ಬುಧವಾರ, ಡಿಸೆಂಬರ್ 19, 2007

ನಾನು ಪಾಪಿ, ಅವಳು ರಾತ್ರಿ ಬೆತ್ತಲೆ ಮಲಗ್ತಾಳಂತೆ !!

ನಾನು ಪಾಪಿ, ನನ್ನ ಏಸು ಸ್ವಾಮಿ ಕಾಪಾಡ್ತಾನೆ!

ಮೊನ್ನೆ ಸಂಜೆ ಆಫೀಸು ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಬೇಕಾಗಿತ್ತು. ಕೆಲಸ ಮಾಡಿ(!) ಸುಸ್ತಾಗಿದ್ದರಿಂದಲೋ ಏನೋ ಮುಖ ಸಪ್ಪೆಯಾಗಿತ್ತು ಅನ್ನಿಸುತ್ತದೆ. ಯಾವನೋ ಒಬ್ಬ ಹುಡುಗ ಬಂದ. ಜೀನ್ಸ್ ಪ್ಯಾಂಟ್, ಟೀ ಷರ್ಟು, ಜಾಕೆಟ್ ಹಾಕಿ ಬೆಳ್ಳಗೆ ಇದ್ದ. "ಹಲೋ..ಐಯಾಮ್ ದೀಪಕ್" ಅಂದ. ನಾನು "ಒ.ಕೆ ಹೇಳಿ" ಅಂದೆ. "ಐ ವಾಂಟ್ ಟು ಟಾಕ್ ಟು ಯು ಅಬೋಟ್ ಜೀಸಸ್ ಕ್ರೈಸ್ಟ್" ಅಂದ. ನನಗೆ ಆಶ್ಚರ್ಯ. ಅಯ್ಯೋ ಇವನ...ನ್, ರಸ್ತೆಲ್ಲಿ ಹೋಗ್ತಾ ಇರೋನ್ನ ನಿಲ್ಸಿ ಕ್ರಿಸ್ತನ ಬಗ್ಗೆ ಮಾತಾಡ್ಬೇಕು ಅಂತಾನಲ್ಲಪ್ಪ ಅಂದುಕೊಂಡು "ಯಾಕೆ?" ಅಂದೆ. "ಯೂ ಸೀಮ್ಸ್ ಟು ಬಿ ವೆರಿ ಡಿಪ್ರೆಸ್ಡ್ , ಐ ಥಿಂಕ್ ಜೀಸಸ್ ಕ್ಯಾನ್ ಮೇಕ್ ಯು ರಿಲಾಕ್ಸ್ಡ್" ಅಂದ. ಅವನನ್ನು ಸರಿಯಾಗಿ ಮಾತಾಡಿಸಿ ಕ್ಲಾಸ್ ತಗೊಳ್ಳಬೇಕೆಂಬ ಆಸೆಯಾಯಿತು, ಆದರೆ ಗೆಳೆಯ ಕಾಯುತ್ತಿದ್ದರಿಂದ ಹೋಗಬೇಕಿತ್ತು ಬೇಗ. "ನಂಗೆ ಆಸಕ್ತಿ ಇಲ್ಲ" ಅಂದೆ. "ಒ.ಕೆ ನೋ ಪ್ರಾಬ್ಲೆಮ್, ಕೀಪ್ ಇಟ್ ವಿತ್ ಯು" ಅಂದು ಒಂದು ಕರಪತ್ರ ಕೊಟ್ಟ. ಜೇಬಿಗೆ ಹಾಕಿಕೊಂಡೆ. ರಾತ್ರಿ ಮನೆಗೆ ಬಂದು ಅದನ್ನು ತೆಗೆದು ನೋಡಿದರೆ ಅದರಲ್ಲಿದ್ದುದ್ದು ಈ ಕೆಳಗಿನ ವಾಕ್ಯಗಳು..

you need salvation becoz of ur sin. you r not only a sinner by birth thru Adam, but also by ur choice. As a sinner, u r without God and without hope. Sin brings death and eternal separation from God. ಮಧ್ಯ ನರಕಕ್ಕೆ ಹೋದ ಶ್ರೀಮಂತನ ಕಥೆಯೊಂದಿದೆ.. ಅವನು ಈಗಲೂ ನರಕದಲ್ಲಿದ್ದಾನಂತೆ ! Bible shows how simple it is to escape the eternal fire of hell. Sin has a price and God must punish sin. Becoz u have sinned against Him , u must bear ur punishment or accept Christ's substitutionary death on the cross of Calvary. Jesus Christ, the perfect Son of God, was the only man who ever lived a sinless life. .... Jesus loves u and died to save u from ur sins.....Every lost sinner is going to hell, but God offers u the gift of salvation thru the blood of Christ.... If u will accept Jesus Christ as ur Saviour,please pray this prayer...................... Jesus is knocking at the door of ur heart.Will u let him in? ಇತ್ಯಾದಿ ಇತ್ಯಾದಿ....

ಮಧ್ಯೆ ಮಧ್ಯೆ ಸುಮಾರು ಬೈಬಲ್ಲಿನ ಸಾಲುಗಳನ್ನು ಉದಾಹರಿಸಿದ್ದಾರೆ . ಕೆಳಗೆ ಇ ಮೇಲ್ ವಿಳಾಸ ಕೊಟ್ಟಿದ್ದಾರೆ.


