ಗುರುವಾರ, ಮೇ 5, 2011

Kannada typing in computer

ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು.

ನಾನು ೨೦೦೨ ರಲ್ಲಿ  ಕಂಪ್ಯೂಟರ್ ತಗೊಂಡಿದ್ದು. ಆಗ ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು ಎನ್ನುವ ವಿಷಯ ನನಗೆ ಹೊಸದಾಗಿತ್ತು. ನನ್ನ ಗಣಕದಲ್ಲಿ ’ಬರಹ’ ಮತ್ತು ’ನುಡಿ’ ತಂತ್ರಾಂಶಗಳನ್ನೂ ಅಳವಡಿಸಿಕೊಂಡಿದ್ದ ನೆನಪು. ಆದರೆ ನನಗೆ ಆಗ ಕಂಪ್ಯೂಟರ್ ನಲ್ಲಿ  ಕನ್ನಡ ಬರೆಯುವ ಯಾವುದೇ  ಅಗತ್ಯವಿರದಿದ್ದರಿಂದ ಕನ್ನಡ ಟೈಪಿಸುವ ತಂತ್ರಾಂಶಗಳು ಯಾವಾಗಲಾದರೊಮ್ಮೆ ಸುಮ್ಮನೇ ಕುತೂಹಲಕ್ಕಷ್ಟೇ ಆಗಿತ್ತು. ಆಗ ಅಂತರಜಾಲವೂ ಕೂಡ ಇಷ್ಟು ವ್ಯಾಪಕವೂ ಆಗಿರಲಿಲ್ಲ ಮತ್ತು ನಮಗೂ ಅಷ್ಟು ನಿಲುಕಿರಲಿಲ್ಲ. ಮುಖ್ಯವಾಗಿ ಭಾರತೀಯ ಭಾಶೆಗಳಿಗೆ ಫಾಂಟ್ ಸಮಸ್ಯೆ ಇತ್ತು. ಆಮೇಲಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಹೊಂದುವಂತಹ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡಿನ ಯುನಿಕೋಡ್ * ಫಾಂಟುಗಳು ತಯಾರಾದವು. ಬರಹ, ನುಡಿ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸವಲತ್ತುಗಳನ್ನು ಒದಗಿಸಿಕೊಟ್ಟವು. ಆರ್ಕುಟ್ ಮತ್ತು ಬ್ಲಾಗ್ ಗಳಲ್ಲಿ ಕನ್ನಡ ಯುನಿಕೋಡ್ ನ ಬರಹಗಳು ಕಾಣಿಸತೊಡಗಿದವು. ಅಂತರಜಾಲದ ಬಳಕೆ ಹೆಚ್ಚಿದ ಮೇಲೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೆಚ್ಚುತ್ತಾ ಹೋಯಿತು. ಹಳೆಯ ಆಪರೇಟಿಂಗ್ ಸಿಸ್ಟಮ್ (O.S) ಮತ್ತು ಕೆಲವು ಬ್ರೌಸರ್ ಗಳಲ್ಲಿ ಕನ್ನಡ ಕಾಣಿಸಲು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಾಗಿತ್ತು.

ಈಗ ಅದೆಲ್ಲಾ ಹಳೆಯ ಕತೆಯಾಗಿದೆ. ಎಲ್ಲಾ ಒಂದು ಹಂತಕ್ಕೆ ಬಗೆಹರಿದಿದೆ. ಎಲ್ಲಾ O.S.ಗಳೂ, ಬ್ರೌಸರ್ ಗಳೂ ಭಾರತೀಯ ಲಿಪಿಗಳ ಫಾಂಟುಗಳನ್ನು ಬೆಂಬಲಿಸುತ್ತವೆ. ನಾವು ಬಳಸುವ ಇಂಗ್ಲೀಷ್ ಅಕ್ಷರಗಳಿರುವ ಕೀಲಿಮಣೆಯ ಮೂಲಕವೇ ಕನ್ನಡವನ್ನು ಟೈಪಿಸಲು ಆಗುವ ಹಲವಾರು ಟೂಲ್ ಗಳು ಇವೆ. ಇಂಗ್ಲೀಷ್ ಟೈಪ್ ಮಾಡಿದಷ್ಟೇ ಸುಲಭವಾಗಿ ಇವತ್ತು ಕನ್ನಡವನ್ನು ಟೈಪ್ ಮಾಡಬಹುದು. ಸದ್ಯಕ್ಕೆ ಕನ್ನಡ ಟೈಪಿಂಗನ್ನು ಇದಕ್ಕಿಂತಲೂ ಅನುಕೂಲ ಮಾಡಲಿಕ್ಕಾಗುವುದಿಲ್ಲ ಅನ್ನಿಸುತ್ತದೆ.

*************************

Kannada Keyboard Layouts

ಕನ್ನಡ ಟೈಪಿಂಗಿಗೆ ಮುಖ್ಯವಾಗಿ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳಿವೆ (keyboard layouts). ಇವುಗಳಲ್ಲಿ ಯಾವುದಾದರೊಂದನ್ನು ಬಳಸಬಹುದು.  ಕೀಲಿಮಣೆ ವಿನ್ಯಾಸವೆಂದರೆ ಯಾವ ಕನ್ನಡ ಅಕ್ಷರ ಮೂಡಿಸಲು ಯಾವ ಕೀ ಒತ್ತಬೇಕು ಎಂಬುದರ ವಿನ್ಯಾಸ ಅಷ್ಟೆ. 

