ಯಾವುದಾದ್ರೂ ವಿಷಯದ ಬಗ್ಗೆ ಗೊತ್ತಿಲ್ಲದಿದ್ದಾಗ ಅಥವಾ ಯಾವುದಾದ್ರೂ ವಿಷಯದ ಬಗ್ಗೆ ಸಂಶಯವಿದ್ದಾಗ, ಕುತೂಹಲವಿದ್ದಾಗ ಅದನ್ನ ಗೊತ್ತಿದ್ದವರ ಹತ್ತಿರ ಒಂದಲ್ಲ ಹತ್ತು ಬಾರಿ ಬೇಕಾದ್ರೂ ಕೇಳಿ ತಿಳ್ಕೋಬೇಕು ಅಂತ ಶಾಲೆಯಲ್ಲಿದ್ದಾಗ ಮಿಸ್ಸು ಹೇಳ್ಕೊಟ್ಟಿದ್ರು. ನಂಗೂ ಅದೇ ಅಭ್ಯಾಸ.
ಮೊನ್ನೆ ಒಂದು ಸಂಶಯ ಬಂತು. ಎಷ್ಟು ಯೋಚಿಸಿದ್ರೂ ತಿಳಿಯಲಿಲ್ಲ. ಅದು ಹುಡ್ಗೀರಿಗೆ ಸಂಬಂಧಿಸಿದ್ದು ಅಂದಮೇಲೆ ಹುಡುಗರಿಗೆ ಕೇಳಿದ್ರೆ ಸರಿಯಾಗಿ ಗೊತ್ತಾಗೋಲ್ಲ ಅಂತ ಹುಡುಗಿಯರನ್ನೇ ಕೇಳಿದೆ, ತಿಳಿದುಕೊಂಡೆ. ಬರೇ ನಾನು ತಿಳ್ಕೊಂಡ್ರೆ ಏನು ಬಂತು. ಅದನ್ನ ನಾಲ್ಕು ಜನರಿಗೂ ತಿಳಿಸೋದು ಬೇಡ್ವೆ? ಅದ್ಕೇ ಬ್ಲಾಗಿಗೂ ಹಾಕಿದೆ.
ಇದು ಸುಮ್ನೆ ಜೆನರಲ್ ನಾಲೆಡ್ಜಿಗಾಗಿ. ಗಮನಿಸಿ, ಉತ್ತರಗಳ್ಯಾವುವೂ ರೀಲಲ್ಲ, ಎಲ್ಲಾ ರಿಯಲ್ಲೇ ! ಡೌಟಿದ್ದವ್ರು ನನ್ ಫೋನ್ ಇನ್ ಬಾಕ್ಸ್ ನೋಡ್ಬೋದು ;). ಆವರಣ(bracket)ದಲ್ಲಿರೋದು ಮನಸಿನ ಮಾತು.
ಸಂಶಯ/ಪ್ರಶ್ನೆ: ಹುಡ್ಗೀರು ಕೈಯಲ್ಲಿ ಯಾವಾಗ್ಲೂ ಕರ್ಚೀಫು ಹಿಡ್ಕೊಂಡಿರ್ತಾರಲ್ಲ ಯಾಕೆ?
ಉತ್ತರ ೧ : ಅದೊಂಥರಾ ಸೆಕ್ಯುರಿಟಿ ಫೀಲಿಂಗ್ ಕೊಡತ್ತೆ . (ಹಾಗಿದ್ರೆ ಕೋಲು ಹಿಡ್ಕೊಂಡ್ರೆ ಇನ್ನೂ ಒಳ್ಳೆದೇನೋಪ)
ಉ ೨ : ಹುಡುಗರ ಕಣ್ಣೀರು ಒರ್ಸೋಕೆ. (ಅಬ್ಬಾ, ಒಪ್ಕೋಬೇಕಾದ್ದೆ ಇದು)
ಉ ೩ : ನಮ್ಗೆ ಪಾಕೇಟ್ ಇರೋಲ್ಲ, ಅದ್ಕೆ. (ಹ್ಮ್.. ಹೌದಲ್ವಾ !)
