ಸೋಮವಾರ, ಫೆಬ್ರವರಿ 16, 2009

ಜಿಂಬಾಬ್ವೆ ನೋಟು

೧)
ಎರಡನೇ ವಿಶ್ವಯುದ್ಧದ ನಂತರ ಜರ್ಮನಿಯ ಆರ್ಥಿಕ ಸ್ಥಿತಿ ಯಾವ ರೀತಿ ಹದಗೆಟ್ಟಿತ್ತಂದರೆ ಅಲ್ಲಿನ ಜನ ಚಹಾ ಕುದಿಸಲು ಕರೆನ್ಸಿ ನೋಟುಗಳನ್ನೇ ಬಳಸುತ್ತಿದ್ದರಂತೆ! ಇದನ್ನು ಎಲ್ಲೋ ಓದಿದ್ದಾಗ ಉತ್ಪ್ರೇಕ್ಷೆ ಅನಿಸಿತ್ತು. ಏನೇ ಆದರೂ ಹಾಗೆ ದುಡ್ಡು ಸುಡುತ್ತಾರೆಯೇ, ಸುಮ್ಮನೇ ನಮ್ಮ ಮಾಧ್ಯಮಗಳ ಹಾಗೆ ಕಡ್ಡಿಯನ್ನು ಗುಡ್ಡ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಜಿಂಬಾಬ್ವೆಯ ಪರಿಸ್ಥಿತಿ ತಿಳಿದ ಮೇಲೆ ಅದನ್ನು ನಂಬಲೇಬೇಕಿದೆ. ಜಿಂಬಾಬ್ವೆಯಲ್ಲಿ ಜನ *ಕ ಒರೆಸಿಕೊಳ್ಳಲೂ ಕೂಡ ಕಾಗದದ ಬದಲಿಗೆ ನೋಟುಗಳನ್ನೇ ಬಳಸಲು ಶುರುಮಾಡಿದ್ದರು. ಏಕೆಂದರೆ ಒಂದು ರೋಲ್ ಕಾಗದವನ್ನು ಕೊಂಡುಕೊಳ್ಳುವ ಬದಲು ಸಣ್ಣ ಮೌಲ್ಯದ ಕರೆನ್ಸಿ ನೋಟುಗಳನ್ನು ಬಳಸುವುದೇ ಕಡಿಮೆ ಖರ್ಚಾಗುತ್ತಿತ್ತು ಮತ್ತು ಏನೂ ಕೊಂಡುಕೊಳ್ಳಲು ಉಪಯೋಗವಿಲ್ಲದಂತಾಗಿರುವ ಸಣ್ಣ ನೋಟುಗಳ ಸದ್ಬಳಕೆ(!)ಯೂ ಆದಂತಾಗುತ್ತಿತ್ತು. (ಸಣ್ಣ ನೋಟುಗಳು ಎಂದರೆ ೫-೧೦ ಡಾಲರ್ ಅಲ್ಲ, ಬದಲಾಗಿ ಸಾವಿರಾರು ಡಾಲರ್ ಮೌಲ್ಯದ ಕರೆನ್ಸಿಯೂ ಕೂಡ ’ಸಣ್ಣ’ದೇ ಆಗಿಹೋಗಿದೆ ಅಲ್ಲಿ) ಕೊನೆಗೆ ಅಲ್ಲಿನ ಸರ್ಕಾರ ಹೀಗೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಬೇಕಾಯಿತು. ಆದರೂ ಬಳಕೆ ಮುಂದುವರೆದಿರಬಹುದು ಬಿಡಿ. ವಿಷಯ ಏನೆಂದರೆ ಅತಿಯಾದ ಹಣದುಬ್ಬರದಿಂದಾಗಿ ಜಿಂಬಾಬ್ವೆಯಲ್ಲಿ ಭಾರೀ ಮೌಲ್ಯದ ಕರೆನ್ಸಿಗಳನ್ನು ಪ್ರಿಂಟ್ ಮಾಡಲಾಗುತ್ತಿದೆ. ೫೦, ೧೦೦ ಮಿಲಿಯನ್ ಡಾಲರ್ ಗಳೆಲ್ಲಾ ಮುಗಿದು ಇತ್ತೀಚೆಗೆ ಅಲ್ಲಿ ೫೦೦ ಮಿಲಿಯನ್ ಡಾಲರ್ ಮೌಲ್ಯದ ನೋಟ್ ಬಿಡುಗಡೆ ಮಾಡಿದ್ದಾರೆ! ನಮ್ಮೂರಿನ ಶ್ರೀ ಗಣೇಶ್ ಅವರ ಸಂಗ್ರಹಕ್ಕೆ ಹೊಸತಾಗಿ ಬಂದ ಈ ನೋಟನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಈ ಕೆಳಗಿರುವುದು ಅದರ ಚಿತ್ರ. ಗುಣಮಟ್ಟದಲ್ಲಿ ಪಾಂಪ್ಲೆಟ್ ಕಾಗದದಂತಿದೆ.




