ಶನಿವಾರ, ಅಕ್ಟೋಬರ್ 24, 2009

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)

ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !

ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.

ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!

ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ ಆಗಿರುವವರು, ಮದುವೆ ಮಹೂರ್ತ ಫಿಕ್ಸ್ ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.

ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.

ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.

ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ. ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!

ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .

ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!

55 ಕಾಮೆಂಟ್‌ಗಳು:

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ಹ್ಹೆ ಹ್ಹೆ..ಬೆಸ್ಟ್ ಆಫ್ ಲಕ್ಕೂ... ;-)

Unknown ಹೇಳಿದರು...

ವಿಕಾಸ್
ಬರಹ ಒಳ್ಳೆಯದಿದೆ ಎ೦ದರೆ ನಿಮ್ಮ ಅ೦ದರೆ ಹುಡುಗರ ಮನಸಿನ ತಳಮಳವನ್ನು ನಾನು ತಮಾಷೆ ಮಾಡಿದ ಹಾಗೆ ಆಗುತ್ತದೆ . ಹಾಗಾಗಿ ಬರಹದ ಬಗ್ಗೆ ನಾನು ಏನೂ ಹೇಳುವುದಿಲ್ಲ .
ಇದನ್ನು ಓದಿದ ಮೇಲೆ ಅನ್ನಿಸುತ್ತಾ ಇದೆ. ಹುಡುಗರು ಮದುವೆಯ ಬಗ್ಗೆ ಇಷ್ಟು ಯೋಚಿಸುತ್ತಾರೆಯೇ ?. ಹುಡುಗಿಯರು ಆದರೆ ತು೦ಬಾ ಯೋಚಿಸುತ್ತಾರೆ ಎ೦ದು ಗೊತ್ತು . ಹುಡುಗರ ಮನಸ್ಥಿತಿ ಬಗ್ಗೆ ತಿಳಿದ ಹಾಗೆ ಆಯಿತು.
ನಿಮಗೆ ಒಳ್ಳೆಯ ಹುಡುಗಿ ಸಿಗಲಿ ನಿಮ್ಮನ್ನು ಅರ್ಥ ಮಾಡಿ ಕೊ೦ಡು ನಿಮ್ಮ ಜೀವನದಲ್ಲಿ ಯಾವಾಗಲು ನೆರಳಾಗಿ ಹಾಗು ಜೀವನದಲ್ಲಿ ಬೆಳದಿ೦ಗಳಾಗಿ ಬರಲಿ ಎ೦ದು ತು೦ಬು ಹೃದಯದಿ೦ದ ಈ ಅಭಿಮಾನಿ ಗೆಳತಿ ಹಾರೈಸುತ್ತಾ ಇದ್ದಾಳೆ

Lakshmi Shashidhar Chaitanya ಹೇಳಿದರು...

I second roopa.

Me, Myself & I ಹೇಳಿದರು...

ಆತ್ಮೀಯ

ಮುಂದಿನ ಹದಿನೈದು ದಿನಗಳಲ್ಲಿ ನನ್ನ ಇಬ್ಬರು ಸ್ನೇಹಿತರ ಮದ್ವೆ ಫಿಕ್ಸ್ ಆಗಿದೆ.
ಹದಿನೈದು ದಿನದ ಹಿಂದೆ ಒಬ್ಬ ಮಾಜಿ ಸಹೋದ್ಯೋಗಿ ಮದ್ವೆ ಆದ್ಳು.

ಮೊನ್ನೆ ಇನ್ನೊಬ್ರು ಬರ್ದಿದ್ರು, ಮುಂಜಾನೆಯ ಕನಸಿನ ಬಗ್ಗೆ...ಅವ್ರ ಬರಹ ನೋಡಿ ಅವರ ಬಗ್ಗೆ ಈ ಮೇಲೆ ಇಬ್ರು (ರೂಪ, ಲಕ್ಷ್ಮಿ) ಹೇಳಿದ್ದಾರಲ್ಲಾ ನಂಗೂ ಹಾಗೆ ಅನ್ಸಿತ್ತು. ಆದ್ರೆ ನಿಮ್ಮ ಬರಹ ಚೆನ್ನಾಗಿದೆ. ಒಂದ್ರೀತಿ ಸಂಶೋದನೆ ವಿಷ್ಯ ಇದ್ದಂಗಿದೆ.

ಸಂಶೋದನೆಗೆ ಜಯವಾಗಲಿ.

Parisarapremi ಹೇಳಿದರು...

ಏನ್ ಮಾಡೋದು, ಏನೇನು ಅನುಭವಿಸಬೇಕೋ ಅನುಭವಿಸಲೇ ಬೇಕು ಬಿಡಿ! ಇರೋದು ಒಂದೇ ಬದುಕು... ಸಮಾಧಾನ ಮಾಡ್ಕೊಳೀಪ್ಪ.. ;-) ;-)

jomon varghese ಹೇಳಿದರು...

