ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಇಬುಕ್ ರೀಡರ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇಡೀ ಲೈಬ್ರರಿಯನ್ನೇ ಇಟ್ಟುಕೊಂಡು ಓಡಾಡಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ. ಓದುವ ಹವ್ಯಾಸ/ಹಂಬಲ ಇದ್ದು ಮುದ್ರಿತ ಪುಸ್ತಕಗಳನ್ನು ಕೊಳ್ಳಲು ಮನಸ್ಸಿಲ್ಲದವರಿಗೆ ಅಥವಾ ಕೊಂಡೊಯ್ಯಲು ಆಗದವರಿಗೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೂಲಕ ಓದಿನ ಅನುಕೂಲ ಕಂಡುಕೊಂಡವರಿಗೆ ಇವು ಉಪಯೋಗವಾಗುತ್ತಿವೆ. ಜಾಗದ ಕೊರತೆ, ಸಂಗ್ರಹದ ಅನುಕೂಲ, ಬೇಕಾದಲ್ಲಿ ತೆಗೆದುಕೊಂಡು ಹೋಗಲು ಸುಲಭ ಹೀಗೆ ವಿವಿಧ ಕಾರಣಗಳಿಗೆ ಇ-ಬುಕ್ ಬಳಕೆ ಹೆಚ್ಚಾಗುತ್ತಿದೆ. (ದೊಡ್ಡ ಪುಸ್ತಕ ಒಯ್ಯುವ ಬದಲು ಇ-ಪುಸ್ತಕ ಒಯ್ಯಿರಿ ಓದಲು- ವಿಜಯ ಕರ್ನಾಟಕ, 12ಮೇ2014)
ನಮ್ಮ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪುಸ್ತಕಗಳು ಇ-ಪುಸ್ತಕಗಳಾಗಿ ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಉಚಿತ ಪುಸ್ತಕಗಳನ್ನು ಒದಗಿಸುವ ತಾಣಗಳಲ್ಲಿ ಹೆಚ್ಚಾಗಿ ಪಿ.ಡಿ.ಎಫ್ ಮಾದರಿಯಲ್ಲಿ ಪುಸ್ತಕದ ಫೈಲ್ ಗಳಿವೆ. ಖರೀದಿಸುವ ತಾಣಗಳಲ್ಲಿ ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಗಳಿರುತ್ತವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು. epub, pdf, mobi, chm, cbr, cbz, umd, fb2, txt, html ಮುಂತಾದ ರೂಪಗಳಲ್ಲಿ ದೊರೆಯುವ ಈ ಇ-ಬುಕ್ ಗಳನ್ನು ಗೂಗಲ್ ಪ್ಲೇನಲ್ಲಿ ದೊರೆಯುವ ಅನೇಕ ಆಂಡ್ರಾಯ್ಡ್ ebook reader apps ಮೂಲಕವೂ ಓದಬಹುದು. Moon+ Reader ಮತ್ತು Sky Reader ಅಂತಹ Appಗಳು. ಸಾಮಾನ್ಯವಾಗಿ ಇ-ಪುಸ್ತಕಗಳ ಬೆಲೆ ಮುದ್ರಿತ ಪ್ರತಿಗಿಂತ ಕಡಿಮೆ ಇರುತ್ತದೆ.
ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ ಈ ಕೆಳಗಿನಂತಿದೆ.
- ಡೈಲಿ ಹಂಟ್ (Dailyhunt): ಖರೀದಿ ಮಾಡಿ DailyHunt app ಮೂಲಕ ಓದಬಹುದು.
ಫ್ಲಿಪ್ ಕಾರ್ಟ್ ಇ ಬುಕ್ಸ್: Flipkart ebook App ಅಳವಡಿಸಿಕೊಂಡು ಓದಬಹುದು ಅಥವಾ ವೆಬ್ ಬ್ರೌಸರಲ್ಲಿ ಓದಬಹುದು.(No more available)- ಪುಸ್ತಕ : (Pustaka) ಖರೀದಿಸಿ ಆನ್ ಲೈನ್ ಓದಬಹುದು ಮತ್ತು pustaka android app ಮೂಲಕ ಓದಬಹುದು.
- ಗೂಗಲ್ ಬುಕ್ಸ್: Google Play store ಮೂಲಕ ಖರೀದಿಸಿ ಓದಬಹುದು.
