ಅಮೇಜಾನ್ ಕಿಂಡಲ್ ಇ ಬುಕ್ ರೀಡರ್ |
೨೦೧೧-೧೨ ರ ಮಾತು.
ಒಂದು ಇ-ಬುಕ್ ರೀಡರ್ ಕೊಂಡುಕೊಳ್ಳಬೇಕೆಂಬ ಇಚ್ಛೆಯಾಗಿತ್ತು.
ಆದರೆ ಆ ದಿನಗಳಲ್ಲಿ ನನಗೆ ಗೊತ್ತಿದ್ದಂತೆ ಭಾರತದಲ್ಲಿ ಸಿಗುತ್ತಿದ್ದದ್ದು ಇನ್ಪಿಭೀಮ್
ಪೈ ಎಂಬ ಮಾಡೆಲ್ ಮಾತ್ರ. ಅದಕ್ಕೆ ಸುಮಾರು ೧೦ ಸಾವಿರ ರೂಪಾಯಿಗಳಷ್ಟು ದುಬಾರಿ
ಎನಿಸುತ್ತಿದ್ದ ಬೆಲೆಯಿತ್ತು. ಹಾಗಾಗಿ ಕೊಳ್ಳುವುದನ್ನು ಮುಂದೆ ಹಾಕುತ್ತಿದ್ದೆ.
ಅನಂತರದ ದಿನಗಳಲ್ಲಿ ಅಮೇಜಾನ್ ಅವರ ಪ್ರಸಿದ್ಧ ಕಿಂಡಲ್ ಇಬುಕ್ ರೀಡರ್ ಭಾರತದಲ್ಲೂ
ಸಿಗಲಾರಂಭಿಸಿತು. ಅದು ಬೇಸಿಕ್ ಬಟನ್ ಮಾಡೆಲ್ ಆಗಿತ್ತು. ಯು.ಎಸ್.ನಲ್ಲಿ ಸುಮಾರು ೬೦ ಡಾಲರ್
(ಸುಮಾರು ಮೂರೂವರೆ ಸಾವಿರ ರೂಪಾಯಿ)ಗಳಿಗೆ ದೊರೆಯುತ್ತಿದ್ದ
ಅದಕ್ಕೆ ಭಾರತದಲ್ಲಿ ಬೆಲೆ ಆರು ಸಾವಿರ ಇತ್ತು. ಅದನ್ನು ಕೊಳ್ಳಬೇಕೆಂದು ಒಮ್ಮೆ ಮನಸಾದರೂ ಸಹ ಅದರ ಬೆಲೆ
ನೋಡಿ ಸುಮ್ಮನಾಗಿದ್ದೆ. ಏಕೆಂದರೆ ಆರುಸಾವಿರ ಕೊಟ್ಟು ಬೇಸಿಕ್ ಇಬುಕ್ ರೀಡರ್ ಕೊಳ್ಳುವುದರ ಬದಲು ಅದೇ
ದುಡ್ಡಿಗೆ ಎಷ್ಟೊಂದು ಪುಸ್ತಕಗಳನ್ನೇ ಕೊಳ್ಳಬಹುದು ಎಂಬ ಲೆಕ್ಕಾಚಾರ ಅಡ್ಡಬರುತ್ತಿತ್ತು.