ಉ ೪ : ಹಿಡ್ಕೊಂಡಿರೋ ಹುಡ್ಗನ ಕೈ ಜಾರೋಗದೇ ಇರ್ಲಿ ಅಂತ ಕೈಬೆವರು ಒರೆಸಿಕೊಳ್ಲೋಕೆ. (ನೊ ಕಮೆಂಟ್ಸ್)
ಉ ೫ : ಕ್ಲೀನಾಗಿರೋಕೆ. ಅಂದ್ರೆ ಬೆವರು, ಕಣ್ಣೀರು ಎಲ್ಲಾ ಒರೆಸ್ಕೊಳ್ಳೋಕೆ. ಧೂಳು ಇದ್ದಾಗ ಮೂಗಿಗೆ ಹಿಡ್ಕೊಳೋಕೆ. (ಸರೀ, ಅದ್ಕೆ ಮೂರೊತ್ತೂ ಕೈಯಲ್ಲೇ ಯಾಕೆ ಹಿಡ್ಕೋಬೇಕು?)
ಉ ೬ : ನಾನಂತೂ ಹಿಡ್ಕೊಳಲ್ಲ, ನಂಗೆ ಯಾಕೆ ಅಂತನೂ ಗೊತ್ತಿಲ್ಲ. (ತಪ್ಪಾಯ್ತು, ಮುಂದೆ ಹೋಗ್ತೀನಿ, ಪಾಸ್... )
ಉ ೮ : ಯಾಕೇಂತ ಗೊತ್ತಿಲ್ಲ, ಹಂಗೆ ಸುಮ್ನೆ ಅಭ್ಯಾಸ... (ಓ ಹಾಗಾ.. ಒ.ಕೆ. ಮುಂದುವರೆಸಿ)
ಉ ೯ : ಹೌದು ಹುಡ್ಗೀರು ಯಾಕೆ ಹಿಡ್ಕೋತಾರೆ? ನೀನೆ ಹೇಳು (ಅದು ಗೊತ್ತಿದ್ರೆ ನಿಂಗ್ಯಾಕೆ ಕೇಳ್ತಿದ್ದೆ? ನೀನು ಹುಡ್ಗಿ ಅಲ್ವಾ)
ಉ ೧೦ : ಅದಕ್ಕೆ ತುಂಬಾ ಕಾರಣಗಳಿವೆ. (ಸರಿ ಅವೇನು ಅಂತ ಹೇಳ್ರೀ ಅಂದಾಗ..) ಎಲ್ಲಾದ್ರೂ ಕೂತ್ಕೋಬೇಕಾದಾಗ ಅದನ್ನ ಹಾಸ್ಕೊಂಡ್ರೆ ಬಟ್ಟೆ ಕೊಳೆಯಾಗೋಲ್ಲ, ನೀರು ಒರೆಸ್ಕೋಬೋದು, ಮುಖ, ಕೈ ಕೊಳೆ, ಧೂಳು, ಬೆವರು...
(ಅಯ್ಯೋ .. ಆಯ್ತು ಆಯ್ತು.. ಗೊತ್ತಾಯ್ತು)
************
ಅಂದ ಹಾಗೆ, ವಿಷಯ ತಿಳಿಸಿದ ಸಹೃದಯಿ ಗೆಳತಿಯರಿಗೆ, ಅಕ್ಕ ತಂಗಿಯರಿಗೆಲ್ಲಾ ಥ್ಯಾಂಕ್ಸ್ .
ಮತ್ತೇನಾದ್ರೂ ಕಾರಣ ಇರಬಹುದಾ.................??
18 ಕಾಮೆಂಟ್ಗಳು:
ವಾಹ್, ಏನ್ ಕಾನ್ಸೆಪ್ಟ್ ಗುರು.. ಸೂಪರ್ ಆಗಿತ್ತು ನಿನ್ನ ಪೋಸ್ಟ್. ನೀನು ಒಳ್ಳೆ ಟಿ.ವಿ ೯ ಥರಾ ಮೈಕ್/ ಕಾಮೆರಾ ಹಿಡ್ಕೊಂಡು ಹೋಗಿದ್ಯಾ ಹೇಗೆ ?