ಇದನ್ನು ಓದಿ ನನಗೆ ನಿಜವಾಗಿಯೂ ಪಾಪ ಭೀತಿ ಕಾಡತೊಡಗಿದೆ, ಚಿಕ್ಕವನಿದ್ದಾಗಲಿಂದ ಅದೇನೇನು ಪಾಪ ಮಾಡಿದ್ದಿನೋ, ಅದೆಂತಾ ನರಕಕ್ಕೆ ಹೋಗುತ್ತೇನೋ, ನನ್ನ ಕಾಪಾಡುವವರು ಯಾರೂ ಇಲ್ಲವೇನೋ ಅನ್ನಿಸತೊಡಗಿದೆ। ರಾತ್ರಿ ಎಲ್ಲಾ ಅದೇ ಕನಸು ಬಿದ್ದು , ಕನಸಿನಲ್ಲಿ ಪ್ರಜ್ವಲವಾದ ಬೆಳಕಿನ ಮಧ್ಯದಿಂದ ಸ್ವಾಮಿ ಏಸು ಬಂದು ’ಬಾ ಮಗು’ ಎಂದು ಕರೆಯುತ್ತಿರುವಂತೆ ಆಗುತ್ತಿದೆ। ಇವತ್ತೊ ನಾಳೆಯೋ ನಾನು ಏಸುವಿನ ಮೊರೆ ಹೋಗಿ ಕ್ರೈಸ್ತನಾಗಿ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಆರಂಭಿಸುತ್ತೇನೆ। ಅಬ್ಬಾ ಎಂತ ನೆಮ್ಮದಿಯ ಜೀವನ !!. .......................................

................................................................................

................................................................................

ಒ.ಕೆ ಒ.ಕೆ, ಈಗ ತಮಾಷೆ ಸಾಕು. ಈ ಮತಾಂತರ ಎಷ್ಟು ಗಂಭೀರ ವಿಷಯವೆನ್ನುವುದು ನಿಮಗೆ ಗೊತ್ತೇ ಇದೆ.

ಎಲ್ಲರಿಗೂ ಮುಂಚಿತವಾಗಿ ಕ್ರಿಸ್ ಮಸ್ ಶುಭಾಶಯಗಳು :-)

***********************************


ಅವಳು ರಾತ್ರಿ ಬೆತ್ತಲೆ ಮಲಗ್ತಾಳಂತೆ !!

ಒಂದು ಸುದ್ದಿ ಕೇಳಿ। ಯಾವುದೋ ವಿದೇಶದ ಆಟಗಾರನೊಬ್ಬನ ಹೆಂಡತಿ ರಾತ್ರಿ ಮಲಗುವಾಗ ಏನು ಉಡುಪು ಧರಿಸುತ್ತಾಳಂತ ನಿಮಗೆ ಗೊತ್ತೆ? ಇಲ್ಲ ಅಲ್ವಾ? ಹೇಳ್ತೀನಿ ಕೇಳಿ. ಅವಳು ಏನೂ ಹಾಕ್ಕೊಳ್ದೆ ಬೆತ್ತಲೆ ಮಲಗ್ತಾಳಂತೆ !!. ಅವಳ ಗಂಡನಂತಾ ಗಂಡಸಿನ ಜೊತೆ ಯಾರೇ ಆದ್ರೂ ಕೂಡ ಹಾಗೇ ಮಲಗ್ತಾರಂತೆ !!ಥೂ॥ ಇದೇನಕ್ಕೆ ಹೇಳ್ತೀದಿನಿ, ಮಾನ ಮರ್ಯಾದೆ ಏನಿಲ್ವಾ ಅಂತೀರಾ? ಅಥವಾ ಅವ್ಳು ಏನಾರೂ ಮಾಡ್ಕೊಳ್ಲಿ ,ಹೆಂಗಾರೂ ಮಲ್ಕೊಳ್ಲಿ ನಮ್ಗೇನು , ಇಂತ ಸುದ್ದಿ ಎಲ್ಲಾ ಯಾಕೆ ಅಂತೀರಾ? ಹಾಗಿದ್ರೆ ಇದು ನಾನು ಹೇಳ್ತಾ ಇರೋದಲ್ಲ. ಇದು ಹೆಚ್ಚು ಪ್ರಸಾರವಿರುವ ಭಾರತದ ಪ್ರಸಿದ್ಧ ಪತ್ರಿಕೆ xxxxx xx xxxxxದಲ್ಲಿ ಮೊನ್ನೆ ಮೊನ್ನೆ ಬಂದ ಸುದ್ದಿ. ಇಂತ ಸುದ್ದಿಗಳನ್ನ ಓದೋಕೆ ನಾವು ದುಡ್ಡು ಕೊಟ್ಟು ಪತ್ರಿಕೆ ತಗೋಬೇಕಾ? ಒಂದು ಪತ್ರಿಕೆಯಲ್ಲಿ ಈ ರೀತಿ ಸುದ್ದಿ ಹಾಕ್ಬೇಕಾ? ತಾನು ಬೆತ್ತಲೆ ಮಲಗ್ತೀನಿ ಅಂತ ಯಾವಳೋ ವಿದೇಶದಲ್ಲಿ ಹೇಳಿದ್ರೆ ಅದನ್ನ ನಮ್ಮ ದೇಶದ ಪತ್ರಿಕೆಲ್ಲಿ ಹಾಕಿ ನಮಗೆ ಓದಿಸ್ಬೇಕಾ? ಮತ್ತು ಆ ಸುದ್ದಿ ಪ್ರಕಟಿಸಿದವರು ತಮ್ಮ ಹೆಂಡತಿಯರು ರಾತ್ರಿ ಹೇಗೆ ಮಲಗ್ತಾರೆ ಅಂತ ಪತ್ರಿಕೆಯಲ್ಲಿ ಹಾಕ್ತಾರಾ ? ಹೀಗಂತ ನಿಮಗೆ ಸ್ವಲ್ಪನಾದ್ರೂ ಅನಿಸಿದರೆ, ಆ ತಲೆಹಿಡುಕ ಪತ್ರಿಕೆಯನ್ನ ನೀವು ಕೊಂಡುಕೊಳ್ತಾ ಇದ್ರೆ, ದಯವಿಟ್ಟು ನಿಲ್ಸಿ. ನಾನು ಯಾವ ಪತ್ರಿಕೆ ಬಗ್ಗೆ ಮಾತಾಡ್ತಿದಿನಿ ಅಂತ ನಿಮ್ಗಾಗ್ಲೇ ಗೊತ್ತಾಗಿದೆ ಅನ್ಕೊತಿನಿ. ಮತ್ತೆ ಅದು ಅಷ್ಟು ಜನಪ್ರಿಯ ಆಗಿದೆ ಅಂದ್ರೆ, ಜನ ಅಂತಹ ಸುದ್ದೀನೆ ಇಷ್ಟ ಪಡ್ತಾರೆ ಅಂತ ಅರ್ಥ ಅಲ್ವಾ ಅಂತ ಕೇಳ್ತಿರಾ?! then i m sorry. :(

