ಬುಧವಾರ, ಮೇ 13, 2009

ವಿಕಾಸದ ಹಾದಿಯಲ್ಲಿ ೨ ವರ್ಷ!

ಬೇರೆ ಏನೋ ಬರೆದು ಕೊನೆಗೆ ಆ ವಿಷಯಕ್ಕೆ ಬರಲಾ? ಅಥವಾ ಮೊದಲೇ ಆ ವಿಷಯ ಹೇಳಿ ನಂತರ ಮತ್ತೇನೋ ಹೇಳಲಾ? ವಿಷಯದ ಬಗ್ಗೆ ಹೇಳುತ್ತಾ ಜೊತೆಗೆ ವಿಶ್ಲೇಷಣೆ, ಉಪದೇಶ, ನೀತಿಸಂಹಿತೆ, ಸಂಯಮ, ಸುಡುಗಾಡು ಶುಂಠಿ...

ಏನೂ ಬೇಡ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಇವತ್ತಿಗೆ ಸರಿಯಾಗಿ ನನ್ನ ಈ ಬ್ಲಾಗ್ ಶುರುಮಾಡಿ ೨ ವರ್ಷ ೩ ದಿನ ಆಯಿತು. ಮೊದಲ ವರ್ಷ ಕಳೆದಾಗ 'ವರ್ಷ ಕಳೆಯಿತು' ಎಂದು ಬರೆದಿದ್ದೆ. ಈ ಎರಡು ವರ್ಷ ಕಳೆದಾಗಲೂ '೨ ವರ್ಷ ಕಳೆಯಿತು' ಎನ್ನುವುದಕ್ಕಿಂತ ಹೆಚ್ಚಿನದೇನೂ ಆಗಿಲ್ಲ ಅಂತ ಅನ್ನಿಸಿದರೂ ಒಂದಷ್ಟು ಬದಲಾವಣೆಗಳು ಆಗಿವೆ, ತಿರುವುಗಳು ಕಂಡಿವೆ ಎಂದಷ್ಟೇ ಹೇಳಬಲ್ಲೆ. ಹಲವು ಬಾರಿ ಯಾಕೆ ಬೇಕಾಗಿತ್ತು ಈ ಬ್ಲಾಗ್ ಅನ್ನಿಸಿದೆ. ಮರುಕ್ಷಣವೇ ಇದರಲ್ಲೇ ಖುಷಿ ಅನ್ನಿಸಿದೆ. ಬ್ಲಾಗ್ ಅಂದಾಕ್ಷಣ ಬರಹದ ಜೊತೆ ಓದುಗರೂ ಅಷ್ಟೇ ಮುಖ್ಯ. ಬ್ಲಾಗ್ ಎಂದರೆ ಎಷ್ಟೇ ನಮಗೆ ನಾವು ಬರೆದುಕೊಳ್ಳುವುದು ಅದೂ ಇದೂ ಅಂತ ಏನೇ ಅಂದರೂ ಕೂಡ ಓದುಗರಿಲ್ಲದಿದ್ದಲ್ಲಿ ಡೈರಿಯಲ್ಲಿ ಬರೆದು ಒಳಗೆ ಇಡುವುದಕ್ಕೂ ಇದಕ್ಕೂ ವ್ಯತ್ಯಾಸವಿರುತ್ತಿರಲಿಲ್ಲ ಮತ್ತು ಇಷ್ಟು ಬರೆಯಲು ಮನಸ್ಸಾಗುತ್ತಲೂ ಇರಲಿಲ್ಲ. ಬ್ಲಾಗ್ ಬರೆಯುತ್ತಾ ಎರಡು ವರ್ಷ ಕಳೆದಿದ್ದರೂ ಕೂಡ ಮೇ ೧೦, ೨೦೦೭ ರಂದು ಮೊದಲ ಪೋಸ್ಟ್ ಹಾಕುವಾಗ ಇದ್ದ ದುಗುಡ ಈಗಲೂ ಪ್ರತಿಯೊಂದು ಪೋಸ್ಟ್ ಹಾಕುವಾಗಲೂ ಇರುತ್ತದೆ. ಮೊದಲೆಲ್ಲಾ ಮನಸಿಗೆ ಬಂದಿದ್ದನ್ನು ಕೆಚ್ಚಿ ಕೆಡವಿಹಾಕಬಹುದಿತ್ತು ಆದರೆ ಈಗ ಫಿಲ್ಟರ್ ಹಾಕಿಕೊಳ್ಳಲೇ ಬೇಕಾದ ಕೆಲವು ಅನಿವಾರ್ಯಗಳಿವೆ. ಆಫೀಸಲ್ಲೋ ಮತ್ತೆಲ್ಲೋ ಕೂತು ಕುಟ್ಟಿದ್ದು ಸರಿಯಾಗಿದೆಯಾ? ಬ್ಲಾಗ್ ಗೆ ಹಾಕುವಂತಿದೆಯಾ? ಓದುವ ಕೆಲವರಿಗಾದರೂ ಸರಿಯೆನಿಸುತ್ತಾ? ಹೀಗೆ ಹಲವು ಯೋಚನೆಗಳು ಪ್ರತಿಬಾರಿಯೂ ಇದ್ದೇ ಇರುತ್ತವೆ. ಯಾವುದೋ ಮನಃಸ್ಥಿತಿಯಲ್ಲಿ ಬರೆದದ್ದು ಅನಂತರ ಸರಿಯಾಗಿಲ್ಲ ಅನ್ನಿಸಿ ಬದಲಾಯಿಸಿದ್ದಿದೆ. ಎಲ್ಡೆಕ್ರೆ ಹೊಲ ಮಧ್ಯ ಬಾವಿ ಒಂಥರಾ ಪರವಾಗಿಲ್ಲ ಅನ್ನಿಸಿದೆ. ನನ್ನಲ್ಲಿ ಓದು, ಬರವಣಿಗೆಯನ್ನು ಕಾಯ್ದುಕೊಳ್ಳಲು ಒಂದು ರೀತಿ ಈ ಬ್ಲಾಗ್ ಕಾರಣ ಎಂದೂ, ಜೊತೆಗೆ ತೆರೆದುಕೊಳ್ಳಲು ಒಂದು ವೇದಿಕೆಯಾಗಿ ಸಹಾಯ ಮಾಡಿದ್ದೂ ಈ ಬ್ಲಾಗ್ ಎಂದೂ ಸಂತೋಷದಿಂದ ಹೇಳಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ವಿಕಾಸವಾದಕ್ಕೂ, ಹಲವು ರೂಪಗಳಲ್ಲಿರುವ ಎಲ್ಲಾ ಓದುಗರಿಗೂ ಪ್ರೀತಿಯಿಂದ ಥ್ಯಾಂಕ್ಸ್. :-)