ಮಾಣಿ ಚೊಲೋ ರಿಸರ್ಚ್ ಮಾಡ್ತೆ ಇದ್ದೆ. next ಟಾಪಿಕ್ ಹುಡುಗೀರು ಪರ್ಸು 'ಅಲ್ಲೇ' ಯಾಕೆ ಇಟಗತ್ತ ಹೇಳದನ್ನ ರಿಸರ್ಚ್ ಮಾಡಿ ತಿಳ್ಸು. ನಂತರ ಹುಡುಗೀರ ಹಡಪ ಅಂದ್ರೆ vanity ಬ್ಯಾಗ್ inventory ಚೆಕ್ ಮಾಡಿ ತಿಳ್ಸು. ಎಲ್ಲ ರಿಸರ್ಚ್ ಸೇರ್ಸಿ Ph.D ಕೊಡ್ವ. Ph.D ಅಂದ್ರೆ professional ಹುಡುಗೀರ detective ಹೇಳಿ. ತೆಳತ್ತ?
ಹೋಯ್ ವಿಕಾಸ್,
ನಮಗೆಲ್ಲಾ ಮೆಸೆಜ್ ಕಳಸಿ ತಲೆಕೆಡಸದು. ಅದನ್ನೆ ಬ್ಲಾಗ್ ಲ್ಲಿ ಹಾಕಿ ಹೀರೋ ಅನ್ನಿಸಿಕ್ಕೊಳ್ಳಾದು. ಇನ್ನೊಂದು ದಿನಾ question ಕಳಸು ಮಾಡಸ್ತಿ. ಜಿರಲೆ ಕಂಡ್ರೆ ಹುಡುಗೀರು ಯಾಕೆ ಹೆದರಿಕೊಳ್ಳುತಾರೆ ನು ಇದಕ್ಕೆ ಕಳಿಸಿದ್ದಾ? ಬ್ಲಾಗ್ ಲ್ಲಿ ಹಾಕಿ ಜನರಲ್ ನಾಲೆಡ್ಜ್ ಇಂಪ್ರೂ ಮಾಡಿಕೊಳ್ಳಕಾ?
ಕರ್ಛಿಫ್ ಬಗ್ಗೆನೂ ಜನ ಇಷ್ಟು ಯೋಚನೆ ಮಾಡಿ ತಲೆ ಕೆಡಶ್ಗ್ಯತ್ತಾ ಅಂತಾ ಗೊತ್ತಿರ್ಲೆ :)
Vikas,
naanathu karcheefu itkathnilyapa.. innu itkandruva ninna nenpaagi bagnolgE hakyahti bidu ;-)
idea innovative ಆಗಿದೆ.
ಅಲ್ದೇ ನೀನು ಪ್ರಶ್ನೆ ಕೇಳಿದ ತಕ್ಷಣ prompt ಆಗಿ ಉತ್ತರ ಕೊಡೊ ಉತ್ತರೆಯರೂ ನಿಂಗೆ ಸಿಕ್ಕಿದ್ದು ಆಶ್ಚರ್ಯ.
ಜೀವನದಲ್ಲಿ ಏನಾದ್ರೂ ಒಂದನ್ನ (ಧ್ಯೇಯ, ಗುರಿ,etc) ಹಿಡ್ಕೊಳ್ಲಿ ಅಂತ ಯಾರೋ ಹಿರಿಯರು ಹೇಳಿದ್ಮಾತನ್ನ, ಹುಡ್ಗೀರೆಲ್ಲ wrong ಆಗಿ interprete ಮಾಡ್ಕೊಂಡಿದಾರೇನೋ :-)
ಹ್ ಹ್
ಒಳ್ಳೆ ರಿಸರ್ಚ್ ಬರಹ :-)
ನಮ್ಗೂ ಜನರಲ್ ನಾಲೆಡ್ಜ್ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಕೃತವರ್ಮನ ಉತ್ತರ ತುಂಬಾ ಸೂಕ್ತವಾಗಿದೆ ಅನ್ಸುತ್ತೆ.
ನನಗೆ ದೊರೆತ ಉತ್ತರದ ಪ್ರಕಾರ ಹುಡ್ಗೀರು ಹುಡುಗರ ಜೊತೆ ಕಣ್ಣುಮುಚ್ಚಾಲೆ ಆಟ ಆಡೋಕೆ ಅಂತ ಕರ್ಚೀಫ್ ಇಟ್ಟುಕೊಂಡಿರ್ತಾರಂತೆ!
