ಸರಿ.
ವಿಮಾನಕ್ಕೆ ರೆಕ್ಕೆ ಯಾಕಿರತ್ತೆ? ..........ಹಾರೋದಕ್ಕೆ ..
o.k. ಸರಿ.
ಹಕ್ಕಿ ಹೇಗೆ ಹಾರತ್ತೆ? ...............ರೆಕ್ಕೆ ಬಡಿದು ಹಾರುತ್ತೆ.
o.k. ಇದೂ ಸರಿ.
ರೆಕ್ಕೆ ಬಡಿಯದೇ ಇದ್ರೂ ವಿಮಾನ ಹೇಗೆ ಹಾರುತ್ತೆ? ...
ಹೋಗ್ಲಿ, ಆ ರೆಕ್ಕೆ ವಿಮಾನಾನ ಹೇಗೆ ಹಾರಿಸುತ್ತೆ? ......
ರೆಕ್ಕೆ ಇಲ್ಲದಿದ್ರೆ ವಿಮಾನ ಹಾರದೇ ಇಲ್ವಾ? ವಿಮಾನದಲ್ಲಿ ರೆಕ್ಕೆಗಳ ಕೆಲ್ಸ ಏನು?
........... .. ...
ಹೀಗೆಲ್ಲಾ ಯೋಚಿಸಿದ್ದೀರಾ?.. ಯೋಚಿಸಿದ್ರೆ ಗುಡ್ . ಯೋಚಿಸಿ ಇದರ ಬಗ್ಗೆ ತಿಳ್ಕೊಂಡಿದ್ದೀರಾ?.... ಹೌದಾದರೆ ವೆರಿ ಗುಡ್.
ಇದುವರೆಗೂ ಇದು ನಿಮ್ಮ ಯೋಚನೆಗೇ ಬಂದಿಲ್ವಾ? ಹಾಗಿದ್ರೆ ವೆರಿ ವೆರಿ ಗುಡ್.
ಬನ್ನಿ ಕೂತ್ಕೊಳ್ಳಿ, ಈಗ ನಾನು ಇದೇ ವಿಷ್ಯ ಹೇಳಕ್ಕೆ ಹೋಗ್ತಿದ್ದೀನಿ.
******
ರೆಕ್ಕೆ ವಿಷಯ ಮಾತಾಡಕಿಂತ ಮೊದಲು ಒಂದು ವಿಷಯ ತಿಳ್ಕಳಣ. ವಿಮಾನ ಹಾರೋದಕ್ಕೆ ಏನ್ ಬೇಕು ಅಂತ.
ಇದು ಸಿಂಪಲ್. ವಿಮಾನ ಹಾರೋದಕ್ಕೆ ಬೇಕಾಗಿರದು ಎರಡೇ ಎರಡು ತರದ ಬಲ(force)ಗಳು. ಒಂದಕ್ಕೆ thrust(ನೂಕು) ಅಂತಾರೆ, ಇನ್ನೊಂದಕ್ಕೆ lift(ಎತ್ತು) ಅಂತಾರೆ.
ವಿಮಾನ ಗಾಳಿಯನ್ನು ಸೀಳ್ಕೊಂಡು, ಗಾಳಿಯ ಪ್ರತಿರೋಧವನ್ನು ಎದುರಿಸ್ಕೊಂಡು ಮುಂದೆ ಹೋಗೋದಕ್ಕೆ ಬೇಕಾಗುವ ಬಲ thrust. ಇದ್ನ ಎಂಜಿನ್ ಗಳು ಮತ್ತು ಪ್ರೊಪೆಲ್ಲರ್ ಗಳ ಸಹಾಯದಿಂದ ಉತ್ಪತ್ತಿ ಮಾಡ್ತಾರೆ. ಇದು ’ಮುನ್ನುಗ್ಗುವ’ force.
