ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.
ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
.................................
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
.................................
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
...............
ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! :)
ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.
ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.
ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don't want moral policing by anybody.
ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .
ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)
ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)
ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.
ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ - ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.
ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.
ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************
ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?
ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.
ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)
ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.
ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)
17 ಕಾಮೆಂಟ್ಗಳು:
ಚೆನ್ನಾಗಿದೆ
ಹೆ ಹೆ ’ ಹೀಗೂ ಉಂಟೆ ’ !!!
ಮುಂದೆ ಮತ್ತೆ ಟಿವಿ ನೈನ್ ನಲ್ಲಿ ಕಾಣಿಸಿಕೊಳ್ಳುವವರೆಗೂ ... ’ಬಿ ಅಲರ್ಟ್’!! ಅಂದಹಾಗೆ ಪುಸ್ತಕಗಳ ಬಗ್ಗೆ ಮಾಹಿತಿಗಾಗಿ ಥ್ಯಾಂಕ್ಸ್.
ಹಾಸ್ಯ, ವ್ಯಂಗ್ಯ, ಚಿಂತನೆ, ಪುಸ್ತಕ ಪರಿಚಯಗಳನ್ನೊಳಗೊಂಡ ಬರಹ ಚೆನ್ನಾಗಿದೆ. ಎಂದಿನ ವಿಕಾಸ-ವಾದದ ಸ್ಟೈಲ್ನಲ್ಲಿದೆ :) ಎರಡು ಉತ್ತಮ ಪುಸ್ತಕಗಳ ಪರಿಚಯಮಾಡಿಸಿದ್ದಕ್ಕೆ ಧನ್ಯವಾದಗಳು.
ಅಂತೂ ಇಂತೂ ವಿಕಾಸ್ನೂ ಕಡ್ಡಿ ಚಾನೆಲ್ನಲ್ಲಿ ಬಂದ ಹೇಳಾತು.. ಒಳ್ಳೇ ಸುದ್ದಿ. ಸುದ್ದಿವಾಹಿನಿಯಲ್ಲೂ ಬೇಗ ಬಪ್ಪಾಂಗಾಗ್ಲಿ :-P
ಹೀಗೂ ಉಂಟೆ!!! :-)
ಒಬ್ಬೋಬ್ರನ್ನ ಎಷ್ಟೆಷ್ಟು ಹೊತ್ತು ತೋರಿಸಬಹುದು ಅಂತೇನಾದ್ರೂ ಹೇಳಕ್ಕಾಗತ್ತಾ ?
ಅದ್ಸರಿ ವಿಕಾಸ, ನಿಮ್ಮ ಹಳೆಯ ಕಂಪನಿಯಲ್ಲಿ ಎರಡನೇ ಪಾಳಿ ಮಾಡುವಾಗ, ಆ ಕಾಲ್ ಸೆಂಟರ್ ಹುಡುಗಿಯರು ನಿಂತು ಸಿಗರೇಟು ಸೇದೊದನ್ನ ಒಂದು ಟಿವಿ ಚಾನಲ್ ರೆಕಾರ್ಡು ಮಾಡಿಕೊಂಡು ಹೋಗಿದ್ದು ನೆನಪಿದೆಯಾ ?
ಎಲ್ಲಿ ಹೊರಗಿರುವ ನಮ್ಮನ್ನೂ ಸೇರಿಸಿ ಟಿವಿ ಯಲ್ಲಿ ತೋರುಸ್ತಾರೋ ಅನ್ನೋ ಗಾಬರಿ ಇತ್ತು ನನಗಂತೂ..
ಅದ್ಸರಿ, ಪುಸ್ತಕ ಕೊಂದು ಓದಿದೆಯಾ ? ಹೆಂಗಿದೆ ?
ಕಟ್ಟೆ ಶಂಕ್ರ
2 pustaka parichaya madikottiddiya.. thnx
tv nine nallu olle program barutte, avaru olle kelsa nu madthare antha thilisiddiya.. adakku thnx.
adella side ge irali, nin baravanigeya shaili super aagide maraya... i really liked, thumba chennagi narrate madiddiya. ninu engineer madirodrinda karnataka da yavdo ondu patrike obba olleya patra kartha nanna kaledu kondide!!!
ತುಂಬಾ ಒಳ್ಳೆಯ ಬರಹ, ಚೆನ್ನಾಗ್ ಬರೆದಿದ್ದೀರ. ನಿರೂಪಣೆ ಶೈಲಿ ಸಕತ್ತಾಗಿದೆ ಮಾರಾಯ್ರೆ. ಜಸ್ಟ ಬೆಂಗಳೂರಿನಲ್ಲಿ ತೋರಿಸಿದ್ದು ಪುಣ್ಯ, 'ಹೀಗೂ ಉಂಟೇ'ಯಲ್ಲಿ ತೋರಿಸ್ತಾ ಇದ್ರೆ....ನೀವು ರಾತ್ರಿ ಇಡೀ ನಿದ್ದೆ ಮಾಡುತ್ತಿರಲಿಲ್ಲ. ಹ್ಹೆ ಹ್ಹೆ! ಇರಲಿ, ಒಳ್ಳೆಯ ಪುಸ್ತಕದ ಕುರಿತು ಮಾಹಿತಿ ನೀಡಿದ್ದೀರಾ. ನಾವೂ ಓದುವಂತೆ ಮಾಡಿದ್ದಕ್ಕೆ ಧನ್ಯವಾದಗಳು ವಿಕಾಸ್.