38 ಕಾಮೆಂಟ್‌ಗಳು:

shivu.k ಹೇಳಿದರು...

ವಿಕಾಶ್,

ಅಭಿನಂದನೆಗಳು.

Shankar Prasad ಶಂಕರ ಪ್ರಸಾದ ಹೇಳಿದರು...

ಸಖತ್ ಖುಷಿ ಆಯ್ತು ಮಗ.. ಎರಡನೇ ಹುಟ್ಟುಹಬ್ಬದ ಕುಸಿಗಳು.
ಎಲ್ಡೆಕ್ರೆ ಹೊಲ ಸಕತ್ ಕುಸಿ ಕೊಡ್ತು. ಆದ್ರೆ ನೀನು ಬ್ಲಾಗಿಂಗ್ ಶುರು ಮಾಡಿದ ದಿನದಿಂದ
ಇವತ್ತಿನ ವರೆಗೆ ಬರೆದ ಲೇಖನಗಳನ್ನ ನೋಡ್ತಾ (ಓದುತ್ತಾ) ಇದ್ರೆ, ಆ ಪ್ರಬುದ್ಧತೆ ಬೆಳೆಯುತ್ತಾ ಬಂದಿರೋದು
ಸ್ಪಷ್ಟವಾಗಿ ಕಾಣುತ್ತೆ. ನಂದೂ ಅದೇ ಕಥೆ.
ಏನೇ ಆಗ್ಲಿ, ಬ್ಲಾಗ್ ಅನ್ನೋದು ನಮ್ಮ ದುನಿಯಾ. ನಮ್ಮ ಮನಸ್ಸಿಗೆ ಬಂದಿದ್ದು (Logical and rational) ಬರೆಯುವ ಜಾಗ.
ಬೇರೆಯವರ ಅನುಕರಣೆ ಮಾಡದೆ ಬರೆಯುತ್ತಾ ಬಂದಿದ್ಯಾ. ಕೀಪ್ ಇಟ್ ಅಪ್.