ಸೂಪರ್‌ ಹೆಡ್‌ಲೈನ್‌. ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಅನ್ನುವ ಆರೋಪ ಯಾಕೋ.. ಸ್ವಲ್ಪ ಡೇಂಜರಸ್‌...:)

ಗೌತಮ್ ಹೆಗಡೆ ಹೇಳಿದರು...

:):):)

Harisha - ಹರೀಶ ಹೇಳಿದರು...

ಇಷ್ಟೆಲ್ಲ ಬರೆದು ನೀನು ಯಾವ category ಅಂತ್ಲೇ ಬರ್ಯಲ್ಯಲೋ!

ಚಿತ್ರಾ ಹೇಳಿದರು...

ಹ್ಮಂ ವಿಕಾಸ .....
ಚಂದ ಬರದ್ದೆ. ಹುಡುಗರ ಮನಸ್ಸಿನ ತಳಮಳ -ಗೊಂದಲ .. . ಎಲ್ಲವೂ ! ಹಿಂದಿಯಲ್ಲಿ ಒಂದು
ಗಾದೆ ಮಾತು ಇದ್ದು .. " शादी का लड्डू .. जो भी खाए वो पछताए , जो ना खाए वो भी पछताए ! " (ಮದುವೆಯೆಂಬ ಲಾಡು ತಿನ್ದವನೂ ಪರಿತಪಿಸುತ್ತಾನೆ , ತಿನ್ನದವನೂ ಪರಿತಪಿಸುತ್ತಾನೆ )
ಹಾಗೆ ಈ ಕತೆ. ನೀನೇನೂ ಯೋಚನೆ ಮಾಡಡ ಬಿಡು. ಒಳ್ಳೆ ಹುಡುಗಿನೇ ಸಿಗ್ತು ನಿಂಗೆ !
ಅಂದಹಾಗೆ, ಹರೀಶನ ಜೊತೆ ನಾನೂ ಕೇಳ್ತಿದ್ದಿ.... ನೀ ಯಾವ category ಲಿ ಇದ್ದೇ ಅಂತ ?

ಶ್ರೀನಿಧಿ.ಡಿ.ಎಸ್ ಹೇಳಿದರು...

:)ಇದೊಂತರಾ ಭಾರೀ ಕಾಂಪ್ಲಿಕೇಟೆದ್ ವಿಶ್ಯ ಅಂತೂ ಹೌದು ನೋಡು.

Sushrutha Dodderi ಹೇಳಿದರು...

Beautiful writeup dude! ನನ್ನ ತಳಮಳಗಳನ್ನೇ ನೀನು ಬರೆದ ಹಾಗಿದೆ. :-)

ಆದರೆ ನನ್ನ ಸಮಸ್ಯೆ ಅಂದ್ರೆ, ನನ್ನ ಫ್ರೆಂಡ್ಸ್ ಎಲ್ಲರೂ ನನಗಿಂತ 2-3 ವರ್ಷ ದೊಡ್ಡವರು. ಅವ್ರೆಲ್ಲ ಈ ವರ್ಷ ಇಲ್ಲಾ ಮುಂದಿನ್ ವರ್ಷ ಮದ್ವೆ ಆಗ್ತಿದಾರೆ. ಒಂಥರಾ ಬೇಜಾರು, ಒಂಥರಾ ಟೆನ್ಷನ್ನು, ಒಂಥರಾ ಏನೋ ಒಂಥರಾ.. :)

ರಂಜನಾ ಹೆಗ್ಡೆ ಹೇಳಿದರು...

ಹಃ ಹಃ. ಚನ್ನಾಗಿ ಬರದ್ದೆ.
ನಮ್ಮ ಹುಡುಗೀರದ್ದು ಇನ್ನು ತಲೆ ಬಿಸಿ. ಎಂತವನು ಸಿಕ್ತ್ನೋ, ಎಂತಾ ಮನೆ ಸಿಕ್ತೋ ಅತ್ತೆ ಮಾವ ಹೆಂಗೆ ಇರ್ತ್ವೋ ಹಿಂಗೆ ನಾನಾ ರೀತಿ...
ಒಟ್ಟಿನಲ್ಲಿ ಮದ್ವೆ ಅಂದ್ರೆ ತಲೆಬಿಸಿ.

