ಶುಕ್ರವಾರ, ಡಿಸೆಂಬರ್ 4, 2009

ಪ್ರೆಸ್ ಕ್ಲಬ್ ಬಾರ್ & ರೆಸ್ಟೋರಂಟ್ ?

ಕನ್ನಡ ಓದುಗರು ಒಂದಲ್ಲಾ ಒಂದು ಕಡೆ ಈ ’ಪ್ರೆಸ್ ಕ್ಲಬ್’ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ನಾನು ಸಣ್ಣವನಿದ್ದಾಗಿಂದ ಗಮನಿಸಿದ್ದೇನಂದರೆ ಪತ್ರಕರ್ತರ, ಬರಹಗಾರರ ಲೇಖನಗಳಲ್ಲಿ, ವರದಿಗಳಲ್ಲಿ ಈ ಪ್ರೆಸ್ ಕ್ಲಬ್ ಸುಮಾರು ಬಾರಿ ಕಾಣಿಸಿಕೊಳ್ಳುತ್ತಿತ್ತು. ಅದೂ ಅಲ್ಲದೇ ಕೆಲವರು ಮಾತನಾಡುವಾಗಲೂ ಪ್ರೆಸ್ ಕ್ಲಬ್ ನಲ್ಲಿ ಅದಾಯಿತು ಇದಾಯಿತು, ಅಲ್ಲಿ ಅವರೆಲ್ಲಾ ಸೇರುತ್ತಿದ್ದರು, ಮಾತಾಡುತ್ತಿದ್ದರು ಎಂದೆಲ್ಲಾ ಹೇಳುತ್ತಿರುವುದನ್ನೂ ಕೇಳಿದ್ದೆ. ವಿಷಯ ಏನು ಅಂದರೆ, ದೇವರಾಣೆ ನನಗೆ ಈ ಪ್ರೆಸ್ ಕ್ಲಬ್ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. ನಾನು ಅದನ್ನ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇರಬೇಕು ಅಂದುಕೊಂಡಿದ್ದೆ. ಈ ಸಿನೆಮಾ ಮಂದಿಗೆ ಕಾನಿಷ್ಕ ಹೋಟೆಲ್ ಇದ್ದಂತೆ, ಬರವಣಿಗೆ ಲೋಕದವರಿಗೆ ಪ್ರೆಸ್ ಕ್ಲಬ್ ಅನ್ನಿಸಿತ್ತು. ಇದಕ್ಕೆ ಕಾರಣವೂ ಇದೆ. ಯಾರೇ ಆದರೂ ಪ್ರೆಸ್ ಕ್ಲಬ್ ಬಗ್ಗೆ ಉಲ್ಲೇಖಿಸುವಾಗಲೂ ಕೂಡ ತಾವು ಪ್ರೆಸ್ ಕ್ಲಬ್ ನಲ್ಲಿ ಕೂತು ಕುಡಿಯುತ್ತಾ ಇದ್ವಿ, ಅಪರಾತ್ರಿವರೆಗೆ ಕುಡಿಯುತ್ತಿದ್ವಿ, ಆ ಲೇಖಕ ಅಲ್ಲಿ ಕುಡೀತಿದ್ರು, ಈ ಲೇಖಕ ಅಲ್ಲಿ ಕುಡಿಯುತ್ತಾ ಮೀಟಿಂಗು ಮಾಡ್ತಿದ್ರು ಅಂತ ಮಾತ್ರ ಬರೆಯುತ್ತಿದ್ದರು. ಪ್ರೆಸ್ ಕ್ಲಬ್ ವಿಷಯ ಬಂತು ಅಂದರೆ ಅದು ’ಕುಡಿತ’ಕ್ಕೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು! ಆದಕ್ಕೇ ಸಹಜವಾಗಿ ಅದು ಬಾರ್ ಅಂಡ್ ರೆಸ್ಟೋರೆಂಟೇ ಇರಬೇಕು ಅನಿಸಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿ ಅಲ್ಲೇ ವಿಧಾನಸೌಧದ ಹತ್ತಿರವಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಆದಾಯ ತೆರಿಗೆ ಇಲಾಖೆ ಕ್ಯಾಂಟೀನಿಗೆ ಹೋಗುತ್ತಿದ್ದೆವು. ಅಲ್ಲಿನ ಕಿಟಕಿಯಿಂದ ಪ್ರೆಸ್ ಕ್ಲಬ್ ಅಂಗಳ ನೇರವಾಗಿ ಕಾಣುತ್ತದೆ. ಅಲ್ಲಿಯೂ ಕಾಣುತ್ತಿದ್ದುದು ಅದೇ ದೃಶ್ಯ, ಒಂದಿಷ್ಟು ಜನ ಹೊರಗೆ ಮೇಜುಗಳ ಮೇಲೆ ಜೇನು ಬಣ್ಣದ ದ್ರವವನ್ನು ಇಟ್ಟುಕೊಂಡು ಮಾತಾಡುತ್ತಾ ಕುಳಿತಿರುತ್ತಿದ್ದರು. ಅಲ್ಲಿಗೆ ನಿಜವಾಗಿಯೂ ಇದು ಬಾರ್ ಅಂಡ್ ರೆಸ್ಟೋರೆಂಟೇ ಅಂತ ನಂಬಿಕೊಂಡಿದ್ದೆ. ಆಮೇಲೆ ಒಮ್ಮೆ ಅಲ್ಲಿ ಸಿನೆಮಾ ಮಹೂರ್ತ ಒಂದಕ್ಕೆ ಹೋಗುವ ಪ್ರಮೇಯ ಬಂದಿತ್ತು. ಅವತ್ತು ಪ್ರೆಸ್ ಕ್ಲಬ್ಬನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತ್ತು... ಆದರೆ ಅವತ್ತು ವಿಪರೀತ ಜನರಿದ್ದುದರಿಂದ ಮತ್ತು ನನಗೆ ಸಿಗಬೇಕಾದವರು ಸಿಕ್ಕಿದುದರಿಂದ ಹಾಗೇಯೇ ಮೇಲ್ಮೇಲೆ ನೋಡಿ ಹೊರಟುಬಿಟ್ಟಿದ್ದೆ. ’ಪ್ರೆಸ್ ಕ್ಲಬ್’ ಬಗ್ಗೆ ಸಂಶಯ ಪೂರ್ತಿ ಹೋಗಿರಲಿಲ್ಲ.