- ಸ್ವಿಫ್ಟ್ ಬುಕ್ಸ್ (Swiftboox): ಖರೀದಿಸಿ ಹಲವು ತಂತ್ರಾಂಶಗಳ ಮೂಲಕ ಓದಬಹುದು: ಪಟ್ಟಿ ಇಲ್ಲಿದೆ (ಸದ್ಯಕ್ಕೆ ಇಲ್ಲಿ ಕನ್ನಡ ಪುಸ್ತಕಗಳಿಲ್ಲ)
- ಕ್ವಿಲ್ ಬುಕ್ಸ್ (Quillbooks.in): ಖರೀದಿಸಿ ಕ್ವಿಲ್ ಬುಕ್ಸ್ ತಂತ್ರಾಂಶದ ಮೂಲಕ ಆನ್ ಲೈನ್/ಆಫ್ ಲೈನ್ ಓದಬಹುದು. ಇತ್ತೀಚಿನ/ಹೊಸಕಾಲದ ಪುಸ್ತಕಗಳಿವೆ.
- ನನ್ನ ಲೈಬ್ರರಿ (nannalibrary): ಬಾಡಿಗೆಗೆ ಪಡೆದು Meralibrary app ಮೂಲಕ ಓದಬಹುದು.
- ಇಶಾ ಶಾಪಿ (ishashoppe): ಪಿ ಡಿ ಎಫ್ ಮಾದರಿ ಪುಸ್ತಕಗಳು ಖರೀದಿಗಿವೆ.
- ರೀಡ್ ವೇರ್ (Readwhere): ಖರೀದಿ ಮಾಡಿ Readwhere app ಮೂಲಕ ಓದಬಹುದು.
- ಸ್ಮ್ಯಾಶ್ ವರ್ಡ್ಸ್ (Smashwords): epub, mobi, ಮುಂತಾದ ಇಬುಕ್ format ಹಾಗೂ iOSಗೆ ಆಗುವಂತಹ ಕೆಲವು ಪುಸ್ತಕಗಳಿವೆ. ಖರೀದಿಸಿ ಓದಬಹುದು.
- ಕೈ ಬುಕ್ಸ್ (Kai Books): ಇದು ಒಂದು ಆಂಡ್ರಾಯ್ಡ್ ಕಿರುತಂತ್ರಾಂಶವಾಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ/ಖರೀದಿಸಿ/ಬಾಡಿಗೆಗೆ ಪಡೆದು ಓದಬಹುದು.
- Rockstand: ಇದರಲ್ಲಿ ಹಲವು ಮಕ್ಕಳ ಪುಸ್ತಕಗಳಿವೆ. ಸ್ಮಾರ್ಟ್ ಫೋನುಗಳಲ್ಲಿ ಈ ರಾಕ್ ಸ್ಟ್ಯಾಂಡ್ ಕಿರುತಂತ್ರಾಂಶ ಅಳವಡಿಸಿಕೊಂಡು ಓದಬಹುದು.
- ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (DLI): ಸಾವಿರಾರು (ಉಚಿತ) ಹಳೇ ಪುಸ್ತಕಗಳಿವೆ.
- ಒಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ (OUDL): ಸಾವಿರಾರು ಕನ್ನಡ ಪಿಡಿಎಫ್ ಪುಸ್ತಕಗಳು ಇಲ್ಲಿವೆ. ಅಂಗಡಿಗಳಲ್ಲಿ ಈಗ ಕೊಳ್ಳಲು ಸಿಗಲಾರದಂತಹ, ಮುದ್ರಣ ನಿಂತುಹೋದಂತಹ ಹಳೆಯ ಒಳ್ಳೊಳ್ಳೆಯ ಕೃತಿಗಳು ಇದರಲ್ಲಿ ಬಹಳಷ್ಟಿವೆ. (ಉಚಿತ)
- ಓಪನ್ ಲೈಬ್ರರಿ (Open library): ಕೆಲವು ಹಳೆಯ ಪಿಡಿಎಫ್ ಪುಸ್ತಕಗಳಿವೆ. (ಉಚಿತ)
- ಆರ್ಕೈವ್ (Archive): ಹಳೆಯ ಸಾಹಿತ್ಯ, ಪೌರಾಣಿಕ, ಸ್ತೋತ್ರ, ಪೂಜೆ ಮುಂತಾದ ಪುಸ್ತಕಗಳ ಪಿಡಿಎಫ್ ಇವೆ. (ಉಚಿತ)
- ಸಿರಿ ಕನ್ನಡ: ಹಳೆಗನ್ನಡ, ನಡುಗನ್ನಡ , ಹೊಸಗನ್ನಡದ ಪಿಡಿಎಫ್ ಪುಸ್ತಕಗಳಿವೆ. (ಉಚಿತ)
- ಐ ಫೋನ್ ಮೂಲಕ ಕನ್ನಡ ಪುಸ್ತಕಗಳನ್ನು ಓದಲು ಇಲ್ಲಿದೆ ಸುಮಾರು ಸಾವಿರ ಪುಸ್ತಕಗಳ ಕನ್ನಡ ಲೈಬ್ರರಿ.