*****

೨) ಶ್ರೀ K.N. ಗಣೇಶಯ್ಯ ಅವರ 'ಶಾಲಭಂಜಿಕೆ' ಪುಸ್ತಕದ ನಂತರ ಈಗ ಹೊಸ ಪುಸ್ತಕಗಳು ಬಂದಿವೆಯಂತೆ - ’ಕಪಿಲಿಪಿಸಾರ’ ಕಾದಂಬರಿ ಹಾಗೂ `ಪದ್ಮಪಾಣಿ’ ಕಥಾಸಂಕಲನ ’. ಓದಬೇಕು. ಶಾಲಭಂಜಿಕೆಯಲ್ಲಿ ಕಥಾವಸ್ತುಗಳೇ ಅಪರೂಪದ್ದು, ವಿಭಿನ್ನವಾದದ್ದು. ಐತಿಹಾಸಿಕ, ವೈಜ್ಞಾನಿಕ ಘಟನೆಗಳನ್ನೇ ಅವರು ಕತೆಗೆ ಅಳವಡಿಸಿರುವ ರೀತಿಯೂ ಅದ್ಭುತ. ಹೊಸತಾಗಿ ಬಂದಿರುವ ಪುಸ್ತಕಗಳ ಪರಿಚಯದಿಂದಲೇ ಆಸಕ್ತಿ ಕೆರಳಿದೆ. Worth buying & reading.

9 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ಹೌದು ವಿಕ್ಕಿ,
ಇಲ್ಲಿ ನಾನು ಸುಮಾರು ಜನರನ್ನ ಕೇಳಿದೀನಿ.
ಎರಡನೇ ಮಹಾಯುದ್ಧದ ಬಗ್ಗೆ ಮಾತಾಡಲು ನಾಚಿಕೆ ಪಡ್ತಾರೆ. ಚಳಿ ಬಿಟ್ಟು ಕೆಲವರು ಮಾತಾಡಿದಾಗ, ಆ ಕಾಲ ಬಹಳ ಕಷ್ಟಕರವಾಗಿತ್ತು ಅಂತ ಹೇಳ್ತಾರೆ.
ಆದ್ರೆ, ಜಿಂಬಾಬ್ವೆ ಅಷ್ಟು ಇರ್ಲಿಲ್ಲ ಅನ್ಕೋತೀನಿ.
ಆದರೂ ಏನ್ ಗುರೂ ಇದು? ೫೦, ೧೦೦, ೫೦೦ ಮಿಲಿಯನ್ ಡಾಲರುಗಳ ನೋಟು ಅಂದ್ರೆ?
ಉತ್ಪ್ರೇಕ್ಷೆ ಅಂತಾನೆ ಅನ್ಸುತ್ತೆ.

ಕಟ್ಟೆ ಶಂಕ್ರ

shivu.k ಹೇಳಿದರು...

ವಿಕಾಸ್,

ಇದರ ಬಗ್ಗೆ ಕೇಳಿದ್ದೆ.....ಅದ್ರೆ ಈ ಮಟ್ಟದಲ್ಲಿರುತ್ತದೆ ಅಂತ ನನಗೆ ಗೊತ್ತಿರಲಿಲ್ಲ....ಫೋಟೋ ಸಹಿತ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್....

Unknown ಹೇಳಿದರು...