ಕಟ್ಟೆ ಶಂಕ್ರ

sunaath ಹೇಳಿದರು...

ನೀವು ವಿಕಾಸವಾದರೆ, ಓದುಗರೂ ವಿಕಾಸವಾದಂತೆ.
ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು.

ರಾಜೇಶ್ ನಾಯ್ಕ ಹೇಳಿದರು...

ಚಂದದ ಪ್ರಯಾಣ ನಿಮ್ಮದು ಬ್ಲಾಗ್ ಲೋಕದಲ್ಲಿ. ಶುಭಾಶಯಗಳು.

Lakshmi Shashidhar Chaitanya ಹೇಳಿದರು...

ಓಹ್ ! ಡಾರ್ವಿನ್ ಹುಟ್ಟಿ ಇನ್ನೂರು ವರ್ಷ...ನಿಮ್ಮ ವಿಕಾಸವಾದ ಹುಟ್ಟಿ ಎರಡು ವರ್ಷ ! whatte coincidence ! ಇರ್ಲಿ, ಹಾರ್ದಿಕ ಅಭಿನಂದನೆಗಳು. ವಿಕಾಸವಾಗುತ್ತಲೇ ಇರುವ ವಾದದ ಶೈಲಿಗೆ ಒಂದು ಸಲಾಮ್..I hope it evolves for the better!

Roopa ಹೇಳಿದರು...

ನಿಮ್ಮ ವಿಕಾಸವಾದ ಹೀಗೆ ಮುಂದುವರೆಯುತ್ತಿರಲಿ

Parisarapremi ಹೇಳಿದರು...

ಒಳ್ಳೇ ಕೋಯಿನ್ಸಿಡೆನ್ಸು. ಕ್ಷಿತಿಜಾನಿಸಿಕೆಗೂ (http://parisarapremi.blogspot.com/) ಎರಡಾಯಿತು.

ಇಬ್ಬರೂ ಒಟ್ಟಿಗೇ ಮೌನಾಚರಣೆ ಮಾಡಬಹುದು ನೋಡಿ.

Parisarapremi ಹೇಳಿದರು...

'ವಿಕಾಸ' ಎನ್ನುವ ಹೆಸರು ಬಹಳ ಇಷ್ಟ ನನಗೆ. ಹೆಸರು ವೈಚಾರಿಕತೆಯನ್ನು ಪ್ರಚೋದಿಸುವುದಷ್ಟೆ? ಬಹಳ ಸೊಗಸಾಗಿ ಬರೆದಿದ್ದೀರಿ, ಬರೆಯುತ್ತಿದ್ದೀರಿ, ಮುಂದೆಯೂ ಬರೆಯುತ್ತಿರಿ. ಆಲ್ ದಿ ಬೆಸ್ಟ್.

hamsanandi ಹೇಳಿದರು...

ಬರೀತಾ ಇರಿ ಹೀಗೇ!

ಓದುವವರಿರೆಂದು ನಾ ಬಲ್ಲೆನದರಿಂದ
ಬರೆಯುವೆನು ನಾನಂತು ಎಂದಿನಂತೆ
ಯಾರು ಕಾಮೆಂಟಿಸಿದರು ನನಗಿಲ್ಲ ಚಿಂತೆ

ಅಂತ ಹಾಡ್ಕೋತಾ...

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

Good going Vikas! Keep it up. Nice fun to read your posts, Ofcourse - it is knowledge boosting as well :)

Ravi Hegde ಹೇಳಿದರು...