-ಧರಿತ್ರಿ
ತುಂಬಾ ನಗು ತರಿಸಿದೆ ನಿಮ್ಮ ಟಿವಿ೯ ಘಟನೆ... ನೀವು ತಿಳಿಸಿದ ಈ ಎರಡು ಪುಸ್ತಕಗಳ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ.. ನಾವು ಇನ್ನು ಓದಿಲ್ಲ ಓದಲೆಂದೇ ಆಗಲೇ ನನ್ನ ಸ್ನೇಹಿತರು ಆ ಪುಸ್ತಕವನ್ನು ನನಗಾಗಿ ತೆಗೆದಿಟ್ಟಿದ್ದಾರೆ.... ಆ ಪುಸ್ತಕದ ವಿನ್ಯಾಸಕಾರರು ನನ್ನ ಸ್ನೇಹಿತರು ಮತ್ತಷ್ಟು ಕುಶಿಯ ವಿಷಯ ಕೂಡ... ಆ ಕಾರ್ಯಕ್ರಮದ ಎಲ್ಲ ಫೋಟಗಳನ್ನು ನೋಡಿದೆ ಕೂಡ..೧೨೦ರ ಹರಯದ ಸುಧಾಕರ ಚತುರ್ವೆದಿಗಳ ಹುರುಪು ನಿಜಕ್ಕೂ ಮೆಚ್ಚಬೇಕಾದ್ದೆ ಅಲ್ಲವೇ? ಅವರ ಮಾತು ನಡೆ ನುಡಿ ಎಲ್ಲರಿಗು ಹುಮ್ಮಸು ತರುತ್ತದೆ... ಅವರನ್ನು ಕಂಡ ನೀವೇ ಧನ್ಯರು..
ಥೇಟ್ ಟಿವಿ ನೈನ್ ಥರ ಬಿಲ್ಡ್ ಅಪ್ ಕೊಟ್ಟಿದ್ದೀರ ! :)
ಇರ್ಲಿ...ಲೇಖನ ಚೆನ್ನಾಗಿದೆ. ನಾಳೆ ಅಂಕಿತಕ್ಕೆ ಹೋಗೋದು ಗ್ಯಾರಂಟೀ.
Good!
One more from Vikas..as usual(superb)!!
--Pradeep
Chennagide lekhana :-)
ದೊರೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನಾನು ಬಂದಿದ್ದೆ. ಆದ್ರೆ ನೀನು ಕಾಣಿಸಲೇ ಇಲ್ಲ...! ಚೆಂದದ ಪುಸ್ತಕ. ಎರಡೂ ಪುಸ್ತಕಗಳೂ ಸೊಗಸಾಗಿವೆ...
ವಿನಾಯಕ ಕೋಡ್ಸರ
ಶಂಕ್ರ್, ಹುಂ ಹೌದು , ಅದನ್ನ ನೋಡಿದ ಮೇಲೆಯೇ ಸ್ವಲ್ಪ ಭಯ ಶುರುವಾಗಿದ್ದು ! :೦
ಕೋಡ್ಸರ, ನಾ ಹೋಗಿದ್ದು ಸ್ವಲ್ಪ ತಡ ಆಗಿತ್ತು. ನೀವು ಹೋದ ಮೇಲೆ ನಾನು ಬಂದಿರ್ಬೇಕು.
ಪ್ರತಿಕ್ರಯಿಸಿದ ಎಲ್ಲರಿಗೂ thanx. ಎರಡೂ ಪುಸ್ತಕಗಳನ್ನು ಓದಿ, ಬಹಳ ಚೆನ್ನಾಗಿವೆ.
ಸ್ವಾಮಿ ಹೆಗ್ಡೇರೆ....
ಇವತ್ತು ಏನು ಕೆಲಸ ಆಗ್ಲಿಲ್ಲ. ಎಲ್ಲ ನಿಮ್ ಬ್ಲಾಗ್ ಓದೋದೇ ಆಗೋಯ್ತು :)
ಆದರು ಸಕ್ಕತ್ತಾಗ್ ಬರೀತೀರ.....ನಿಮ್ ಹಳೆ ಬ್ಲಾಗ್ ಎಲ್ಲ ಒಂದೊಂದೇ ಓದ್ಕೊಂಡ್ ಬರ್ತಾ ಇದ್ದೀನಿ :)
Thanks Aithalರೆ. ನಿಧಾನಕ್ ಓದಿ. ಕೆಲ್ಸಕ್ಕೆ ತೊಂದ್ರೆ ಮಾಡ್ಕೋಬೇಡಿ ;)
ಕಾಮೆಂಟ್ ಪೋಸ್ಟ್ ಮಾಡಿ