ಸೋಮವಾರ, ಏಪ್ರಿಲ್ 20, 2020

ಕನ್ನಡ ಯುನಿಕೋಡ್ ಅಕ್ಷರಶೈಲಿ/ಫಾಂಟ್'ಗಳು - Kannada Unicode Fonts

ಕನ್ನಡದ ಹಲವು ಯುನಿಕೋಡ್ ಅಕ್ಷರ ಶೈಲಿಗಳು (ಫಾಂಟ್ಸ್) ಲಭ್ಯ ಇವೆ. ನನಗೆ ಗೊತ್ತಿರುವಷ್ಟು ಈ ಕೆಳಗೆ ಪಟ್ಟಿಮಾಡಿದ್ದೇನೆ. ಕೆಲವು ಫಾಂಟುಗಳು ಬೇರೆ ಫಾಂಟುಗಳ derived ಆವೃತ್ತಿಗಳಾದ್ದರಿಂದ ನೋಡಲು ಸ್ವಲ್ಪ ಒಂದೇ ತರ ಕಾಣುತ್ತವೆ. ಬಹುತೇಕ ಫಾಂಟುಗಳಲ್ಲಿ ಮೂರು  ಬಗೆ (ಸಾಮಾನ್ಯ, ಓರೆ, ದಪ್ಪ - Normal, Bolt, Italic ಮತ್ತು ಇವುಗಳ ಕಾಂಬಿನೇಶನ್) ಇವೆ.
'ಗೋದಾ', 'ವಾಗೀಶ' ಇವು ಸಂಪಿಗೆ ಮತ್ತು ಕೇದಗೆ ಫಾಂಟನ್ನು ಆಧರಿಸಿವೆ. ಅರ್ಥಾತ್ ಅವನ್ನು ಸುಧಾರಿಸಿದ ಫಾಂಟ್‌ಗಳು. ಇವುಗಳ ವಿಶೇಷವೆಂದರೆ ಇವುಗಳಲ್ಲಿ ಕನ್ನಡ ಲಿಪಿಯಲ್ಲಿ ಮಂತ್ರ, ವೇದ, ಸಂಸ್ಕೃತ ಶ್ಲೋಕಗಳನ್ನು ಬರೆಯಲು ಬೇಕಾದ ಚಿಹ್ನೆಗಳಿವೆ.

ಮೇಲಿನ ಎಲ್ಲಾ ಫಾಂಟುಗಳ ಡೌನ್ಲೋಡ್ ಕೊಂಡಿ, ಪರವಾನಗಿ (ಗೊತ್ತಾದರೆ) ಮುಂತಾದ ಹೆಚ್ಚಿನ ಮಾಹಿತಿಗಳನ್ನು ಮುಂದೆ ನವೀಕರಿಸುತ್ತೇನೆ.

4 ಕಾಮೆಂಟ್‌ಗಳು:

sunaath ಹೇಳಿದರು...

(೧)ಇಲ್ಲಿ ಕೊಟ್ಟಿರುವ unicode fontಗಳೆಲ್ಲವನ್ನೂ ಅಂತರಜಾಲಕ್ಕಾಗಿ ಬಳಸಬಹುದೆ?
(೨)ನಾನು ಒಂದು font ಬಳಸಿದಾಗ,ಅದು ಅಂತರಜಾಲದ ಮತ್ತೊಂದು ವೇದಿಕೆಯ fontಗೆ ತಾನೇ ಬದಲಾಗುತ್ತದೆಯೆ? ಉದಾಹರಣೆಗೆ ನಾನು ಬರಹ unicode ಬಳಸಿದ್ದೇನೆ ಎಂದಿಟ್ಟುಕೊಳ್ಳಿ. ನನ್ನ ಸ್ನೇಹಿತರ ಗಣಕದಲ್ಲಿ ಕೇವಲ ನುಡಿ font ಇದೆ. ಆವಾಗ ಏನಾಗುವುದು?

ವಿ.ರಾ.ಹೆ. ಹೇಳಿದರು...

ಅಂತರಜಾಲಕ್ಕೆ ಬಳಸಬಹುದು. ಯುನಿಕೋಡ್ ಫಾಂಟುಗಳು ಒಂದು ಅಂತರಜಾಲ ವೇದಿಕೆಯಿಂದ ಇನ್ನೊಂದಕ್ಕೆ ಏನೂ ಸಮಸ್ಯೆಯಾಗವುದಿಲ್ಲ. ನೀವು ಬರಹದ ಯುನಿಕೋಡ್ ಬಳಸಿ ಬರೆದಿದ್ದನ್ನು ನಿಮ್ಮ ಸ್ನೇಹಿತನ ಗಣಕದಲ್ಲಿ ತೆರೆದುನೋಡಿದಾಗ ಅದು ಅವರಲ್ಲಿರುವ ಫಾಂಟುಗಳ ಮೂಲಕ ಕಾಣಿಸುವುದು.

Dr U B Pavanaja ಹೇಳಿದರು...

ಉತ್ತಮ ಪಟ್ಟಿ. ಇವುಗಳ ಪರವಾನಗಿ ಏನು, ಇವು ಎಲ್ಲಿ ದೊರೆಯುತ್ತವೆ, ಡೌನ್‌ಲೋಡ್‌ಗೆ ಲಭ್ಯವಿದ್ದರೆ ಅದಕ್ಕೆ ಕೊಂಡಿ -ಇವಿಷ್ಟನ್ನೂ ನೀಡಿದ್ದರೆ ಇನ್ನೂ ಚೆನ್ನಾಗಿತ್ತು.

Dr U B Pavanaja ಹೇಳಿದರು...

ಇವುಗಳಲ್ಲಿ ಯಾವುವೆಲ್ಲ ಉಚಿತ, ಯಾವುದು ವಾಣಿಜ್ಯಕ್, ಡೌನ್‌ಲೋಟ್ ಮಾಡುವುದು ಹೇಗೆ, ಕೊಂಡಿ, ಎಲ್ಲ ನೀಡಿದ್ದರೆ ಚೆನ್ನಾಗಿತ್ತು.