ಈಗೊಂದು ಒಂದೂವರೆ ವರ್ಷದ ಕೆಳಗೆ ಪತ್ರಕರ್ತೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿರುವಾಗ ಅವಳು ಪ್ರೆಸ್ ಕ್ಲಬ್ ನಲ್ಲಿ ಊಟಕ್ಕೆ ಹೋಗಿದ್ದೆ ಅಂದಾಗ ಆಶ್ಚರ್ಯವಾಗಿ ಅದರ ಬಗ್ಗೆ ಕೇಳಲಾಗಿ ಪ್ರೆಸ್ ಕ್ಲಬ್ ಅಂದ್ರೆ ಏನೂಂತ ನಿಜ ವಿಷಯ ಗೊತ್ತಾಯ್ತು.
ಅದಕ್ಕೇ ಹೇಳೋದು.. ಈ ಪತ್ರಕರ್ತರ ಸಾವಾಸ ಅಲ್ಲ .. ಏನು ಬರೆದರೂ ಜನ ತಪ್ಪು ತಿಳ್ಕೊಳ್ಳೋ ಹಾಗೇ ಬರೀತಾರೆ.

ಇದೇನು ’ಸೂರ್ಯಂಗೇ ಟಾರ್ಚಾ’ ಅನ್ನುವ ತರಹ ’ಪ್ರೆಸ್ ಕ್ಲಬ್ಬಿಗೇ ರಿಪೋರ್ಟಾ’ ಅಂತೀರಾ? ಏನಿಲ್ಲ, ಅಜ್ಞಾನ ನನ್ನದು ಅಷ್ಟೆ!