ಚಿತ್ರ: ಅಮೇಜಾನ್.ಇನ್ |
೨೦೧೨ರ ಅಕ್ಟೋಬರ್
೧ ಕ್ಕೆ ಅಮೇಜಾನ್ ಕಿಂಡಲ್ ನವರು ಪೇಪರ್ ವೈಟ್ (Kindle Paperwhite) ಎಂಬ ಹೊಸ ಮಾಡೆಲ್ ಒಂದನ್ನು ಅಮೆರಿಕಾದಲ್ಲಿ ಬಿಡುಗಡೆ
ಮಾಡಿದರು. ಅದರಲ್ಲಿದ್ದ ವಿಶೇಷ ಎಂದರೆ ಅದು ಟಚ್ ಸ್ಕ್ರೀನ್
ಆಗಿತ್ತು ಮತ್ತು ಹಿನ್ನೆಲೆ ಲೈಟ್ ಒಳಗೊಂಡಿತ್ತು. ಅಂದರೆ ಕತ್ತಲಲ್ಲೂ ಓದಬಹುದು. ಇದನ್ನು ಕೊಳ್ಳಬೇಕೆಂದು
ಅಂದುಕೊಂಡೆ. ಅದಕ್ಕೆ ಯಾವ ಪರಿ ಬೇಡಿಕೆ ಸೃಷ್ಟಿಯಾಯಿತೆಂದರೆ ನೋಡನೋಡುತ್ತಿದ್ದಂತೆಯೇ ಒಂದೇ ತಿಂಗಳೊಳಗಾಗಿ
ಅದು ಔಟ್ ಆಫ್ ಸ್ಟಾಕ್ ಆಗಿಹೋಯ್ತು. ಮತ್ತೆ ಯಾವಾಗ ಬರುತ್ತದೋ ಗೊತ್ತಿಲ್ಲ ಎಂದು ಹಾಕಿದರು. ಆದರೂ
ಪ್ರಯತ್ನಿಸೋಣ ಎಂದು ಯು.ಎಸ್. ನಲ್ಲಿದ್ದ ಅಣ್ಣನಿಗೆ ಹೇಳಿದೆ. ಆತ ಅಲ್ಲಿ ಹುಡುಕಿ ಸಿಗದೇ ಕೊನೆಗೆ
ಅಮೇಜಾನ್ ನಲ್ಲೇ ಕೆಲಸ ಮಾಡುತ್ತಿದ್ದ ಅವನ ಗೆಳೆಯನೊಬ್ಬನಿಗೆ ಕೇಳಿದ. ಆದರೆ ಖುದ್ದು ಅಮೇಜಾನ್ ಉದ್ಯೋಗಿಗಳಿಗೇ
ಸಿಗದ ರೀತಿಯಲ್ಲಿ ಅದು ಖರ್ಚಾಗಿಹೋಗಿದೆಯಂದು ತಿಳಿದು ಕೈಚೆಲ್ಲಿದ. ಸಿಯಾಟಲ್ ನಗರದಲ್ಲಿ ಇರುವ ಗೆಳೆಯನೊಬ್ಬನಿಗೆ ಹೇಳಿದೆ. ಅವನು
ಕೂಡ ಸುಮಾರು ಕಡೆ ಹುಡುಕಿ ಕೊನೆಗೆ ಒಂದು ಕಡೆ ಶೋರೂಮಿನಲ್ಲಿ ಒಂದು ಕೊನೇ ಪೀಸ್ ಉಳಿದಿದ್ದನ್ನು ಕೊಳ್ಳಲು
ಯಶಸ್ವಿಯಾದ. ಬೆಲೆ ೧೨೦ ಡಾಲರ್ ಆಗಿತ್ತು. ಅಂದರೆ ಸುಮಾರು ಏಳು ಸಾವಿರ ರೂಪಾಯಿಗಳು. ಜನವರಿ ೨೦೧೩ರಲ್ಲಿ
ಅಲ್ಲಿಂದ ಹಾರಿ ಅದು ಭಾರತಕ್ಕೆ ಬಂದು ನನ್ನ ಕೈ ಸೇರಿತು.