anyways all the best.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕ್ಸ್,

ಹ್ಮ್ಂ ಅಂತೂ ನೀನು ನಾಲ್ಕನೆಯ ಕೆಟಗರಿದೆ ಸೇರಿದವನು ಅಂತಾಯ್ತು... ಸರಿ. ಒಳ್ಳೇದಾಗ್ಲೀ.. ನಿನ್ನ ಎಲ್ಲಾ ಗೊಂದಲಗಳಿಗೂ ಸೂಕ್ತ ಪರಿಹಾರ ಆದಷ್ಟೂ ಬೇಗ ಸಿಕ್ಕಿ ನೀನೂ ಮೊದಲನೆಯ ದರ್ಜೆಯಲ್ಲೇ ಉತ್ತೀರ್ಣನಾಗುವಂತಾಗಲೆಂದು ಹಾರೈಸುವೆ :)

ಅಂದಹಾಗೆ "ಒಳ್ಳೆಯ" ಹುಡುಗಿ ಅಂದರೆ ಏನರ್ಥ? ಒಳ್ಳೆಯ ಎನ್ನುವ ಪದಕ್ಕೆ ಏನು ಮಾನದಂಡ ಅಂತ ನನ್ನ ಹತ್ತಿರ ಯಾರೋ ಎಂದೋ ಕೇಳಿದ್ದರು. ನೀನೂ ಇಲ್ಲಿ ಅದನ್ನು ಹೇಳಿದ್ದೀಯ. ಒಳ್ಳೆಯ ಹುಡುಗಿಯ ಹುಡುಕಲು ಮಾನದಂಡವೇನು? :-p :)

ಅನಿಕೇತನ ಸುನಿಲ್ ಹೇಳಿದರು...

Good One Vikaas :-)
Hudugeera talamalagala baggeyu yaaradru baribaarde? :-)
Sunil.

ಶೆಟ್ಟರು (Shettaru) ಹೇಳಿದರು...

ವಿಕಾಸ್,

ನನಗೂ ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!

ಇನ್ನೊಂದೆ ತಿಂಗಳು ಉಳಿದಿರೋದು

-ಶೆಟ್ಟರು

ಸುಪ್ತದೀಪ್ತಿ ಹೇಳಿದರು...

ಓಯ್ ಹೋಯ್ ಹೋಯ್... ಇಲ್ಲೆಲ್ಲ ಕಳ್ಕೊಳ್ಳೋ ಮಾತು ನಡೀತಿದೆ. ಹಾಗಾದ್ರೆ ಗಳಿಸ್ಕೊಳ್ಳೋರ್ ಯಾರು? ಎಲ್ರೂ ಉಳಿಸ್ಕೊಳ್ಳೋರ್ ಆಗ್ಬೇಕಪ್ಪ; ಅದು ನನ್ನ ಹಾರೈಕೆ.

ವಿಕ್ಕಿ, ನಿನ್ ತಲೆ ಒಳಗೆ ಏನ್ ಹುಳ ಕೊರೀತಿದೆ ಅನ್ನೋದು ಗೊತ್ತಾಯ್ತ್ ಬಿಡು. ಅಂತೂ ‘ಒಳ್ಳೆಯ’ ಹುಡುಗೀನೇ ನಿಂಗೂ ಸಿಗ್ಲಿ ಅಂತನೂ ಹಾರೈಸ್ತೇನೆ, ಆಯ್ತಾ?

ರಾಜೀವ ಹೇಳಿದರು...

ಎದುರಿಸಿ ಹೋರಾಡುವವರು ಇದೆಲ್ಲಾ ಒಂದು ಪರೀಕ್ಷೆ ಎಂದು ಹೇಳುತ್ತಾರೆ. ಎದುರಿಸದಿರುವವರು ಎಲ್ಲಾ ವಿಧಿ ಎನ್ನುತ್ತಾರೆ. ತಿಳಿದವರು, ಎಲ್ಲಾ ಆ ನಾರಾಯಣನ ಲೀಲೆ ಎಂದು ಹೇಳುತ್ತಾರೆ. ತಿಳಿದೂ ತಿಳಿಯದವರು ಎಲ್ಲಾ ಮಾಯೆ ಎನ್ನುತ್ತಾರೆ. ನಾನು ಯಾರ ಮಾತನ್ನೂ ಸಧ್ಯಕ್ಕೆ ಕೇಳುವುದಿಲ್ಲ. ಮೊದಲೇ ಗೊಂದಲಮಯವಾಗಿದೆ. ಇನ್ನು ಮಧುವೆಯ ವಿಚಾರದಲ್ಲಿ ಉತ್ತರ ಹೂಡುಕಲು ಹೊರಟರೆ, ಈ ಗೊಂದಲಕ್ಕೆ ಗೊಬ್ಬರ ಹಾಕಿ ಬೆಳೆಸಿದಂತಾಗುತ್ತದೆ. ನಾನು ನಿಮ್ಮ ಕಾಟೆಗರಿನೇ. ಸಧ್ಯಕ್ಕೆ ನೋ ಕಮಿಟ್ಮೆಂಟ್ಸ್ ಓನ್ಲಿ ಕಾಮ್ಪ್ಲಿಮೆಂಟ್ಸ್.