***************************************

ಬಡಜೋಗಿಯ ಹಾಡು

ಇದು ಯಾರು ರಚಿಸಿದ್ದೋ ಗೊತ್ತಿಲ್ಲ. ಎಲ್ಲೋ ಓದಿದಾಗ ಯಾಕೋ ಬಹಳ ಇಷ್ಟವಾಯಿತು. ಇದರ ಲೇಖಕರಿಗೊಂದು ಧನ್ಯವಾದ ಹೇಳುತ್ತಾ ಅದನ್ನು ಇಲ್ಲಿ ಹಾಕುತ್ತಿದ್ದೇನೆ.

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.

18 ಕಾಮೆಂಟ್‌ಗಳು:

Sandeepa ಹೇಳಿದರು...

email id ಅಂದ್ರಲ್ಲಾ ಎಲ್ಲಿ?

VENU VINOD ಹೇಳಿದರು...

ಮತಾಂತರದ ಟೆಕ್ನಿಕ್ಕೇ ಹಾಗೆ, ಇತರರು ತಪ್ಪು ಮಾಡಿದ್ದಾರೆ, ಇತರ ಧರ್ಮದ ದೇವರುಗಳೆಲ್ಲಾ ಪ್ರಯೋಜನವಿಲ್ಲದವು...ಹೀಗೆಲ್ಲಾ ಏನೇನೋ ಒದರುತ್ತಾರೆ ಈ ಮಿಶನರಿಗಳು! ಇನ್ನು ಕೆಲವೆಡೆ ಮಾಡು ಹಾರಿ ಹೋಗುವಂತೆ ಕಿರುಚಾಡೋದನ್ನೂ ನೋಡಿದ್ದೇನೆ.
XXXXX XX XXXXX ಪತ್ರಿಕೆ ಯಾವುದೆಂದು ಗೊತ್ತಾಯ್ತು:) ಆದ್ರೆ ಈಗ ಮಡಿವಂತಿಕೆಯ ಕಾಲ ಅಲ್ಲ ಸ್ವಾಮಿ:)

ಅನಾಮಧೇಯ ಹೇಳಿದರು...

alpazna,ಯಾಕಪ್ಪಾ ನೀನು ಪಾಪಿನಾ?! :)

ವೇಣು, ಇದ್ರಲ್ಲಿ ಮಡಿವಂತಿಕೆ ಪ್ರಶ್ನೆ ಬರೋಲ್ಲ. ಅಂತಾದ್ದನ್ನೆಲ್ಲಾ ನಮಗೆ ’ಸುದ್ದಿ’ ಅಂತ ಯಾಕೆ ಕೊಡ್ತಾರೆ ಅಂತ ಕೇಳ್ತಿರೋದು.

Seema S. Hegde ಹೇಳಿದರು...

ವಿಕಾಸ,
ಇಂಥದೇ ಮತಾಂತರದ ಅನುಭವ ನನಗೂ ಒಮ್ಮೆ ಬೆಂಗಳೂರಿನಲ್ಲಿ ಆಗಿತ್ತು. ಕಬ್ಬನ್ ಪಾರ್ಕ್ ನಲ್ಲಿ ನಾನು ಒಬ್ಬನೇ ಕೂತಿದ್ದೆ. ಯಾಕೋ ಬೇಜಾರೆಂದು ಹೋಗಿದ್ದೆ. ನನ್ನ ಮುಖ 'ಭಾಡಿಗೆಯ ಕುದುರೆಯ' ಮುಖದಂತೆ ಆಗಿತ್ತೇನೋ ಬಹುಶಃ! ಇಂಥದೆ ಒಂದು ಕಾಗದದ ಚೂರು ಕೈಗಿತ್ತು ಹಿಡಿದೇಬಿಟ್ಟರು. ತಪ್ಪಿಸಿಕೊಂಡು ಬರುವಷ್ಟರಲ್ಲಿ 'ಏಳು ಹನ್ನೊಂದಾಗಿತ್ತು'; ಟೈಮ್ ಅಲ್ಲ, ಸಾಕು ಸಾಕಾಗಿತ್ತು ಅಂತ!

ಇನ್ನು ಹೆಸರಾಂತ news paper ಗಳ page 3 ನೋಡಿದ್ರೆ ಬರೀ ಇಂಥದೆ ಸುದ್ದಿ ಬಿಡು. ಜಗತ್ತು ಯಾವುದರ ಬೆನ್ನು ಹತ್ತಿ ಹೊರಟಿದೆಯೋ ಗೊತ್ತಾಗ್ತಿಲ್ಲ :(

ಹಾಡು ತುಂಬಾ ಚೆನ್ನಾಗಿದೆ; ನಿನಗಿಷ್ಟವಾದಷ್ಟೇ ನನಗೂ ಇಷ್ಟವಾಯಿತು :)

Harisha - ಹರೀಶ ಹೇಳಿದರು...

