ಭಾನುವಾರ, ಸೆಪ್ಟೆಂಬರ್ 8, 2013

Kannada books online purchase

ಕನ್ನಡ ಪುಸ್ತಕಗಳ ಆನ್ ಲೈನ್ ಖರೀದಿ

ಕನ್ನಡ ಪುಸ್ತಕಗಳನ್ನು ಕೊಳ್ಳಲು ಬೆಂಗಳೂರು, ಮೈಸೂರು ಹೊರತುಪಡಿಸಿ ಬೇರೆ ಊರುಗಳಲ್ಲಿ ಒಳ್ಳೆಯ ಸಂಗ್ರಹವಿರುವ ಅಂಗಡಿಗಳಿಲ್ಲ (ಅಥವಾ ಕೊಳ್ಳುವವರಿಲ್ಲ?!). ಬೆಂಗಳೂರಿನಲ್ಲಾದರೂ ಪುಸ್ತಕದಂಗಡಿಗೆ ಹೋಗಬೇಕೆಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಟವೇ ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಓಡಾಟದ ಶ್ರಮದ, ಹಣದ ಖರ್ಚೂ ಆಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ಪುಸ್ತಕ ಕೊಂಡು ಮನೆಗೇ ತರಿಸಿಕೊಳ್ಳುವ ವ್ಯವಸ್ಥೆ ಬಂದಿರುವುದರಿಂದ ಯಾವ ಊರಲ್ಲಿದ್ದರೂ ಅದನ್ನು ಬಳಸಿಕೊಳ್ಳಬಹುದು.

ಈ ಕೆಳಗಿನದು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಕೊಳ್ಳಲು ಇರುವ ತಾಣಗಳ ಪಟ್ಟಿ.  ಇವುಗಳಲ್ಲದೇ ಇನ್ನೂ ಬೇರೆ ತಾಣಗಳು ಗೊತ್ತಿದ್ದರೆ ತಿಳಿಸಿ.
ಕೆಲವು ತಾಣಗಳಲ್ಲಿ ಕಡಿಮೆ ಪುಸ್ತಕಗಳ ಸಂಗ್ರಹವಿದೆ. ಆಕೃತಿ ಬುಕ್ಸ್, ಅಕ್ಷರ ಪ್ರಕಾಶನ, ಮೈ ಬುಕ್ ಅಡ್ಡಾ, ಚಿಂತನ ಪುಸ್ತಕ, ನವಕರ್ನಾಟಕ, ಕ್ವಿಲ್ ಬುಕ್ಸ್ ಮುಂತಾದ ಕೆಲವು ತಾಣಗಳಲ್ಲಿ ಕನ್ನಡ ಪುಸ್ತಕಗಳ ಹೆಸರನ್ನು ಕನ್ನಡದಲ್ಲೇ ಟೈಪಿಸಿ ಹುಡುಕಬಹುದು ಅನ್ನುವುದು ವಿಶೇಷ. ಆದರೆ ಬೇರೆ  ತಾಣಗಳಲ್ಲಿ ಕನ್ನಡ ಹೆಸರನ್ನು ಇಂಗ್ಲೀಷ್ ಲಿಪಿಯಲ್ಲಿ ಹುಡುಕಬೇಕು. ಈ ಎಲ್ಲಾ ತಾಣಗಳಲ್ಲಿ ನಮಗೆ ಬೇಕಾದ ಎಲ್ಲಾ ಪುಸ್ತಕಗಳು ಇದ್ದೇ ಇರುತ್ತವೆ ಅಂತ ಹೇಳಲಾಗುವುದಿಲ್ಲ. ಆದರೂ ಒಂದು ಮಟ್ಟಿಗೆ ಒಳ್ಳೆಯ ಸಂಗ್ರಹವಿದೆ.  ಪುಸ್ತಕಗಳು ರಿಯಾಯತಿ ದರಗಳಲ್ಲಿಯೂ ಮಾರಾಟಕ್ಕಿರುತ್ತವೆ.

ನೀವು ಹುಡುಕುವ ಯಾವುದಾದರೂ ಪುಸ್ತಕ ಸಿಗಲಿಲ್ಲವೆಂದರೆ ಆ ತಾಣದ ಗ್ರಾಹಕ ಸೇವೆಗೆ ಒಂದು ಇ-ಮೇಲ್ ಕಳಿಸಿ ಹೆಚ್ಚು ಕನ್ನಡ ಪುಸ್ತಕಗಳನ್ನು ಸೇರಿಸಲು ಹೇಳಿ.  ಆಗ ಅವರು ಪುಸ್ತಕಗಳಿಗೆ ಬೇಡಿಕೆ ಇದೆ ಎಂದು ಖಂಡಿತ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಕ್ಕೆ ಸೇರಿಸುತ್ತಾರೆ. ಮುಂದೆ ಅನುಕೂಲವಾಗುತ್ತದೆ.