ವಿಕಾಸ,
ಏನೋ ಭಯಂಕರ research ಗೆಲ್ಲಾ ಕೈ ಹಾಕ್ತಾ ಇದ್ದೆ :)
ಎಲ್ಲಾ ಹುಡುಗಿಯರಂತೆಯೇ ನಾನೂ ಕೈಯ್ಯಲ್ಲಿ ಕರ್ಚೀಫು ಇಟ್ಗಳದು ನಿಜ!! ನನ್ನ ಕೇಳಿದ್ರೆ ನಿನಗೆ ಸಿಕ್ಕಿದ ಮೊದಲನೇ ಉತ್ತರವೇ ನನ್ನಿಂದ ಸಿಕ್ತಿತ್ತು. ಅದೇ... security feeling. ಕೋಲು ಇಟ್ಗಳ ಬಗ್ಗೆ ಇನ್ನು ವಿಚಾರ ಮಾಡ್ಳಕ್ಕೇನ :)
ರವಿ ಬೆಳಗೆರೆ ಒಂದು ಕಡೆ ಓದುಗರ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ನೆನಪಾತು... ನಿನ್ನ ಮುಂದಿನ research ಗೆ ಬಹುಶಃ ಇದು ಉಪಯೋಗಕ್ಕೆ ಬರ್ತು ಅನಿಸ್ತು :)
ಪ್ರಶ್ನೆ: ಹುಡುಗಿಯರು ತಮ್ಮ vanity bag ನಲ್ಲಿ ಏನೇನು ಇಟ್ಕೊಂಡಿರ್ತಾರೆ?
ಉತ್ತರ: ಕೊಂಚ ಕನಸು, ಕೊಂಚ ಆಸೆ ಮತ್ತು ಕಣ್ಣೀರಿನಲ್ಲಿ ಕೊಂಚ ತೊಯ್ದ ಒಂದು ಕರ್ಚೀಫು!
ವಿಕಾಸ ...
‘ಸರ್ವೇ’ಜನಃ ಸುಖಿನೋಭವಂತು.
ಈ ಕೆಳಗಿನ ಕಾರಣಗಳೂ ಇರ್ಲಕ್ಕು.
*ಕಣ್ ಕಟ್ಟ ಆಟ ಆಡಕ್ಕರೆ ಬೇಕಾಗ್ತು .
*ಪಾಟಿ ಒರ್ಸಕ್ಕೆ ಬೇಕಾಗ್ತು.
*ಶಾಯಿ ಉಗುಳ ಪೆನ್ನಾದ್ರೆ ಶಾಯಿ ಒರ್ಸಲ್ಲೆ ಬೇಕಾಗ್ತು.
*ಅಮ್ಮ ಇಟ್ಗ ಹೇಳಿ ಕೊಟ್ಟಿದ್ದಕ್ಕೆ ಇಟ್ಗಳಕಾಗ್ತು.
*ಊಟ ಮಾಡಕ್ಕರೆ ಅಂಗಿ ಮೇಲೆ ಎಂತರೂ ಚೆಲ್ಲಿರೆ ಒರ್ಸ್ಗ್ಯಂಬ್ಲಾಗ್ತು.
*ಬಸ್ಸಲ್ಲಿ ಸೀಟ್ ಹಿಡಯಲ್ಲೆ ಬೇಕಾಗ್ತು.
*ಬಿಸ್ಲಲ್ಲಿ ತಲೆಮೇಲೆ ಇಟ್ಗಂಬ್ಲೆ ಬೇಕಾಗ್ತು, ಮಳೆಗಾಲದಲ್ಲಿ ಬಸ್/ಗಾಡಿ ಸೀಟ್ ಒರ್ಸಲ್ಲೆ ಬೇಕಾಗ್ತು.
*ಸೆಂಟಿಮೆಂಟ್ಸ್.
*ಕರ್ಚೀಫಿನ ತುದಿ ಸುರುಳಿ ಸುತ್ಗ್ಯೋತ ಕುತ್ಗಂಡ್ರೆ ಸಿಟ್ಟು ಕಡಿಮೆ ಆಗ್ತು.