ಅದೇ ರೀತಿ, ವಿಮಾನ ತನ್ನ ಭಾರಕ್ಕೆ ಕೆಳಗೆ ಬೀಳದಂತೆ, ಗುರುತ್ವಾಕರ್ಷಣ ಶಕ್ತಿಯನ್ನ ಮೆಟ್ಟಿನಿಂತು ಆಕಾಶದಲ್ಲಿ ತೇಲಲು ಬೇಕಾದ ಬಲ lift. ಈ ಲಿಫ್ಟ್ ಕ್ರಿಯೇಟ್ ಮಾಡೋದು ರೆಕ್ಕೆಗಳ ಕೆಲಸ. ಇದು ’ಮೇಲೆತ್ತುವ’ force.
ಹೇಗೆ ರೆಕ್ಕೆಗಳು ಲಿಫ್ಟ್ ಕ್ರಿಯೇಟ್ ಮಾಡ್ತವೆ ಅನ್ನೋದನ್ನ ನೋಡೋಣ.
ವಿಮಾನದ ರೆಕ್ಕೆಗಳ ಅಡ್ಡ ಕೊಯ್ತ(cross section,ಅಂದರೆ ರೆಕ್ಕೆಯನ್ನು ಕತ್ತರಿಸಿದಾಗ ಕಾಣುವ) ಆಕಾರ ಮೇಲೆ ತೋರಿಸಿದ ಚಿತ್ರದಂತಿರುತ್ತೆ. ಇದಕ್ಕೆ ವಾಯುಫಲಕ(aerofoil) ಅಂತಾರೆ. ಈ ಆಕಾರದಲ್ಲಿ ಒಂದು ವಿಷೇಶ ಇದೆ. ಗಾಳಿ ಬೀಸುವ ಎದುರು ದಿಕ್ಕಿನಲ್ಲಿ ಇದರ ಮೊಂಡು ಭಾಗ ಇರುತ್ತೆ. ಬೀಸುವ ಗಾಳಿ ಈ ಮೊಂಡು ಭಾಗಕ್ಕೆ ಬಡಿದು ರೆಕ್ಕೆಯ ಎರಡೂ ಬದಿಗೆ split ಆಗತ್ತೆ. ವಾಯುಫಲಕ ಮೇಲ್ಗಡೆ ಭಾಗ ಡೊಂಕಾಗಿರೋದ್ರಿಂದ(curved shape), ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿ ಬಡಿದಾಗ ಅಲ್ಲಿ ಗಾಳಿಯ flow ವೇಗವಾಗಿ ಆಗತ್ತೆ. ಕೆಳಭಾಗದಲ್ಲಿ comparitively ನಿಧಾನಕ್ಕೆ ಗಾಳಿಯ ಹರಿವು ಇರತ್ತೆ. (ಇದ್ಯಾಕೆ ಹಿಂಗೇ ಆಗತ್ತೆ ಅಂತ ಕೇಳುವಂಗಿಲ್ಲ. ಅದು ನೈಸರ್ಗಿಕವಾಗಿ ಆಗುವಂತದ್ದು ಮತ್ತು ಅದನ್ನು ತಿಳಿದುಕೊಳ್ಳಬೇಕು ಅಂದ್ರೆ ಏರೋಡೈನಮಿಕ್ಸ್, ಫಿಸಿಕ್ಸ್ ಎಲ್ಲಾ ಓದ್ಕೊಂಡು ಬರ್ಬೇಕು. ಅವೆಲ್ಲಾ ಸಹವಾಸ ಬೇಡ ಸದ್ಯಕ್ಕೆ). ರೆಕ್ಕೆಯ ಮೇಲ್ಗಡೆ ಜಾಗದಲ್ಲಿ ಗಾಳಿ ವೇಗವಾಗಿ ಹಾಯ್ದು ಹೋಗೋದ್ರಿಂದ ಅಲ್ಲಿ ಒತ್ತಡ ಕಡಿಮೆ(pressure decrease) ಆಗುತ್ತೆ . ಆಗ ರೆಕ್ಕೆಯ ಕೆಳಗಡೆ ಮತ್ತು ಮೇಲ್ಗಡೆ ಜಾಗಗಳ ಮಧ್ಯ ಒತ್ತಡದ ವ್ಯತ್ಯಾಸ(pressure difference) ಉಂಟಾಗುತ್ತದೆ. ಈ ವ್ಯತ್ಯಾಸದಿಂದ ಕೆಳಗಿನ ಗಾಳಿ ರೆಕ್ಕೆಯನ್ನ ಮೇಲಕ್ಕೆ ತಳ್ಳುತ್ತೆ. ಅದಕ್ಕೇ ’ಎತ್ತುವ ಬಲ’ (lift force) ಅನ್ನುವುದು. ರೆಕ್ಕೆಯೇ ಆಗ್ಬೇಕು ಅಂತಿಲ್ಲ, ಈ ರೀತಿ ಚಲಿಸುವ ಗಾಳಿ ಒಂದು ಕೋನದಲ್ಲಿ ತಾಕಿದಾಗ ಯಾವುದೇ ವಸ್ತುವಾದ್ರೂ ಕೂಡ ಮೇಲೇಳುತ್ತದೆ. ಆದ್ರೆ ಆದಷ್ಟು ಕಡಿಮೆ ಪ್ರತಿರೋಧದಿಂದ ಮೇಲೆ ಏಳಲು ಈ aerofoil ಆಕಾರ ಸಹಾಯಕಾರಿಯಾಗಿದೆ. ಅದಕ್ಕೋಸ್ಕರವೇ ವಿಮಾನದ ರೆಕ್ಕೆಯನ್ನ ಆ ಆಕಾರದಲ್ಲಿ ತಯಾರು ಮಾಡಿರ್ತಾರೆ. ಈ ಮೇಲಕ್ಕೆ ಎತ್ತುವ ಬಲ ಗುರುತ್ವಾಕರ್ಷಣ ಶಕ್ತಿಗಿಂತ ಜಾಸ್ತಿ ಇರುವ ಹಾಗೆ ಎರಡೂ ಕಡೆ ಅಗಲವಾದ ರೆಕ್ಕೆಗಳನ್ನು ವಿನ್ಯಾಸ ಮಾಡಿರ್ತಾರೆ. ಆದ್ದರಿಂದ ಇವು ವಿಮಾನಾನ್ನ ಗಾಳಿಯಲ್ಲಿ ತೇಲಿಸಿ ಹಿಡಿದುಕೊಳ್ತವೆ. ಇಷ್ಟೆ ವಿಮಾನದ ರೆಕ್ಕೆಗಳ ಕೆಲಸ .
********
ಅರ್ಥಾಯ್ತಾ? ತಲೆ ಕೆಡ್ತಾ? fine.
ಥಿಯರಿ ಓದಿದ್ರೆ ಅರ್ಥಾಗೋದು ಸ್ವಲ್ಪ ಕಷ್ಟ. ಆದ್ರೆ ಕಣ್ಣಾರೆ ನೋಡಿದರೆ ಅರ್ಥ ಮಾಡ್ಕೊಳ್ಳದು ಸುಲಭ ಅಲ್ವಾ. ಇಲ್ನೋಡಿ ಈ ಕೆಳಗಿನ ಮಾಡೆಲ್. ರೆಕ್ಕೆಯ aerofoil ಆಕಾರ ಮತ್ತು ಒತ್ತಡದ ವ್ಯತ್ಯಾಸ ಉಂಟಾಗೋದನ್ನ ಇದರಲ್ಲಿ ಪ್ರಾಕ್ಟಿಕಲ್ಲಾಗಿ ನೋಡ್ಬೋದು. ಇದರಲ್ಲಿ ಮುಂದಿರುವ ಕೊಳವೆಯಿಂದ ಬರುವ ಗಾಳಿಗೆ ಸರಿಯಾಗಿ ರೆಕ್ಕೆಯನ್ನು ಎತ್ತಿ ಹಿಡಿದರೆ pressure difference ಉಂಟಾಗಿ ಕೆಳಗಿನ ಕೊಳವೆಯಲ್ಲಿರುವ ಚೆಂಡು ಮೇಲೆ ಬರೋದನ್ನ ನೋಡ್ಬೋದು.ಇದು ಇರೋದು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ. ಇದೇ ರೀತಿ ಅಲ್ಲಿ ಬಯಾಲಜಿ, ಸೆಟಲೈಟ್ಸ್, ಹಿಸ್ಟರಿ, , ಎಲೆಕ್ಟ್ರಾನಿಕ್ಸ್, ವಿಜ್ಞಾನ, ಸಾಮಾನ್ಯಜ್ಞಾನ, ಮೆಷಿನ್ಸ್, ಎಂಜಿನ್ಸ್, ಅದು ಇದು, ಹಾಳುಮೂಳು ಮಣ್ಣು ಮಸಿ ಅಂತ ಏನೇನೇನೇನೋ ಇದೆ. 3D theatre ಒಳಗೆ ಹೋದ್ರೆ ಬೇಜಾನ್ ಮಜಾ ಇರತ್ತೆ, ಮಕ್ಕಳಿಗಂತೂ ಖುಷಿಯೋ ಖುಷಿ ಆಗತ್ತೆ. ಇಂತಹ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಳ್ಬೇಕು, ನೋಡಿ ಆನಂದ ಪಡಬೇಕು ಅಂತ ಆಸಕ್ತಿ ಇರೋರಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅದರಲ್ಲೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಳ್ಳೇ ಜಾಗ . ಫ್ರೀ ಇದ್ದಾಗ ಆದ್ರೆ ಒಮ್ಮೆ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹೋಗ್ಬನ್ನಿ. ಒತ್ತಾಯ ಏನಿಲ್ಲ. :)