ವಿಕಾಸ್,
ನಿಮ್ಮ ಕೆಲವು ಲೇಖನಗಳನ್ನು ಓದಿದ್ದೇನೆ.ಚೆನ್ನಾಗಿದೆ ನಿಮ್ಮ ಶೈಲಿ.
ಮುಂದುವರಿಸಿ.
ರವಿ.

ಬಾಲು ಹೇಳಿದರು...

Vikas,

NInge Abhinandane galu!!!

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಪ್ರಿಯ ವಿಕಾಸ...
"ಅಂತೂ ಸರಿಯಾಗಿ ೨೦೦೭ ನೇ ಇಸ್ವಿ ಮೇ ೧೦ ರಂದು ಬ್ಲಾಗ್ ಶುರು ಮಾಡಿದೆ. ಮೊದಲು ಪೋಸ್ಟಿಂಗ್ ಮಾಡಿದಾಗ ಹೆಂಡತಿಯ ಚೊಚ್ಚಲ ಹೆರಿಗೆಯ ಸಮಯದಲ್ಲಿ ಗಂಡನಿಗಿರುವ ದುಗುಡವಿತ್ತು.! :)"

ವಿಕಾಸವಾದಕ್ಕೆ ವರುಷ ತುಂಬಿದಾಗ ತುಂಟತಮ್ಮನು ಬರೆದ ಈ ಮೇಲಿನ ಸಾಲು ಓದಿ ಮುಖದಲ್ಲಿನ ನಗು ಸುಮಾರು ಹೊತ್ತು ಮಾಸಿರಲಿಲ್ಲ. ಅದೆಷ್ಟು ಬೇಗ ದಿನ ಸರಿದವೋ! ಎರಡನೇ ವರ್ಷದ ಹುಟ್ಟುಹಬ್ಬವೂ ಬಂದೇಬಿಟ್ಟಿತು.

"ವಿಕಾಸವಾದ"ಕ್ಕೆ ಎರಡನೇ ಹುಟ್ಟುಹಬ್ಬದ ಶುಭಾಶಯಗಳು. ಹೀಗೆಯೇ ಚೆಂದ ಚೆಂದದ ಬರಹಗಳು ಮುಂದೆಯೂ ಇನ್ನಷ್ಟು ಬರಲಿ.

ಪ್ರೀತಿಯಿಂದ,
ಅಕ್ಕ.

ಧರಿತ್ರಿ ಹೇಳಿದರು...

ಪ್ರೀತಿಯ ವಿಕಾಸೂ...
ನಿಮ್ಮ ಬ್ಲಾಗಿನ ಎರಡನೆ ವರ್ಷದ ಹಹುಟ್ಟುಹಬ್ಬಕ್ಕೆ ಶುಭಾಶಯಗಳು. ಮುಂದುವರೆಯಲಿ..ವಿಕಾಸವಾದ ಹೊಸತನಕ್ಕೆ ಮುನ್ನುಡಿ ಬರೆಯಲಿ.
ಹಾರೈಕೆಗಳೊಂದಿಗೆ
ಧರಿತ್ರಿ

ಅನಾಮಧೇಯ ಹೇಳಿದರು...

೨ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಹಾರೈಕೆಗಳು...ಚೆಂದವಾಗಿ ಬರೆಯುತ್ತೀರಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ವಾ?! ಬರಹವನ್ನು ಹೀಗೆ ಮುಂದುವರಿಸಿ...
ವಿನಾಯಕ ಕೋಡ್ಸರ

ಅನಾಮಧೇಯ ಹೇಳಿದರು...

Best Wishes, Keep Writing

-Shettaru

Sushrutha Dodderi ಹೇಳಿದರು...

ಶುಭಾಶಯ ಕಣಪ್ಪಾ.. ಎಲ್ಲಾ ನಿನ್ನೆ ಮೊನ್ನೆ ಆದಂಗಿದೆ.. ನೀನು ಬ್ಲಾಗ್ ಶುರು ಮಾಡಿದ್ದು, ನಾವು ’ಸರಿಯಾತು’ ಅಂತ ಹೇಳಿದ್ದು, ಮತ್ತೂ ಇನ್ನೂ ಏನೇನೋ.. ..