ವಿಕಾಸಾ... ಹ್ವಾ... ನಿಂಗೆ ಎಷ್ಟು ಜನಾ Girl Friends ಇದ್ದ ಹೇಳಿ ಈ post ನೋಡಿ ಗೊತ್ತತು ಬಿಡು ;)
@kartik
ಸರ್,ಭಾರಿ ಅಪರೂಪ ಆಗಿದ್ದೀರಲ್ಲ ಇತ್ತೀಚೆಗೆ?! ಕೈಯಲ್ಲಿ ಮೊಬೈಲ್ ಫೋನ್ ಇರಬೇಕಾದ್ರೆ ಮೈಕ್ ಕಾಮೆರಾ ಎಲ್ಲಾ ಯಾಕೆ ಹೇಳಿ ಸುಮ್ನೆ ;)
@hegde
ಥ್ಯಾಂಕ್ಸ್, ಎಂತ ನನ್ನ ತೀರಿಸಿಬಿಡುವ ಐಡಿಯಾನಾ ಎಂತದು ನಿಮ್ದು?!
@ರಂಜನಾ
ಹೋಯ್, ವಿಷ್ಯ ತಿಳಿಸಿದ್ದಕ್ಕೆ ನಿಂಗೆ ಅಲ್ಲಿ ಥ್ಯಾಂಕ್ಸ್ ಕೂಡ ಹೇಳಿದ್ದಿ, ಆದ್ರೂ ಎಂತಕ್ಕೆ ಗುರ್ ಗುಡ್ತೆ? ಗೊತ್ತಿಲ್ದೋದ್ನ ಕೇಳಿ ತಿಳ್ಕಳದೂ ತಪ್ಪಾ?
@ಶ್ಯಾಮಾ
;-) ಹೀಗೆ ಸುಮ್ಮನೇ.....
@ತೇಜಕ್ಕ
ನಾ ಏನ್ ಹೇಳ್ತ್ನಿಲ್ಲೆ . ಕೈಯಲ್ಲೇ ಇಟ್ಕಳಿ ಅಡ್ಡಿಲ್ಲೆ.;)
@krutavarma
ನಾನು ಹಿಂಗೆ ಬ್ಲಾಗಲ್ಲಿ ಹಾಕ್ತೀನಿ ಅಂದ್ರೆ ಯಾರೂ ಹೇಳ್ತಿರ್ಲಿಲ್ವೇನೋ! ಆಗ್ಲೇ ನೋಡಿ ಅಲ್ಲಿ ಮೇಲೆ, ಬೈತಿದಾರೆ.
ಇನ್ಮುಂದೆ ಇಂಥ ರಿಸರ್ಚು ಕಷ್ಟ ಇದಿಯೇನೋ ! ;(
@MD
ಹ್ಹ ಹ್ಹ ಹ್ಹ. point added to the research ;) thanx
@ಸೀಮಕ್ಕ,
ಹ್ಹೆ ಹ್ಹೆ. ಹಿಂಗೆ ಸುಮ್ನೆ. ಎಲ್ಲರ ಸಹಕಾರ ಇದ್ರೆ ರಿಸರ್ಚು ಹಿಂಗೆ ಆಗಾಗ..... ;)
ರವಿ ಪ್ರಶ್ನೆ,ಉತ್ತರ ಸೂಪರ್ರು.
@ಪೂರ್ಣಿಮಾ
ಹೌದು girl-friends ;)
ಅಕ್ಕ ತಂಗೀರು ಎಷ್ಟು ಜನ ಇದ್ದ ಹೇಳಿ ಗೊತ್ತಾಜಿಲ್ಯ? ;)
@ಶಾಂತಲಕ್ಕ,
ಅಬ್ಬಾ! ನಿಂಗೆ ಸ್ಪೆಶಲ್ ಥ್ಯಾಂಕ್ಯು. ನನ್ ರಿಸರ್ಚು ಸಾರ್ಥಕ ಆತು. ಆ ಕೊನೆ ಪಾಯಿಂಟು ಸೂಪರ್. ಕೊನೆಯಿಂದ ಎರಡನೇದು ’ಸೆಂಟಿಮೆಂಟ್ಸ್’, ಅದುಹ್ಯಾಂಗೆ ಅಂತ ತಿಳ್ಸಿದ್ರೆ ಜೆನೆರಲ್ ನಾಲೆಡ್ಜು ಇನ್ನೂ ಇಂಪ್ರೂವ್ ಆಗ್ತಿತ್ತು ! ;) ಅಂದ ಹಾಗೆ ನನ್ನ ಅಮ್ಮನೂ ಕೈಯಲ್ಲೇ ಕರ್ಚೀಫ್ ಹಿಡ್ಕಂಡಿರ್ತು. ಅಮ್ಮ ಜೊತೆಗಿದ್ದಾಗೆಲ್ಲಾ ನಂಗಂತೂ ನನ್ ಕರ್ಚೀಫು ಜೇಬಿಂದ ಹೊರತೆಗೆಯ ಪ್ರಸಂಗನೇ ಬತ್ತಿಲ್ಲೆ.