ಟೈಟಲ್ ಸಕ್ಕತ್ತಾಗಿ ಕೊಟ್ಟಿದ್ದೆ :)

ನಮಗೆ ನಮ್ಮ ಧರ್ಮದಲ್ಲಿ ನಂಬಿಕೆ ಇದ್ರೆ ಸಾಕು. ಯಾರಿಗೂ ಜಗ್ಗದು ಬೇಕಾಗ್ತಿಲ್ಲೆ. ನಾವು ಪಾಪ ಮಾಡಿದ್ವ, ನಮ್ಮಜ್ಜ ಪಾಪ ಮಾದಿಡ್ನ.. ಅದೆಲ್ಲ ಅವ್ಕ್ಯಾಕೆ? ಅವ್ಕೆ ಅವರ ಧರ್ಮದಲ್ಲಿ ನಂಬಿಕೆ ಇದ್ರೆ ಅವು ಅದನ್ನ ಪಾಲಿಸ್ಲಿ. ಅದನ್ನ ಬಿಟ್ಟು ಬೇರೆಯವರ ತಲೆ ತಿನ್ನಕ್ಕೆ ಎಂತಕ್ಕೆ ಬರಕ್ಕು?

ಇನ್ನು ಟೈಮ್ಸ್ ಬಗ್ಗೆ... ಮುಂಗಾರು ಮಳೆಯಲ್ಲಿ ಕೇಳಲ್ಯ... ಈ ಟೈಮ್ ಅನ್ನೋದು ಪಕ್ಕ ೪೨೦.. ಸೋ ಈಸ್ ಟೈಮ್ಸ್.. ಆದ್ರೆ ಜನಕ್ಕೆ ಬೇಕಾಗಿದ್ದೂ ಅದೇಯ.. ೪೦ಕ್ಕೆ ೨೦ ಪುಟ ಅಡ್ವೆರ್ಟೈಸ್, ಉಳ್ದಿದ್ದು ಇಂಥ ಸುದ್ದಿ...

Supreeth.K.S ಹೇಳಿದರು...

ವಿಕಾಸ್,
ಮತಾಂತರದ ಹುಚ್ಚು ಎಲ್ಲಾ ಧರ್ಮದವರಿಗೂ ಇದ್ದೇ ಇರುತ್ತದೆ. ಗಮನಿಸಿ ನೋಡಿ, ಹಿಂದುಗಳು ಸ್ವಲ್ಪ ಮತಾಂಧರಾದರೆ ಇಡೀ ಜಗತ್ತಿನ ಕಟ್ಟಕಡೆಯ ಆಶಾಕಿರಣವೆಂದರೆ ಅದು ಭಾರತ ಮಾತ್ರ. ಹಿಂದು ಧರ್ಮದಲ್ಲಿಲ್ಲದ ಯಾವ ಸಂಗತಿಯೂ ಜಗತ್ತಿನಲ್ಲಿಲ್ಲ. ಇದು ಅತ್ಯಂತ ಸಹಿಷ್ಣು ಧರ್ಮ. ಸಂಸ್ಕೃತ ದೇವ ಭಾಷೆ, ಕಂಪ್ಯೂಟರಿಗೆ ಹೊಂದಿಕೆಯಾಗುವಂಥದ್ದು(ಅದು ಹೇಗೆಂದು ಗೊತ್ತೇ ಇಲ್ಲದಿದ್ದರೂ!), ವೇದಗಳಲ್ಲಿ ಅಪಾರವಾದ ವೈಜ್ಞಾನಿಕ ಜ್ಞಾನವಿದೆ (ಅದನ್ನು ಓದದೇ ಇದ್ದರು) ಎಂದು ವಾದಿಸುತ್ತಾರೆ. ಇಂಥದೇ ವಾದವನ್ನು ಮುಸಲ್ಮಾನರೂ ಮಾಡುತ್ತಾರೆ. ಕುರಾನ್ ನೇರವಾಗಿ ಅಲ್ಲಾಹುವಿನಿಂಡ ಬಂದದ್ದು. ಅದರಲ್ಲಿಲ್ಲದ ಸಂಗತಿಗಳೆಲ್ಲವೂ ನಿಷಿದ್ಧ. ಪಶ್ಚಿಮ ಜಗತ್ತು, ಭಾರತದಂತಹ ರಾಷ್ಟ್ರಗಳು ಧರ್ಮವನ್ನು ಬಿಟ್ಟು ಕೆಟ್ಟ ದಾರಿಹಿಡಿಯುತ್ತಿದ್ದಾವೆ ಎಂದು ವಾದಿಸುತ್ತಾರೆ. ಕ್ರೈಸ್ತರು, ನಮ್ಮದೇ ನಿಜವಾದ ಪ್ರಗತಿಪರ ಧರ್ಮ. ಪರಮ ದಯಾಳು ಧರ್ಮ ಎನ್ನುತ್ತಾರೆ. ಎಲ್ಲಾ ಧರ್ಮಗಳದೂ ಇದೇ ಪಾಡು.

ಆದರೆ ಆಮಿಷವೊಡ್ಡಿ ನಡೆಸುವ ಮತಾಂತರಕ್ಕೆ, ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಇಲ್ಲಿ ಒಂದು ಆಲೋಚನೆ ನನ್ನ ತಲೆಯಲ್ಲಿ ಸುಳಿಯುತ್ತಿದೆ. ಧರ್ಮವನ್ನು ತ್ಯಜಿಸಿ, ದೇವರನ್ನು ನಿರಾಕರಿಸಿದ ನಾಸ್ತಿಕರ ಮೇಲೆ ಧಾರ್ಮಿಕ ನಂಬಿಕೆಗಳನ್ನು ಹೇರುವುದೂ ಮತಾಂತರದಷ್ಟೇ ಅಪರಾಧವಲ್ಲವಾ?