೧. ಫೊನೆಟಿಕ್ * (Phonetic) ಕೀಲಿಮಣೆ:  ಕನ್ನಡವನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು. ಅಂದರೆ ’ಕನ್ನಡ’ ಎಂದು ಬರೆಯಬೇಕಾದರೆ kannaDa ಎಂದು ಟೈಪಿಸಬೇಕು. ಇದು 'ಟ್ರಾನ್ಸ್ ಲಿಟೆರೇಶನ್ * ಕೀಲಿಮಣೆ' ಎಂದೂ ಗುರುತಿಸಲ್ಪಡುತ್ತದೆ. 'ಬರಹ ಕೀಲಿಮಣೆ' ಎಂದರೂ ಇದೇ ಎನ್ನಬಹುದು. ವಿನ್ಯಾಸ ಹೀಗಿದೆ: www.baraha.com/help/Keyboards/kan_phonetic.htm

೨. ಕೆ.ಪಿ.ರಾವ್ ಅಥವಾ ಕನ್ನಡ ಗಣಕ ಪರಿಷತ್ತು (ಕಗಪ) ಅಥವಾ ನುಡಿ ಕೀಲಿಮಣೆ: ಇದೂ ಕೂಡ ಬಹುತೇಕ ಇಂಗ್ಲೀಷಿನ ಕೀಲಿಮಣೆಗೆ ಅನುಗುಣವಾಗಿದೆ. ಒಂದೊಂದು ಕೀಲಿಗೂ ಒಂದೊಂದು ಕನ್ನಡ ಅಕ್ಷರಗಳನ್ನು ನಿಗದಿ ಮಾಡಲಾಗಿದೆ. kಗೆ ಕ, jಗೆ ಜ, uಗೆ ಉ... ಹೀಗೆ.  ಆದರೆ ಕನ್ನಡ ಪದಗಳನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು ಬೇಕಾಗಿಲ್ಲ. 'ಗಣಕ' ಎಂದು ಬರೆಯಲು gNk  ಒತ್ತಿದರಾಯ್ತು.  ಇದು ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ.  www.baraha.com/help/Keyboards/kan_brhkbd.htm

೩. ಟೈಪ್ ರೈಟಿಂಗ್ ಕೀಲಿಮಣೆ: ಹಿಂದೆ ಬಳಸುತ್ತಿದ್ದ ಕನ್ನಡ ಬೆರಳಚ್ಚು ಯಂತ್ರದ (ಟೈಪ್ ರೈಟಿಂಗ್ ಮೆಶೀನ್) ಕೀಲಿಮಣೆ. ಕನ್ನಡ ಟೈಪ್ ರೈಟಿಂಗ್ ಕಲಿತವರಿಗೆ ಇದು ಅನುಕೂಲ.

೪. ಇನ್ ಸ್ಕ್ರಿಪ್ಟ್ (inscript) ಕೀಲಿಮಣೆ: - ಇದು ಇಂಗ್ಲೀಷ್ ಕೀಲಿಮಣೆಗೆ ಸಂಬಂಧವಿಲ್ಲದಂತ ಬೇರೆ ವಿನ್ಯಾಸ.  C-DAC ಸಂಸ್ಥೆ ಅಭಿವೃದ್ಧಿ ಪಡಿಸಿ ಭಾರತ ಸರ್ಕಾರದಿಂದ ಅಧಿಕೃತಗೊಳಿಸಿದ ಕೀಲಿಮಣೆ. www.baraha.com/help/Keyboards/kan_inscript.htm

ಇವು ನಾಲ್ಕರಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವುದು ಮೊದಲಿನ ಎರಡು ವಿನ್ಯಾಸಗಳಾದರೂ ಕೂಡ, ಹೆಚ್ಚು ಟೈಪ್ ಮಾಡುವ ಕೆಲಸವಿರುವವರು ಕೊನೆಯ ಎರಡು ಕೀಲಿಮಣೆ ಕಲಿತು ಬಳಸಿದರೆ ವೇಗವಾಗಿ ಟೈಪ್ ಮಾಡಬಹುದು ಅಂತ ಬಲ್ಲವರು ಹೇಳುತ್ತಾರೆ. ಅದು ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.

***

Tools and Softwares to write (type), edit Kannada script 

ಈಗ ಕನ್ನಡ ಟೈಪಿಸಲು ಬಳಸಬಹುದಾದ ತಂತ್ರಾಂಶಗಳನ್ನು ನೋಡೋಣ. ಇದಿಷ್ಟು ದಿನಗಳಲ್ಲಿ ನಾನು ಗಮನಿಸಿದ, ಬಳಸಿದ, ಬಳಸುತ್ತಿರುವ ಕೆಲವು ಕನ್ನಡ ಟೈಪಿಂಗ್ ಟೂಲ್ ಗಳನ್ನು ಪಟ್ಟಿ ಮಾಡಿದ್ದೇನೆ. ಎಲ್ಲಾ ತಂತ್ರಾಂಶಗಳೂ/ಟೂಲ್ ಗಳೂ ಮೇಲೆ ಹೇಳಿರುವ ಒಂದು ಅಥವಾ ಹೆಚ್ಚು ಬಗೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ ಟೈಪಿಸಲು ಆಯ್ಕೆಗಳನ್ನು ಕೊಡುತ್ತವೆ.

Offline/Installable Tools, Softwares

I. ಆಫ್ ಲೈನ್ ತಂತ್ರಾಂಶಗಳು: ಇವುಗಳನ್ನು ಬಳಸಲು ಅಂತರಜಾಲ ಸಂಪರ್ಕ ಬೇಕಿರುವುದಿಲ್ಲ.  ನಮ್ಮ ಕಂಪ್ಯೂಟರ್ ನಲ್ಲಿ  ತಂತ್ರಾಂಶ ಅಳವಡಿಸಿಕೊಂಡರೆ ಆಯಿತು. (install).