ಕಿಂಡಲ್ ನಲ್ಲಿ ಕನ್ನಡ ಪುಸ್ತಕದ PDF |
ನನ್ನಲ್ಲಿ ಇದನ್ನು
ನೋಡಿದವರು ಅನೇಕರು ಏನಿದು ಇಬುಕ್ ರೀಡರ್? ಇದಕ್ಕೂ ಟ್ಯಾಬ್ಲೆಟ್ ಅಥವಾ ಐಪ್ಯಾಡ್
ಗೂ ವ್ಯತ್ಯಾಸವೇನು? ಅಂತ ಕೇಳುತ್ತಿರುತ್ತಾರೆ. ಹಾಗಾಗಿ ಇದೊಂದು ವಿವರಣೆ:
ಹೆಸರೇ ಹೇಳುವ ಹಾಗೆ
ಇದು ಇ-ಪುಸ್ತಕಗಳನ್ನು ಓದುವ ಸಾಧನ. ಪುಸ್ತಕಗಳು ಪ್ರಿಂಟ್
ರೂಪದಲ್ಲಿ ಪ್ರಕಟವಾದಂತೆ ಎಲೆಕ್ಟ್ರಾನಿಕ್ ರೂಪದಲ್ಲಿ ಅಂದರೆ ಕಂಪ್ಯೂಟರ್ ಫೈಲ್ ಗಳ ರೂಪದಲ್ಲಿ ಕೂಡ
ತಯಾರುಮಾಡಬಹುದು. ವಿವಿಧ ಫೈಲ್ ಮಾದರಿಗಳಲ್ಲಿ ಸಿಗುವ ಅವುಗಳನ್ನು ಓದಲು ಸಾಧನ ಬೇಕಾಗುತ್ತದೆ. ಅದೇ
ಇಬುಕ್ ರೀಡರ್. ಮುಖ್ಯವಾಗಿ ಟ್ಯಾಬ್ಲೆಟ್ /ಐಪ್ಯಾಡ್ ಗಳು ಎಲ್.ಇ.ಡಿ. ಪರದೆ ಹೊಂದಿರುತ್ತವೆ. ಎಲ್
ಇ ಡಿ ಪರದೆಗಳು ಬೆಳಕನ್ನು ಹೊರಸೂಸುವುದರಿಂದ ಅವು ಹೆಚ್ಚು ಹೊತ್ತು ನೋಡಲು, ಓದಲು ಸೂಕ್ತವಲ್ಲ.
ಕಣ್ಣಿಗೆ ತೊಂದರೆ ಉಂಟುಮಾಡಬಲ್ಲುದು. ಇಬುಕ್ ರೀಡರ್ ಗಳು ಪುಸ್ತಕ ಓದುವುದಕ್ಕಾಗಿ ಮಾಡಿರುವ ಇ-ಇಂಕ್
ತಂತ್ರಜ್ಞಾನ ಬಳಸುತ್ತವೆ. ಇ ಇಂಕ್ ಪರದೆಗಳಿಂದ ಕಣ್ಣಿಗೆ ತೊಂದರೆಯಿಲ್ಲ. ಇ-ಇಂಕ್ ಪರದೆಯಲ್ಲಿ ಇ-ಪುಸ್ತಕವು
ಮುದ್ರಿತ ಪುಸ್ತಕಗಳಂತೆಯೇ ಕಾಣುತ್ತದೆ. ಟ್ಯಾಬ್ಲೆಟ್
ಗಳು ಬಣ್ಣದ ಡಿಸ್ ಪ್ಲೇ ಹೊಂದಿರುತ್ತವೆ. ವಿಡಿಯೋ, ಆಡಿಯೋ, ಗೇಮ್ಸ್, ಇಂಟರ್ನೆಟ್ ಎಲ್ಲವೂ ಸಾಧ್ಯ. ಆದರೆ ಇಬುಕ್ ರೀಡರ್ ಎನ್ನುವುದು
ಓದಲು ಮಾತ್ರ ಹಾಗೂ ವೈಫೈ ಮೂಲಕ ಬೇಸಿಕ್ ಬ್ರೌಸಿಂಗ್ ಮಾಡಬಹುದಷ್ಟೆ. ಹಾಗಾಗಿ ಬೇರೆ ಆಕರ್ಷಣೆಗೊಳಗಾಗದೇ ಓದುತ್ತಿರಬಹುದು. ದೀರ್ಘಾವಧಿ ಬ್ಯಾಟರಿ ಛಾರ್ಜ್ ಕೂಡ ಉಳಿಯುತ್ತದೆ. :) (ಕೆಲವು ಮಾಡೆಲ್ ಗಳಲ್ಲಿ ಆಡಿಯೋ ಹಾಗೂ ತ್ರಿಜಿ ಸಂಪರ್ಕ ಸೌಲಭ್ಯ ಇದೆ)
***
***
ಕನ್ನಡದಲ್ಲಿ ಕಿಂಡಲ್ ಫೈಲ್
ಮಾದರಿಯ ಪುಸ್ತಕಗಳು ಇನ್ನೂ ಬಂದಿಲ್ಲ. ಹಾಗಾಗಿ ಪಿಡಿಎಫ್ ಪುಸ್ತಕಗಳನ್ನೇ ಓದಬೇಕು. ಪಿಡಿಎಫ್ ಪುಸ್ತಕಗಳು ಎಲ್ಲವೂ
portrait modeನಲ್ಲಿ ಓದಲಾಗುವುದಿಲ್ಲ. ಅಕ್ಷರಗಳು ಬಹಳ ಸಣ್ಣದಾಗುವುದರಿಂದ ಓದಲು ಕಾಣುವುದಿಲ್ಲ.
