ಗುರುವಾರ, ಜುಲೈ 17, 2008

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ

ಮೊದಲಿಂದಲೂ ಈ ವಿಷಯ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಅನಿಸಿದ ಮರುಕ್ಷಣವೇ ಮರೆತುಬಿಡುತ್ತಿದ್ದೆ. ಮತ್ಯಾವಾಗಾದರೂ ಅದನ್ನು ನೋಡಿದಾಗಲಷ್ಟೆ ನೆನಪಾಗುತ್ತಿತ್ತು. ಈ ಬಾರಿ ಹಾಗಾಗುವುದಕ್ಕೆ ಬಿಡಲಿಲ್ಲ.

ಅಂದಹಾಗೆ.. ನನಗೆ ತಿಳಿದುಕೊಳ್ಳಬೇಕೆನಿಸಿದ ವಿಷಯ ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ಹೇಗೆ ಸಿಗುತ್ತದೆ ಎಂಬುದು. ಇದೊಂದು ಧಾನ್ಯವೇ, ಅಲ್ಲವೇ ಎಂಬ ಸಂಶಯವಿತ್ತು. ಅದು ಧಾನ್ಯದಂತೆ ಅನಿಸುತ್ತಿರಲಿಲ್ಲ. ಅದನ್ನು ಎಲ್ಲಾದರೂ ಬೆಳೆಯುವ ಬಗ್ಗೆಯಾಗಲೀ ಕೇಳಿರಲಿಲ್ಲ. ಇತ್ತೀಚೆಗೆ ಅಜ್ಜನ ಮನೆಗೆ ಹೋದಾಗ ಶಾಬಕ್ಕಿ ಪಾಯಸ ತಿಂದ ಮೇಲೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕೆಂದು ನಿಶ್ಚಯಿಸಿದೆ. ಮೊದಲನೆಯದಾಗಿ, ಕೇಳಬಹುದು ಅನ್ನಿಸಿದವರನ್ನು ಕೇಳಿದಾಗ ’ಗೊತ್ತಿಲ್ಲ’ ಎಂಬ ಉತ್ತರ ಸಿಕ್ಕಿದ್ದೇ ಹೆಚ್ಚು. ಇನ್ನೂ ಕೆಲವರು ಆ ವಿಷಯವನ್ನು ಇದೂವರೆಗೂ ಯೋಚಿಸಿಯೇ ಇರಲಿಲ್ಲ. ನಾನು ಕೇಳಿದ ಮೇಲೆ ’ಹೌದಲ್ವಾ, ಇದು ಹೇಗೆ ಬರುತ್ತದೆ’ ಎಂದು ತಲೆಕೆಡಿಸಿಕೊಂಡು ಸುಮ್ಮನಾದರು. ಕೆಲವರು ಇದು ಒಂದು ಧಾನ್ಯವಲ್ಲ ಅಥವಾ ಅಕ್ಕಿ,ರಾಗಿ,ಕಾಳುಗಳಂತೆ ಗದ್ದೆತೋಟದಲ್ಲಿ ಬೆಳೆಯುವುದಲ್ಲ ಎಂದು ಖಾತ್ರಿಯಾಗಿ ಹೇಳಿದರೂ ಕೂಡ ’ಮತ್ತೇನು, ಹೇಗೆ?’ ಎಂಬ ಪ್ರಶ್ನೆಗೆ ಉತ್ತರಕೊಡಲಾಗಲಿಲ್ಲ. ಹೀಗೆಯೇ ತನಿಖೆ ಜಾರಿಯಲ್ಲಿದ್ದಾಗ ಒಬ್ಬರಿಂದ ಇದನ್ನು ಗೆಣಸಿನಿಂದ ಮಾಡುತ್ತಾರೆ ಎಂದು ತಿಳಿದುಬಂತು. ಗೆಣಸು ಎಂದು ಕೇಳಿದ ಕೂಡಲೇ ನನ್ನ ಕುತೂಹಲ ಇಮ್ಮಡಿಯಾಯಿತು. ಎಲ್ಲಿಯ ಗೆಣಸು ಎಲ್ಲಿಯ ’ಅಕ್ಕಿ’! ಕೊನೆಗೂ ಯಾರಿಂದಲೂ ’ಹೇಗೆ ಮಾಡುತ್ತಾರೆ’ ಎಂಬ ಉತ್ತರ ಸಿಗದೇ ಕಿಸ್ಸಾನ್ ಕಾಲ್ ಸೆಂಟರ್ (1551) ಅಥವಾ ಕೃಷಿ ಕಾಲೇಜಿಗೆ ಫೋನ್ ಮಾಡಿ/ಭೇಟಿ ಕೊಟ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುವುದರೊಳಗಾಗಿ ಬೇಕಾದ ಮಾಹಿತಿಯನ್ನು ಪಡೆಯಲು ಯಶಸ್ವಿಯಾದೆ.