೧. ಬರಹ:- ಇದರಲ್ಲಿ 'ಬರಹ ಕೀಲಿಮಣೆ' ಎಂದೇ ಹೆಸರಾಗಿರುವ ಫೊನೆಟಿಕ್ ಕೀಲಿಮಣೆ ಮೂಲಕ ಟೈಪಿಸಬಹುದು. 'ಕಗಪ' ಮತ್ತು 'ಇನ್ ಸ್ಕ್ರಿಪ್ಟ್' ಕೀಲಿಮಣೆಯ ಆಯ್ಕೆಯೂ ಇದೆ. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ. http://www.baraha.com ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. (ಈ ತಂತ್ರಾಂಶದ ಪೂರ್ಣ ಆವೃತ್ತಿ ಉಚಿತವಾಗಿ ಲಭ್ಯವಿರುವುದಿಲ್ಲ, ಲೈಸೆನ್ಸ್ ಖರೀದಿಸಿ ಪೂರ್ಣ ಆವೃತ್ತಿ ಪಡೆಯಬಹುದು)

೨. ನುಡಿ:- 'ಕಗಪ' ಕೀಲಿಮಣೆ ಮೂಲಕ ಟೈಪಿಸಬಹುದು. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ. ಇದು ಉಚಿತ ತಂತ್ರಾಂಶ.  http://www.kagapa.in ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

೩. ಪದ:-  ಫೊನೆಟಿಕ್/ಟ್ರಾನ್ಸ್ ಲಿಟೆರೇಶನ್, ಕಗಪ ಕೀಲಿಮಣೆ ಸೌಲಭ್ಯವಿದೆ. ಯುನಿಕೋಡ್ ಟೈಪಿಸಬಹುದು.  ಇದು ಉಚಿತ ತಂತ್ರಾಂಶವಾಗಿದ್ದು ಹಲವಾರು ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. http://www.pada.pro ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ತಂತ್ರಾಂಶದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ :  ಪದ ತಂತ್ರಾಂಶ

ಮೇಲಿನ ಮೂರು ತಂತ್ರಾಂಶಗಳಲ್ಲಿ ಟೈಪಿಸಿದ ಅಕ್ಷರಗಳನ್ನು ಎಡಿಟ್ (ಬಣ್ಣ, ಗಾತ್ರ, ಹಿನ್ನೆಲೆ etc.,) ಮಾಡುವುದು, ಫೈಲ್ ಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಉಳಿಸುವುದು (save as), ಫಾಂಟ್ ಪರಿವರ್ತನೆ (font convert) ಮುಂತಾದ ಸವಲತ್ತುಗಳಿವೆ. ಬರಹ, ನುಡಿಗಳಲ್ಲಿ ಬೇರೆ ಬೇರೆ ರೀತಿಯ non unicode ಅಕ್ಷರ ಶೈಲಿಗಳ (font types) ಸೌಲಭ್ಯಗಳಿವೆ.

೪. ವಿಂಡೋಸ್ ಇಂಡಿಕ್ ಇನ್ ಪುಟ್ :- ಯಾವ ಹೊರ ತಂತ್ರಾಂಶದ ಅಗತ್ಯವೂ ಇಲ್ಲದಂತೆ ಕನ್ನಡ ಟೈಪ್ ಮಾಡಲು ವಿಂಡೋಸ್ ನಲ್ಲೇ ಸೌಲಭ್ಯ ಇರುತ್ತದೆ.  ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಕೀಲಿಮಣೆ ಸೇರಿಸಿಕೊಳ್ಳಬೇಕಾಗುತ್ತದೆ ಅಷ್ಟೆ. ಮಾಮೂಲಾಗಿ ವಿಂಡೋಸ್ O.S.ನಲ್ಲಿ ಇನ್ ಸ್ಕ್ರಿಪ್ಟ್ ಕೀಲಿಮಣೆ ಇರುತ್ತದೆ. ವಿಂಡೋಸ್ ಇಂಡಿಕ್ ಇನ್ಪುಟ್ ತಂತ್ರಾಂಶ ಅಳವಡಿಸಿಕೊಂಡರೆ ನಾಲ್ಕೂ ಬಗೆಯ ಕೀಲಿಮಣೆ ಸೌಲಭ್ಯ ದೊರೆಯುತ್ತದೆ. https://www.microsoft.com/en-in/bhashaindia/downloads.aspx ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕೀಬೋರ್ಡ್ ಸೇರಿಸುವುದು ಹೇಗೆ ಎಂದು ತಿಳಿಯಲು ಮೇಲಿನ ಕೊಂಡಿಗೆ ಹೋಗಿ Download ಪಕ್ಕದಲ್ಲಿರುವ help document ನೋಡಿ.  Windows XP ಬಳಸುವವರಿಗಾಗಿ ಇಂಡಿಕ್ ಇನ್ಪುಟ್ 1 ಇದೆ . Windows 7 ಬಳಸುವವರಿಗಾಗಿ ಇಂಡಿಕ್ ಇನ್ಪುಟ್ 2 ಇದೆ. Windows 8 ಬಳಸುವವರಿಗೆ ಇಂಡಿಕ್ ಇನ್ಪುಟ್ 3 ಇದೆ.

೫. ಗೂಗಲ್  ಟ್ರಾನ್ಸ್ ಲಿಟೆರೇಶನ್ IME :-  ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು. www.google.com/ime/transliteration ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

೬. ಪ್ರಮುಖ್ IME:- ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು. http://www.vishalon.net/PramukhIME/Windows.aspx  ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಮೇಲಿನ ತಂತ್ರಾಂಶಗಳಲ್ಲಿ IME (input method editor) on ಮಾಡಿಟ್ಟುಕೊಂಡು word, excel, ppt ಮುಂತಾದ ಬೇರೆ ಬೇರೆ ಅಪ್ಲಿಕೇಶನ್ ಗಳಲ್ಲಿ, ವೆಬ್ ಸೈಟ್, ಚಾಟ್ ಎಲ್ಲಾ ಕಡೆ ನೇರವಾಗಿ ಕನ್ನಡ ಟೈಪಿಸಬಹುದು. ಕನ್ನಡ ಮತ್ತು ಇಂಗ್ಲೀಷಿನ ಮಧ್ಯೆ toggle ಮಾಡುತ್ತಾ ಬಳಸಿಕೊಳ್ಳಬಹುದು. (ಬರಹ ಡೈರೆಕ್ಟ್, ನೇರ ನುಡಿ, ಪದ IME ). ಈ ಎಲ್ಲಾ ತಂತ್ರಾಂಶಗಳನ್ನೂ ವಿಂಡೋಸ್ ಕಾರ್ಯಾಚರಣೆ ವ್ಯವಸ್ತೆಯಲ್ಲಿ (O.S.) ಮಾತ್ರ ಅಳವಡಿಸಿಕೊಳ್ಳಲು ಸಾಧ್ಯ.