- BOOKZZ: ಕೆಲವು ಪಿಡಿಎಫ್ ಪುಸ್ತಕಗಳಿವೆ. (ಉಚಿತ)
- ಖುಷಿ ಕನ್ನಡ ಕಾಮಿಕ್ಸ್
- ಅತ್ರಿ ಬುಕ್ ಸೆಂಟರ್ ತಾಣದಲ್ಲಿ ಹಲವು ಇ-ಪುಸ್ತಕಗಳು ಉಚಿತವಾಗಿ ಲಭ್ಯ.
- ವಿವಿಧ್ ಲಿಪಿ (VIVIDLIPI): Google Play storeನ vividlip app ಮೂಲಕ ಖರೀದಿಸಿ ಓದಬಹುದು.
- 'ಕೆಂಡಸಂಪಿಗೆ' ತಾಣದಲ್ಲಿ ಕೆಲವು ಉಚಿತ ಪಿಡಿಎಫ್ ಪುಸ್ತಕಗಳು: ಇಲ್ಲಿ ಕ್ಲಿಕ್ಕಿಸಿ
- ವಾಲ್ಮೀಕಿ ಬುಕ್ಸ್: ಇದೊಂದು ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ ಮತ್ತು ಖರೀದಿಸಿ ಓದಬಹುದು.
- ಲುಲು: epub, pdf ಮಾದರಿಯ ಕನ್ನಡ ಪುಸ್ತಕಗಳ ಖರೀದಿಗೆ.
- ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿರುವ ಪುಸ್ತಕಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ವರ್ಗೀಕರಣಗೊಳಿಸಿ, ಡೌನ್ಲೋಡ್ ಮಾಡಿಕೊಳ್ಳಲು ಸುಲಭವಾಗುವಂತೆ ಮಾಡಿ ಇಡಲಾಗಿರುವ ಕೊಂಡಿಗಳು ಇಲ್ಲಿವೆ.
- ಮತ್ತೊಂದಿಷ್ಟು ಪುಸ್ತಕಗಳು- ಇಲ್ಲಿ ಮತ್ತು ಇಲ್ಲಿ: ಕಾರಂತ, ತೇಜಸ್ವಿ, ಭೈರಪ್ಪ, ಕುವೆಂಪು, ಸಾಯಿಸುತೆ, ಯಂಡಮೂರಿ, ಕೌಂಡಿನ್ಯ ಸೇರಿದಂತೆ ಹಲವು ಹಳೆ, ಹೊಸ ಪುಸ್ತಕಗಳಿವೆ. ಎಲ್ಲವೂ ಪಿಡಿಎಫ್ ರೂಪದಲ್ಲಿವೆ. ಇವು ಬಹುಶಃ ಪೈರೇಟೆಡ್ ಪುಸ್ತಕಗಳಾಗಿವೆ. (ಇವುಗಳ ಕೊಂಡಿಗಳನ್ನು ಮಾತ್ರ ಹಂಚಲಾಗಿದೆ. ಪುಸ್ತಕದ ಪೈರೆಸಿಗೆ ನಾನಾಗಲೀ, ಈ ಕೊಂಡಿಗಳನ್ನು ಹಾಕಿದವರಾಗಲೀ ಜವಾಬ್ದಾರರಲ್ಲ)
- ಕೃಷಿಕನ್ನಡ ಅಗ್ರಿಬುಕ್ಸ್: ಕೃಷಿ ಹಾಗೂ ಆಹಾರಕ್ಕೆ ಸಂಬಂಧಿಸಿದ ಒಂದಿಷ್ಟು ಪಿಡಿಎಫ್ ರೂಪದ ಪುಸ್ತಕಗಳು ಇಲ್ಲಿವೆ.
