ಬರೆವಣಿಗೆ ಒಂದು ಕಲೆ. ಹಲವರಿಗೆ ಆ ಕಲೆ ಇರುತ್ತದೆ. ಇಲ್ಲೇ ಫೇಸ್ಬುಕ್ಕಲ್ಲೇ ನೋಡಿರಬಹುದು, ಎಷ್ಟೊಂದು ಜನ ಚೆನ್ನಾಗಿ ಬರೆಯುವವರಿರುತ್ತಾರೆ. ಆದರೆ ಅವರಲ್ಲಿ ಹಲವರು ತಮ್ಮ ಪ್ರತಿಭೆಯನ್ನು ಫೇಸ್ಬುಕ್ಕಿಗೇ ಸೀಮಿತಮಾಡಿಕೊಂಡುಬಿಟ್ಟಿರುತ್ತಾರೆ. ಬರೆದು ನಾವೇ ಇಟ್ಟುಕೊಳ್ಳುವುದಕ್ಕಿಂತ ಪತ್ರಿಕೆ/ಮ್ಯಾಗಜೀನುಗಳಲ್ಲಿ ಪ್ರಕಟಿಸಿದರೆ ಅದು ಸಾವಿರಾರು ಜನರನ್ನು ತಲುಪುತ್ತದೆ. ಆದರೆ ಪ್ರಕಟಣೆಗೆ ಸ್ವೀಕಾರವಾಗಲು ವಿಷಯದ ಆಯ್ಕೆಯಿಂದ ಹಿಡಿದು ಪದಮಿತಿಯಲ್ಲಿ ಅದರ ಪ್ರಸ್ತುತಪಡಿಸುವಿಕೆ ಬಹಳ ಮುಖ್ಯ. ಎಷ್ಟೋ ಬರಹಗಾರರು ಈ ಹಂತದಲ್ಲಿ ಎಡವಬಹುದು. ಆಸಕ್ತ ಹೊಸಬರು ಒಂದು ಲೇಖನ ಹೇಗೆ ಬರೆಯುವುದು ಎಂಬ ಗೊಂದಲಕ್ಕೆ ಬೀಳಬಹುದು. ನಿಮ್ಮಲ್ಲೂ ಅನೇಕರು ಇದನ್ನು ಅನುಭವಿಸಿರಬಹುದು. ನೀವು ಬರೆದು ಕಳಿಸಿದ್ದು ಪ್ರಕಟಣೆಗೆ ಸ್ವೀಕಾರವಾಗದೇ ಇದ್ದಿರಬಹುದು. ಪತ್ರಿಕೆಗಳಲ್ಲಿ ಕೆಲಸ ಮಾಡುವವರ ಅನುಭವದ ಪ್ರಕಾರ ಪ್ರಕಟಣೆಗೆ ಬರುವ ಲೇಖನಗಳಲ್ಲಿ ಹಲವಾರು ಇಂತಹ ಕಾರಣಕ್ಕೇ ತಿರಸ್ಕೃತವಾಗುತ್ತವೆ. ಬರೆವಣಿಗೆ ಎಂಬುದು ಯಾರೂ ಕಲಿಸಲಾಗದ ಪ್ರತಿಭೆಯಾದರೂ ಕೂಡ ಅದರ ಕ್ರಮವನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.
‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ ಈ ಪುಸ್ತಕದಲ್ಲಿ ಇಂತಹ ವಿಷಯಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಡಲಾಗಿದೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿರುವ ಯುವಬರಹಗಾರರು ಮತ್ತು ನಾಡಿನ ಪತ್ರಿಕೆಗಳ ಪುರವಣಿಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೇ ಇಲ್ಲಿ ಮಾರ್ಗದರ್ಶೀ ಲೇಖನಗಳನ್ನು ಬರೆದಿರುವುದು ಇದರ ವಿಶೇಷ. ಮಿಥಿಲಾ ಪ್ರಕಾಶನದ ಈ ಪುಸ್ತಕವನ್ನು ಒಮ್ಮೆ ಸಾದ್ಯಂತವಾಗಿ ಓದಿ ಆನಂತರ ಬರೆಯಲು ಕುಳಿತರೆ ಆ ವ್ಯತ್ಯಾಸವನ್ನು ಸ್ವತಃ ಅನುಭವಿಸಬಹುದು. ವಿದ್ಯಾರ್ಥಿಗಳಿಗೆ, ಫ್ರೀಲ್ಯಾನ್ಸ್ ಲೇಖಕರಾಗಬಯಸುವವರಿಗೆ ಇದು ಒಳ್ಳೆಯ ಕೈಪಿಡಿ. ಸಂಗ್ರಹಯೋಗ್ಯ ಪುಸ್ತಕ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