Online Tools

II. ಆನ್ ಲೈನ್ ಟೂಲ್ ಗಳು: ಅಂತರಜಾಲ ಸಂಪರ್ಕವಿರುವಾಗ ಮಾತ್ರ ತೆಗೆದು ಬಳಸಲು ಸಾಧ್ಯ.

ಈ ಕೆಳಗಿನವು ಟ್ರಾನ್ಸ್ ಲಿಟೆರೇಶನ್ ಟೂಲ್ ಗಳು. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪ್ ಮಾಡಿ ಸ್ಪೇಸ್ ಬಾರ್ ಒತ್ತಿದ ಅನಂತರ ಕನ್ನಡ ಅಕ್ಷರಗಳಾಗಿ/ಪದಗಳಾಗಿ ರೂಪಾಂತರ ಹೊಂದುತ್ತವೆ. ಪದಗಳು ತಪ್ಪಾಗಿಯೂ ಬರಬಹುದು. ಇದು ಟೈಪ್ ಮಾಡುವವರ ಟೈಪಿಂಗ್ ತಿಳುವಳಿಕೆಯ ಮೇಲೆ ಮತ್ತು ತಂತ್ರಾಂಶದ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಲವು ಸಲಹೆಗಳನ್ನೂ ಕೊಡುತ್ತದೆ, ತಪ್ಪಾಗಿ ಬಂದರೆ ನಾವು ಸರಿಪಡಿಸಬೇಕಾಗುತ್ತದೆ.

೧. ಗೂಗಲ್ ಟ್ರಾನ್ಸ್ ಲಿಟೆರೇಶನ್ www.google.com/transliterate/kannada

೨. ತಮಿಳ್ ಕ್ಯೂಬ್ : www.tamilcube.com/translate/kannada.aspx

೩. ಕ್ವಿಲ್ ಪ್ಯಾಡ್: http://www.quillpad.in/editor.html

೪. ಮೈಕ್ರೋಸಾಫ್ಟ್: www.specials.msn.co.in/ilit/Kannada.aspx

೫. ಯಾಹೂ: http://kannada.yahoo.com/type-in-kannada/

೬. ಒನ್ ಇಂಡಿಯhttp://kannada.oneindia.in/common/translator.html

ಈ ಕೆಳಗಿನವುಗಳಲ್ಲಿ ಟೈಪ್ ಮಾಡಿದಾಗ ನೇರವಾಗಿ ಕನ್ನಡ ಅಕ್ಷರಗಳೇ ಮೂಡುತ್ತವೆ. ಇಂಗ್ಲೀಷ್ ಅಕ್ಷರಗಳ ಮಧ್ಯಸ್ಥಿಕೆ ಬೇಕಾಗುವುದಿಲ್ಲ. ಅಂತರಜಾಲದ ಮೂಲಕ ಕನ್ನಡ ಟೈಪಿಸುವವರು ಇವುಗಳನ್ನು ಬಳಸುವುದು ಒಳ್ಳೆಯದು. ಹೆಚ್ಚಿನ ಎಲ್ಲವೂ ಫೊನೆಟಿಕ್ ಕೀಲಿಮಣೆ ವಿನ್ಯಾಸವನ್ನು ಹೊಂದಿವೆ.

೧. ನೀವು ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ, ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ನೇರವಾಗಿ ಟೈಪಿಸಲು ಸಾಧ್ಯವಿದೆ. ಇದರಲ್ಲಿ ಕಗಪಇನ್ಸ್‌ಸ್ಕ್ರಿಪ್ಟ್ಟ್ರಾನ್ಸ್‌ಲಿಟರೇಷನ್(ಲಿಪ್ಯಂತರಣ)  ಕೀಬೋರ್ಡ್‌ ಆಯ್ಕೆಗಳವೆ. ಎಕ್ಸ್‌ಟೆನ್ಷನ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ CTRL + M ಬಳಸಿ ಇದರಲ್ಲಿನ ಇತರೆ ಕೀಬೋರ್ಡ್ ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಇಂಗ್ಲೀಷ್ ಟೈಪಿಸಲು CTRL + M ಬಳಸಿ ಮತ್ತೆ ನಿಮ್ಮ ಸಿಸ್ಟಂ‌ನ ಮೂಲ/ನಿರ್ದಿಷ್ಟ ಕೀಬೋರ್ಡ್‌ಗೆ ಮರಳಬಹುದು. 