Landscape modeನಲ್ಲಿ ಓದಬೇಕಾಗುತ್ತದೆ. ಕನ್ನಡದ ಇ-ಬುಕ್/ಪಿಡಿಎಫ್
ಪುಸ್ತಕಗಳ ಲಭ್ಯತೆ ಬಗ್ಗೆ ಈ ಪೋಸ್ಟ್ ನೋಡಿ: Kannada Ebooks
ಕಿಂಡಲ್ ಬಗ್ಗೆ 'ದಿನಮಣಿ ಬಪ್ಪನಾಡು'
ಅವರು ಕೊಟ್ಟ ಪೂರಕ ಮಾಹಿತಿ ಹೀಗಿದೆ: ಈ ಮಾಹಿತಿ ಇಂಗ್ಲೀಷ್ ಪುಸ್ತಕಗಳಿಗೆ ಮಾತ್ರ.
೧. ಅಂದಾಜು ೧೯೩೦ರ ಹಿಂದಿನ ಪುಸ್ತಕಗಳು
patent/copywrite ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಎಲ್ಲಾ ಪುಸ್ತಕಗಳನ್ನು download ಮಾಡಿ
ಓದಬಹುದು.
೨. ಪ್ರತಿ ಪುಟವೂ ಪುಸ್ತಕದ feeling ಕೊಡುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಆನಂದ ಲಭ್ಯ. Paperwhite ಹಿಂದಿನ modelಗಳು ಸ್ವಯಂಪ್ರಕಾಶಿತವಲ್ಲವಾದ್ದರಿಂದ ಹೊರಬೆಳಕು ಬೇಕು. ಎಲ್ಲಾ ಬರಹ/ಚಿತ್ರಗಳು ಕಪ್ಪುಬಿಳುಪು. ಪುಸ್ತಕ ಓದುವ ಹುಚ್ಚಿನವರಿಗೆ ವರದಾನ.
೩. Battery ಖರ್ಚಾಗುವುದು ಪುಟದಿಂದ ಪುಟಕ್ಕೆ ಬದಲಾವಣೆಯಾಗುವಾಗ ಮಾತ್ರ. ಓದುವಾಗ ಇಲ್ಲ. ಆದ್ದರಿಂದ ಒಂದು charge ತಿಂಗಳಾನುಗಟ್ಟಲೆ ಬರುತ್ತದೆ.
೪. AZW, Mobi format ಅಕ್ಷರಗಳನ್ನು ಬೇಕಾದಷ್ಟು ಹಿಗ್ಗಿಸಬಹುದು. ಪುಟ ಅದರ ಪ್ರಕಾರ wrap ಆಗುತ್ತವೆ.
೫. ಇತರ format text (word, pdf
ಇತ್ಯಾದಿ)ಗಳನ್ನು mobi formatಗೆ convert ಮಾಡಲು ಒಂದು ಉತ್ತಮ software - Calibre.೨. ಪ್ರತಿ ಪುಟವೂ ಪುಸ್ತಕದ feeling ಕೊಡುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಆನಂದ ಲಭ್ಯ. Paperwhite ಹಿಂದಿನ modelಗಳು ಸ್ವಯಂಪ್ರಕಾಶಿತವಲ್ಲವಾದ್ದರಿಂದ ಹೊರಬೆಳಕು ಬೇಕು. ಎಲ್ಲಾ ಬರಹ/ಚಿತ್ರಗಳು ಕಪ್ಪುಬಿಳುಪು. ಪುಸ್ತಕ ಓದುವ ಹುಚ್ಚಿನವರಿಗೆ ವರದಾನ.