ಅನಾಮಧೇಯ ಹೇಳಿದರು...

"ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ"
:)

ಬಾಲು ಹೇಳಿದರು...

ಹೌದು ಮಾರಾಯ ಹುಡುಗರು ವಯಸ್ಸಿಗೆ ಬಂದಿದ್ದಾರೆ. ನನ್ನ ಓರಿಗೆಯ ಕೆಲವರು ಸೋಲ್ಡ್ ಔಟ್ ಆಗ್ತಾ ಇದ್ದಾರೆ.

ಇದರ ಬಗ್ಗೆ ನಂದೇನು ತಕರಾರಿಲ್ಲ.. ಆದ್ರೆ ಅವರೆಲ್ಲ ಮದುವೆ ಆಗ್ತಾ ಇದ್ದಾರೆ ಅಂತ ನಂ ಅಪ್ಪ ಅಮ್ಮಂಗೆ ಗೊತ್ತಾಗಬಾರದು ಅಷ್ಟೇ!! :)

ಬಸವರಾಜ ಹೇಳಿದರು...

ಹೌದು ಮಹರಾಯ!! ನಮ್ಮ ಹುಡ್ಗರ ಮನೆ ಟ್ರಿಪ್ ಜಾಸ್ತಿಯಾಗಿವೆ.
ಫೋನ್ನಲ್ಲೂ ಬ್ಯುಸಿಯಾಗಿದ್ದರೆ!! ಮನೇಲಿ - 'ನೋಡು ನಿನ್ನ ಫ್ರೆಂಡ್ಸ್
ಎಲ್ಲಾ ಮದವೆಯಾಗತಿದ್ದಾರೆ,' ಹಿಂಗ ಶುರು ಆಗುತ್ತೆ ಲೆಕ್ಚರ್ ನಂಗೆ.

ಭಂಗವತಾ ಯಾಕಾದ್ರೂ ವಯಸ್ಸಯಾತೋ?? ಅರಾಮಾಗಿತ್ತೋ
ಜೀವನ ಇಲ್ಲಿವರಗೆ..

ranjith ಹೇಳಿದರು...

ಚಂದದ ಬರಹ. ತಳಮಳ, ಕಳವಳಗಳು ವಯಸ್ಸಿಗೆ ಬಂದ ಹುಡುಗರ ತುಂಟತನದಿಂದ ರಸವತ್ತಾಗಿ ಬಣ್ಣಿಸಲ್ಪಟ್ಟಿದೆ.
ಖುಷಿ ಕೊಡ್ತು ಈ ಬರಹ.

Hema Powar ಹೇಳಿದರು...

ಮಜವಾಗಿದೆ, ಚೆನ್ನಾಗಿ ಬರ್ದಿದ್ದೀರಿ. ಜೋಮನ್ ಹೇಳಿದ ಹಾಗೆ ಆ ಸಾಲು ಸ್ವಲ್ಪ ಡೇಂಜರಸ್, ಯಾವ್ದಕ್ಕು ನಿಮ್ಮ ವಾರಗೆಯ ಹುಡುಗಿಯರ ಕೈಲಿದನ್ನ ಓದಿಸ್ಬೇಡಿ ಕೆನ್ನೆ ಊದತ್ತೆ :-)


ಹೇಮ ಪವಾರ್

Unknown ಹೇಳಿದರು...

Olle Laykiddoooooooo

ವಿ.ರಾ.ಹೆ. ಹೇಳಿದರು...

ಪೂರ್ಣಿಮಾ, ಥ್ಯಾಂಕ್ಯೂ..;-)

ರೂಪಾ, ನಿಮ್ಮ ತುಂಬು ಹೃದಯದ ಹಾರೈಕೆಗೆ ನನ್ನ ತುಂಬು ಹೃದಯದ ಧನ್ಯವಾದಗಳು.

Laxmi, --same as above-- :)

ಲೋದ್ಯಾಶಿ, ಸಂಶೋಧನೆ ಏನಿಲ್ಲ ಸಾರ್, observation ಅಷ್ಟೆ. ನವೆಂಬರ್ ತಿಂಗಳಿನಲ್ಲಿ ನನ್ನ ೮ ಜನ ಫ್ರೆಂಡ್ಸ್ ಮದುವೆ ಆಗ್ತಿದ್ದಾರೆ!!

ಪರಿಸರಪ್ರೇಮಿಗಳೇ, ಹಂಗಂತೀರಾ? ಓ.ಕೆ , ಓ.ಕೆ :-)

ಜೋಮನ್, ವಾಸ್ತವ ಸ್ಥಿತಿ ಹಾಗಿರೋದ್ರಿಂದ ನಾವು defend ಮಾಡ್ಕೋಬೋದು ಬಿಡಿ .