22 ಕಾಮೆಂಟ್ಗಳು:
ವಿಕಾಸ, ಕರೆಕ್ಟಾಗಿ ಬರೆದಿದ್ಯಾ.. Airfoil ದು principle ಸರಿ ಇದೆ.
ಈ ಥಿಯರಿಯನ್ನು ಪ್ರಪಂಚಕ್ಕೆ ಕೊಟ್ಟಿದ್ದು ಒಬ್ಬ ಸ್ವಿಸ್ ಸೈಂಟಿಸ್ಟ್ Daniel Bernoulli.
ಮಿಕ್ಕಿದ್ದನ್ನ English ನಲ್ಲಿ ಬರೀತೀನಿ ಓದ್ಕೋ.
Bernoulli's Principle is a physical phenomenon that was named after the Swiss scientist Daniel Bernoulli (1700-1782).
Bernoulli studied the relationship of the speed of a fluid and pressure.
The principle states that "the pressure of a fluid [liquid or gas] decreases as the speed of the fluid increases." Within the same fluid (air in the example of aircraft moving through air), high-speed flow is associated with low pressure, and low-speed flow is associated with high pressure.
ಕಟ್ಟೆ ಶಂಕ್ರ
nice one dude :)
vikas meshtru and shankar head master ge namo namah.
ಸುಪರ್...ಒಳ್ಳೆ ವಿಜ್ಞಾನ ಬರಹ...ಸರಳ ಶೈಲಿ...
ಕೋಡ್ಸರ.
ಚೆನ್ನಾಗಿತ್ತು ಮಾಹಿತಿ....
ಎರಡು ಸಲ ಓದಿಕೊ೦ಡ ಮೇಲೆ ಥಿಯರಿ ಸ್ವಲ್ಪ ತಲೆಗೆ ಹತ್ತಿತು. ಪ್ರಾಕ್ಟಿಕಲ್ ನೋಡಲು ಮ್ಯೂಸಿಯ೦ಗೆ ಹೋಗಬೇಕೂ೦ತ ಮಾಡಿದೀನಿ... ಹಿ೦ದಿನ ಬಾರಿ ಹೋದಾಗ ಸಮಯ ಆಗಿತ್ತು.
ಲೇಖನ ಓದಿದ ಮೇಲೆ ನಾನೂ ಹೋಗಿ ನೋಡಬೇಕೆನಿಸಿದೆ, ಅತ್ಯಂತ ವಿವರವಾಗಿ ಬರೆದ್ದೀರಿ, ಮ್ಯುಸಿಯಂ ವೀಕೆಂಡುಗಳಲ್ಲೂ ತೆರೆದಿರುತ್ತ? ಸಮಯ ಎಲ್ಲ ಏನೊ ಗೊತ್ತಿದ್ದರೆ ದಯವಿಟ್ಟು ತಿಳಿಸಿ, ಎಲ್ಲ ಓದುಗರಿಗೂ ಹೆಲ್ಪ ಆಗುತ್ತದೆ.
thanx Shankar, sandeep, Laxmi, vinayaka, sudhesh, prabhuraj.
