆ... :)
"...ರೋಮನ್ನರ ಇತಿಹಾಸ ಹಾಗೂ ಇತಿಹಾಸ ಪುರುಷರ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡು ಹೋಗುವುದು ಅವಶ್ಯಕ. ಇಲ್ಲದಿದ್ದರೆ ರಾಮಾಯಣ, ಮಹಾಭಾರತ, ಭಾಗವತ..."
ಹ್ಮ್...ಅಂತೂ ಭಾಗವತರನ್ನ ಇತಿಹಾಸ ಪುರುಷರ ಸಾಲಿಗೆ ಸೇರಿಸಿದ್ರಾ ?:-)
ಮತ್ತೆ, ಆ ರೋಮಾದ ರೋಮಾಂಟಿಕ್ ಬೀದಿಗಳಲ್ಲಿ ಒಬ್ಬರೇ ತಿರುಗಾಡಿದ್ದಾ ನೀವು? ಛೇ, ಛೇ :-)
ಇಷ್ಟು ಚೆನ್ನಾಗಿ ಬರಿತೀಯಲ್ಲ ಅಂತ ಸುಮ್ಮನೆ ಖುಷಿ. ಜಗಲಿ ಭಾಗವತರು ಹೇಳಿದ್ದು(ಆ ರೋಮಾದ ರೋಮಾಂಟಿಕ್ ಬೀದಿಗಳಲ್ಲಿ ಒಬ್ಬರೇ ತಿರುಗಾಡಿದ್ದಾ ನೀವು? ಛೇ, ಛೇ :-)) ಸರಿ. :-) :-)
ಅದ್ಯಾವಾಗ ದೇಶ ಬಿಟ್ಟು ಓಡಿ ಹೋದ್ರಿ ಮಾರಾಯ್ರೇ?! ಲೇಖನ ಚೆನ್ನಾಗುಂಟು...
ವಿನಾಯಕ ಕೋಡ್ಸರ
ನಿನ್ನ ಎರಡೂ ಪತ್ರಗಳು ತಲುಪಿದವು.ಸ್ವಲ್ಪ ಬ್ಯುಸಿ ಇದ್ದಿದ್ದರಿಂದ reply ಮಡೋಕಾಗಲಿಲ್ಲ..lovely letter...ನೀನು ಬರೆದಿರೋದು ನೋಡಿದರೆ ನನಗೂ ನಿನ್ನ ಜೊತೆ ಇರಬೇಕಿತ್ತು ಅನ್ನಿಸ್ತಿದೇ :(.ಇರಲಿ ಇನ್ನೊಂದು ಸಲ ಇಬ್ಬರೂ ಒಟ್ಟಿಗೆ ಹೋಗೋಣ :)ಅಂದ ಹಾಗೆ ನಿನ್ನನ್ನ ತುಂಬಾ miss ಮಾಡ್ತಿದಿನಿ ಕಣೋ.see you soon :-*
ವಿಕಾಸೂಊಊಊ...
ಚೆಂದದ ಬರಹ, ಉತ್ತಮ ಮಾಹಿತಿ. ಅಲ್ಲೇ ಇದ್ದುಬಿಡಿ 'ರೋಮಾಂಚನ' ಪಡೀಬಹುದು.
-ಚಿತ್ರಾ
ಸಿನೆಮಾಗಳು, ಕಥೆಗಳಲ್ಲಿ ಕಂಡ ರೋಮ್ ವರ್ಣನೆ ಚೆನ್ನಾಗಿದೆ. ಅಲ್ಲಿಗೆ ಹೋದರೆ ಹೇಗೆ ಎಂದನಿಸಿತು...
Hi ಹೆಗಡೆ,
"ರೋಮನ್ನರ ಕಲೆಯ ಪ್ರತೀಕವಾಗಿರುವ ದೊಡ್ಡ ದೊಡ್ಡ ಕಾರಂಜಿಗಳು ಅಧ್ಭುತ ಶಿಲ್ಪಗಳೊಡನೆ ತಣ್ಣನೆಯ ನೀರನ್ನು ಚಿಮ್ಮಿಸುತ್ತಿದ್ದವು"
ಎಷ್ಟು ಚೆನ್ನಾಗಿ ಬರಿದ್ದಿಯೋ ಪದಗಳ ಜೊತೆ ಆಟ ಆಡಲುಶುರು ಮಾಡಿದಿಯ ....
good ....
shankru, baalu, harish, sandeep, shashidhar, anil, bhagvatru, nayanee, vinayaka, neeri(!), chitra, harish, niranjan ellrigU thanx. nan odatada bagge nimjothe hanchkondiddu khushikodthu.