೨ . ಕನ್ನಡ ಸ್ಲೇಟ್: http://www.kannadaslate.com/

೩ . ಯಂತ್ರಂ: http://type.yanthram.com/kn/

೪ . ವೆಬ್ ದುನಿಯಾ: http://utilities.webdunia.com/kannada/transliteration.html

೫ . ಮಾನ್ಯುಸಾಫ್ಟ್: www.service.monusoft.com/KannadaTypePad.htm

೬ . ಪ್ರಮುಖ್: http://service.vishalon.net/pramukhtypepad.aspx

೭ . ಲಿಪಿಕಾರ್: www.lipikaar.com/editor/kannada

೮ . ಮೈ ಲ್ಯಾಂಗ್ವೇಜ್: www.mylanguages.org/kannada_phonetic_keyboard.php


೧೦. Gate2Home Kannada keyboard: http://gate2home.com/Kannada-Keyboard

೧೧. ಸುವರ್ಣನುಡಿ ಕೂಲ್ ಪ್ಯಾಡ್ :  http://www.suvarnanudi.com/main/koolpad.htm

ಮೇಲಿನ ಟೂಲ್ ಗಳಲ್ಲಿ ಕೆಲವು ಕೇವಲ ಅಕ್ಷರ ಟೈಪಿಸಲು ಮಾತ್ರ ಸೌಲಭ್ಯ ಕೊಟ್ಟರೆ, ಇನ್ನು ಕೆಲವು ಎಡಿಟಿಂಗ್ (ಅಕ್ಷರಗಳ ಬಣ್ಣ, ಗಾತ್ರ ಮುಂತಾದ ಬದಲಾವಣೆಗಳು) ಮಾಡಲು ಸಾಧ್ಯ ಮಾಡಿಕೊಡುತ್ತವೆ.

******

III. ಆಫೀಸಿನಲ್ಲೋ, ಮತ್ತೆಲ್ಲೋ ನಿಮ್ಮ ಕಂಪ್ಯೂಟರ್ ಗೆ ಯಾವ ಸಾಫ್ಟ್ ವೇರ್ ಅಳವಡಿಸಿಕೊಳ್ಳಲೂ ಅಡ್ಮಿನ್ ರೈಟ್ಸ್  ಅಥವಾ ಅನುಮತಿ ಇಲ್ಲ ಎಂದಾಗ ಮತ್ತು ಅಂತರಜಾಲ ಸಂಪರ್ಕ ಕೂಡ ಇಲ್ಲ ಎಂದಾಗ:

೧. ಪ್ರಮುಖ್ ಪ್ಯಾಡ್ ಡೌನ್ ಲೋಡ್ ಮಾಡಿಟ್ಟುಕೊಂಡಿದ್ದರೆ ಕನ್ನಡ ಟೈಪ್ ಮಾಡಬಹುದು:
http://www.vishalon.net/PramukhIME/PramukhTypePad.aspx

೨. ಪದ ತಂತ್ರಾಂಶZipped/Portable version ಕೂಡ ಬಳಸಬಹುದು: http://www.pada.pro/download/

****

೧. ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲು O.S.ನಲ್ಲೇ ಟೂಲ್ ಗಳು (iBus or SCIM) ಇವೆ.  ಹೇಗೆಂದು ತಿಳಿಯಲು ಇದನ್ನು ಓದಿ :
ಲಿನಕ್ಸ್ ನಲ್ಲಿ ನಮಗೆ ಬೇಕಾದ ಹಾಗೆ ಕೀಲಿಮಣೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವೂ ಇದೆ.  ಆದರೆ ಬೇರೆ ಬೇರೆ ರೀತಿಯ text editingಗೆ ಹೊರ ತಂತ್ರಾಂಶಗಳು ಬೇಕಾಗಬಹುದು.

೨. 'ಪದ' ತಂತ್ರಾಂಶದ ಲಿನಕ್ಸ್ ಆವೃತ್ತಿ ಅಳವಡಿಸಿಕೊಂಡು ಬರೆಯಬಹುದು: http://www.pada.pro/download/

Macintosh O.S.ನಲ್ಲಿ ಕನ್ನಡ ಸೇರಿಸುವ ಬಗ್ಗೆ ಇಲ್ಲಿ ಓದಿ:
www.imacusers.com/adding-kannada-support-to-mac-os-x


So....ಕನ್ನಡ ಟೈಪಿಂಗ್ ಕಷ್ಟ, ಕನ್ನಡ ಟೈಪ್ ಮಾಡೋಕೆ ಯಾವುದೂ ಸರಿಯಾದ ಟೂಲೇ ಇಲ್ಲ .. ಅದೂ ಇದೂ ಅಂತ ಯಾರೂ ನೆಪ ಹೇಳುವ ಹಾಗಿಲ್ಲ. ನಿಮಗ್ಯಾವುದಿಷ್ಟನೋ ಆ ಟೂಲ್  ಆಯ್ಕೆ ಮಾಡ್ಕೊಳ್ಳಿ. ಶುರು ಹಚ್ಕೊಳ್ಳಿ.. :)

****

ಕಂಪ್ಯೂಟರ್ ನಲ್ಲಿ ಕನ್ನಡ ಅಂದ್ರೆ ಬರೀ ಕನ್ನಡ ಟೈಪಿಸೋದು ಮಾತ್ರ ಅಲ್ಲ, ಇನ್ನೂ ಮಾಡಬೇಕಾಗಿರುವ ಬಹಳಷ್ಟು ಕೆಲಸಗಳಿವೆ, ನಾವು ಹಿಂದುಳಿದಿದ್ದೇವೆ ಅಂತ ಗಣಕತಜ್ಞ 'ಪವನಜ' ಅವರು ಯಾವಾಗಲೂ ಹೇಳ್ತಾ ಇರ್ತಾರೆ. ಈ ಬಗ್ಗೆ ಬರೆದಿದ್ದಾರೆ. ಅದು ಇಲ್ಲಿದೆ: ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು. ಕನ್ನಡದಲ್ಲಿ ಬರೆಯದೇ 'ಕಂಗ್ಲೀಷ್‍ನಲ್ಲಿ ಬರೆಯುವವರಿಗೆ ನಾವು ಕನ್ನಡದಲ್ಲಿ ಏಕೆ ಬರೆಯಬೇಕು ಎಂಬುದನ್ನೂ ವಿವರಿಸಿದ್ದಾರೆ, ಅದನ್ನು ಇಲ್ಲಿ ಓದಬಹುದು: ಕಂಗ್ಲೀಷ್ ಶೂರರಿಗೆ