ಗೌತಮ್, :)

ಹರೀಶ, ಅದೆಲ್ಲಾ ಬರೆದರೆ ಶೇರ್ ವಾಲ್ಯೂ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇರತ್ತೆ! :)

ಚಿತ್ರಾ, ಗಾದೆ ಚೋಲೋ ಇದ್ದು, ನಿಮ್ಮ್ ಹಾರೈಕೆಗೆ ಥ್ಯಾಂಕ್ಸ್, ಕೆಟಗರಿ ವಿಷಯ ಮೇಲೆ ಬರದ್ದಿ :)

ಶ್ರೀನಿಧಿ, ಹ್ಮ್.. ಹೌದು, ನೀವೂ ಕೂಡ ಕ್ಯೂದಲ್ಲಿದ್ದೀರಲ್ಲ.

ವಿ.ರಾ.ಹೆ. ಹೇಳಿದರು...

ದೊಡ್ಡೇರಿ, ಥ್ಯಾಂಕ್ಸ್, ಅವ್ರದ್ದೆಲ್ಲಾ ಆಗೋಗ್ಲಿ, ನೀನು ಇನ್ನೆರಡ್ಮೂರು ವರ್ಷ ಒಂಥರಾ ಒಂಥರಾ ಮಾಡ್ಕಬೇಡ ಸದ್ಯಕ್ಕೆ.

ರಂಜನಾ, ಅಯ್ಯೋ ಹುಡುಗೀರ ತಳಮಳಕ್ಕೇನೂ ಕೊರತೆ ಇಲ್ಲ ಬಿಡಿ. ನನಗಿಂತ ಮೊದಲು ನಿಮಗೆ all the best.

ತೇಜಸ್ವಿನಿ, thanx you, ಒಳ್ಳೆ ಹುಡುಗಿಗೆ ಇಂಥದ್ದೇ ಅಂತ ಮಾನದಂಡ ಏನಿಲ್ಲ. ಎಲ್ಲಾ ವೈಯಕ್ತಿಕ ಅಭಿಪ್ರಾಯಗಳು.
ಆದ್ರೂ ಒಳ್ಳೇ ಹುಡುಗಿ ಅಂದ್ರೆ .....ತೇಜಕ್ಕನ ತರಹ ಅನ್ನಬಹುದೇನೋ! (but this has to be approved by Ramakrishna bhava :D )

ಅನಿಕೇತನ, ಹುಡ್ಗೀರು ಬರೆದಿದ್ದೆಲ್ಲಾ ತಳಮಳಗಳ ತರವೇ ಇರತ್ತೆ ಅಂದ್ರೆ ನನ್ಮೇಲೆ ಎಲ್ರೂ ಸಿಟ್ಟು ಮಾಡ್ಕೋತ್ತಾರೇನೋ ಅಲ್ವಾ? :)

ಶೆಟ್ಟರು, ಆಹ್, ಒಂದೇ ತಿಂಗಳು.! ಕಂಗ್ರಾಟ್ಸ್ ಸಾರ್.
ನಿಮ್ ಟೆನ್ಶನ್ ಮುಗಿದು ಆಮೇಲೆ ಬೇರೆ ತರದ್ದೆ ಟೆನ್ಶನ್ ಶುರುವಾಗತ್ತೆ.

ವಿ.ರಾ.ಹೆ. ಹೇಳಿದರು...

ಸುಪ್ತದೀಪ್ತಿ ಚಿಕ್ಕಿ, ಕಳ್ಕೊಂಡೂ ಪಡ್ಕೊಳ್ಳೋದೇ ಇದರ ವಿಶೇಷತೆ ಅನ್ನಿಸತ್ತೆ. thank you for ur wishes :)


ರಾಜೀವ, ಹೌದು, ಸಖತ್ತಾಗಿ ಹೇಳಿದ್ದೀರ. ನೀವು ನಮ್ ಕೆಟಗರಿನೇ ಸದ್ಯಕ್ಕೆ. ಗುಡ್ .


creatam, :)

ಬಾಲು, ನಾನೇ ನಿಮ್ಮನೆಗೆ ಫೋನ್ ಮಾಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ. ಏನಂತೀಯಾ?

ಬಸವರಾಜ್, ಯಾಕ್ ಅಷ್ಟು ಬೇಜಾರ್ ಮಾಡ್ಕೋತೀರಿ? ನೀವ್ ಆಗ್ಬಿಡ್ರಲಾ ಅತ್ಲಾಗಿ :)

ಹೇಮಾ, ಹಂಗಂತೀರಾ? ಓ.ಕೆ. ಹುಷಾರಾಗಿರ್ತೀನಿ. thanx

ರಂಜಿತ್, ಶ್ರೀ.ಶಂ, ಥ್ಯಾಂಕ್ಯೂ...