೩. Battery ಖರ್ಚಾಗುವುದು ಪುಟದಿಂದ ಪುಟಕ್ಕೆ ಬದಲಾವಣೆಯಾಗುವಾಗ ಮಾತ್ರ. ಓದುವಾಗ ಇಲ್ಲ. ಆದ್ದರಿಂದ ಒಂದು charge ತಿಂಗಳಾನುಗಟ್ಟಲೆ ಬರುತ್ತದೆ.
೪. AZW, Mobi format ಅಕ್ಷರಗಳನ್ನು ಬೇಕಾದಷ್ಟು ಹಿಗ್ಗಿಸಬಹುದು. ಪುಟ ಅದರ ಪ್ರಕಾರ wrap ಆಗುತ್ತವೆ.
4 ಕಾಮೆಂಟ್‌ಗಳು:
ಚೆನ್ನಾಗಿದೆ ತಮ್ಮ, ಕಿಂಡಲ್ ಹಾರಿ ಬಂದ ದಾರಿ. ನನ್ನ ಮಿತ್ರರೊಬ್ಬರು ನನಗೆ ಕಿಂಡಲ್ ತೆಗೆದುಕೊಳ್ಳಲು ಹೇಳಿ ಹೇಳಿ ಆಮೇಲೆ ಶ್ರೀಕಾಂತ ಗೂ ಹೇಳಿದ್ದರು (ನೀನು ಕೊಟ್ಟ ಕಾರಣಗಳೇ ಅವರೂ ಕೊಟ್ಟಿದ್ದು) ನನಗೊಂದು ಇ ಬುಕ್ ರೀಡರ್ ಕೊಡಿಸಲು. ನಾನು ಬೇಡ ಅಂತ ಮುಂದೂಡುತ್ತಲೇ ಇದ್ದೇನೆ. ಅದರೆ ಮೊನ್ನೆ ನನ್ನ ಹುಟ್ಟು ಹಬ್ಬಕ್ಕೆ ಶ್ರೀಕಾಂತ ಗಿಫ್ಟ್ ಕೊಟ್ಟು guess ಅಂದರು, ನಾನು ಕಿಂಡಲ್ ಅಂದಿದ್ದೆ. ಆದರೆ ಅದು ಐ ಪ್ಯಾಡ್. ಮಾಲವಿಕ ಅದರಲ್ಲಿ ಬುಕ್ ಓದುವುದರಲ್ಲಿ ಬಿಸಿ. ಸಧ್ಯಕ್ಕೆ ಕೈಯಲ್ಲಿ ಹಿಡಿಯುವ real ಬುಕ್ಕ್ಸ್ ಗೆ ನನ್ನ loyalty. :-)
ಧನ್ಯವಾದ. ನಾನೂ ಒಂದು ಕೈ ನೋಡ್ತೀನಿ :)
ನಾನು ಅನೇಕ ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಅನೇಕ modelಗಳನ್ನು ಕೂಡಾ. ಆದರೆ paperwhite ಅತಿ ಉತ್ತಮ model. ಇತರ ಮಾಹಿತಿ.
೧. ಅಂದಾಜು ೧೯೩೦ರ ಹಿಂದಿನ ಪುಸ್ತಕಗಳು patent/copywrite ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಎಲ್ಲಾ ಪುಸ್ತಕಗಳನ್ನು download ಮಾಡಿ ಓದಬಹುದು.
೨. ಪ್ರತಿ ಪುಟವೂ ಪುಸ್ತಕದ feeling ಕೊಡುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಆನಂದ ಲಭ್ಹ್ಯ. Paperwhite ಹಿಂದಿನ modelಗಳು ಸ್ವಯಂಪ್ರಕಾಶಿತವಲ್ಲವಾದ್ದರಿಂದ ಹೊರಬೆಳಕು ಬೇಕು. ಎಲ್ಲಾ ಬರಹ/ಚಿತ್ರಗಳು ಕಪ್ಪುಬಿಳುಪು. ಪುಸ್ತಕ ಓದುವ ಹುಚ್ಚಿನವರಿಗೆ ವರದಾನ.