ಇನ್ನು **** ಪತ್ರಿಕೆಯ ಬಗ್ಗೆ... ಅದು ಅವರ ಮಾರ್ಕೆಟಿಂಗ್ ಸ್ಟ್ರಾಟಜಿ... ಮಡಿವಂತಿಕೆ, ನೈತಿಕ ಜವಾಬ್ದಾರಿಯೆಲ್ಲಾ ವ್ಯಾಪಾರದ ಮುಂದೆ ನಗಣ್ಯವಲ್ಲವೇ? ಇಲ್ಲವಾದರೆ ನೀವು ಆ ಪತ್ರಿಕೆಯ ಬಗ್ಗೆ ಬರೆಯುವಾಗಲಾದರೂ ಅಥವಾ ಅದಕ್ಕೆ ಹೆಡ್ಡಿಂಗ್ ಕೊಡುವಾಗಲಾದರೂ ಕೊಂಚ ಸಭ್ಯತೆಯನ್ನು ಪಾಲಿಸಬಹುದಿತ್ತಲ್ಲವೇ? ರೋಚಕತೆ ನಿಮಗೆ ಮುಖ್ಯವಾಗಿದೆ...

ಅನಾಮಧೇಯ ಹೇಳಿದರು...

ಹರೀಶ,
ನೀ ಹೇಳದು ನಿಜ. ನಮ್ಮ ಮನಸ್ಸು ಗಟ್ಟಿ ಇರೋವರೆಗೆ ಯಾರೂ ಏನೂ ಮಾಡಲ್ಲಾಗ್ತಿಲ್ಲೆ. ಹಿಂದೂಗಳಾಗಿ ಮಾಡಕ್ಕಾಗ್ದೇ ಇದ್ದುದ್ದನ್ನ ನಾವು ಕ್ರಿಶ್ಚಿಯನ್ನರಾಗಿ ಸಾಧಿಸ್ತೀವಿ ಅನ್ನೋದರಲ್ಲಿ ಅರ್ಥವಿಲ್ಲ. ಇನ್ನು ಆ ಪತ್ರಿಕೆ ವಿಚಾರವಾಗಿ.. ಜನಕ್ಕೂ ಅಂತದೇ ಇಷ್ಟ ಅಂತ ಅವು ಅದನ್ನ ಹಾಕ್ತ್ವೋ ಅಥವಾ ಅಂತದ್ದನ್ನೇ ಹಾಕಿ ಜನರ ಇಷ್ಟದ ರೀತಿಯನ್ನೇ ಬದಲಾಯಿಸಿದ್ವೋ ಗೊತ್ತಾಗ್ತಾ ಇಲ್ಲೆ. !!

ಸುಪ್ರೀತ್,
ಅವರವರಿಗೆ ಅವರ ಧರ್ಮವೇ ಹೆಚ್ಚು ನಿಜ. ಆಮಿಷದಿಂದ, ಬಲವಂತದಿಂದ ಅಥವಾ ಮರುಳುಗೊಳಿಸಿ ಮಾಡುವ ಮತಾಂತರ ತಪ್ಪು. ಆದರೆ ನೀವು ಹೇಳಿದಂತೆ ಈ ಮತಾಂತರದ ’ಹುಚ್ಚು’ ಹಿಂದೂಗಳಲ್ಲಿ ಇಲ್ಲ ಬಿಡಿ. ಮತಾಂತರಗೊಂಡವರನ್ನು ಮರಳಿತರುವ ಯತ್ನವಿದೆಯೇ ಹೊರತು ಕ್ರಿಶ್ಚಿಯನ್ನರಂತೆ ಅದಕ್ಕೆಂದೇ ಜನಗಳು, ಫಂಡುಗಳು, ಗುರಿಗಳು, ಕಾರ್ಯಕ್ರಮಗಳು ಎಲ್ಲಾ ಇಲ್ಲ. ಇನ್ನೊಂದೆಂದರೆ, ಹಿಂದೂ ಧರ್ಮವೆಂದರೆ ಸಾಕು ಅದಕ್ಕೆ ಸಂಸ್ಕೃತವನ್ನು ಅಂಟಿಸಿಬಿಡುವ ರೋಗ! ಇದು ಪರ ವಿರೋಧಿಗಳಿಬ್ಬರು ಮಾಡುವ ಅನಗತ್ಯ ಕೆಲಸ. ವೇದಗಳು ಹಿಂದೂ ಧರ್ಮದ್ದಾದ ಮಾತ್ರಕ್ಕೆ, ಅಥವಾ ಸಂಸ್ಕೃತದಲ್ಲಿದ್ದ ಮಾತ್ರಕ್ಕೆ ಅದರಲ್ಲಿ ವೈಜ್ಞಾನಿಕ ಅಂಶವಿರಬಾರದು ಎಂದೇನೂ ಇಲ್ಲವಲ್ಲ. ಅಥವಾ ಜಗತ್ತಿನಲ್ಲಿ ಎಲ್ಲವೂ ವಿಜ್ಞಾನವಾಗಿಯೇ ಯಾಕೆ ಇರಬೇಕು? ಹಿಂದೂ ಎಂಬುದು ಬೇರೆ ಧರ್ಮಗಳಂತೆ ಯಾರೊ ಒಬ್ಬರು ಸ್ಥಾಪಿಸಿದ, ಅವರನ್ನು ಹಿಂಬಾಲಿಸಿದ ಜನರಿಂದ ಆದ ಧರ್ಮವಲ್ಲ. ಅದೊಂದು ರೀತಿಯ ಜೀವನ ಶೈಲಿ, ಸಂಸ್ಕೃತಿ, ಭೌಗೋಳಿಕತೆ, ನಂಬಿಕೆಗಳು, ಆಚರಣೆಗಳು ಇತ್ಯಾದಿಗಳಿಂದ ರೂಪುಗೊಂಡಿದೆ ಅಷ್ಟೆ.
ಖಂಡಿತ ನೀವು ಹೇಳಿದಂತೆ ಎಲ್ಲಾ ಬಿಟ್ಟವರ(ಧರ್ಮ,ದೇವರು ಇತ್ಯಾದಿ) ಮೇಲೆ ಬಲವಂತವಾಗಿ ಧಾರ್ಮಿಕ ನಂಬಿಕೆಗಳನ್ನು ಹೇರುವುದು ಅಪರಾಧವೇ ಸೈ. ಆದರೆ ಕೆಲವು ನಾಸ್ತಿಕವಾದಿಗಳು ಧರ್ಮಕ್ಕೆ, ದೇವರಿಗೆ, ಸಂಸ್ಕೃತಿಗೆ, ನಂಬಿಕೆಗಳಿಗೆ ಸಂಬಂಧಪಟ್ಟ ಎಲ್ಲವನ್ನೂ ಸಹ ಸುಖಾಸುಮ್ಮನೇ ವಿರೋಧಿಸುವುದು, ಅದರಿಂದ ದೂರವುಳಿಯುವುದು, ಅದನ್ನು ಹೀಗಳೆಯುವದದು ತರವಲ್ಲ ಎಂದು ನನ್ನನಿಸಿಕೆ.