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ವಿಕಾಸ್,
ಸೂಪರ್!!!!!!!!!!
ಈಗ ತಾನೇ ಗೆಳೆಯರೆಲ್ಲ ಇದೇ ಮಾತಾಡ್ತಾ ಕುಳಿತಿದ್ವಿ, ಅದನ್ನೇ ಇಲ್ಲಿ ಕೀಲಿಸಿದಂತಿದೆ, ಹುಡುಗರ ಮನದ ತಳಮಳಕ್ಕೆ ಸ್ಪಷ್ಟ ಅಕ್ಷರ ರೂಪ ಕೊಟ್ಟಿದ್ದೀರಿ.

ಅನಾಮಧೇಯ ಹೇಳಿದರು...

It's really Practical.....
Rajesha, Rajashthana...

Krishna Devanur R ಹೇಳಿದರು...

ಸಖತ್ ಬರಹ.ಚೆನ್ನಾಗಿ ಬರೆದಿರುವಿರಿ :-)

ವಸಂತ ಹೇಳಿದರು...

ಸಕತ್ ಆಗಿದೆ ವಿಕಾಸ್.
ಒಂತರ ನನ್ನ ಮನಸ್ಸಿನ ತಳಮಳಾನು ಇದೇನೇ ;)

ಸಧ್ಯಕ್ಕೆ ತಂಗಿಗೆ ನೋಡ್ತಾ ಇದ್ರು, ಸೋ ಇನ್ನೊಂದು ಸ್ವಲ್ಪ ಸಮಯ ಫ್ರೀಡಂ ಇದೆ.. ಆಮೇಲೆ ಯಾವ ಪುಣ್ಯಾತಗಿತ್ತಿ ಸಿಗ್ತಾಳೋ ದೇವರೇ ಬಲ್ಲ :)

ಈ ವರ್ಷಾನೇ ನಿಮ್ ಮದುವೆ ಏನಾದ್ರೂ ಆದ್ರೆ, ಆಮೇಲೆ ಒಂದು ದಿನ ಸಿಗೋಣ, ಸ್ವಲ್ಪ ಹುಡುಗಿ ಹುಡುಕೋ ವಿಷ್ಯದಲ್ಲಿ ತಗೋಬೇಕಿರೋ ಕೇರ್ ಬಗ್ಗೆ ಹೇಳುವಿರಂತೆ :)

ಚಿನ್ಮಯ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
chinmay ಹೇಳಿದರು...

ಚೆನ್ನಾಗಿದೆ! ತಳಮಳದ ವಿವಿದ ರೂಪಗಳನ್ನ ಚೆನ್ನಾಗಿ ಹೇಳಿದಿರ :)

simpleton ಹೇಳಿದರು...

ವಿಕಾಸ್ ತುಂಬಾ ಚೆನ್ನಾಗಿ ವಿವರಿಸಿದಿರ, ನಾನು ಕೂಡ ಇದೆ ದೋಣಿಯಲಿ ಹೋಗುತ ಇದೆನಿ.

ಅನಾಮಧೇಯ ಹೇಳಿದರು...

sakath guru!

raviraj ಹೇಳಿದರು...

vikas, nanna kateyanne yake baradiddiri ? lekhana (anubhava) chennagide...

ಅನಾಮಧೇಯ ಹೇಳಿದರು...

:)
~ Che

ವಿ.ರಾ.ಹೆ. ಹೇಳಿದರು...

@ರಾಜೇಶ್, ಥ್ಯಾಂಕ್ಸ್, ಈಗ ಹುಡುಗರು ಸೇರಿದಾಗಲೆಲ್ಲಾ ಈ ಮಾತುಗಳು ಬಂದೇ ಬರುತ್ತವೆ ಅಲ್ವಾ :)

@ರಾಜೇಶ್ ರಾಜಸ್ಥಾನ, @ಕೃಷ್ಟ ದೇವನೂರು,
ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

@ವಸಂತ, ಓ.ಕೆ. ಸಾರ್.. ಆದ್ರೂ ಅದೆಷ್ಟೇ ಹೇಳಿಸ್ಕೊಂಡು ಕೇಳ್ಕೊಂಡು ಆದ್ರೂ ಕೊನೆಗೆ ಏನ್ ಬೇಕಾದ್ರು ಆಗ್ಬೋದು. ನಂದಂತೂ ಸದ್ಯಕ್ಕಿಲ್ಲ ಬಿಡಿ :)

@ಚಿನ್ಮಯ, @simpleton,
thanx

@ರವಿರಾಜ್, ಹ್ಹ್ಹ ಹ್ಹ. ಹಾಗಿದ್ರೆ ಇದು ಎಲ್ಲರ ಕತೆ ಅಂತೀರಾ? :)

@Che, :)

kalash_siya ಹೇಳಿದರು...

