ಶುಕ್ರವಾರ, ಏಪ್ರಿಲ್ 3, 2009

ಬ್ಲಾಗ್ ಅಡುಗೆ !

ಕೆಲವು ಅಡುಗೆ ಬ್ಲಾಗ್ ಗಳನ್ನು ನೋಡುವುದು ಮೊದಲಿಂದಲೂ ನನಗೆ ಅಭ್ಯಾಸ. ಮಾತೆತ್ತಿದರೆ ಗೋಬಿ, ರೋಟಿ, ಕೇಕ್ ಅನ್ನದೇ, ಸುಮ್ಮನೇ ನಾರ್ಥ್ ಇಂಡಿಯನ್ನು, ಚೈನೀಸು, ಇಟಾಲಿಯನ್ನು ಅಂತ ಹೋಗದೇ ನಮ್ಮ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ಬರೆಯುವ ಬ್ಲಾಗ್ ಗಳು ಖುಷಿ ಕೊಡುತ್ತವೆ. ಪಾಕಚಂದ್ರಿಕೆ, ನನ್ ಪ್ರಪಂಚ, ಮನೆ ಅಡುಗೆ, My Chow Chow Bhath ಮುಂತಾದ ಅಡುಗೆ ಬ್ಲಾಗ್ ಗಳು ನನ್ನ ಓದಿನ ಪಟ್ಟಿಯಲ್ಲಿವೆ.

ಅವುಗಳಲ್ಲಿ ಇನ್ನೊಂದು ವಿಶಿಷ್ಟ ಬ್ಲಾಗ್ ರುಚಿ ರುಚಿ ಅಡುಗೆ. ಈ ಬ್ಲಾಗ್ ಅಮೆರಿಕದಲ್ಲಿರುವ ಕೃಷ್ಣವೇಣಿಯವರದ್ದು . ನಿಯಮಿತವಾಗಿ ವಾರಕ್ಕೆ ೫ ಪದಾರ್ಥಗಳನ್ನು ಮಾಡಿ ಬಡಿಸುವ ಇವರ ಅಡುಗೆಯಷ್ಟೇ ಬ್ಲಾಗ್ ಕೂಡ ಅಚ್ಚುಕಟ್ಟು. ಅಡುಗೆಯ ಪ್ರತಿಯೊಂದು ಹಂತವನ್ನೂ ಫೋಟೋ ತೆಗೆದು ಹಾಕುವ ಇವರ ಶ್ರದ್ಧೆ ದೊಡ್ಡದು. ಬಾಳೆದಿಂಡಿನ ಮಜ್ಜಿಗೆ ಹುಳಿಯಿಂದ ಹಿಡಿದು ಪತ್ರೊಡೆ ತನಕ, ಸೋರೆಕಾಯಿ ದೋಸೆಯಿಂದ ಹಿಡಿದು ಮಂಗಳೂರು ಬನ್ಸ್ ವರೆಗೆ ವಿಧವಿಧದ ರೆಸಿಪಿಗಳಿಗೆ ರುಚಿ ರುಚಿ ಅಡುಗೆ ಬ್ಲಾಗ್ ನೋಡಬಹುದು. ಸದ್ಯಕ್ಕೆ ಅಲ್ಲಿ ಬಿಸಿ ಬಿಸಿ ಹಯಗ್ರೀವ ತಯಾರಿದೆ.

ಅವತ್ತಿಂದ ಯೋಚಿಸುತ್ತಲೇ ಇದ್ದೇನೆ, ನಾನೂ ಒಂದು ಅಡುಗೆ ಬ್ಲಾಗ್ ಮಾಡಿದರೆ ಹೇಗೆ ಅಂತ ! ಹೇಗೂ ವರ್ಷವಿಡೀ ಬರೆದರೂ ಮುಗಿಯದಷ್ಟು ಅಮ್ಮನ ಅಡುಗೆಗಳಿವೆ. ನೋಡೋಣ, ಹೆದರೋ ಅಗತ್ಯವಿಲ್ಲ.. ಯಾವುದಕ್ಕೂ ಲೋಕಸಭೆ ಚುನಾವಣೆ ಮುಗಿಯಲಿ. :-)

**************

ಕನ್ನಡದಲ್ಲಿ ಪರಿಸರದ ಬಗ್ಗೆ ಯಾವುದಾದರೂ e-magazine ಇರಬಹುದಾ ಎಂದು ಹುಡುಕಿದ ನನಗೆ ಸಿಕ್ಕಿದ್ದು ’ನಿಸರ್ಗ’. ಚಂದ ಚಂದದ ಚಿತ್ರಗಳೊಂದಿಗೆ, ಪ್ರಕೃತಿ, ಜೀವಿಗಳ ಕುರಿತ ಬರಹಗಳೊಂದಿಗೆ ಪ್ರತಿ ತಿಂಗಳಿಗೊಮ್ಮೆ pdf format ನಲ್ಲಿ ಬರುವ ಇ-ಪತ್ರಿಕೆಗಾಗಿ ಇಲ್ಲಿ ಚಿಟುಕಿ - ನಿಸರ್ಗ

****************

Happy weekendu...

10 ಕಾಮೆಂಟ್‌ಗಳು:

Parisarapremi ಹೇಳಿದರು...

ನಿಸರ್ಗ ಬಹಳ ಸೊಗಸಾಗಿದೆ... aaaiii laaiik eeettt... :-)

Krishnaveni ಹೇಳಿದರು...