ಸಬ್ಬಕ್ಕಿ ಮತ್ತು ಸಬ್ಬಕ್ಕಿ ತಯಾರಿಕೆಯ ಮಾಹಿತಿಗಳು ಇಂತಿವೆ. ಗೊತ್ತಿಲ್ಲದವರು ತಿಳಿದುಕೊಳ್ಳಿ. ಗೊತ್ತಿದ್ದವರು ತಪ್ಪಿದ್ದರೆ ತಿದ್ದಿ.

ಸಬ್ಬಕ್ಕಿ ತಯಾರಿಸುವುದು ಮರಗೆಣಸಿನಿಂದ.
ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ.
ತಯಾರಿಕೆಯ ವಿಧಾನ:
*ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
*ನಂತರ ಅವುಗಳನ್ನು crusherಗಳಲ್ಲಿ ಹಿಸುಕಲಾಗುತ್ತದೆ. ಈ crushing ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
*ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ settle ಆಗಲು ಬಿಡಲಾಗುತ್ತದೆ. Settle ಆಗಲು ಬಿಟ್ಟ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch(ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
*ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
*ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
*ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
*ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
*ಕೊನೆಯದಾಗಿ polishing ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

*******

37 ಕಾಮೆಂಟ್‌ಗಳು:

Unknown ಹೇಳಿದರು...

Oh gotte irlilla... thanks Vikas..

shyama sajankila ಹೇಳಿದರು...

Thank you very much for the information. I always used to wonder about the saabakki origin... and like you... tried to find it out from elders.... I too got similar responses like you...!
Thanks once again.

NilGiri ಹೇಳಿದರು...

ನನಗೂ ಗೊತ್ತಿರಲಿಲ್ಲ. ಗಿಡದಲ್ಲಿ ಬಿಡುತ್ತದೇನೋ ಅಂದುಕೊಂಡಿದ್ದೆ. ಆಮೇಲೆ ಯಾರೋ ಪುಣ್ಯಾತ್ಮರು ಬಿಡಿಸಿ ತಿಳಿಸಿಕೊಟ್ಟರು.

ಸಂಪೂರ್ಣ ಮಾಹಿತಿಗಾಗಿ ವಂದನೆಗಳು.

ಯಜ್ಞೇಶ್ (yajnesh) ಹೇಳಿದರು...

ಒಳ್ಳೇ informationnu...

ಥ್ಯಾಂಕ್ಸ್ ವಿಕಾಸ...

ಅನಾಮಧೇಯ ಹೇಳಿದರು...

ವಿಕಾಸು,
ನನಗೆ ಸಬ್ಬಕ್ಕಿ ಗೆಣೆಸಿನಿಂದ ತಯಾರಾಗುತ್ತೆ ಅಂತ ಗೊತ್ತಿತ್ತು ಆದರೆ ಹೇಗೆ ಎಂಬುದು ಗೊತ್ತಿರಲಿಲ್ಲ..ನೀವು ಕೊಟ್ಟ ಮಾಹಿತಿಯಿಂದ ಈಗ ಪೂರ್ತಿ ಗೊತ್ತಾತು.

ಇವ,
ಗಿರೀಶ ರಾಜನಾಳ.

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸವರೇ
ನನಗೆ ಮೈದಾ ಹಿಟ್ಟು ಮತ್ತು ಸಬ್ಬಕ್ಕಿ ಹೇಗೆ ತಯಾರಾಗತ್ತೆ ಅನ್ನೋ ಪ್ರಶ್ನೆ ಬಹಳ ದಿನದಿಂದ ಕಾಡುತ್ತಾ ಇತ್ತು. ಒಂದಕ್ಕೆ ಈಗ ಉತ್ತರ ಕ್ಕಿದೆ!

ಗುಹೆ ಹೇಳಿದರು...

Olle mahiti......

Thanks

ಶ್ರೀನಿಧಿ.ಡಿ.ಎಸ್ ಹೇಳಿದರು...

nice info maga!:)
ಗೊತ್ತಿರ್ಲೆ ಇದ್ರ ಬಗ್ಗೆ..

@vinayaka ks
ಮೈದಾ ಹಿಟ್ಟು- ಗೋಧಿಯ purest form.. ಗೋಧಿನ sikkapatte refine ಮಾಡಿದ ಮೇಲೆ, ಮೈದಾ ಸಿಗತ್ತೆ..

ರಂಜನಾ ಹೆಗ್ಡೆ ಹೇಳಿದರು...

olle information vikas
good.
keep it up

ಮನಸ್ವಿನಿ ಹೇಳಿದರು...

ಈ ಮಾಹಿತಿಗಾಗಿ ಧನ್ಯವಾದಗಳು.
ನಿಮ್ಮ ಬ್ಲಾಗಿನಲ್ಲಿ ವೈವಿಧ್ಯತೆ ಇದೆ. ಬರೀತಿರಿ.

ವಿಜಯ್ ಜೋಶಿ ಹೇಳಿದರು...

Abba!!!!!!!

sunaath ಹೇಳಿದರು...

ಆರೋಕ್ಯ ಹಾಲಿನವರು ಸಹ ಮರಗೆಣಸಿನಿಂದಲೇ ಹಾಲು ತಯಾರಿಸುತ್ತಾರೆ, ಅದು ನಿಜವಾದ ಹಾಲಲ್ಲ ಎಂದು ಕೇಳಿದ್ದೇನೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವದು ಗೊತ್ತಿಲ್ಲ.

ವಿ.ರಾ.ಹೆ. ಹೇಳಿದರು...

ಎಲ್ಲರಿಗೂ ಥ್ಯಾಂಕ್ಸ್.

ಸುನಾಥ ಕಾಕಾ, ಆರೋಕ್ಯ ಇನ್ನಿತರ ಹಾಲಿನವರು ತಮ್ಮದು ಗಟ್ಟಿ ಹಾಲು ಎಂದು ಹೇಳಿಕೊಂಡು ನಿಜವಾದ ಹಾಲಿನ ಜೊತೆ ಮರಗೆಣಸಿನ ಹಾಲನ್ನು ಕಲಬೆರಕೆ ಮಾಡುತ್ತಾರೆಂದು ನಾನೂ ಎಲ್ಲೋ ಕೇಳಿದ್ದೆ. ಅದಕ್ಕೆ ನಂದಿನಿಯವರು ಜಾಹೀರಾತು ಕೊಟ್ಟಿದ್ದರು "ಬೆಳ್ಳಗಿರುವುದೆಲ್ಲ ಹಾಲಲ್ಲ, ಗಟ್ಟಿಯಿರುವುದೆಲ್ಲ ಆರೋಗ್ಯವಾದುದಲ್ಲ " ಅಂತ :)

Harisha - ಹರೀಶ ಹೇಳಿದರು...

ಹಂಗೆ ಶಾಬಕ್ಕಿ ಪಾಯ್ಸ ಮಾಡದೂ ಬರಿತ್ಯನ ನೋಡಿರೆ... ನೀನ..

ಆಲಾಪಿನಿ ಹೇಳಿದರು...

ವಿಕಾಸ್‌,
ಸಾಬೂದಾನಿ (ಸಬ್ಬಕ್ಕಿ) ಹೆಂಗ ತಯಾರ್‍ಸತಾರು ಅಂತ ನಾನೂ ಬಾಳ ತಲಿ ಕೆಡಿಸ್ಕೊಂಡಿದ್ದೆ. ಈಗ ಗೊತ್ತಾತ ನೋಡ್ರಿ.

Jayalaxmi ಹೇಳಿದರು...

nijakku saaboodaani yaavudarinda tayaaraagutte anno kutoohala nangoo ittu. tiLisikoTTiddakke thanks vikas.

ಶ್ಯಾಮಾ ಹೇಳಿದರು...