Vikas very good posting.... so ur in which category?
I really missed this part of life cha and uppit programme ...love marriage aaitu :)

Siri ಹೇಳಿದರು...

ನಗು ಬಂತು. ಚನಾಗ್ ಅನಲೈಸ್ ಮಾಡಿದಿಯ.. ನಿನ್ನ ತುಂಟ ಮನಸ್ಸಿಗೆ ಈ ಬರಹಾನೂ ಸಾಕ್ಷಿ ...

ಅನಾಮಧೇಯ ಹೇಳಿದರು...

This very nicely return, you have given the inner feelings of guys who are going to get marry.. superb maga

Veena Shivanna ಹೇಳಿದರು...

vikas, tumba chennagide. nanna vayasnoru aunty aagogthaaare anno line odi biddu biddu nakkiddaytu. istond yochane maaDtharenri hudgru maduve bagge, yaare maduve aadru nanna mathe naDiyodu annovrne tumba nodirodu naanu including my father. nammoru astondenu saadslilla andrunu kelvomme haage annisutte.
naavu hudgeere vaasi, appa amma nodi mechchida hudganna opkondu maduve aagi, enidru badlavaNe aagode alva anno mansinda jeevanada next phase shuru maadtheevi nodi. heege heeLthaa heLthaa ee 25 bandre 7 varsha aagoytu, aadru ninne monne maduve aada tara ide.
chennagide article, VK nalli barbahudu nodi swalpa innu jaasti readers talupabahudu.

Unknown ಹೇಳಿದರು...

Namaskara Vikas :) E blog nange forward agi bantu ., yaarappa istondu chenagi bardirodhu antha link open maadhde.., sikkapatte khushi aithu neevu antha gothad mele., tumba chengaide., ultimate writing.., nimge heege blog maadakke bido olle hudugi sigali antha haaraistini :)

Chandru ಹೇಳಿದರು...

ಬಾಲು ಈ ಬ್ಲಾಗ್ ಪರಿಚಯಿಸದ್ದಕ್ಕೆ ಥ್ಯಾಂಕ್ಸ್ ..!! ಓದುತ್ತ ಓದುತ್ತ ಮನದಲ್ಲೇ ನಗುತ್ತ ನಾನು ಯಾವ catagoryಲಿ ಇದೀನಿ ಅಂತಾನೆ ಮರೆತು ಹೋಯ್ತು... ವಯಸ್ಸಿಗೆ ಬಂದ ಹುಡುಗರು ಕಡ್ಡಾಯವಾಗಿ ನೋಡಲೇ ಬೇಕಾದ ಲೇಖನ!!... ವಿಕಾಸ್ ಚಿಂತೆ ಬೇಡ ಭದ್ರಾವತಿಯಲ್ಲಿ ನಿಂಗೆ ಒಳ್ಳೆ ಹುಡಿಗೆನೇ ಕಾದಿರಬಹುದು.. ನಿಮಗೆ ಅವಳಿಂದ ಬೇಗ ಮೊದಲ catagary ಗೆ ಬಡ್ತಿ ಸಿಗಲೆಂದು ಆಶಿಸುವೆ,,, ಹಾ ಮರೆತಿದ್ದೆ ನನ್ನದು ೪ನೆ catagary !!!

ಆಲಾಪಿನಿ ಹೇಳಿದರು...

ಅಣ್ಣೋ..... ನಮಸ್ಕಾರ. ಮಾನ + ದಂಡ ಹೇಳಿದ್ರೆ ನಮಗೂ ಹುಡುಕೋದಕ್ಕೆ ಅನುಕೂಲ ಆಗತ್ತೆ. ಅಣ್ಣನ ಓವರ್‌ಟೇಕ್ ಮಾಡೋ ಪ್ಲಾನಾ?

ವಿ.ರಾ.ಹೆ. ಹೇಳಿದರು...

ಕಲಶ್, ಥ್ಯಾಂಕ್ಯೂ ಸರ್. ನಿಮ್ದೂ ಒಂಥರಾ ಸೂಪರ್ ಎಕ್ಸ್ ಪೀರಿಯನ್ಸ್ ಬಿಡಿ.

ಸಿರಿ, ಥ್ಯಾಂಕ್ಸ್ ಹೇಳ್ಬೇಕಾ? :)

ಅನಾನಿಮಸ್, ಥ್ಯಾಂಕ್ಸ್ ಮಗಾ !

ವೀಣಾ, ಥ್ಯಾಂಕ್ಸ್.. ನೀವು ಸುಮ್ನೆ ಹಾಗೆಲ್ಲಾ ಅನ್ಕೊತೀರ. ನಮ್ ಕಷ್ಟ ನಮಗೇ ಗೊತ್ತು. ಈಗಿನ್ ಹುಡುಗ್ರು ಹಾಗೆಲ್ಲಾ ಇಲ್ಲ. ಏನೋ ಸ್ವಲ್ಪ ಹುಡುಗಿ ಕಡೆಯಿಂದ ಒಳ್ಳೇ ಗುಣ expect ಮಾಡ್ತೀವಷ್ಟೆ.