ಹೊಲದ ಹಸಿರ ನಡುವೆಯೂ ನೆಟ್‍ವರ್ಕ್ ಸಿಗಲಿ, ಬ್ಲಾಗ್ ಅಪ್‍ಡೇಟ್ ಆಗ್ತಿರ್ಲಿ. :-)

ಅನಾಮಧೇಯ ಹೇಳಿದರು...

ಇವ್ನು ಬೇರ್ಯವರ ಕಾಲು ಎಳೆಯೋದರಲ್ಲೇ ಟೈಮ್ ವೆಸ್ಟ್ ಮಾಡ್ತಾನೆ. ಯಾರ್ ಹೇಗಿದ್ರೇನು, ಇವ್ನು ಇವ್ನ ಪಾಡಿಗೆ ಬರ್ಕೊಂಡ್ ಹೋಗದಲ್ವಾ? ಅಂತ ಬಹಳಷ್ಟು ಸರಿ ಅನ್ನಿಸಿದರೆ, ಬರೆದರೇನು ತಪ್ಪು ಬರೀಲಿ ಅಂತ ಮತ್ತಷ್ಟು ಸತಿ ಅನ್ನಿಸಿದೆ. ಕೊನೆಯ ಏಳೆಂಟು ಪೋಸ್ಟ್ ಗಳಂತು ಎಷ್ಟು ಖುಷಿ ಕೊಟ್ಟವು ಗೊತ್ತಾ.. ಹೀಗೆ ಬರೀತಿರು.
ನನ್ ಹೆಸರು ಹೇಳಬೇಕಿಲ್ಲ ಅಲ್ವ?

ಅನಾಮಧೇಯ ಹೇಳಿದರು...

Congrats Hegde........

Deepak

ಸುಧೇಶ್ ಶೆಟ್ಟಿ ಹೇಳಿದರು...

ವಿಕಾಸ್....

ಕ೦ಗ್ರಾಟ್ಸು...

ಅನಾಮಧೇಯ ಹೇಳಿದರು...

ಕಂಗ್ರಾಟ್ಸ್..

"ಎಲ್ಡೆಕ್ರೆ ..." ಮಾತ್ರ ಅಂತ ಹೇಳಿ "ಎಲೆ ಶೆಟ್ಟಿ" ಗೆ ಮೋಸ ಮಾಡಿದ್ರಿ..:(

ಎಚ್. ಆನಂದರಾಮ ಶಾಸ್ತ್ರೀ ಹೇಳಿದರು...

ನಾನು ಈ ಮೊದಲು ಇಲ್ಲಿಗೆ ಬಂದಿರಲಿಲ್ಲ. ಇದೀಗ ಇಲ್ಲಿನ ಬಹುಪಾಲು ಬರಹಗಳನ್ನೋದಿ ಮುದಗೊಂಡಿದ್ದೇನೆ. ನಿಮ್ಮ ಬರಹಗಳಲ್ಲಿ ವಿಷಯವೈವಿಧ್ಯವಿದೆ. ವಿಭಿನ್ನ ಅಭಿರುಚಿಯ ಸಕಲರಿಗೂ ಇಷ್ಟವಾಗುವ ಬ್ಲಾಗ್ ನಿಮ್ಮದು. ಹೀಗೇ ಮುಂದುವರಿಸಿರಿ.

raviraj ಹೇಳಿದರು...

vikas enu a smile ge 2 varshakke gadda bandbittita ? vikasavada munduvareyali....shubhavagali

ಅನಾಮಧೇಯ ಹೇಳಿದರು...

ninna blog na huTdabba na naanu khandita mareyoke aagolla... yakandre ...

nan huTdabba ninna blog huTdabbada munchina dina (May 9)..:-)

nanna kundaabra blogina huTdabba ninna blog huTdabba da maarne dina (may 11)

happy blogging......

Niranjan ಹೇಳಿದರು...

Congrats Hegde........
ಬ್ಲಾಗಿನ ಎರಡನೇ ಹುಟ್ಟುಹಬ್ಬದ ಶುಭಾಶಯಗಳು.