17 ಕಾಮೆಂಟ್‌ಗಳು:

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ಹ್ಹ ಹ್ಹ ಹ್ಹಾ... :-)

PARAANJAPE K.N. ಹೇಳಿದರು...

ನಿಮ್ಮ ಅನುಮಾನ ನಿಜವೆನಿಸುವಷ್ಟು ಬಾರಿ ಕುಡಿತದ ವಿಚಾರಗಳಿಗೆ ಪ್ರೆಸ್ ಕ್ಲಬ್ ಸಿಮಿತವಾಗಿದ್ದು ಸುಳ್ಳಲ್ಲ. ರವಿಬೆಳಗೆರೆಯ ಬರಹಗಳಲ್ಲಿಯ೦ತೂ ಪ್ರೆಸ್ ಕ್ಲಬ್ ಚಿತ್ರಣ ಹಾಗೆಯೇ ಬಂದಿದೆ. ಚೆನ್ನಾಗಿದೆ

ಬಾಲು ಹೇಳಿದರು...

ಓಹೋ :)

ಶ್ರೀನಿಧಿ.ಡಿ.ಎಸ್ ಹೇಳಿದರು...

:):)

ವಸಂತ ಹೇಳಿದರು...

ಪ್ರೆಸ್ ಕ್ಲಬ್ ಬಾರ್ & ರೆಸ್ಟೋರಂಟ್ ಅನ್ನೋ ಟೈಟಲ್ ಸಕತ್ ಆಗಿದೆ ವಿಕಾಸ್ :)

ತೇಜಸ್ವಿನಿ ಹೆಗಡೆ ಹೇಳಿದರು...

ಹ್ಮ್ಂ... ಎಲ್ಲಾ ಸರಿ.. ಆದ್ರೆ ಕೊನೆಗೂ ಹೇಳಿಲ್ಲ ನೀನು Actually Press Clubಅಂದ್ರೆ ಏನು ಅಂತ!!? ನಂಗೂ ಕುತೂಹಲ ತಿಳ್ಕೊಳೋಕೆ.. So...ಸವಿವರಾವಿ ಹೇಳಪ್ಪ :)

ಸುಮ ಹೇಳಿದರು...

ನಾನೂ ಹಂಗೇ ಅಂದುಕೊಂಡಿರೋದು .ಹಾಗಾದ್ರೆ ನಿಜವಾಗ್ಲೂ ಅದೇನು?

Unknown ಹೇಳಿದರು...

ತಿಳಕೊಂಡಿದ್ದು ವಾಸ್ತವಕ್ಕೂ ತೀರಾ ತಪ್ಪೇನು ಅಲ್ಲ. ಒಂಥರಾ ಹಾಗೆಯೇ. ಆದರೆ ಹೇಳುವ ಹಾಗಿಲ್ಲ ಅಷ್ಟೆ.

ಅನಾಮಧೇಯ ಹೇಳಿದರು...

:D

Parisarapremi ಹೇಳಿದರು...

ಹೆ ಹ್ಹೆ, ಪ್ರೆಸ್ ಕ್ಲಬ್ಬಿನಲ್ಲಿ ನಮ್ಮ ’ಪ್ರಣತಿ’ಯ ಮೀಟಿಂಗನ್ನೂ ಮಾಡಿದ್ದೇವ ಕಣ್ರೀ!!!

ದಿನಕರ ಮೊಗೇರ ಹೇಳಿದರು...

ಹಅ ಹ ಹ ..... ಬೆಳೆಗೆರೆಯವರ ಬರಹಗಳಲ್ಲಿ, ತುಂಬಾ ಕಡೆ ಇಣುಕುತ್ತದೆ ಈ 'ಪ್ರೆಸ್ ಕ್ಲಬ್' ..... ನಾನೂ ಸಹ ಇದೊಂದು ಆಫೀಸ್ ಆದ್ರೆ ಎಲ್ಲಾ ಥರದ ಸಪ್ಲಯ್ ಇರತ್ತೆ ಅಂತ ತಿಳಿದಿದ್ದೆ.... ಕೊನೆಗೂ ಏನಂತ ತಿಳಿಲಿಲ್ಲ.....