ಈಗ ಪತ್ರಿಕೆಯ ವಿಷಯಕ್ಕೆ ಬಂದರೆ, ಅದು ಸಭ್ಯತೆಯ ಅಥವಾ ಮಡಿವಂತಿಕೆಯ ಪ್ರಶ್ನೆಯೇ ಅಲ್ಲ. ಅವರು ಬೆತ್ತಲೆ ವಿಷಯ ಹಾಕಿದರು ಎಂಬ ಕೋಪವೂ ಅಲ್ಲ. ಅಂತಹವುಗಳೆಲ್ಲ ’ಸುದ್ದಿ’ ಯಂತೆ ನಮಗೆ ಕೊಡುವ ಅಗತ್ಯ, ಔಚಿತ್ಯವಾದರೂ ಏನು? ಅಮೆರಿಕದ ನಟಿಯೊಬ್ಬಳು ಕಿರುಬೆರಳಿಗೆ ಗಾಯ ಮಾಡಿಕೊಂಡರೆ ಅದನ್ನು ದಾವಣಗೆರೆಯ ಜನರಿಗೆ ಸುದ್ದಿಯನ್ನಾಗಿ ಕೊಡುವದೇನಕ್ಕೆ????

thank u

Supreeth.K.S ಹೇಳಿದರು...

ಹಿಂದುಗಳಲ್ಲಿ ಮತಾಂತರದ ಪದ್ಧತಿ ಇಲ್ಲ ಎಂದದ್ದು ಹಾಸ್ಯಾಸ್ಪದ. ಏಕೆ ಅಂದರೆ ಹಿಂದು ಎನ್ನುವುದು ಒಂದು ಸಂಸ್ಕೃತಿ, ಅದೊಂದು ಜೀವನ ವಿಧಾನ ಎನ್ನುತ್ತೀರಿ, ಭೌಗೋಳಿಕತೆ, ವಿಚಾರಧಾರೆ ಎಂದು ವ್ಯಾಖ್ಯಾನಿಸುತ್ತೀರಿ ಹಾಗಾದರೆ ಮತಾಂತರಿಸಲು ಹೇಗೆ ಸಾಧ್ಯ?
ಹೋಗಲಿ ಬಿಡಿ, ನಿಮಗೆ ನಾಸ್ತಿಕ ಎಂದೊಡನೆಯೇ ಕಣ್ಣ ಮುಂದೆ ಪೆರಿಯಾರ್, ಕರುಣಾನಿಧಿಯವರು ಬರುವುದು ದುರಂತ. ವೈಚಾರಿಕತೆಯೆಂದರೆ ಏನು ಎಂಬುದರ ಬಗ್ಗೆ ಹೆಚ್ಚು ತಿಳಿಯೋಣ. ವಿಜ್ಞಾನ ವೈಚಾರಿಕತೆಯಲ್ಲ, ವೈಚಾರಿಕತೆಯ ಮಾರ್ಗವನ್ನು ಅನುಸರಿಸುವ ಒಂದು ಕವಲು ಅಷ್ಟೇ ವಿಜ್ಞಾನ. ತಾರ್ಕಿಕ ಚಿಂತನೆ, ವಿವೇಚನೆ ಎಲ್ಲವೂ ವಿಚಾರವಾದದ ಅಂಶಗಳು. ಗೌತಮ ಬುದ್ಧ ಶ್ರೇಷ್ಠ ನಾಸ್ತಿಕ ಎನ್ನುವುದನ್ನು ನಿಮಗೆ ನಂಬಲು ಸಾಧ್ಯವೇ?

“ಆದರೆ ಕೆಲವು ನಾಸ್ತಿಕವಾದಿಗಳು ಧರ್ಮಕ್ಕೆ, ದೇವರಿಗೆ, ಸಂಸ್ಕೃತಿಗೆ, ನಂಬಿಕೆಗಳಿಗೆ ಸಂಬಂಧಪಟ್ಟ ಎಲ್ಲವನ್ನೂ ಸಹ ಸುಖಾಸುಮ್ಮನೇ ವಿರೋಧಿಸುವುದು, ಅದರಿಂದ ದೂರವುಳಿಯುವುದು, ಅದನ್ನು ಹೀಗಳೆಯುವದದು ತರವಲ್ಲ ಎಂದು ನನ್ನನಿಸಿಕೆ. ” ಎಲ್ಲವನ್ನೂ ‘ಸುಖಾ ಸುಮ್ಮನೆ’ ವಿರೋಧಿಸುವುದು ನಾಸ್ತಿಕವಾದವಲ್ಲ, ಅದೂ ಒಂದು ಬಗೆಯ ಅಂಧಶ್ರದ್ಧೆ.