ಸಬ್ಬಕ್ಕಿ ಗಿಡದಲ್ಲಿ ಬಿಡ್ತು ಅಂತ ಅಂದುಕೊಂಡು ನಾನು ಅದರ ಬಗ್ಗೆ ತಲೆ ಕೆಡ್ಸಿಕೊಳಕ್ಕೆ ಹೋಗಿರ್ಲೆ :) .. ಇದನ್ನ ಓದಿದ ಮೇಲೆ ಗೊತ್ತಾತು.. ಒಳ್ಳೆಯ ಮಾಹಿತಿಗಾಗಿ ಧನ್ಯವಾದ

jomon varghese ಹೇಳಿದರು...

ಮಾಹಿತಿಪೂರ್ಣ ಲೇಖನ. ನಿಜವಾಗಲೂ ಗೊತ್ತಿರಲಿಲ್ಲ ಕಣ್ರೀ.ತುಂಬಾ ವಿಷಯ ತಿಳಿದುಕೊಂಡ ಹಾಗಾಯ್ತು.

ಧನ್ಯವಾದಗಳು.
ಜೋಮನ್.

ವಿ.ರಾ.ಹೆ. ಹೇಳಿದರು...

ಅಬ್ಬಾ! ಎಷ್ಟೆಲ್ಲಾ ಜನಕ್ಕೆ ಇಸ್ಯನೇ ಗೊತ್ತಿರಲಿಲ್ಲ. ನಾ ಬರೆದಿದ್ದಕ್ಕೂ ಸಾರ್ಥಕ ಆಯ್ತು :)

@ಹರೀಶ
ಪಾಯಸ, ವಡೆ, ಉಪ್ಪಿಟ್ಟಿ, ಕಿಚಡಿ ಇನ್ನೂ ಎಂತೆಂತೋ ಮಾಡದೆಲ್ಲಾ ಇದ್ದು, ಹುಡುಕು. ಸಿಗ್ತು ಇಂಟರ್ನೆಟ್ಟಲ್ಲಿ.

ಸಿಮ್ಮಾ ಹೇಳಿದರು...

ಬರೀ ಸಬ್ಬಕ್ಕಿ ಪಾಯ್ಸ ತಿಂತಾ ಇದ್ದೆ,
ಅದರ ಬಗ್ಗೆ ತಲೆ ಕೆಡಿಸಿ ಕೊಂಡಿರ್ಲಿಲ್ಲ,
ಅದರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ thsnks!

ಸುಧೇಶ್ ಶೆಟ್ಟಿ ಹೇಳಿದರು...

Hi Vikas,

Good research and information!

- Sudhesh

ಅಧಿಕಪ್ರಸಂಗಿ ಹೇಳಿದರು...

ಇಷ್ಟು ಬಾರಿ ಪಾಯಸ ತಿನ್ನೋವಾಗ ಒಮ್ಮೆ ಕೂಡ ಈ ಪಾಪದ ಸಬ್ಬಕ್ಕಿ ಬಗ್ಗೆ ಆಲೋಚನೆ ಬರದೆ ಹೋಯಿತೆ !! ಛೆ ! ಸಬ್ಬಕ್ಕಿಯಲ್ಲಿ ಕ್ಷಮೆ ಕೋರುತ್ತಾ ಅದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು :)

ಅನಾಮಧೇಯ ಹೇಳಿದರು...

abba evtige nanna anumana clear madide guru thanks

ಅನಾಮಧೇಯ ಹೇಳಿದರು...

higu unte!!!!!
gotte eralilla

ಸಂದೀಪ್ ಕಾಮತ್ ಹೇಳಿದರು...

ಸಾಬಕ್ಕಿ ಪಾಯಸ ಕುಡೀತ ಇರ್ಬೇಕಾದ್ರೂ ಯಾವತ್ತೂ ನನಗೆ ಇಂಥ ಸಂಶಯ/ಕುತೂಹಲ ಬಂದಿರಲಿಲ್ಲ .
ಬಹುಶ ವಿಕ್ಕಿ ನ್ಯೂಟನ್ ಥರ ಆಗ್ತಾನೆ ಅಂತ ಕಾಣ್ಸುತ್ತೆ.ಯಾಕಂದ್ರೆ ಅದೆಷ್ಟೊ ಜನರ ತಲೆ ಮೇಲೆ apple ಬಿಡಿ ಹಲಸಿನ ಹಣ್ಣು ಬಿದ್ರೂ ಅದು ಯಾಕೆ ಬಿತ್ತು ಅಂತ ಯಾರೂ ಥಿಂಕ್ ಮಾಡಿರಲಿಲ್ಲ.
ಮಾಹಿತಿಗಾಗಿ ಧನ್ಯವಾದಗಳು ವಿಕ್ಕಿ.