- ಮುಕ್ತಜ್ಞಾನ: ಹಿಂದಿನ ಶತಮಾನಗಳಲ್ಲಿ ಪ್ರಕಟಣೆಗೊಂಡು ಪ್ರಸಕ್ತದಲ್ಲಿ ದುರ್ಲಭವಾಗಿರುವ ಕೃತಿಗಳನ್ನು ಸಾಹಿತ್ಯ ಪರಿಷತ್ತಿನ ಜಾಲತಾಣದಲ್ಲಿ ಪಿಡಿಎಫ್ ರೂಪದಲ್ಲಿ ಇರಿಸಲಾಗಿದೆ (ಉಚಿತ)
- ಕನ್ನಡ ಕೃತಿಗಳ ಡಿಜಿಟಲ್ ಗ್ರಂಥಾಲಯ - ಕಣಜ ಅಂತರಜಾಲ ಜ್ಞಾನಕೋಶ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ)
- ಮ್ಯೂಸಿಕ್ ರಿಸರ್ಚ್ ಲೈಬ್ರರಿ: ಭಾರತೀಯ ಸಂಗೀತಕ್ಕೆ ಸಂಬಂಧಿಸಿದಂತೆ ಹಲವಾರು ಉಚಿತ ಪಿಡಿಎಫ್ ಪುಸ್ತಕಗಳಿವೆ.
- ಆಧ್ಯಾತ್ಮಪ್ರಕಾಶ: ವೇದಾಂತ ಹಾಗೂ ಆಧ್ಯಾತ್ಮ ಸಂಬಂಧಿತ ಉಚಿತ ಪಿಡಿಎಫ್ ಪುಸ್ತಕಗಳಿವೆ.
- ಪೋತಿ.ಕಾಂ: ಹಲವು ಕಾದಂಬರಿ ಮುಂತಾದ ಇಪುಸ್ತಕಗಳು ಮಾರಾಟಕ್ಕಿವೆ. ಹಲವು ಪುಸ್ತಕಗಳನ್ನು ಮುದ್ರಿತ ರೂಪದಲ್ಲಿಯೂ ತರಿಸಿಕೊಳ್ಳುವ ಆಯ್ಕೆ ಇದೆ.
- ಡಿವಿಜಿ ಯವರ ಎಲ್ಲಾ ಪುಸ್ತಕಗಳು ಇ-ಬುಕ್ ಆಗಿ ಗೂಗಲ್ ಪ್ಲೇ-ಬುಕ್ಸ್ ನಲ್ಲಿ ಲಭ್ಯವಿದೆ: http://Sriranga.digital/dvg
- ವಿದ್ವಾನ್ ರಂಗನಾಥ ಶರ್ಮರ ಕೃತಿಗಳು - ಪಿಡಿಎಫ್ ರೂಪದಲ್ಲಿ: https://vidwannrs.in/Krutigalu
- ಕಣಜ ತಾಣದಲ್ಲಿ ನೂರಾರು ಉಚಿತ ಪುಸ್ತಕಗಳ ಡಿಜಿಟಲ್ ಲೈಬ್ರರಿ ಇದೆ.- ಪಿಡಿಎಫ್ ಮತ್ತು ಇಪಬ್ ಮಾದರಿಯಲ್ಲಿವೆ.
- ಪುಸ್ತಕ ಸಂಚಯ
- ಮೈಲ್ಯಾಂಗ್ ಬುಕ್ಸ್: ಹೊಸಕಾಲದ ಹಲವು ವೈವಿಧ್ಯಮಯ ಇ-ಪುಸ್ತಕ ಮತ್ತು ಆಡಿಯೋ ಪುಸ್ತಕಗಳನ್ನು ಇಲ್ಲಿ ಕೊಂಡು ಓದಬಹುದು. ಆಂಡ್ಯಾಯ್ಡ್ ಮತ್ತು ಐಫೋನುಗಳಲ್ಲಿ ಲಭ್ಯ.
- ಆಲಿಸಿರಿ: ಹಲವು ಆಡಿಯೋ ಪುಸ್ತಕಗಳು ಇದರಲ್ಲಿವೆ. ಆಂಡ್ರಾಯ್ಡ್ ಫೋನಿನಲ್ಲಿ ಅಳವಡಿಸಿಕೊಂಡು ಪುಸ್ತಕಗಳನ್ನು ಕೇಳಬಹುದು.
- ಕೆಂಡಸಂಪಿಗೆ ಬುಕ್ಸ್: ಆರ್ಕೈವ್ ತಾಣದಲ್ಲಿರುವ ಪುಸ್ತಕಗಳನ್ನು ಇದರಲ್ಲಿ ಹುಡುಕಿ ಡೌನ್ಲೋಡ್ ಮಾಡಿಕೊಳ್ಳಬಹುದು.
***
ಇವುಗಳಲ್ಲದೇ ಇನ್ನು ಬೇರೆ ತಾಣಗಳು ನಿಮಗೆ ಗೊತ್ತಿದ್ದಲ್ಲಿ ತಿಳಿಸಿ..