“ಅದರಿಂದ ದೂರವುಳಿಯುವುದು, ಅದನ್ನು ಹೀಗಳೆಯುವದದು ತರವಲ್ಲ ಎಂದು ನನ್ನನಿಸಿಕೆ” ಈ ಅನಿಸಿಕೆ ಏಕೋ ನನಗೆ ಒಪ್ಪಿತವಾಗಲಿಲ್ಲ. ನಾಸ್ತಿಕತೆ ಆಸ್ತಿಕತೆಯ ಬಗ್ಗೆ ಹೆಚ್ಚು ಚರ್ಚೆ ನಡೆಸೋಣ ಇನ್ಯಾವಾಗಾದರೂ ಸಮಯವಾದಾಗ.

ಇಲ್ಲೊಂದು ಸೂಕ್ಷ ಗಮನಿಸಿ, ಅಲ್ಲಿ ನಿಮಗೆ ಮಡಿವಂತಿಕೆಯ, ಸಭ್ಯತೆಯ ಪ್ರಶ್ನೆ ಕಾಡುವುದಿಲ್ಲ, ಆ ಪತ್ರಿಕೆ ಅಂಥದ್ದೇ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇದೆ. ಅದು ‘ಸುದ್ದಿ’ಯಾಗುವಂತಹ ಸಂಗತಿಯಲ್ಲ ಎನ್ನುವುದು ನಿಮ್ಮ ತಕರಾರು, ಆದರೆ ‘ಸುದ್ದಿ’ಯಾಗಲು ಯೋಗ್ಯವಲ್ಲದ ‘ಸುದ್ದಿ’ಯನ್ನು ನೀವು ಬ್ಲಾಗಲ್ಲಿ ಹಾಕುವ ಔಚಿತ್ಯವೇನು ? ಈ ವಿಷಯದ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸಿಬಿಡೋಣ...

ಅನಾಮಧೇಯ ಹೇಳಿದರು...

ಸುಪ್ರೀತ್, ನಾನು ಆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಖಂಡಿಸುವುದಕ್ಕೋಸ್ಕರ ಉಲ್ಲೇಖ ಮಾಡಿದ್ದೇನೆಯೆ ಹೊರತು ನಾನೇ ಆ ಸುದ್ದಿಯನ್ನು ಪ್ರಕಟಿಸಿಲ್ಲ ಎಂಬುದು ಎಂತವರಿಗಾದರೂ ತಿಳಿಯುತ್ತದೆ. ಪ್ಲೇಬಾಯ್, ಚಾಸ್ಟಿಟಿ, ಡೆಬೊನೇರ್ ಗಳಂತಹ ಮ್ಯಾಗಜೀನ್ ಗಳಲ್ಲಿ ಬಂದದ್ದನ್ನು ಉಲ್ಲೇಖಿಸಿ ಬರೆದಿದ್ದರೆ ಅದು ಹಾಸ್ಯಾಸ್ಪದವಾಗುತ್ತಿತ್ತು. ಇರ್ಲಿ.

ಇನ್ನುಳಿದಂತೆ ಮತಾಂತರ ನಿಮಗೆ ಹಾಸ್ಯಾಸ್ಪದವಾಗಿರಬಹುದು ಆದರೆ ನನಗಂತೂ ಅದು ಗಂಭೀರ ವಿಷಯವೆ.ಈ ರೀತಿ ಪ್ರಯತ್ನಗಳು ಕ್ರೈಸ್ತ ರಿಂದ ಜಗತ್ತಿನೆಲ್ಲೆಡೆ ನೆಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಎಲ್ಲರಿಗೂ ಅವರವದ್ದು ಹೆಚ್ಚೇ ಎಂಬುದು ಗೊತ್ತಿರುವಂತದೇ. ನಾನು ನನಗಾದ ಅನುಭವವೊಂದಕ್ಕೆ ನನ್ನನಿಸಿಕೆ ಸೇರಿಸಿ ಬರೆದಿರುವೆ ಅಷ್ಟೆ. ಹಾಗಿದ್ದ ಮೇಲೆ ನಿಮ್ಮ ಸಮಸ್ಯೆಯೇನು ಅಥವಾ ತಕರಾರೇನು ಎಂಬುದು ನನಗೆ ತಿಳಿಯುತ್ತಿಲ್ಲ.!!

ಅನಾಮಧೇಯ ಹೇಳಿದರು...

ವಿಕಾಸ್,
ನಿಮ್ಮ ಈ "ವಾದ’ವನ್ನು ನೋಡಿದ್ದು ಮೊದಲು. ಪದ್ಯ ಚೆನ್ನಾಗಿದೆ. ಮತಾಂತರವನ್ನು ನಾನೂ ಖಂಡಿಸುತ್ತೇನೆ. ಅದರಲ್ಲೂ ಮತ್ತೊಂದು ಧರ್ಮವನ್ನು ಹೀಗಳೆದು ತಮ್ಮ ಧರ್ಮಕ್ಕೆ "ಗಿರಾಕಿ’ ಗಳನ್ನು ಮಾಡಿಕೊಳ್ಳುವ ಪ್ರಚಾರಕರನ್ನು ಮೊದಲು ಖಂಡಿಸಬೇಕು. ಅದೊಂದು ದಂಧೆಯಲ್ಲದೇ ಮತ್ತೇನೂ ಅಲ್ಲ.
ಜನ ಇಂಥದ್ದು ಬೇಡ ಎನ್ನುವವರೆಗೂ ಕೊಡೋದೆಲ್ಲಾ ಸುದ್ದಿ !
ನಾವಡ

ಅನಾಮಧೇಯ ಹೇಳಿದರು...

ಸೀಮಕ್ಕ, ನನ್ನ ದೋಸ್ತರು ಕೆಲವರಿಗೂ ಅದೇ ರೀತಿ ಆಗಿತ್ತಡ. ಪತ್ರಿಕೆ ವಿಷ್ಯದಲ್ಲಿ ಈ ಜಗತ್ತೇ ಹೀಗೋ ಅಥವಾ ನಾವೇ ಹಾಗೋ ಅನ್ನಿಸಿಬಿಡುವುದುಂಟು ಕೆಲವೊಮ್ಮ. ಇರ್ಲಿ. ಥ್ಯಾಂಕ್ಸ್ ;) ..

