ರಂಗ್ ದೇ (www.rangde.org/) - ಈ ಸಂಸ್ಥೆಯ ಬಗ್ಗೆ ತಿಳಿದದ್ದು ನನಗೆ ಶ್ರೀನಿಧಿ ಹಂದೆಯವರ ಬ್ಲಾಗಿನಲ್ಲಿ. ಅದರ ಬಗ್ಗೆ ಓದುತ್ತಿದ್ದಂತೆ ಆಸಕ್ತಿ ಮೂಡಿತ್ತು. ಇದು ಒಂದು ಮೈಕ್ರೋ ಪೈನಾನ್ಸ್ ಸಂಸ್ಥೆ. ಅಂದರೆ ಭಾರತದಾದ್ಯಂತ ಹಳ್ಳಿಗಳಲ್ಲಿ ಸ್ವಯಂಉದ್ಯೋಗ ಕೈಗೊಳ್ಳಲು ಸಣ್ಣಪ್ರಮಾಣದ ಸಾಲದ ಅಗತ್ಯವಿದ್ದವರಿಗೆ ಅದನ್ನು ಒದಗಿಸಿಕೊಡುತ್ತದೆ. ಹೈನುಗಾರಿಕೆ, ಕೃಷಿ, ಹೊಲಿಗೆ, ಅಂಗಡಿ, ಮರಗೆಲಸ ಮುಂತಾದ ಯಾವುದೇ ಉದ್ಯೋಗ ಶುರುಮಾಡುವವರಿಗೆ ಅಥವಾ ಇರುವುದನ್ನು ಇನ್ನೂ ಉತ್ತಮಗೊಳಿಸಲು ಬಯಸುವವರಿಗೆ ಸಾಲ ಒದಗಿಸುತ್ತದೆ. ಇದಲ್ಲದೇ ಗುಡಿಕೈಗಾರಿಕೆಗಳಿಗೂ ಹಣಕಾಸಿನ ಬೆಂಬಲವನ್ನು ಸಾಲರೂಪದಲ್ಲಿ ಒದಗಿಸುತ್ತದೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಜನ ಹಣ ಬೇಕಾದಾಗ ಕೆಲ ವ್ಯಕ್ತಿಗಳಲ್ಲಿ ಸಾಲ ಮಾಡುತ್ತಾರೆ. ಅಲ್ಲಿನ ಬಡ್ಡಿ ಪ್ರಮಾಣ ಬಹಳ ಹೆಚ್ಚಿನದಾಗಿರುತ್ತದೆ. ಬ್ಯಾಂಕುಗಳಿಂದ ಕೂಡ ಇವರು ಸಾಲಪಡೆಯುವುದು ಕಷ್ಟ. ಈ ರಂಗ್ ದೇಯಂತಹ ಸಂಸ್ಥೆಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತವೆ. ತಮ್ಮ ಫೀಲ್ಡ್ ಪಾರ್ಟನರ್ ಗಳ ಮೂಲಕ ಪರಿಶೀಲಿಸಿ ಅಗತ್ಯವಿದ್ದವರಿಗೆ ಹಣ ಕೊಡುವುದು ಮತ್ತು ಆ ಹಣಬಳಕೆಯ ಬಗ್ಗೆ ನಿಗಾವಹಿಸಿ ಈ ಸಾಲ ಸರಿಯಾಗಿ ಬಳಕೆಯಾಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಸಾಮಾಜಿಕ ಹೂಡಿಕೆ ಎಂಬ ಹೆಸರಲ್ಲಿ ಸಾರ್ವಜನಿಕರಿಗೂ ಕೂಡ ಈ ಕೆಲಸದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವೆಬ್ ಸೈಟ್ ಮೂಲಕ ಹೂಡಿಕೆ ಮಾಡಬಹುದು. ವೆಬ್ ಸೈಟಿನಲ್ಲಿ ಪ್ರೊಫೈಲ್ ಗಳನ್ನು ನೋಡಿ ಅವರಿಗೆ ಸಾಲ ಬೇಕಾಗಿರುವ ಉದ್ದೇಶದ ಬಗ್ಗೆ ವಿವರಗಳನ್ನು ನೋಡಿ ನಾವು ಹೂಡಿಕೆ ಮಾಡಬಹುದು. ಹೆಚ್ಚಿನ ಸಾಲಗಳು ವಾರ್ಷಿಕ ಅವಧಿಯ ಆಧಾರದಲ್ಲಿ ಕೊಡಲ್ಪಡುತ್ತವೆ. ಸಾಲ ಪಡೆದುಕೊಂಡವರು ಮರುಪಾವತಿ ಮಾಡಿದಾಗ ವಾರ್ಷಿಕ ೧೦% ಬಡ್ಡಿಯಲ್ಲಿ ನಮಗೆ (ಹೂಡಿಕೆದಾರರಿಗೆ) ಸುಮಾರು ೨% ದೊರೆಯುತ್ತದೆ. ೨% ಬಡ್ಡಿಯು ರಂಗ್ ದೇಗೆ ಹೋಗುತ್ತದೆ, ಮತ್ತು ೫% ರಂಗ್ ದೇಯ ಫೀಲ್ಡ್ ಪಾರ್ಟನರ್ ಗಳಿಗೆ ಹೋಗುತ್ತದೆ. ರಂಗದೇ ಜಾಲತಾಣದಲ್ಲಿ FAQ ನೋಡಿದರೆ ಇದೆಲ್ಲುದರ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಇದೆಲ್ಲಾ ವಿವರಗಳನ್ನು ಓದಿ ತಿಳಿದುಕೊಂಡು ಮತ್ತು ಸ್ವಲ್ಪ ಅಲ್ಲಿಲ್ಲಿ ರಿಸರ್ಚು ಮಾಡಿ ನಂತರ ನಾನು ಸುಮಾರು ಒಂದು ವರ್ಷದ ಕೆಳಗೆ ಇದರಲ್ಲಿ ಹೂಡಿಕೆ ಮಾಡಿದೆ. ಇದೊಂದು ಸಾಮಾಜಿಕ ಕಾರ್ಯದ ರೀತಿಯಲ್ಲಿ ಇದ್ದುದರಿಂದ ಇದರಲ್ಲಿನ ಅಲ್ಪ ಬಡ್ಡಿಯ ಬಗ್ಗೆ ಹೆಚ್ಚಿನ ಅಪೇಕ್ಷೆ ಇರಲಿಲ್ಲವಾದರೂ ಅಸಲಿನ ಬಗ್ಗೆ ಸಣ್ಣ ಮಟ್ಟದ ಆತಂಕವಿತ್ತು. ಏಕೆಂದರೆ ಹಲವಾರು ಕಾರಣಗಳಿಂದ ಸಾಲಪಡೆದುಕೊಂಡವರು ಸಾಲ ತೀರಿಸಲು ಆಗದೇ ಇರಬಹುದು. ಅಂತಹ ಸಂದರ್ಭಕ್ಕೂ ನಾವು ತಯಾರಿರಬೇಕಾಗುತ್ತದೆ. ಇರಲಿ ಎಂದುಕೊಂಡು ನಮ್ಮ ಸಾಗರ ಊರಿನ ಸಮೀಪದ ಒಂದು ಗುಡಿಕೈಗಾರಿಕೆ ಹಾಗೂ ಕೆ.