ವಿಕಾಸವಾದ್ಕೆ effect ಬೇಡ .....
ಜೇವನ ಪ್ರೀತಿ ಸದಾ ಇರಲಿ ....ಬರವಣಿಗೆ ಮೆರವಣಿಗೆ ಆಗಲಿ ....."ವಾದ" ಹೀಗೆ ಮುಂದುವರೆಯುತ್ತಿರಲಿ

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,
ವಿಕಾಸವಾದ ಹೀಗೇ ಸದಾ ಮುಂದುವರೆಯುತ್ತಿರಲಿ ಎಂದು ಹಾರೈಸುವೆ. ನಿನಗೂ ನೀನು ಮಂಡಿಸುವ ವಾದಕ್ಕೂ All the BestU :)

Prabhuraj Moogi ಹೇಳಿದರು...

ಅಭಿನಂದನೆಗಳು... ವಿಕಾಸವಾದ ಹೀಗೆ ವಿಕಸಿಸುತ್ತಿರಲಿ.. ಒಂದು ಪುಟ್ಟ ರೆಕ್ವೇಸ್ಟ.. ನಿಮಗೇನನಿಸುತ್ತೋ ಅದನ್ನು ನಿರ್ಭಿಡೆಯಿಂದ ಬರೆಯಿರಿ, ಓದುಗರಿಗಾಗಿ ನಿಮ್ಮ ಅನಿಸಿಕೆಗಳನ್ನು ಕತ್ತರಿಸಬೇಡಿ... ಇಷ್ಟವಾದ್ರೆ ಪ್ರತಿಕ್ರಿಯಿಸುತ್ತೀವೀ ಇಲ್ಲಾಂದ್ರೆ ಇಲ್ಲ ಓದುಗರೆಲ್ಲ ಹಾಗೆ... ಅದಕ್ಕೆ ನಿಮ್ಗೆ ನೀವೆ ರಾಜಿ ಮಾಡಿಕೋಳ್ಳಬೇಡಿ..

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. ಹೇಳಿದರು...

kushi aatu .
aatmeeyavaada bhaashe.
e eradara munade sonnegalu barali endu haaraisuttene.

ಅನಿಕೇತನ ಸುನಿಲ್ ಹೇಳಿದರು...

:-)keep going vikas...:)
All the best....
Sunil.

goutam ಹೇಳಿದರು...

congrats vikasan

ವಿ.ರಾ.ಹೆ. ಹೇಳಿದರು...

ಹಾರೈಸಿದ, ಶುಭಾಶಯ ಹೇಳಿದ ಪ್ರತಿಯೊಬ್ಬರಿಗೂ ತುಂಬಾ.. ತುಂಬಾ.. ಥ್ಯಾಂಕ್ಸ್. ಪ್ರೋತ್ಸಾಹಕ್ಕೆ, ಮೆಚ್ಚುಗೆಗೆ ನಾ ಋಣಿ.

- ವಿಕಾಸ್

anusha hegde ಹೇಳಿದರು...

Here goes one more wish that adds to your list..No doubt you have done a good job..keep blogging :)

ಅನಾಮಧೇಯ ಹೇಳಿದರು...

Gud Going Sirr...ವಿಕಾಸ-ವಾದ-ವಾಗುತ್ತಿರಲಿ

Chandra Kengatte ಹೇಳಿದರು...

Good.. Congrats maga.. eege ninna vaada vikaasaaaaavaaaguttiiirali...

Enjoy :)

ವಿ.ರಾ.ಹೆ. ಹೇಳಿದರು...

Thank you Anusha, Mahesh & Chandru.:)

ಅನಾಮಧೇಯ ಹೇಳಿದರು...

Congrats Vikas..Keep going..

_Pradeep

ಆಲಾಪಿನಿ ಹೇಳಿದರು...

ವಿಕ್ಸ್‌... ಈವತ್ತು ನೋಡಿದೆ ನಿನ್ನ ಬ್ಲಾಗ್‌. ಕಂಗ್ರಾಟ್ಸ್ ಕಣೋ...

ವಿ.ರಾ.ಹೆ. ಹೇಳಿದರು...

Thanks Pradeep & AlApini