ನಾವಡರೆ, ಸ್ವಾಗತ.
ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು. ಭೇಟಿ ಕೊಡುತ್ತಿರಿ.

ಮೃಗನಯನೀ ಹೇಳಿದರು...

u r simply natural kaNO iShta aagthIya

sp ಹೇಳಿದರು...

"Kosha Oodi Nodu, Desha Sutti Nodu" - I think this is a great saying.
Both these help only when one is strong willed and understands the way of life and see the bigger picture.

Also being "Broadmided" helps oneself than somebody else.

I do not know how best you will understand but i am not a scholar or a great writer like you or some of the other great writers i have read. I wish i will be able to explain better....

PEACE.

ವಿ.ರಾ.ಹೆ. ಹೇಳಿದರು...

ಮೃಗೀ.. ಥ್ಯಾಂಕ್ಯೂ ಕಣೇ... ;)

Mr. SP,
welcome and thanx for ur opinion. Since i am not a scholar or a great writer as told by u, I cud not understand the real meaning of ur comment. It wud b fine if u cud tel directly whatever u wished to say. Plz. keep coming.

-Vik

ಪ್ರಶಾಂತ ಯಾಳವಾರಮಠ ಹೇಳಿದರು...

ನನ್ನ ಕ್ರಿಶ್ಚಿಯನ್ನ ಗೆಳೆಯನೊಬ್ಬ ತಿಳಿಸಿದ ಪ್ರಕಾರ ಮತಾಂತರ ಒಂದು ದಂದೆ(ಕೆಲಸ) ಅಂತೆ. ನಾವು ಕೆಳೆದ್ದಿವಲ್ಲಾ "ನೆಟವರ್ಕಿಂಗ ಬಿಜಿನೆಸ್" ಆತರಾ ಅಂತೆ. ಪ್ರತಿಯೊಂದು ಚರ್ಚಗೆ ಬೇರೆ ಬೇರೆ ಫ಼ಂಡ್ ಬರುತ್ತೆ ಮತ್ತು ನಿವು ಎಸ್ಟು ಜನರನ್ನ ಮತಾಂತರ ಗೊಳಿಸುತ್ತಿರೊ ಅದರ ಮೆಲೆ ನಿಮಗೆ ದುಡ್ಡು ಬರುತ್ತದೆ. ನಿಮಗೆ ಬಡ್ತಿ ತರಹದ ಅವಕಾಶಗಳು ಊಂಟು!!!.
ನಿಮಗೆ ತಿಳಿದಿರಬಹುದು ಕರ್ನಾಟಕದ ಕ್ರಿಶ್ಚಿಯನ್ನರ ಸರಾಸರಿ ದುಡಿಮೆ ೧೫೪೬.೦೦ ರುಗಳು( ೨೦೦೭ ರಲ್ಲಿ ವಿಧಾನಸಭೆಯಲ್ಲಿ ತಿಳಿಸಿದ ಪ್ರಕಾರ) ಆದರೆ ಹಿಂದೂಗಳದು ಕೆವಲ ೪೪೫.೦೦ ರುಗಳು!!!.

ಅವರನ್ನ ಯೆಸು ಸ್ವಾಮಿ ರಕ್ಷಿಸ್ಥಾಇಲ್ಲಾ ಅದು "ದುಡ್ಡು ರಕ್ಷಿಸ್ಥಾಇದೆ"!!!

ಸಂದೀಪ್ ಕಾಮತ್ ಹೇಳಿದರು...

ಚಿಕ್ಕವನಿರ್ಬೇಕಾದ್ರೆ ನಮ್ಮ ಸ್ಕೂಲ್ ಹತ್ತಿರ ಒಂದು ಓಮ್ನಿ ಕಾರ್ ನಲ್ಲಿ ಬಂದು ಬಿಟ್ಟಿ ಪುಸ್ತಕ ಹಂಚುತ್ತಾ ಇದ್ರು ಕೆಲವರು.
ಅದು ಬೈಬಲ್ ನ ಕನ್ನಡ ಅವತರಣಿಕೆ ಅಂತ ದೊಡ್ದವನಗೋ ತನಕ ನನಗೆ ಗೊತ್ತೇ ಇರ್ಲಿಲ್ಲ...ನಾವೆಲ್ಲಾ ಮುಗಿಬಿದ್ದು ಆ ಪುಸ್ತಕ ತಗೊತಾ ಇದ್ವಿ.ಯಾಕಂದ್ರೆ ಬಿಟ್ಟಿ ಕೊಡ್ತಾ ಇದ್ದ ಪುಸ್ತಕಗಳು ತುಂಬಾ ದಪ್ಪಗಿದ್ದವು ;ಹಾಗಾಗಿ ರದ್ದಿಗೆ ಸಕ್ಕತ್ ರೇಟ್ ಸಿಕ್ತಾ ಇತ್ತು.
ನಾನು ಯಾರ ಮನಸ್ಸು ನೋಯಿಸಲು ಈ ಮಾತು ಹೇಳ್ತಾ ಇಲ್ಲ..ನಿಜ ಸಂಗತಿ ಹೇಳ್ತಾ ಇದ್ದೀನಿ.

ಶ್ರೀಕಾಂತ ಮಿಶ್ರೀಕೋಟಿ ಹೇಳಿದರು...

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.


ಇದು ಯಾರದ್ದು ಗೊತ್ತಾಯ್ತೇ , ವಿಕಾಸ್ - ಪಿ. ಲಂಕೇಶ್ ರ ನೀಲು ಕವನ

ವಿ.ರಾ.ಹೆ. ಹೇಳಿದರು...

ಹಾಂ ಶ್ರೀಕಾಂತ್ ಸರ್, ಆಮೇಲೆ ಗೊತ್ತಾಯ್ತು.