ಮಂಗಳವಾರ, ಅಕ್ಟೋಬರ್ 19, 2010

ಹಳೆಯ ’ಕಸ್ತೂರಿ’ಗಳು ಬೇಕಾ?

ಕನ್ನಡದ ಹಲವಾರು ಹಳೆಯ ಮ್ಯಾಗಜೀನ್ ಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್ ನ 'ಕಸ್ತೂರಿ' ಮ್ಯಾಗಜೀನ್ ಕೂಡ ಒಂದು. ಇದು ಅರ್ಧ ಶತಮಾನದಿಂದ ಪ್ರಕಟವಾಗುತ್ತಿದೆ.  ರೀಡರ್ಸ್ ಡೈಜೆಸ್ಟ್ ಮಾದರಿಯ ಪತ್ರಿಕೆಯೊಂದನ್ನು ಕನ್ನಡದಲ್ಲಿ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶುರುವಾಗಿ, ಇವತ್ತು ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನೇ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ತಲುಪಿದ್ದರೂ ನಮ್ಮ ’ಕಸ್ತೂರಿ’ ಮಾತ್ರ ತಡೆಯಿಲ್ಲದೇ ನೆಡೆಯುತ್ತಿದೆ. ಪತ್ರಿಕೋದ್ಯಮದ ಹಲವು ಘಟಾನುಘಟಿಗಳೆಲ್ಲಾ ಇದರಲ್ಲಿ ಕೆಲಸ ಮಾಡಿದ್ದಾರೆ. ಉತ್ತರಕರ್ನಾಟಕದ ಬಹುತೇಕ ವಿದ್ಯಾವಂತರ ಮನೆಗಳಲ್ಲಿ ಮೊದಲಿನಿಂದಲೂ ಕಸ್ತೂರಿ ಒಂಥರಾ ಸಹಜ ಓದಿನ ಮ್ಯಾಗಜೀನ್. ಕತೆ, ಅನುಭವ, ಲಲಿತ ಪ್ರಬಂಧ, ಹಾಸ್ಯಗಳಿಂದ ಹಿಡಿದು ಜ್ಞಾನ-ವಿಜ್ಞಾನ, ಇತಿಹಾಸ, ಫಿಕ್ಷನ್, ಆಧ್ಯಾತ್ಮ, ಪರಿಸರ, ವೈದ್ಯಕೀಯ ಮುಂತಾದ ಎಲ್ಲಾ ರೀತಿಯ ವಿಷಯಗಳನ್ನೂ ತುಂಬಿಕೊಂಡು ಬರುವ ಕಸ್ತೂರಿಯ ಪ್ರತಿ ಸಂಚಿಕೆಯೂ ಒಂದು ವಿಶೇಷ ಡೈಜೆಸ್ಟ್. ವಿಷಯ ವೈವಿಧ್ಯಗಳು, ಮಾಹಿತಿಪೂರ್ಣ ಲೇಖನಗಳು ಅದರ ಹೈಲೈಟ್ಸ್.


ವಿಷಯ ಏನೆಂದರೆ, ನಮ್ಮ ಮನೆಯಲ್ಲಿಯೂ ಎಷ್ಟೋ ವರ್ಷಗಳಿಂದ ಕಸ್ತೂರಿ ಓದುತ್ತಿದ್ದೇವೆ. ಹಿಂದಿನ ಹಲವು ವರ್ಷಗಳ ಕಸ್ತೂರಿಗಳು ಮನೆಯಲ್ಲಿ ಇವೆ. ಎಷ್ಟೋ ಸಲ ಅದನ್ನು ರದ್ದಿಗೆ ಹಾಕಬೇಕು ಅನಿಸಿದ್ದರೂ ಅಷ್ಟು ಮಾಹಿತಿಗಳ ಪುಸ್ತಕಗಳನ್ನು ಸುಮ್ಮನೇ ವ್ಯರ್ಥವಾಗಿ ರದ್ದಿಗೆ ಹಾಕಲು ಮನಸಾಗದೇ ಹಾಗೇ ಇದೆ. ಈಗೊಂದು ಆರೇಳು ವರ್ಷಗಳ ಹಿಂದೆ ರವಿಬೆಳಗೆರೆಯವರು 'ಓ ಮನಸೇ' ಎಂಬ ಪತ್ರಿಕೆ ಮತ್ತೆ ಶುರುಮಾಡಲು ಹೊರಟಿದ್ದಾಗ ಹಳೆಯ ಕಸ್ತೂರಿಗಳನ್ನು ಯಾರಾದರೂ ಕೊಡುವುದಾದರೆ ಕೊಳ್ಳುವುದಾಗಿ ಪ್ರಕಟಿಸಿದ್ದರು. ಆಗಲೂ ಕೊಡಲು ಮನಸ್ಸಿಲ್ಲದೇ ಹಾಗೇ ಇಟ್ಟುಕೊಂಡಿದ್ದರ ಪರಿಣಾಮ ಇವತ್ತು ಸುಮಾರು ೧೫ ವರ್ಷಗಳ 'ಕಸ್ತೂರಿ' ಮನೆಯ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಈ ಬಾರಿ ಮನೆಗೆ ಹೋದಾಗ ಇನ್ನೂ ಇದನ್ನು ಇಟ್ಟುಕೊಳ್ಳುವುದು ಬೇಡ, ರದ್ದಿಗೆ ಹಾಕೇ ಬಿಡೋಣ ಅಂತ ಹೊರಟವನಿಗೆ ಅದಕ್ಕೂ ಮೊದಲು ಯಾರಿಗಾದರೂ ಪ್ರಯೋಜನವಾಗುವುದಿದ್ದರೆ ಒಮ್ಮೆ ಕೇಳಿನೋಡೋಣ ಎನ್ನಿಸಿತು.
 