ನಾವೇ ಗ್ರೇಟು ಹಾಗಾದ್ರೆ

ಕಲಗಾರಿನಲ್ಲಿ ನಿನ್ನ ಹುಡುಕಿ ಹುಡುಕಿ ಸುಸ್ತಾದೆ. ಪ್ರೆಂಚ್ ಗಡ್ಡ ಬಿಟ್ಟವನೇ ವಿಕಾಸ ಅಂದರು. ಹಾಗೆ ಗಡ್ಡ ಬಿಟ್ಟವನೊಬ್ಬ ನನ್ನು ನೀವು ವಿಕಾಸನಾ? ಅಂತ ಕೇಳಿ ಬೆಪ್ಪಾಗುವವರೆಗೂ ಹುಡುಕಿದೆ.
ಮತ್ತೆಲ್ಲಾದರೂ ಸಿಗೊಣ

mruganayanee ಹೇಳಿದರು...

hu kaNO eShTu aascharya alva? ShreeninU iMthadra bagge bardidda ansatte. Iga nOTugaLannu nODO saubhaagya...

ತೇಜಸ್ವಿನಿ ಹೆಗಡೆ ಹೇಳಿದರು...

"ಜಿಂಬಾಬ್ವೆಯಲ್ಲಿ ಜನ *ಕ ಒರೆಸಿಕೊಳ್ಳಲೂ ಕೂಡ ಕಾಗದದ ಬದಲಿಗೆ ನೋಟುಗಳನ್ನೇ ಬಳಸಲು ಶುರುಮಾಡಿದ್ದರು. ಏಕೆಂದರೆ ಒಂದು ರೋಲ್ ಕಾಗದವನ್ನು ಕೊಂಡುಕೊಳ್ಳುವ ಬದಲು ಸಣ್ಣ ಮೌಲ್ಯದ ಕರೆನ್ಸಿ ನೋಟುಗಳನ್ನು ಬಳಸುವುದೇ ಕಡಿಮೆ ಖರ್ಚಾಗುತ್ತಿತ್ತು ಮತ್ತು ಏನೂ ಕೊಂಡುಕೊಳ್ಳಲು ಉಪಯೋಗದಂತಾಗಿರುವ ಸಣ್ಣ ನೋಟುಗಳ ಸದ್ಬಳಕೆ(!)ಯೂ ಆದಂತಾಗುತ್ತಿತ್ತು. "

ಅಂತೂ ಈ ಒಂದು ಘಟನೆ ಜನಪ್ರಿಯ ನಾಣ್ಣುಡಿಯಾದ "ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ" ಎನ್ನುವುದಕ್ಕೆ ತುಂಬಾ ಅಪವಾದವಾಗಿದೆ ಅಲ್ಲವೇ?! :)

Harisha - ಹರೀಶ ಹೇಳಿದರು...

ನಮ್ಮಲ್ಲಿ ಹಣದುಬ್ಬರ (inflation) ದರ ೧೧% ಆದಾಗಲೇ ಬೊಬ್ಬೆ ಹೊಡೆದಿದ್ವಿ.. ಅಲ್ಲಿ ಈಗ ಹಣದುಬ್ಬರ ದರ ಶೇಕಡಾ ೨೩೧ ಮಿಲಿಯನ್ ಇದೆ! ಪಾಪ ಅವರ ಸ್ಥಿತಿ ಹೇಗಿರಬೇಡ?

ವರದಿ ಇಲ್ಲಿದೆ

sunaath ಹೇಳಿದರು...

Don't worry. We shall catch up with them in a short time!

Ittigecement ಹೇಳಿದರು...

ವಿಕಾಸ್ ಹೆಗಡೆಯವರೆ..

ಈ ದುಷ್ಪರಿಣಾಮ ಎಲ್ಲಿಗೆ ಹೋಗಿ ನಿಲ್ಲಬಹುದು...?

ಭವಿಷ್ಯ... ಹೆದರಿಕೆ ಹುಟ್ಟಿಸುವಂತದ್ದು...

ಸಮಯೋಚಿತ ಲೇಖನ..

ಧನ್ಯವಾದಗಳು...

ಚಿತ್ರಾ ಸಂತೋಷ್ ಹೇಳಿದರು...

ಎಂಥ ಅವಸ್ಥೆ ಮಾರಾಯ್ರೆ..ಒಳ್ಳೆ ಮಾಹಿತಿ!
-ಚಿತ್ರಾ