ಶಂಕ್ರ್.. yes, ಆದ್ರೆ ಅದನ್ನೆಲ್ಲಾ ಹೇಳಿ ಓದುಗರಿಗೆ ಹೆದರಿಸೋದು ಬೇಡ ಅಂತ ಸುಮ್ನಾದೆ.;)
ಪ್ರಭುರಾಜ್, ಹುಂ, ವೀಕೆಂಡೂ ತೆಗ್ದಿರತ್ತೆ. ಬೆಳಗ್ಗೆ ೧೦ ರಿಂದ ಸಂಜೆ ೫ ರ ತನಕ. ೧೫ ರುಪಾಯಿ ಪ್ರವೇಶಧನ. knowledge unlimiteddu :)
ನಾನು ಸುಮಾರು ಸಲ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಹೋಗಿದೀನಿ. ಈ ಮಾಡೆಲ್ನೂ ನೋಡಿರೋ ನೆನಪು. ಆದ್ರೆ ಅಲ್ನೋಡ್ದಾಗ ಏನೂ ಅರ್ಥವಾಗಿರ್ಲಿಲ್ಲ. ಈಗೊಂದೊಂದ್ಚೂರು ತಲೆಗೋಯ್ತು :)
ಒಂದು ಸಲ ಓದಿದೆ..ಅರ್ಥವಾಗಲಿಲ್ಲ..ಎರಡನೇ ಸಲ ಓದಿದಾಗ ಮಂಡೆಗೆ ಚೆನ್ನಾಗ್ ಹೊಳೀತು. ಒಳ್ಳೆ ಬರಹ..ನೋಡದವ್ರು ಮ್ಯೂಸಿಯಂಗೆ ಹೋಗೋ ಹಾಗೆ ಮಾಡಿದ್ದೀರಾ. ಗುಡ್..ಒಳ್ಳೆ ಬರಹ.
-ಧರಿತ್ರಿ
Gud one vikas..
Vikas sogasada reetiyalli vivarisidderi.
illiruva video tuNuku nimma prayatnakke poorakavaagabahudu
http://www.youtube.com/watch?v=dHxKo0RpQhY
ವಿಕಾಸ್...
ಒಳ್ಳೆಮಾಹಿತಿ. ಉಪಯುಕ್ತ ಮಾಹಿತಿ. ಇಷ್ಟವಾಯ್ತು. ಬರೀತಿರು.
ವಿಕಾಸ್,
ಮಾಡೆಲ್ ಯಾಕೋ ತಪ್ಪಿರುವ ಹಾಗಿದೆ. ಬೇರೆ ಚಿತ್ರಗಳೇನಾದ್ರೂ ಇವೆಯಾ. ಸ್ವಲ್ಪ ಸರಿಯಾಗಿ ಗ್ರಹಿಸೋದಕ್ಕೆ.
thanx Hema, Shantalakka, Dharitri, anonymous and Shashank for comments.
ಶಶಾಂಕ್, ಅದು ರೆಕ್ಕೆಯ ಮಾಡೆಲ್ ಅಲ್ಲ, cross section shape model. ಅದೂ ಅಲ್ಲದೆ ಅದು ಬರೀ ಪ್ಲಾಸ್ಟಿಕ್ ಮಾಡೆಲ್ ಆದ್ದರಿಂದ ಹೆಚ್ಚು ಕಮ್ಮಿ ಆಗಿರಬಹುದು. ಆದರೆ ಕೆಲಸ ಅಂತೂ ಮಾಡುತ್ತಿದೆ. ಅದರಲ್ಲಿ ಏನು ತಪ್ಪು ಅನ್ನಿಸಿತು ಅಂತ ಹೇಳಿ . ಆ ಮಾಡೆಲ್ ದು ಬೇರೆ ಚಿತ್ರಗಳು ಇಲ್ಲ. ಆದರೆ airfoil ಚಿತ್ರ ಗಳು ಬೇಕಾದಷ್ಟು ಸಿಗುತ್ತವೆ.
schoolnalliddaaga hOgiddu allige...nimm post nODi matthe hOgbekannistu!:)
Vikas,
I know that. And I do understand that when air is blown at proper angle the ball rises up in the tube.