=================================================
  • ಟ್ರಾನ್ಸ್ಲಿಟೆರೇಶನ್ (transliteration) = ಲಿಪ್ಯಂತರ = ಒಂದು ಭಾಷೆಯ ಲಿಪಿಯನ್ನು ಮತ್ತೊಂದು ಭಾಷೆಯ ಲಿಪಿಯಾಗಿಸುವುದು.  
  • ಫೊನೆಟಿಕ್(phonetic) = ಧ್ವನ್ಯಾತ್ಮಕ = ನಾವು ಹೇಗೆ ಮಾತಾಡುತ್ತೀವೋ ಹಾಗೆ ಬರೆಯುವುದು.
  • ಯುನಿಕೋಡ್ ಎಂದರೆ ಏನು ಎಂದು ತಿಳಿಯಲು ಇಲ್ಲಿ ಚಿಟುಕಿ.
=================================================
  • SMART PHONEಗಳಲ್ಲಿ ಕನ್ನಡ ಟೈಪಿಸುವ ಸೌಲಭ್ಯಗಳ ಬಗ್ಗೆ ಈ ಬರಹ ನೋಡಿ: Kannada Typing in  Smart phones
=================================================

ಕಂಪ್ಯೂಟರ್ (ವಿಂಡೋಸ್)ನಲ್ಲಿ ಕನ್ನಡ ತಂತ್ರಾಂಶ ಅಳವಡಿಕೆ ಮತ್ತು ಬಳಕೆ ಬಗ್ಗೆ ನೆರವು ಬೇಕಾದಲ್ಲಿ ಇಲ್ಲಿ ಕಾಮೆಂಟ್ ಮಾಡಿ ಕೇಳಬಹುದು ಅಥವಾ vikashegde82@gmail.com ವಿಳಾಸಕ್ಕೆ ಮಿಂಚೆ ಕಳಿಸಬಹುದು. ಸಾಧ್ಯವಾದ ಮಟ್ಟಿಗೆ ಉತ್ತರಿಸುತ್ತೇನೆ.

33 ಕಾಮೆಂಟ್‌ಗಳು:

ಸಂದೀಪ್ ಕಾಮತ್ ಹೇಳಿದರು...

ಬಹಳಷ್ಟು ಜನರಿಗೆ ಈ tutorial ಸಹಾಯವಾಗುತ್ತೆ.

ಶೀರ್ಶಿಕೆ ಇಂಗ್ಲೀಷ್ ನಲ್ಲಿದ್ದದ್ದು ಒಳ್ಳದಾಯ್ತ. ಗೂಗಲ್ ನಲ್ಲಿ ಎಲ್ಲರಿಗೂ ಸಿಗುತ್ತೆ ಸರ್ಶ್ ಮಾಡಿದ್ರೆ.

Harisha - ಹರೀಶ ಹೇಳಿದರು...

ಲಿನಕ್ಸಾಯಣಕ್ಕೆ ಲಿಂಕ್ ಕೊಟ್ಟಿದ್ರೆ ಇನ್ನೂ ಚೆನ್ನಾಗಿತ್ತು :|

ತೇಜಸ್ವಿನಿ ಹೆಗಡೆ ಹೇಳಿದರು...

ಚೆನ್ನಾಗಿದೆ.. ಮಾಹಿತಿಪೂರ್ಣ ಲೇಖನ.

ಅನಾಮಧೇಯ ಹೇಳಿದರು...

ತುಂಬಾ ಒಳ್ಳೆಯ ಮಾಹಿತಿ.... ಬಹುತೇಕ ಜನಕ್ಕೆ ಉಪಯೋಗ ಆಗುತ್ತೆ.. ವಿಕಾಸ`ವಾದ'ಕ್ಕೆ ಧನ್ಯ'ವಾದ'

Chaithrika ಹೇಳಿದರು...

ಇನ್ನೊಂದು ಮಾಹಿತಿ:
Macintosh ನಲ್ಲಿ Kannada.bundle ಅನ್ನು Keyboard Layout folder ಒಳಗೆ ಇಟ್ಟರೆ ಕನ್ನಡ typing ಸಾಧ್ಯವಾಗುತ್ತದೆ. ಈ bundle ಒಳಗೆ ಅಕ್ಷರಗಳಿಗೆ ಕೀಲಿಗಳನ್ನು ಹೊಂದಿಸಿದ XML ಇದೆ.

ರಾಘವೇಂದ್ರ ಜೋಶಿ ಹೇಳಿದರು...

ಒಂದು ಅತ್ಯುತ್ತಮ ಪಾಠ.
ಒಳ್ಳೆಯ ಪ್ರಯತ್ನ.ಇದು ಅಗತ್ಯವಾಗಿ ಬೇಕಾಗಿತ್ತು.
ಧನ್ಯವಾದಗಳು.
-RJ

Kanthi ಹೇಳಿದರು...

helpful informations.. Thanks..

ಮಧು ದೊಡ್ಡೇರಿ ಹೇಳಿದರು...

Very informative article.. Thanks Vikas...

vinayaka kodsara ಹೇಳಿದರು...

ಒಳ್ಳೆ ಮಾಹಿತಿಯುತ ಬರಹ ಕಣೊ. ಖಂಡಿತ ಈ ಬರಹದ ಅಗತ್ಯವಿತ್ತು. ಹೀಗೆ ಉತ್ತಮ ಬರಹಗಳನ್ನು ಬರಿಯುತ್ತಾ ಇರು..ಎಲ್ಲೆ ಇರು, ಹೇಗೆ ಇರು, ಎಂದೆಂದಿಗೂ ನೀ ಕನ್ನಡದವನಾಗಿರು!

Dr U B Pavanaja ಹೇಳಿದರು...