೩. battery ಖರ್ಚಾಗುವುದು ಪುಟದಿಂದ ಪುಟಕ್ಕೆ ಬದಲಾವಣೆಯಾಗುವಾಗ ಮಾತ್ರ. ಓದುವಾಗ ಇಲ್ಲ. ಆದ್ದರಿಂದ ಒಂದು charge ತಿಂಗಳಾನುಗಟ್ಟಲೆ ಬರುತ್ತದೆ.
೪. mobi format ಅಕ್ಷರಗಳನ್ನು ನಿಮಗೆ ಬೇಕಾದಷ್ಟು ಹಿಗ್ಗಿಸಬಹುದು. ವಾಕ್ಯಗಳು ಅದರ ಪ್ರಕಾರ wrap ಆಗುತ್ತವೆ. ಹಿರಿಯರಿಗೆ ಉತ್ತಮ gift.
೫. ಇತರ format text (word, pdf ಇತ್ಯಾದಿ) convert ಮಾಡಲು ಒಂದು ಉತ್ತಮ software - calibre.
ಈ ಮಾಹಿತಿ english ಪುಸ್ತಕಗಳಿಗೆ ಮಾತ್ರ.
-ದಿನಮಣಿ ಬಪ್ಪನಾಡು
ಯಾರಲ್ಲಾದರೂ ಕೋಬೊ ಟಚ್ ಇ-ರೀಡರ್ ಇದ್ದರೆ (https://en.wikipedia.org/wiki/Kobo_Touch) ಅದರಲ್ಲಿ ಇಂಗ್ಲೀಷ್‌ನಂತೆ ಕನ್ನಡವನ್ನು ಪಠ್ಯವನ್ನೂ (ಪಿಡಿಎಫ್ ಅಲ್ಲ) ಸಹ ಓದಲು ಬಯಸಿದಲ್ಲಿ, ಅದಕ್ಕೆ ಈ ಕೆಳಗಿನ ಮಾರ್ಗವನ್ನು ಬಳಸಿ:
* ನಿಮ್ಮ ಇ-ರೀಡರ್ ಅನ್ನು ಕಂಪ್ಯೂಟರ್‌ಗೆ ಜೋಡಿಸಿ.
* ಅಲ್ಲಿ ಕಾಣಿಸಿಕೊಳ್ಳುವ ಕೊಬೊ ಫೋಲ್ಡರ್‌ನ ಒಳಗೆ "Fonts" ಎಂಬ ಫೋಲ್ಡರ್ ಅನ್ನು ನಿರ್ಮಿಸಿಕೊಳ್ಳಿ
* ನಿಮ್ಮ ಮೆಚ್ಚಿನ ಕನ್ನಡ ಫಾಂಟ್ ಅನ್ನು (.ttf ಇಂದ ಕೊನೆಗೊಳ್ಳುವುದು) ಮೇಲೆ ಹೊಸದಾಗಿ ನಿರ್ಮಿಸಿಕೊಂಡ ಫೋಲ್ಡರ್‌ನಲ್ಲಿ ಇರಿಸಿ.
* ಯಾವುದೆ ಕನ್ನಡ ಪುಸ್ತಕವನ್ನು ಓದುವಾಗ, ಅಕ್ಷರಗಳು ಕಾಣಿಸದೆ ಇದ್ದಲ್ಲಿ, ಆ ಪುಟದಲ್ಲಿ ಫಾಂಟ್ ಅನ್ನು ಬದಲಿಸಿಕೊಳ್ಳಿ.
ಈಗ ಕನ್ನಡದ .epub / .txt / .mobi ಅನ್ನು ಓದಲು ಅಥವ Pocket ಆ‌್ಯಪ್‌ನಲ್ಲಿ ನೀವು ಹಾಕಿಕೊಂಡಿರುವ ಯಾವುದೆ ಕನ್ನಡ ಲೇಖನವನ್ನು ಓದಲು ಸಾಧ್ಯ!
ಕಾಮೆಂಟ್ ಪೋಸ್ಟ್ ಮಾಡಿ