ಗುರುವಾರ, ಮಾರ್ಚ್ 6, 2008

ಬನ್ನಿ , ಸಿಗೋಣ ಎಲ್ರೂ

ಖುಶಿಯೆನಿಸುತ್ತಿದೆ. ಕೆಲದಿನಗಳಿಂದ ಸಣ್ಣದಾಗಿ ಕೇಳಿ ಬರುತ್ತಿತ್ತು. ನಿನ್ನೆ ಖಾತ್ರಿಯಾಗಿದೆ. ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯುವರರು, ಬಳಸುವವರು, ಓದುವವರು ಎಲ್ಲರನ್ನೂ ಮುಖತ: ಭೇಟಿ ಮಾಡಿಸುವ ಪ್ರಯತ್ನವೊಂದು ರೂಪುಗೊಂಡಿದೆ. ಕನ್ನಡದ ಮಟ್ಟಿಗೆ ಇದೊಂದು ರೀತಿಯ ಹೊಸ ಇತಿಹಾಸವಾಗುವಂತದ್ದೆ. ಈ ನಿಟ್ಟಿನಲ್ಲಿ ಸುಶ್ರುತ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಹಾಕುತ್ತಿದ್ದೇನೆ.

******************************
ನಮಸ್ಕಾರ.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!


ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.


ಅಲ್ಲಿ ಸಿಗೋಣ

***************************************

ಅದೂ ನಿಜವೆ. ಬರೀ ಕಮೆಂಟು, ಸ್ಕ್ರಾಪು, ಮೆಸೇಜು, ಮೇಲ್ ಇದೇ ಆಗೋಯ್ತು ಇಷ್ಟು ದಿನ. ಸ್ನೇಹ, ಪ್ರೀತಿ, ಜಗಳ ಎಲ್ಲ ಇಂಟರ್ನೇಟ್ಟಲ್ಲೇ ಎಷ್ಟು ದಿನ ಅಂತ ಮಾಡೋದು?. ಒಬ್ರಿಗೊಬ್ರು ಫೇಸ್ ಕಟ್ ನೋಡ್ಕೊಂಡು ಪರಿಚಯ ಮಾಡಿಕೊಂಡು ಸ್ವಲ್ಪ ಹೊತ್ತು ಮಾತಾಡಿ ಸಂಜೆ ಸಮಯ ಕಳೆಯೋಣ. ಫೀಲ್ಡಿನಲ್ಲಿರೋ ಕೆಲವು ಹಿರಿಯರು, ಪರಿಣಿತರು, ಅನುಭವಿಗಳು ಎಲ್ಲರೂ ಬರ್ತಿದಾರೆ, ತಿಳಿದುಕೊಳ್ಳೋದೂ ಬಹಳ ಇರುತ್ತೆ. ವಿಚಾರ/ಅಭಿಪ್ರಾಯ ವಿನಿಮಯ, ಸಮಾಲೋಚನೆ, ಹಿಂದಿನ ಮೆಲುಕು, ಮುಂದಿನ ಆಲೋಚನೆ, ಚರ್ಚೆ ಎಲ್ಲ ಮಾಡಬಹುದು. ತಾವೂ ಬನ್ನಿ ತಮ್ಮವರನ್ನೂ ಕರೆತನ್ನಿ. ;)

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಇದೆಂತ ಹಪ್ಪು ಆಹ್ವಾನ. ವಿದ್ವಜ್ಜನಾನುಮತಿಯಿಂದ ಗುರು ಹಿರಿಯರು blogger ಗಳ ಮಿಲನ ಮಹೋತ್ಸವವನ್ನು ಏರ್ಪಡಿಸಿದ್ದಾರೆ. ಬನ್ನಿ. ಪಾಲ್ಗೊಳ್ಳಿ.

ಅನಾಮಧೇಯ ಹೇಳಿದರು...

ವಿಕಾಸ ಅವರೆ,
ಪ್ರಣತಿ ಸುದ್ದಿ ಕೇಳಿ ಖುಶಿ ಆತು. ನಾವು ಭೇಟಿಯಾಗೋಣ ಬಸವನಗುಡೀಲಿ..ನಮ್ಮ ಗೆಳೆಯರಿಗೂ ವಿಷಯ ತಿಳಿಸ್ತೀನಿ.

ಇತಿ,
ಗಿರೀಶ ರಾಜನಾಳ.

ವಿ.ರಾ.ಹೆ. ಹೇಳಿದರು...

@Hegde
ಸರೀನಪ್ಪಾ, ಹಂಗೇ ಇಟ್ಕಳಣ. ಮಿಲನ ಮಹೋತ್ಸವ ಜೋರಾಗೇ ಮಾಡೋಣ ;) ಬನ್ನಿ.

@ಗಿರೀಶ,
ಖಂಡಿತ, ಬನ್ನಿ ಭೇಟಿಯಾಗೋಣ. ಖುಶಿಯಾಗ್ತಿದೆ ನನಗೂ.