ಸುಘೋಷ್ ಎಸ್. ನಿಗಳೆ ಹೇಳಿದರು...

ನೀವು ಈಗ ಏನು ತಿಳ್ಕೊಂಡಿದ್ದೀರೋ ಗೊತ್ತಿಲ್ಲ. ಆದ್ರೆ ಆಗ ತಿಳ್ಕೊಂಡಿದ್ದು ಮಾತ್ರ ಕರೆಕ್ಟಾಗಿತ್ತು. ಸುಘೋಷ್ ಎಸ್. ನಿಗಳೆ

ವಿ.ರಾ.ಹೆ. ಹೇಳಿದರು...

@ಪೂ, :-)

@ಪರಾಂಜಪೆ, ಹೌದಲ್ವಾ !

@ಬಾಲು, ಹ್ಮ್..

@ಲೋದ್ಯಾಶಿ, ನಿಧಿ, :)

@ಪಕ್ಕದಮನೆಹುಡ್ಗ, ಸುಮ್ನಿರ್ರೀ.. ಗಾಂಧೀನಗರದಲ್ಲಿ ಯಾವ್ದಾರೂ ಸಿನೆಮಾಗೆ ರೆಜಿಸ್ಟರ್ ಮಾಡಿಸ್ಬಿಟ್ಟಾರು ಯಾರಾದ್ರೂ!

@ಶ್ರೀಶಂ, ಹೌದು, ನಂಗೂ ಎಲ್ಲಾರೂ ಹಾಗೇ ಹೇಳಿದ್ರು !

@ಕಾಫಿ, :)

@ದಿನಕರ, ಹೌದು . ನಾನೂ ಹಾಗೆ ಅನ್ಕೊಂಡಿದ್ದೆ. ಬೆಳಗೆರೆಯವರೇ ಈತರಹ ಇಮೇಜ್ ಕೊಟ್ಟಿರೋದು ಅನ್ಬೋದು.

@ಪರಿಸರ, ಒಳ್ಳೇ ಜಾಗದಲ್ಲೇ ಮಾಡಿದ್ದೀರ ಬಿಡಿ. !

@ಸುಘೋಷ್, !!!! ಹೌದಾ!

@ತೇಜಸ್ವಿನಿ, ಸುಮಾ, ಪ್ರೆಸ್ ಕ್ಲಬ್ ಅಂದರೆ ಪತ್ರಕರ್ತರ ಸಂಘವಂತೆ. ಅದರ ಕಟ್ಟಡದಲ್ಲಿ ಪತ್ರಿಕಾಗೋಷ್ಠಿಗಳು ನೆಡೆಯುತ್ತವಂತೆ. ಲೈಬ್ರರಿ , ಕ್ಯಾಂಟೀನ್, ಬಾರ್ ಎಲ್ಲಾ ಇದೆಯಂತೆ. ಹಾಗೆ ಹೇಳಬೇಕೆಂದರೆ ಅದು ಪತ್ರಕರ್ತರ ಅಧಿಕೃತ ಅಡ್ಡಾ. ಆದರೆ ಅಲ್ಲಿ ಕಾರ್ಯನಿರತ ಪತ್ರಕರ್ತರಿಗಿಂತ ಕಾರ್ಯಮರೆತ ಪತ್ರಕರ್ತರೇ ಜಾಸ್ತಿ ಇರುತ್ತಾರೆ ಅನ್ನುವುದು ಫೀಲ್ಡಿನಲ್ಲಿರುವವರ ಕುಹಕ :)

Deepak ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

kaarya mareta...alalla kaarya nirata patrakartara okkutta anta ballavaru heltre. aadru aa bagge naavella maatadodu tappu sunkirappo!
k.s.v

Chandru ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Chandru ಹೇಳಿದರು...

ವಿಕಾಸನಿಂದ ಈ ಥರ ನೀರಿಕ್ಷೆ ಮಾಡಿರಲಿಲ್ಲ !!..