ಶುಕ್ರವಾರ, ಫೆಬ್ರವರಿ 24, 2017

'ನೀವೂ ಪತ್ರಕರ್ತರಾಗಬೇಕೆ?' - ಪುಸ್ತಕ ಪರಿಚಯ

ಮಾಜದ ಹಲವಾರು ವೃತ್ತಿಗಳ ನಡುವೆ ಇವತ್ತಿಗೂ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವುದು 'ಪತ್ರಕರ್ತ' ವೃತ್ತಿ. ಹಿಂದಿನ ತಿಂಗಳು ಬಿಡುಗಡೆಯಾದ 'ನೀವೂ ಪತ್ರಕರ್ತರಾಗಬೇಕೆ?' ಪುಸ್ತಕವನ್ನು ಓದಿದೆ. ಪತ್ರಿಕೋದ್ಯಮದ ಕಾರ್ಯವಿಧಾನಗಳು, ವಿಭಾಗಗಳು, ಪತ್ರಿಕಾವೃತ್ತಿಯ ಇತಿಮಿತಿಗಳು, ವರದಿಗಾರಿಕೆ, ಪತ್ರಿಕಾ ಬರೆವಣಿಗೆ ಮುಂತಾದವುಗಳ ಬಗ್ಗೆ ಈ ಪುಸ್ತಕ ಬಹಳ ಚೆನ್ನಾಗಿ ವಿವರಿಸಿದೆ. ವಿವಿಧ ವಿಭಾಗಗಳಲ್ಲಿ ಪರಿಣಿತರಾಗಿರುವ ವೃತ್ತಿನಿರತ ಪತ್ರಕರ್ತರೇ ಬರೆದಿರುವ ಲೇಖನಗಳಾಗಿರುವದರಿಂದ ಇವು ಕೇವಲ ಥಿಯರಿಗಳಲ್ಲ. ಪತ್ರಕರ್ತರಾಗಬಯಸುವವರಿಗೆ, ವಿದ್ಯಾರ್ಥಿಗಳಿಗೆ ಇದೊಂದು ಬಹಳ ಒಳ್ಳೆಯ ಗೈಡ್. ಓದುಗರಿಗೆ, ಆಸಕ್ತರಿಗೆ ಪತ್ರಿಕೋದ್ಯಮದ ಕಾರ್ಯವೈಖರಿ ತಿಳಿದುಕೊಳ್ಳಲು ಉತ್ತಮ ಮಾಹಿತಿ ಪುಸ್ತಕ.

ಪತ್ರಕರ್ತ, ಲೇಖಕ Vinayaka Kodsara ಸಂಪಾದಿತ ಈ ಕೃತಿ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತಿದೆ. ಪತ್ರಿಕಾ ಲೋಕಕ್ಕೆ ಸಂಬಂಧಿಸಿದ ಕನ್ನಡದ ಉತ್ತಮ‌ ಪುಸ್ತಕಗಳ ಸಾಲಿಗೆ ಇದೊಂದು ಸೇರ್ಪಡೆ.



* ಈ ಪುಸ್ತಕದ ಬಗ್ಗೆ ಅಕ್ಷರ  ವಿಹಾರ ಬ್ಲಾಗಿನಲ್ಲಿ : ಒಂದು ಕನಸು ಮತ್ತು ಎರಡು ಪುಸ್ತಕ!
* ನವಕರ್ನಾಟಕ  ತಾಣದಲ್ಲಿ ಆನ್ ಲೈನ್  ಖರೀದಿಗೆ : ನೀವೂ ಪತ್ರಕರ್ತರಾಗಬೇಕೆ?