ನನ್ನ ವೈಯಕ್ತಿಕ ಅನುಭವ ಹೇಳುವುದಾದರೆ,  ಇವುಗಳಲ್ಲಿ ಆಕೃತಿ ಬುಕ್ಸ್, ಫ್ಲಿಪ್ ಕಾರ್ಟ್, ಸಪ್ನಾ, ನವಕರ್ನಾಟಕ ,ಇನ್ಫಿಬೀಮ್ ಗಳಿಂದ ಹಲವು ಪುಸ್ತಕಗಳನ್ನು ತರಿಸಿಕೊಂಡಿದ್ದೇನೆ. ಒಳ್ಳೆಯ ಸೇವೆ ಕೊಟ್ಟಿದ್ದಾರೆ.  ಅಮೇಜಾನ್.ಕಾಂನಲ್ಲಿ ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದೇನೆ. ಆದರೆ ಅದರ ಭಾರತೀಯ ಆವೃತ್ತಿಯಲ್ಲಿ (ಅಮೇಜಾನ್.ಇನ್) ವ್ಯವಹಾರ ಮಾಡಿಲ್ಲ. ಜಯನಗರದಲ್ಲಿರುವ ಟೋಟಲ್ ಕನ್ನಡ ಮಳಿಗೆಯೂ ಕೂಡ ಒಳ್ಳೆಯ ಸೇವೆ ಕೊಡುತ್ತಿದೆ. ಉಳಿದಂತೆ ಪಟ್ಟಿಯಲ್ಲಿರುವ ಇತರ ತಾಣಗಳ ಜೊತೆ ವ್ಯವಹರಿಸಿಲ್ಲವಾದರೂ ಹೆಚ್ಚಾಗಿ ಕ್ಯಾಶ್ ಆನ್ ಡೆಲಿವರಿ  ಆಯ್ಕೆ ಇರುತ್ತದಾದ್ದರಿಂದ ಏನೂ ತೊಂದರೆಯಿಲ್ಲ. 

ಓದಿ... ಓದಿಸಿ...

(ಸೂಚನೆ: ಮೇಲಿನ ಪಟ್ಟಿಯಲ್ಲಿರುವ  ಕೆಲವು ತಾಣಗಳು ಈಗ ಸೇವೆಯನ್ನು ನಿಲ್ಲಿಸಿರಬಹುದು)

(೨೦೧೯-೨೦ update: ಈಗ ಆನ್ ಲೈನ್ ಖರೀದಿ ಜನಪ್ರಿಯವಾಗಿದ್ದು ಎಲ್ಲರೂ ಚೆನ್ನಾಗಿ ಸೇವೆ ಕೊಡುತ್ತಿದ್ದಾರೆ.)

9 ಕಾಮೆಂಟ್‌ಗಳು:

Subrahmanya ಹೇಳಿದರು...

good. ಆಗಲಿ, ಓದೋಣ ಮತ್ತು ಓದಿಸೋಣ.

Akka ಹೇಳಿದರು...

olleya maahitigaagi dhanyavaadagalu

Mahesh Hegade ಹೇಳಿದರು...

Fantastic Vikas....great info....can you also try and find where one can fine kannada e-books?

ಶ್ರೀನಾಥ್ ಟಿ ಕೆ ಹೇಳಿದರು...

ಉತ್ತಮವಾದ ಪಟ್ಟಿ..ವಂದನೆಗಳು

Harsha ಹೇಳಿದರು...

www.madhwakart.com

Gayathri Hegde ಹೇಳಿದರು...

A4dable.in site nalli olleya collection,old books ide,,user friendly site

vasista ಹೇಳಿದರು...

sapnaonline alli 5% discount ide. beerellu illa.. Akruti website alli author wise hudkodu heege ?

talegari (ತಾಳೆಗರಿ) ಹೇಳಿದರು...

http://kannadanudi.wikidot.com

ವಿ.ರಾ.ಹೆ. ಹೇಳಿದರು...

Thanks Subrahmanya, Akka, Maheshanna, ಶ್ರೀನಾಥ್ ಟಿ ಕೆ, Harsha, Gayathri Hegde, Vasista

@Maheshanna,
--> As far as my knowledge, presently because of market constraints and piracy problems, Kannada e-books are not being made. (legally;)). Scanned copy of many books (mostly old) are available in PDF format only.

---> Many oldbooks are available for download in ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ site. (http://www.dli.ernet.in/)
All are in TIFF format and have to be downloaded page-wise which is a very tedious work. But, there are some scripts available in net to download one book in full in one shot and convert to pdf also.

---> ನನ್ನ ಲೈಬ್ರರಿ(www.nannalibrary.com) : It gives Kannada books for online reading on rent. It is only for online reading(through Flash player and apps) and books can't be downloaded. I haven't tried it.

---> I have heard that there are/were efforts to bring Kannada books in e-book format.

Let's wait..... ;)