ಆರ್. ನಗರದ ಒಬ್ಬ ಮರಗೆಲಸದ ವ್ಯಕ್ತಿಗೆ ಕೊಡುವ ಸಾಲದಲ್ಲಿ ಹೂಡಿಕೆ ಮಾಡಿದ್ದೆ. ಆ ಸಾಲ ಆ ವ್ಯಕ್ತಿಗಳಿಗೆ ತಲುಪಿಸಲ್ಪಟ್ಟಾಗ ರಂಗ್ ದೇ ಯವರು ಇಮೇಲ್ ಮೂಲಕ ತಿಳಿಸಿದರು. ಅನಂತರ ಸಾಲ ಪಡೆದುಕೊಂಡವರು ಅದನ್ನು ಮರುಪಾವತಿ ಮಾಡಲು ಆರಂಭಿಸಿದರು. ತಿಂಗಳು ತಿಂಗಳು ಸರಿಯಾಗಿ ಹಣ ವಾಪಸ್ಸು ಬರುತ್ತಿದ್ದುದರ ಬಗ್ಗೆ ರಂಗ್ ದೇ ಯವರಿಂದ ಸ್ಟೇಟ್ ಮೆಂಟ್ ಗಳು ಬರುತ್ತಿದ್ದವು. ಒಂದು ವರ್ಷದಲ್ಲಿ ನಾನು ಹೂಡಿಕೆ ಮಾಡಿದ್ದ ಹಣ ಪೂರ್ತಿಯಾಗಿ ೨% ಬಡ್ಡಿಯೊಂದಿಗೆ ವಾಪಸ್ಸು ಬಂತು. ಈ ವರ್ಷ ಮತ್ತೆ ಆ ಹಣಕ್ಕೆ ಸ್ವಲ್ಪ ಸೇರಿಸಿ ಐದು ವ್ಯಕ್ತಿಗಳಿಗೆ ಸಾಲಕೊಡುವ ಹಣದಲ್ಲಿ ಹೂಡಿಕೆ ಮಾಡಿದ್ದೇನೆ.
ರಂಗದೇ ರೀತಿಯಲ್ಲೇ ಮೈಕ್ರೊ ಫೈನಾನ್ಸ್ ಕೆಲಸ ನಿರ್ವಹಿಸುತ್ತಿರುವ ಮಿಲಾಪ್ ಮತ್ತು ವಿ ಕೇರ್ ಇಂಡಿಯಾ ಎಂಬ ಸಂಸ್ಥೆಗಳೂ ಇವೆ. ಆಸಕ್ತಿ ಇದ್ದವರು ಕೈಜೋಡಿಸಬಹುದು.

3 ಕಾಮೆಂಟ್ಗಳು:
ಇಂತಹ ಸಂಸ್ಥೆಗಳ ಬಗೆಗೆ ತಿಳಿದು ಖುಶಿಯಾಯಿತು. ಧನ್ಯವಾದಗಳು.
ಒಳ್ಳೆ ವಿಚಾರ. ನಾನು ೨೦೦೪ ರಿಂದಲೇ Kiva ಅನ್ನುವ ಸಂಸ್ಥೆ ಮೂಲಕ ಸಣ್ಣ ಸಾಲವನ್ನು ಕೊಡುತ್ತಿದ್ದೇನೆ. ವಾಪಸ್ ಬರ್ತಾ ಇದೆ. ವಾಪಸ್ ಬಂದಿದ್ದನ್ನು ಮತ್ತೊಂದು ಸಾಲವನ್ನಾಗಿ ಕೊಟ್ಟುಬಿಡುತ್ತೇನೆ. ಸಣ್ಣ ಸಾಲದ ಮಂದಿಯಲ್ಲಿ ನಿಯತ್ತಿದೆ. default ಆಗಿ ಸಾಲ ಮನ್ನಾ ಮಾಡಬೇಕಾಗಿ ಬಂದಿದ್ದು ಭಾಳ ಕಮ್ಮಿ. ಕೋಟಿ ಕೋಟಿ ಸಾಲ ತೆಗೆದುಕೊಂಡು ದೊಡ್ಡ ದೊಡ್ಡ ಮಂದಿ ಉದ್ದುದ್ದ ನಾಮ ಹಾಕಿದ ಹಾಗಲ್ಲ ಇದು! :)
ತುಂಬ ಚೆನ್ನಾಗಿದೆ. ಉಪಯುಕ್ತ ಮಾಹಿತಿ. ನೀವು ಪರಿಶೀಲಿಸಿದ ಬಳಿಕ ಇಲ್ಲಿ ಹಾಕಿದ್ದು ಇನ್ನೂ ಒಳ್ಳೇದಾಯ್ತು.
ಕಾಮೆಂಟ್ ಪೋಸ್ಟ್ ಮಾಡಿ