ತುಂಬಾ ಚಂದದ ಬರವಣಿಗೆ..ಅದಕ್ಕೆ ಪೂರಕವಾಗಿ ಫೋಟೊಗಳು.. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.. ಧನ್ಯವಾದಗಳು...
ವಿಕ್ಸ್,
ನಿನ್ನ ಓಡಾಟ, ನೋಡಾಟ ಎಲ್ಲಾ ನೋಡಿರೆ ಇಟೆಲಿ ಎಲ್ಲಿ ನಿನ್ನ ಬಿಡ್ತಿಲೋ ಹೇಳಿ ಸಂಶಯ ನೋಡು! ಆದ್ರೂ ಒಂದು ಸಣ್ಣ ಧೈರ್ಯ ಇದ್ದು.. ನೀರಿ ನಿನ್ನ ಮತ್ತೆ ಭಾರತಕ್ಕೆ ಬಪ್ಪಾಂಗೆ ಮಾಡ್ತು ಹೇಳಿ :)
ಚೆಂದದ ಬರಹ ಮತ್ತು ಚಿತ್ರ
ತು೦ಬಾ ಚೆನ್ನಾಗಿತ್ತು. ರೋಮ್ ನೋಡಬೇಕೆ೦ಬ ಆಸೆ ದಟ್ಟವಾಗುತ್ತಿದೆ!
Interesting writing. Roam is definitely one of the interesting places in Europe to visit. BTW, Did you go to Roam(eo) alone? or with your "Romeo"?
@ಸಿಮೆಂಟು, ಜೋಮನ್, ಸುಧೇಶ್
ಥ್ಯಾಂಕ್ಸ್
@ತೇಜಕ್ಸ್
:-)
@anonymous
thanx. no romeo with me in Rome, i was alone :)
ನಮಸ್ಕಾರ ಮೇಡಂ
ನಾನು ನಿಮ್ಮ ಬ್ಲಾಗ್ ಓದುಗ. ನಾನೊಂದು ಬ್ಲಾಗ್ ತೆರೆದಿದ್ದೇನೆ. ದಯವಿಟ್ಟು ಓದಿ, ಹರಸಿ.
ನಿಮ್ಮ ಕಾಲ್ಗುಣದಿಂದ ನನ್ನ ಮನೆಗೆ ಮಂಗಳವಾಗಲಿ.
-ರಿಶಿ
risyashringaa@gmail.com
rishyashringa.blogspot.com
@ಋಷ್ಯಶೃಂಗ,
thanx, ಆದ್ರೆ ಕಾಪಿ ಪೇಸ್ಟ್ ಮಾಡುವಾಗ ಸ್ವಲ್ಪ ನೋಡ್ಕೊಂಡು ಮಾಡಿ. ಅದ್ಯಾವುದೋ ’ಮೇಡಂ’ ಗೆ ಕರೆದು ಅಕ್ಕಿಡಬ್ಬ ಒದೆಸಿ ಒಳಗೆ ಕರ್ಕೋಳೋ ತರ ಹೇಳಿದಿರ. :)
ನಮಸ್ಕಾರ ಮೇಡಂ :-)
ಮತ್ತೆ, ಎರಡು ವಾರ ಆಯ್ತು. ಬೇರೆ ಎಲ್ಲೂ ತಿರುಗಿಲ್ವಾ? ಅಥ್ವ ಜೋಡಿ ಹುಡುಕ್ತಿದೀರಾ ಅಲ್ಲಿ?:-)
ತಿರುಗಿದ್ದೇನೆ ಜೋಡಿ ಇಲ್ಲದೇ :). ತಿರುಗಿದ ವಿಷಯ ಎಲ್ಲಾ ಬರೆಯೋಕೆ ತಾಳ್ಮೆ ಇಲ್ಲ್ಲ ಭಾಗವತ್ರೆ. ರೋಮ್ ಸ್ವಲ್ಪ ಫೇಮಸ್ಸು ಅಂತ ಬರ್ದೆ ಅಷ್ಟೆ :) ನೋಡಣ, ನೀವೆಲ್ಲ ಅಪೇಕ್ಷೆ ಪಟ್ರೆ ಆಶೀರ್ವಾದ ಕೊಟ್ರೆ ಇನ್ನೊಂದಿಷ್ಟು ಬರಿಯಣ.
ಕಾಮೆಂಟ್ ಪೋಸ್ಟ್ ಮಾಡಿ