Niranjan ಹೇಳಿದರು...

ಥ್ಯಾಂಕ್ಸ್ ಮಗ ... ಹೌದಲ್ಲ ಈ ಬಗ್ಗೆ ನಾವು ಯೋಚನೆನೆ ಮಾಡಿರಲಿಲ್ಲ .
ನಿನ್ನ ಅಭಿರುಚಿ ಮತ್ತು ಅದನ್ನು ವಸ್ತು ನಿಸ್ಥ ವಾಗಿ ಹುಡುಕಿದ ರೀತಿ eesta ಆಯಿತು .
ಚಿತ್ರ,ವಿಚಿತ್ರ ...ಗಳು ನಿನ್ನ ಬ್ಲಾಗ್ನಲ್ಲಿ ಬರಲಿ.

ರಾಜೇಶ್ ನಾಯ್ಕ ಹೇಳಿದರು...

ಥ್ಯಾಂಕ್ಸ್ ಮಾರಾಯ ವಿಕಾಸ, ಈ ಸಬ್ಬಕ್ಕಿ ಬಗ್ಗೆ ನಾನೂ ಬಹಳ ತೆಲೆ ಕೆಡಿಸಿಕೊಂಡಿದ್ದೆ. ಉತ್ತರವನ್ನು ವಿವರವಾಗಿ ದೊರಕಿಸಿ ಕೊಟ್ಟಿರುವುದಕ್ಕಾಗಿ ಅನಂತ ಧನ್ಯವಾದಗಳು.

Lakshmi Shashidhar Chaitanya ಹೇಳಿದರು...

ಸಬ್ಬಕ್ಕಿ ಸಂಡಿಗೆ ತಿಂದು, ಪಾಯಸ ಕುಡಿದು ಅಭ್ಯಾಸವಿತ್ತೇ ಹೊರತು ಇದರ ಮೂಲ, ತಯಾರಿಕೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಹೋಗಿರಲಿಲ್ಲ.ಹೊಟ್ಟೆಗೆ ಸಾಕಿತ್ತು,ತಲೆಗೆ ಬೇಕಿರಲಿಲ್ಲ ! ನೀವು ಇದನ್ನ ತಲೆಗೆ ತಗೆದುಕೊಂಡು ನಮ್ಮ ತಲೆನೋವು ನಿವಾರಿಸಿದ್ದಕ್ಕೆ ಧನ್ಯವಾದ.

MD ಹೇಳಿದರು...

ವಿಕಾಸ್,
ನನಗೂ ಬರೀ ಗೆಣಸಿನಿಂದ ಇದು ತಯಾರಾಗುತ್ತೆ ಅಂತ ಗೊತ್ತಿತ್ತು. ಆದರೆ ಅದನ್ನು ನಾವು ಕಾಣುವ ಗಡ್ಡೆಗೆಣಸು ಅಂದುಕೊಂಡಿದ್ದೆ.
ಇದರ ಬಗ್ಗೆ ಇದಕ್ಕಿಂತ ಹೆಚ್ಚಾಗಿ ಪ್ರಶ್ನೆಗಳೇ ಕೇಳಿಕೊಂಡಿರಲಿಲ್ಲ. ಇಂತಹ ಸಾಮಾನ್ಯ ವಿಷಯವೂ ಎಷ್ಟೊಂದು ರಹಸ್ಯಮಯವಾಗಿದೆ ನೋಡಿ.
ತಿಳಿಸೊಕೊಟ್ಟಿದ್ದಕ್ಕೆ ಧನ್ಯವಾದಗಳು.
ಅಂದ ಹಾಗೆ, ನನ್ನಮ್ಮ ಸಾಬೂದಾನಿ (ಸಬ್ಬಕ್ಕಿ)ಯಿಂದ ಬರೀ ಪಾಯಸ ಮಾತ್ರವಲ್ಲ, ಉಪ್ಪಿಟ್ಟನ್ನೂ ಮಾಡ್ತಾಳೆ. ನನ್ನ ಫೆವರಿಟ್ ಅದು.

ಅನಾಮಧೇಯ ಹೇಳಿದರು...