Hi Vikas,
Nimma prothsaahakke thumba dhanyavaadagalu :-)

ಧರಿತ್ರಿ ಹೇಳಿದರು...

ವಿಕಾಸ್..
ಕೃಷ್ಣವೇಣಿಯ ರುಚಿ ರುಚಿ ಅಡುಗೆ ಚೆನ್ನಾಗಿದೆ. ಅದ್ಸರಿ ನೀವು ಬರೆದ್ರೆ ಹೇಗೆಂತ ಕುತೂಹಲ ನಂದು. ಚುನಾವಣೆಗೂ ಅಡುಗೆಗೂ ಏನು ಸಂಬಂಧ? ನೀವು ಶುರು ಹಚ್ಚೋದು ಒಳ್ಳೆದು.
ಅಲ್ಲಾ ಮಾರಾಯ..ರೂಮ್ಮಲ್ಲಿ ನೆಟ್ಟಗೆ ಅಡುಗೆ ಮಾಡಿಕೊಂಡು ತಿನ್ನದೆ ನಿತ್ಯ ಹೊಟೇಲ್ ಅಡುಗೆನೇ ರುಚಿ ಅನ್ನೋ ನೀವು ಅಡುಗೆ ಬ್ಲಾಗ್ ಶುರುಮಾಡಿ, ಅದನ್ನು ನಾವು ರೆಫರ್ ಮಾಡಿದ್ರೆ ಹೇಗಾಗಬಹುದು? ಅಂತ ಯೋಚನೆ ಮಾಡ್ತಾ ಇದ್ದೀನಿ. ಏನೇ ಆಗಲಿ..ಶುರಮಾಡಿ. ಹೆಲ್ಫ್ ಮಾಡಕೆ ನಾವೆಲ್ಲ ಇದ್ದೀವಲ್ಲಾ...

-ಧರಿತ್ರಿ

ಅನಾಮಧೇಯ ಹೇಳಿದರು...

http://kshakirana.blogspot.com/

ವನಿತಾ / Vanitha ಹೇಳಿದರು...

ಐಡಿಯಾ ತುಂಬ ಚೆನ್ನಾಗಿದೆ...ಎಸ್ಟೇ ಹೋಟೆಲ್ ಊಟ, ನಾರ್ತ್ ಇಂಡಿಯನ್, ಚೈನೀಸ್ ಅಡುಗೆ ತಿಂದರು ಕೂಡ, ನಮ್ಮ ಮನೆಯ ಅನ್ನ- ಸಾರಿನ ಟೇಸ್ಟ್ ಬರಲಿಕ್ಕಿಲ್ಲ ..ಕಾಯ್ತಾ ಇರ್ತೀವಿ ನಿಮ್ಮ ಅಮ್ಮನ ಅಡುಗೆ ರುಚಿ ಸವಿಯಲು...

Krishnaveni ಹೇಳಿದರು...

Khanditha nimma ammana aduge ya ruchi namagu thilisi :-)
Cooking blog lokakke swaagatha :-)

ಬಾಲು ಹೇಳಿದರು...

alla maraya election mugiyo thanaka yaake kaayabeku? ellinda naama patra gujaraayisiddiya? :P

brahmachari galu, somarigalu maadabahudada sulabha adugeya blog madu!!!

ಅನಾಮಧೇಯ ಹೇಳಿದರು...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

Madhooo ಹೇಳಿದರು...

Bahala ollolle information kodta idira nimma blog na moolaka. Keep up the gud work:)

ವಿ.ರಾ.ಹೆ. ಹೇಳಿದರು...

ಎಲ್ಲಾರಿಗೂ ಥ್ಯಾಂಕ್ಸ್.

@premi, ya, me toooo laaaik eettt..
@ಧರಿತ್ರಿ, ಹೆಲ್ಪ್ ಮಾಡಕ್ಕೆ ನೀವಿರೋದು ಸಂತೋಷ. :)
@ವನಿತಾ, ಹೌದು ನೀವ್ ಹೇಳಿದ್ದು ನಿಜ. ಕಾಯ್ಬೇಡಿ.. ಸ್ವಲ್ಪ ತಡ ಆಗ್ಬೋದು. ಸದ್ಯಕ್ಕೆ ನಿಮ್ಮ ಅಡುಗೆ ರುಚಿ ನಾವು ಸವಿಯುತ್ತಾ ಇದ್ದೇವೆ. :)
@ಕೃಷ್ಣವೇಣಿ, ನಿಮ್ ಬ್ಲಾಗ್ ನೋಡಿದ ಮೇಲೆ ಯಾಕೋ ಅಡುಗೆ ಬಗ್ಗೆ ಆಸಕ್ತಿ ಜಾಸ್ತಿ ಆಗಿ ಹೋಗಿದೆ. ನೋಡೋಣ.. ಕುಕಿಂಗ್ ಬ್ಲಾಗ್ ಲೋಕಕ್ಕೆ ಯಾವಾಗ ಎಂಟ್ರಿ ಕೊಡ್ತೀನೋ ಗೊತ್ತಿಲ್ಲ.
@ಬಾಲು, ಹೆಲ್ಪ್ ಮಾಡು ಗುರುವೆ.. :)
@ರಾಘವೇಂದ್ರ, ಒಳ್ಳೇ ಪ್ರಯತ್ನ. ಶುಭಹಾರೈಕೆಗಳು.
@madhoooo, ಥ್ಯಾಂಕ್ಯೂ...ಬರ್ತಾ ಇರಿ..