But that phenomenon doesn't describe the pressure differences above and below the aerofoil chord. Rather, it shows the pressure difference across the ends of the tube. The bottom end has atmospheric pressure and top end experiences low pressure to that of atmosphere's because of flow. So the ball rises up. It's not due to aerofoil effect. Off course it's Bernoulli's effect.Even if you have just the tube and ball without the aerofoil cross section and air been blown across the top end, ball would behave the same way.
Had the tube been limited to aerofoil section with its ends opening at top and bottom surfaces of the aerofoil and transparent, the setup could have been logically correct. Only then it could capture the pressure differences across bottom and top surfaces.
@shree,
sarthaka aythu bardiddu, hogbanni.
@shashank
I agree that if u go deeply, it may not be 100% logically correct, but to demostrate the pressure difference across aerofoil to common people, a simple model is being built there.
But.. u r exactly right. Ur idea would have been apt for demostrating this. Thanx.
MAAHITI TUMBA CHENNAGIDEB
GOOD
olLE maaahitige thanks kano
ಈ ಬರ್ನೌಲಿ ತತ್ತ್ವವನ್ನು ಬಲು ಸರಳವಾಗಿ ಪ್ರಯೋಗದ ಮೂಲಕ ವಿವರಿಸಬಹುದು. ಸುಮಾರು ಒಂದು ಇಂಚು ಅಗಲದ, ೮ ರಿಂದ ೧೦ ಇಂಚು ಉದ್ದದ ಕಾಗದದ ತುಂಡನ್ನು ತೆಗೆದುಕೊಳ್ಳಿ. ಅದನ್ನು ಬಾಯಿಯ ಮುಂದೆ ಉದ್ದಕ್ಕೆ ಹಿಡಿದುಕೊಳ್ಳಿ. ಅಂದರೆ, ಈಗ ಕಾಗದ ಬಗ್ಗಿ ಇರುತ್ತದೆ. ನಿಮ್ಮ ತುಟಿ (ಬಾಯಿ) ಕಾಗದದ ಮೇಲೆ ಇರುತ್ತದೆ. ಈಗ ಕಾಗದಕ್ಕೆ ಸಮಾಂತರವಾಗಿ ಗಾಳಿ ಊದಿ. ಗಾಳಿ ಕಾಗದದ ಮೇಲೆ ಹೋಗುತ್ತ ಇರುತ್ತದೆ. ಸಾಮಾನ್ಯವಾಗಿ ಜನರು ಊಹಿಸುವಂತೆ ಈಗ ಕಾಗದ ಇನ್ನಷ್ಟು ಬಗ್ಗುವುದಿಲ್ಲ; ಬದಲಿಗೆ ಅದು ಮೇಲಕ್ಕೆ ಏಳುತ್ತದೆ. ನಾನು ಇದನ್ನು ಮಕ್ಕಳಿಗೆ ಬರ್ನೌಲಿ ತತ್ತ್ವ ವಿವರಿಸಲು ಬಳಸುತ್ತೇನೆ.
-ಪವನಜ
ರಂಜಿತ್, ಕುಂದಾಪ್ರ thanx.
ಪವನಜ ಸರ್, ಕಮೆಂಟಿಸಿದ್ದಕ್ಕೆ thanx . ಸರಳವಾಗಿ ಬರ್ನಾಲಿ ತತ್ವ ತೋರಿಸುವ ಉಪಾಯ ಹೇಳಿಕೊಟ್ಟಿದ್ದೀರಿ.
ವಿಕಾಸರವರೆ
ಇಂತ ಇಂಜಿನಿಯರಿಂಗ್ ಬರಹಗಳು ಬಹಳ ಬರಲಿ
ನಮಗು ಸಹಾಯವಾಗುತ್ತೆ
ಕಾಮೆಂಟ್ ಪೋಸ್ಟ್ ಮಾಡಿ