ಪಟ್ಟಿ ಚೆನ್ನಾಗಿದೆ. ಕೆಲವು ನನಗೂ ಗೊತ್ತಿರಲಿಲ್ಲ :)

-ಪವನಜ

veeresh savadi ಹೇಳಿದರು...

simply superb, Chamu. informative and brief. keep writing such articles.
thanks.

sunaath ಹೇಳಿದರು...

ವಿಕಾಸ,
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

Manjunatha Kollegala ಹೇಳಿದರು...

ಉತ್ತಮ ಮಾಹಿತಿ

Thontadarya ಹೇಳಿದರು...

ಮಾಹಿತಿಪೂರ್ಣವಾಗಿದೆ. ಕನ್ನಡ ಬರಹಗಾರರು ತಪ್ಪದೆ ಓದಬೇಕಾದ ಲೇಖನ.

Parisarapremi ಹೇಳಿದರು...

What a fine work Vikasa.. good good...

AntharangadaMaathugalu ಹೇಳಿದರು...

ದೊಡ್ಡ ಪಟ್ಟಿಯನ್ನೇ ಕೊಟ್ಟು ಬಿಟ್ಟಿದ್ದೀರಿ. ತುಂಬಾ ಉಪಯುಕ್ತ ಹಾಗೂ ಬೇಕಾಗಿದ್ದ ಮಾಹಿತಿ ಹಾಗೂ ಕೊಂಡಿಗಳು. ಧನ್ಯವಾದಗಳು ವಿಕಾಸ್...

ಶ್ಯಾಮಲ

Unknown ಹೇಳಿದರು...

ಕನ್ನಡ ಟೈಪಿಂಗ್ ಬಗ್ಗೆ ಇಲ್ಲಿ ಬರೆದಿರುವುದನ್ನು ಓದಿ ತುಂಬಾನೇ ಸಂತೋಷ ಆಯುತು. ತುಂಬಾನೇ ಚೆನ್ನಾಗಿದೆ ಮತ್ತು ಬಹಳ ಉಪಯುಕ್ತವಾಗಿದೆ.

CSMysore ಹೇಳಿದರು...

ತುಂಬಾ ಒಳ್ಳೆಯ ಮಾಹಿತಿ ಸಂಕಲನ. ಧನ್ಯವಾದಗಳು.

ದತ್ತಾತ್ರಿ ಹೆಚ್. ಎಂ. ಹೇಳಿದರು...

ತುಂಬಾ ಒಳ್ಳೆಯ ಸಂಕಲನ. ಧನ್ಯವಾದಗಳು.

CSMysore ಹೇಳಿದರು...

ತುಂಬಾ ಒಳ್ಳೆಯ ಸಂಕಲನ. ಧನ್ಯವಾದಗಳು.

ಅನಾಮಧೇಯ ಹೇಳಿದರು...

its really nice

Subrahmanya ಹೇಳಿದರು...

ಜೈ ಕನ್ನಡಮಾತೆ.

Prashanth Urala. G ಹೇಳಿದರು...

ಕನ್ನಡದಲ್ಲಿ ಬರೆಯಲು ಮತ್ತೊಂದು ಸುಲಭ ವಿಧಾನ Yanthramನಲ್ಲಿದೆ:

http://nannakanasu-chiguru.blogspot.com/2008/07/blog-post_11.html

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

ವಿ.ರಾ.ಹೆ. ಹೇಳಿದರು...

ಪ್ರತಿಕ್ರಯಿಸಿದ ಎಲ್ಲ ಓದುಗರಿಗೂ, ಗೆಳೆಯರಿಗೂ, ಹಿರಿಯರಿಗೂ ಧನ್ಯವಾದಗಳು.

@ಹರೀಶ, ಲಿನಕ್ಸಾಯಣದ ಕೊಂಡಿ ಸೇರಿಸಿದ್ದೇನೆ. ಥ್ಯಾಂಕ್ಸ್

@ಚೈತ್ರಿಕ, Macintosh ಬಗ್ಗೆ ಒಂದು ಕೊಂಡಿ ಸೇರಿಸಿದ್ದೇನೆ, ಅದರಲ್ಲಿ ನೀವು ಹೇಳಿರುವ ಮಾಹಿತಿ ಇದೆ. ಥ್ಯಾಂಕ್ಸ್

@ಪ್ರಶಾಂತ ಉರಾಳ, ಹೌದು, ಅದು ನನ್ನ ಮನಸಿನಲ್ಲಿತ್ತು. ಬರೆಯುವಾಗ ಬಿಟ್ಟು ಹೋಗಿತ್ತು. ಈಗ ಸೇರಿಸಿದ್ದೇನೆ. ಥ್ಯಾಂಕ್ಸ್.

ದುರಹಂಕಾರಿ ಹೇಳಿದರು...

ಸೂಪರ್ರೋ ರಂಗ, ಧನ್ಯವಾದ ಮತ್ತು ಅಭಿನಂದನೆಗಳು :)

ಪ್ರಶಾಂತ ಸೊರಟೂರ ಹೇಳಿದರು...

ವಿಕಾಸ್,
ತುಂಬಾ ಚೆನ್ನಾಗಿ ಮಾಹಿತಿಯನ್ನು ಒಗ್ಗೂಡಿಸಿ ಒಂದೆಡೆ ಹಾಕಿದ್ದೀರಿ :-)
ಹಲವರು ಗಣಕದಲ್ಲಿ ಕನ್ನಡವನ್ನೂ ಹೇಗೆ ಮೂಡಿಸುವುದು ಎಂದು ಕೇಳುವಾಗ, ನಿಮ್ಮ ಈ ಕೊಂಡಿಯು ನೆರವಿಗೆ ಬರುತ್ತೆ

Sharif ಹೇಳಿದರು...