ಆದ್ದರಿಂದ ಈ ಬ್ಲಾಗ್ ಓದಿದವರು, ಯಾರಾದರೂ ಆಸಕ್ತರು, ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಸಂಗ್ರಹಕಾರರು ಅಥವಾ ಮತ್ಯಾರಿಗೇ ಆಗಲಿ ಹಳೆಯ ಕಸ್ತೂರಿಗಳು (೧೯೯೪ರಿಂದ ೨೦೦೯) ಬೇಕೆನಿಸಿದರೆ, ಅದರಿಂದ ಉಪಯೋಗವಾಗುತ್ತದೆ ಎಂದೆನಿಸಿದರೆ ನನ್ನನ್ನು ಸಂಪರ್ಕಿಸಿ ಅಥವಾ ಈ ಬಗ್ಗೆ ಏನಾದರೂ ಸಲಹೆಗಳಿದ್ದರೆ ತಿಳಿಸಿ.

ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಮಾತ್ರ ಕೊಡಲ್ಲ ;)
 
 
ವಿಕಿಪಿಡಿಯಾದಲ್ಲಿ ಕಸ್ತೂರಿ

11 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಸುಮಾರು ೧೨-೧೩ ವರ್ಷ ಹಳೆಯ ಮಾತು. ನನ್ನ ಅಜ್ಜನ ಮನೆಯಲ್ಲಿ ೧೯೫೯ ನೆ ಇಸವಿಯಿಂದ ಇದ್ದ ಕಸ್ತೂರಿ ಪುಸ್ತಕಗಳನ್ನು ಕ್ರಮಬದ್ದವಾಗಿ ಜೋಡಿಸುವ ಕೆಲಸ ಮಾಡಿದ್ದೆ (ಸುಮಾರು ಕಳೆದು ಹೋಗಿದ್ದವು ಕೂಡ), ಹಾಗೆ ಎಷ್ಟೋ ಪುಸ್ತಕಗಳನ್ನ ಓದಿದ್ದೆ. ಊಹಿಸಿಕೊಳ್ಳಿ, ಆ ಕಾಲದ ಬರಹಗಳು, ಅಂದಿನ current affairs, ಅದ್ಭುತವಾಗಿತ್ತು. ನನಗೆ ಬಹಳ ಇಷ್ಟವಾಗುತ್ತಿದ್ದವು ಅಂದಿನ ಜಾಹೀರಾತುಗಳು. ಕೊನೆಗೆ ಅವರು ಬೇರೆ ಮನೆಗೆ ಹೋಗುವಾಗ ಹಲವು ಹಳೆಯ ಕಸ್ತೂರಿಗಳನ್ನು ರದ್ದಿಗೆ ಹಾಕಿದ್ದರು ಅನ್ನೋ ನೆನಪು. ಈಗಲೂ ಹುಡುಕಿದರೆ ಕೆಲವು ಸಿಗಬಹುದೇನೋ

ಅನಾಮಧೇಯ ಹೇಳಿದರು...

"ಭಾವನಾ" ಇದ್ದರೆ ಬೇಕಿತ್ತು...

Susheel Sandeep ಹೇಳಿದರು...

"ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಕೊಡಲ್ಲ ;) " - ಬಿಬಿನ ಎಬಿನ.. :)

ಮನಸಿನ ಮಾತುಗಳು ಹೇಳಿದರು...

free aagi kododiddare nanage onderadu varushada "mayura" kodi.odutteve... ;-)

ಸಂದೀಪ್ ಕಾಮತ್ ಹೇಳಿದರು...

ಪುಸ್ತಕ ಪ್ರೀತಿ ಇರೋರಿಗೆ ಅದನ್ನು ಮಾರೋದಕ್ಕೆ ಆಗಲ್ಲ..

ವಿ.ರಾ.ಹೆ. ಹೇಳಿದರು...

@ಮನೋಜ್, ಹೌದು. ನಾನೂ ೭೦, ೮೦ ರ ದಶಕದ ಕಸ್ತೂರಿಗಳನ್ನೂ ಓದಿದ್ದೇನೆ. ಅದ್ಬುತವಾಗಿದ್ದವು.

@ನೀಲಿಹೂವು, ’ಭಾವನಾ’ ಇತ್ತು. ಈಗಿಲ್ಲ. ಸ್ಸಾರಿ.

@ಸುಶೀಲ್, ;) :)

@ಸಂದೀಪ್, ನಿಜ.

@ದಿವ್ಯಾ, ಇರುವುದನ್ನು ಕೊಡಬಹುದು. ಇಲ್ಲದಿರುವುದನ್ನು ಕೊಡಕ್ಕಾಗಲ್ಲ. ’ಮಯೂರ’ ಇಲ್ಲ.

ವಿ.ರಾ.ಹೆ. ಹೇಳಿದರು...

ಈ ಮೇಲ್ ಮಾಡಿ, ಫೋನ್ ಮಾಡಿ , ಖುದ್ದಾಗಿ ಕೇಳಿ ಹಳೇ ಕಸ್ತೂರಿಗಳ ಬಗ್ಗೆ ಹಲವರು ಆಸಕ್ತಿ ತೋರಿಸಿದ್ದಾರೆ. ಇಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಅದರಲ್ಲಿ ಅವರ ಫೋನ್ ನಂಬರ್ ಗಳು ಇದ್ದವು ಎಂಬ ಕಾರಣಕ್ಕೆ ಪಬ್ಲಿಷ್ ಮಾಡಿಲ್ಲ. ಅವರು ಕ್ಷಮಿಸಬೇಕು. ಕೆಲವರು ವೈಯಕ್ತಿಕ ಓದಿಗೆ ಕೇಳಿದ್ದರು. ಆದರೆ ವೈಯಕ್ತಿಕ ಓದಿಗಿಂತ, ಹೆಚ್ಚು ಜನರಿಗೆ ಓದಲು ಅಥವಾ ಅಧ್ಯಯನಕ್ಕೆ/ಪರಾಮರ್ಶೆಗೆ ಸಿಗುವಂತಹ ಲೈಬ್ರರಿ ಅಥವಾ ಅದೇ ತರಹ ಮತ್ಯಾವುದಾದರೂ ಕಡೆ ಕೊಟ್ಟರೆ ಒಳ್ಳೆಯದು ಅನ್ನಿಸಿತ್ತು. ಅದರಂತೆಯೇ ಅಂತಹ ಕಡೆಯಿಂದಲೇ ಬೇಡಿಕೆ ಬಂದಿದೆ. ಅಲ್ಲಿಗೆ ಕೊಡೋಣ ಅಂತ ತೀರ್ಮಾನಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು.

Unknown ಹೇಳಿದರು...

83 ra sumaru ahemadabad na kannada sangha dalli kasturi oduthide
shiva yake visha kudida emba
ondu samskrita kavanada kannada anuvada eegalu nenapide

ashwath ಹೇಳಿದರು...

haLeya chandamama iddare yArAdru kodi. haNa koTTAdaru Karidisuttene.
kusuma sayimane

sangamesh r ಹೇಳಿದರು...

Please namage kodi.... nanage odalu tumba ista..... ...

ವಿ.ರಾ.ಹೆ. ಹೇಳಿದರು...

@ಗೋಪಾಲಕೃಷ್ಣ, ಕಸ್ತೂರಿಯ ಸೊಬಗೇ ಹಾಗೆ !

@ಕುಸುಮ, ನನ್ನ ಬಳಿ ಚಂದಮಾಮ, ಬಾಲಮಿತ್ರ, ಬಾಲಮಂಗಳ ಎಲ್ಲಾ ಇದೆ. ಆದರೆ ಸದ್ಯಕ್ಕೆ ಕೊಡುವುದಿಲ್ಲ ;)

@ಸಂಗಮೇಶ್, ;-)