ಸಬ್ಬಕ್ಕಿ ಯಾವುದರಿಂದ ಮಾಡುತ್ತಾರೆ ಎಂದು ಗೊತ್ತಾಯಿತು. ನಾನು ಮೊದಲು ಅದು ಒಂದು ಗಿಡದಿಂದ ಬೆಳೆಯುತ್ತದೆ ಎಂದು ತಿಳಿದಿದ್ದೆ. ಈ ರೀತಿಯ ಒಳ್ಳೆಯ ವಿಚಾರವನ್ನು ಬ್ಲಾಗ್ಗೆ ಹಾಕು
ಧನ್ಯವಾದಗಳು
ಪದ್ಮಾವತಿ ಜೋಶಿ

ವಿ.ರಾ.ಹೆ. ಹೇಳಿದರು...

@ above all,

thanQ. JAI SABBAKKI ;-)

hamsanandi ಹೇಳಿದರು...

ಅಂದಹಾಗಿ ಮರಗೆಣಸಿಂದ ಇನ್ನೂ ಹಲವು ತಿನ್ನುವ ಪದಾರ್ಥಗಳು ತಯಾರಾಗತ್ತವಂತೆ. ಕೇರಳದಲ್ಲಿ ಅದರ ಬಳಕೆ ಜಾಸ್ತಿ.

ಅಲ್ಲಿ ಮಾಡುವ ಮರ್ಚಿನಿ ಅನ್ನೋ ಹಪ್ಪಳ ಸೊಗಸಾಗಿರತ್ತೆ (ಮರ್ಚಿನಿ ಅಂದರೇ ಮರಗೆಣಸು ಇರಬಹುದು - ಮಲೆಯಾಳ ಬಲ್ಲವರು ಹೇಳಬೇಕು). ಮರಗೆಣಸಿನ ಹಿಟ್ಟಿಗೆ ಹದವಾಗಿ ಉಪ್ಪು ಖಾರ ಬೆರೆಸಿ ಹಪ್ಪಳದಂತೆ ಲಟ್ಟಿಸಿ, ಈಚಲು ಚಾಪೆಗಳ ಮೇಲೆ ಒಣಗಿಸುತ್ತಾರೆ. ಹಾಗಾಗಿ ಒಣಗಿದ ಮೇಲೂ (ಕರಿದ ಮೇಲೂ), ಹಪ್ಪಳದಲ್ಲಿ ಪಟಾಪಟಿ ಗುರುತುಗಳಿರುತ್ತವೆ.

Vimala ಹೇಳಿದರು...

Maragenasininda madida finger chips bengaloorina hotchips shopsallisiguttalla. Thanks vikas for the information.

niranjan ಹೇಳಿದರು...

eevattu office nalli saabakki bagge charche aaytu but yyaarigu adu heege maadtare antha gottilla so thanx for information

vishu ಹೇಳಿದರು...

ವಿಶ್ವನಾಥ್: ಇದೊಂದು ತಿಳಿದುಕೊಳ್ಳುವ ವಿಷಯ, ಸುಮಾರು 75% ಜನರಿಗೆ ಗೊತ್ತಿಲ್ಲ ೊಒಳ್ಳೆಯ ವಿಷಯ ತಿಳಿಸಿದ್ದೀರಿ, ಧನ್ಯವಾದಗಳು

Shilpa PK ಹೇಳಿದರು...

ತುಂಬಾ ಒಳ್ಳೆಯ ಮಾಹಿತಿ, ಅದೇ ರೀತಿ ಸಬ್ಬಕ್ಕಿ ಸಂಡಿಗೆ ಮಾಡುವ ಬಹೆ ಹೇಳಿದರೆ ತುಂಬಾ ಉಪಯೋಗವಾಗುತ್ತದೆ.
ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

ಶಿಲ್ಪ, 'ಸಬ್ಬಕ್ಕಿ ಸಂಡಿಗೆ' ಅಂತ ಗೂಗಲ್ಲಲ್ಲಿ ಹುಡುಕಿ.. ಸಿಗತ್ತೆ ನೋಡಿ. ಧನ್ಯವಾದ

ಹಂಸಾನಂದಿ, ವಿಮಲಾ, ವಿಷ್ಣು, ನಿರಂಜನ್, ಧನ್ಯವಾದಗಳು.. :)