ಒಟ್ಟಿನಲ್ಲಿ ಬಹೂಪಯೋಗಿ ಹುಡುಗೀರ ಕರ್ಚೀಫಿಗೊಂದು ಅಚ್ಚರಿ ಭರಿತ ಥ್ಯಾಂಕ್ಸು.;)
ಮಸ್ತ್ ರಿಸರ್ಚ್ ಮಾಡಿದ್ದೆ :)
ಮೊನ್ನೆ ಬ್ಲಾಗರ್ಸ್ ಮೀಟ್ನಲ್ಲಿ ಈ ಪ್ರಶ್ನೆ ಮುಂದಿಟ್ಟಿದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತೇನೋ...
ಆದ್ರೆ ನಂಗೊಂದು ಡೌಟ್... ನೀ ಹೇಳಿದ ಕಾರಣ ೫ ಮತ್ತು ಶಾಂತಲಕ್ಕ ಹೇಳಿದ ಎಲ್ಲ ಕಾರಣಗಳು (ಎಸ್ಪೆಶಲಿ "ಊಟ ಮಾಡಕ್ಕಾರೆ ಅಂಗಿ ಮೇಲೆ ಎಂತರೂ ಚೆಲ್ಲಿರೆ ಒರ್ಸ್ಗ್ಯಂಬ್ಲಾಗ್ತು") ಹುಡುಗರಿಗೆ ಅಪ್ಲೈ ಆಗ್ತಿಲ್ಯ???
ಹರೀಶ, ಹುಡುಗ್ರಿಗೆ ಅಷ್ಟೆಲ್ಲಾ ಬುದ್ದಿ ಎಲ್ಲಿರ್ತು ಮಾರಾಯಾ? ;) ಹಂಗೂ ಎಂತಾರು ಆದ್ರೆ ಹೆಂಗೂ ಹತ್ತಿರದಲ್ಲೇ ಯಾರಾರೂ ಹುಡ್ಗೀರು ಇದ್ದೇ ಇರ್ತ ಬಿಡು, ಅವರದ್ದು ಇಸ್ಕಂಡ್ರಾತು ಕರ್ಚೀಫು ;)
ಕೆಲವೊಂದು ಸಾರಿ ಸಮಯಕ್ಕೆ ಮುಂಚೆಯೇ ಹೆಣ್ತನ ನೆನಪು ಮಾಡುತ್ತಂತೆ, ಅದಕ್ಕೆ ಪೂರ್ವತಯಾರಿ ಯಾವಾಗಲೂ ಇರುವುಇಲ್ಲ, ಆದ್ದರಿಂದ ಎಮರ್ಜನ್ಸಿ ಸುರಕ್ಷತೆಗೆ...
ಕೆಲವೊಂದು ಸಾರಿ ಸಮಯಕ್ಕೆ ಮುಂಚೆಯೇ ಹೆಣ್ತನ ನೆನಪು ಮಾಡುತ್ತಂತೆ, ಅದಕ್ಕೆ ಪೂರ್ವತಯಾರಿ ಯಾವಾಗಲೂ ಇರುವುಇಲ್ಲ, ಆದ್ದರಿಂದ ಎಮರ್ಜನ್ಸಿ ಸುರಕ್ಷತೆಗೆ...
ಒಯ್
ಇದು ಯಾರೂ ಹೇಳೇ ಇಲ್ಲ.....
ನನಗಂತು ಯಾರ ಮೇಲಾದ್ರು ಸಿಟ್ಟು ಬಂದ್ರೆ, ಕರ್ಚೀಫ್ ನ ಅವರ ಕುತ್ತಿಗೆ ಅಂತ imagine ಮಾಡಿ.....ಮುಂದೆ ಗೊತ್ತುಂಟಲ್ಲವೋ????
:-)
ಮಾಲತಿ ಎಸ್.
(found this link in Divya Mallya blog)
ಕಾಮೆಂಟ್ ಪೋಸ್ಟ್ ಮಾಡಿ