ಮಾನ್ಯರೇ.,
ದಯವಿಟ್ಟು ಹಳೆಯ ಬೆರಳಚ್ಚು ಯಂತ್ರದ ಮಾದರಿಯಲ್ಲಿರುವ ಕೀಲಿಮಣೆ ವಿನ್ಯಾಸ ಹೊಂದಿರುವ ಗಣಕಯಂತ್ರದಲ್ಲಿ ಉಪಯೋಗಿಸಬಲ್ಲಂತಹ ಯಂತ್ರಾಂಶ ಇದ್ದರೇ ಕೊಂಡಿ ನೀಡಿ ಪುಣ್ಯ ಕಟ್ಟಿಕೊಳ್ಳಿ, ನಾನು ಹಿಂದೆ ಬಳಸುತ್ತಿದ್ದ ಬೆರಳಚ್ಚು ಯಂತ್ರದ ಮಾದರಿಯನ್ನು ಕಲಿತಿದ್ದು, ಇದನ್ನು ಗಣಕದಲ್ಲಿ ಉಪಯೋಗಿಸಲು ಅನುವಾಗಿಸುವ ಯಂತ್ರಾಂಶವನ್ನು ಹುಡುಕಿ ಹುಡುಕಿ ಸಾಕಾಗಿಹೋಗಿದೆ. ನಿಮ್ಮ ಲೇಖನದಲ್ಲಿ ಅದರ ಬಗ್ಗೆ ಉಲ್ಲೇಖಿಸಿರುವಿರಿ ಆದರೇ ಬೇರೆ ಮಾದರಿ ವಿನ್ಯಾಸಗಳನ್ನು ಅನುಷ್ಟಾಪಿಸಿಕೊಳ್ಳಲು ಕೊಟ್ಟಿರುವ ಕೊಂಡಿಯಂತೆ ಈ ವಿನ್ಯಾಸದ ಕೊಂಡಿಯನ್ನು ನೀಡಿರುವುದಿಲ್ಲ. ದಯವಿಟ್ಟು ಕೊಂಡಿ ನೀಡಿ.,

Dr U B Pavanaja ಹೇಳಿದರು...

@Sharif - ಮೈಕ್ರೋಸಾಫ್ಟ್ ಕಂಪೆನಿಯ ಭಾಷಾಇಂಡಿಯ ಜಾಲತಾಣದಿಂದ "Indic Input 2 ಕನ್ನಡ" ಡೌನ್‌ಲೋಡ್ ಮಾಡಿಕೊಳ್ಳಿ. ಅದರಲ್ಲಿ ಟೈಪ್‌ರೈಟರ್ ವಿನ್ಯಾಸ ಇದೆ..ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿಗೆ ಭೇಟಿ ನೀಡಿ - http://www.bhashaindia.com/Downloads/Pages/home.aspx

computer4all ಹೇಳಿದರು...

ಮೈಕ್ರೋಸಾಫ್ಟ್ ಕಂಪೆನಿಯ ಭಾಷಾಇಂಡಿಯ ಜಾಲತಾಣದಿಂದ "Indic Input 2 ಕನ್ನಡ"ದಲ್ಲಿ ಟೈಪ್‌ರೈಟರ್ ವಿನ್ಯಾಸ ಇದೆ. ಆದರೆ, ಅದರಲ್ಲಿ ತುಂಬಾ ವ್ಯತ್ಯಾಸವಿದೆ.ಸುರಭಿ ೨೦೦೦ದಲ್ಲಿ ಇರುವ ಕನ್ನಡ ಟೈಪಿಂಗ್ ಲೇಔಟ್ ಇರುವ ಯಾವುದಾದರು ಒಂದು ಅಪ್ಲಿಕೇಶನ್ ಸಲಹೆ ನೀಡಿ.
Manju,
Mndya

ವಿ.ರಾ.ಹೆ. ಹೇಳಿದರು...

ಮಂಜು ಅವರೇ, ಕ್ಷಮಿಸಿ ನನಗೆ ’ಸುರಭಿ’ ಬಗ್ಗೆ ಮಾಹಿತಿ ಇಲ್ಲ. ಕೆಲವು software specific ಕೀಬೋರ್ಡ್ ಗಳನ್ನು ಬಳಸುವುದಕ್ಕಿಂತ ಎಲ್ಲಾ ತಂತ್ರಾಂಶಗಳಲ್ಲೂ ಲಭ್ಯವಿರುವ standardized ಕೀಬೋರ್ಡ್ ಬಳಸುವುದನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ನನ್ನ ಸಲಹೆ.

Unknown ಹೇಳಿದರು...

ಥ್ಯಾಂಕ್ಸ್ ಸರ್... ನಿಜವಾಗಿಯೂ ನಾನು ತಾಂತ್ರಿಕವಾಗಿ ಆರು ವರ್ಷ ಹಿಂದಿದ್ದೇನೆ ಅಂತ ಇವಾಗ ಅರ್ಥವಾಗ್ತಿದೆ... ವಿಂಡೋಸ್ ಇಂಡಿಕ್ ಇನ್‌ಪುಟ್ ನನಗೆ ಹೆಚ್ಚು ಉಪಯೋಗಕರವಾಗಬಹುದು... ಡೌಟ್ ಬಂದ್ರೆ ಮತ್ತೆ ನಿಮಗೆ ಡಿಸ್ಟರ್ಬ್ ಮಾಡ್ತೇನೆ....��

ವಿಶ್ವನಾಥ ಹೇಳಿದರು...

ಕ್ರೋಮ್‍ನ ವಿಕಿ ಎಕ್ಸ್ಟೆನ್‍ಶನ್ ಬಹಳ ಚೆನ್ನಾಗಿದೆ. ವಿಕಿ ಸಂಪಾದಕರಿಗೆ ಸುಲಭ :-)

Unknown ಹೇಳಿದರು...

ಸರಳವಾದ ನಿರೂಪಣೆ ಸೊಗಸಾಗಿದೆ