ಶ್ರೀಕಾಂತ, ಚಂದ್ರು, ಹ್ಹ ಹ್ಹ.. ನಿಮ್ಮ ಹಾರೈಕೆಗೆ ಥ್ಯಾಂಕ್ಸ್ . ನೋಡೋಣ ಏನಾಗತ್ತೋ ಅಂತ. ಇನ್ನೂ ತಡ ಇದೆ ಹೆಂಗೂ ! ಯಾರೋ, ಯಾವೂರೋ, ಏನ್ ಕಥೆನೋ :) ಬರ್ತಾ ಇರಿ..

ಆಲಾಪಿನಿ, ಅಕ್ಕಾ.... ನಮಸ್ಕಾರ. ಏನ್ ’ಮಾನ’ ಹೇಳಿದರೂ ಅದು ’ದಂಡ’ನೇ ಬಿಡಿ. :) nO overtaking, just waiting...

Chaithrika ಹೇಳಿದರು...

ಹ್ಹ ಹ್ಹ ಹ್ಹಾ! ಚೆನ್ನಾಗಿದೆ ಬರಹ. 90% ಹುಡುಗಿಯರ ಮನೆಯಲ್ಲಿ ಉಪ್ಪಿಟ್ಟೇ. ನಮ್ಮ ಗೆಳೆಯರೊಬ್ಬರು ಈ ಉಪ್ಪಿಟ್ಟಿಗೆ ಎಷ್ಟು ರೋಸಿ ಹೋಗಿದ್ದರೆಂದರೆ, "ಉಪ್ಪಿಟ್ಟು ತಂದಿಟ್ಟ ಮನೆಯಲ್ಲಿ ನಿಮ್ಮ ಹುಡುಗಿಯೇ ಬೇಡ ಅಂದು ವಾಪಸ್ ಬರುತ್ತೇನೆ" ಎನ್ನುತ್ತಿದ್ದರು.

Chaithrika ಹೇಳಿದರು...

ನನ್ನ ಮದುವೆಯ ಬಗ್ಗೆ ಬರೆದಿದ್ದ ಸಣ್ಣ ಬರಹ ಇಲ್ಲಿದೆ. ಫ್ರೀ ಇದ್ದಾಗ ನೋಡಬಹುದು.
http://chaithrika.blogspot.com/2008/01/blog-post.html

shashi ಹೇಳಿದರು...

hegde yavre neevu yava catagoryge bartira

Mahadev Prasad ಹೇಳಿದರು...

Really sakathagide.. Whatever written here truly happens & we feel it in real life..

After reading this girls will surely realize that even boys thinks a lot and they also feel all the talamalas..

Maduve andre yaradu manasugala sammilana and I wish you get a beautiful broad minded girl.

PS: Sorry for mixing kannada and english and as well as writing wrong kannada (If I have done so) :-)

~Mahadev

ವಿ.ರಾ.ಹೆ. ಹೇಳಿದರು...

@ಚೈತ್ರಿಕಾ, ಶಶಿ,
thank you for ur valuable comments.
ಹಾಗಿದ್ರೆ ಉಪ್ಪಿಟ್ಟು ಬ್ಯಾನ್ ಮಾಡಿಸ್ಬೇಕು. :)

@ಮಹದೇವ್ ಪ್ರಸಾದ್,
thank you very much for your wishes :)

Dayananda MR ಹೇಳಿದರು...

mroe then your articles, I liked the comments so much... :) all these words are feelings of many souls... Keep writing.

ಅನಾಮಧೇಯ ಹೇಳಿದರು...

Vikas avare,

I really enjoyed this post when I read it in your blog. Ee post matte ee keLakanda blognalli odide. Just wanted to alert you that the post has been copied as is with no credit given to you.

http://hegadal.blogspot.com/search?updated-min=2009-01-01T00%3A00%3A00%2B05%3A30&updated-max=2010-01-01T00%3A00%3A00%2B05%3A30&max-results=12

Meena

ವಿ.ರಾ.ಹೆ. ಹೇಳಿದರು...

@Dayananda, thanx

@Meena, thanks for reading and thank you for bringing it to my notice.

Dhanu ಹೇಳಿದರು...

I'm going through this now :P

ಅನಾಮಧೇಯ ಹೇಳಿದರು...

ಉಫ್...ಈ ಬರಹ ಬರೆದಾಗ ನೀವು ಯಾವ ಕೆಟಗರಿಯಲ್ಲಿದ್ರಪ್ಪಾ...