ಭಾನುವಾರ, ಮೇ 26, 2013

ಆರು ವರ್ಷಕ್ಕೆ ಹೀಗೇ ಒಂದಿಷ್ಟು ಮಾತು-ಕತೆ

ಮೇ ೧೨ಕ್ಕೆ ಈ ’ವಿಕಾಸವಾದ’ ಬ್ಲಾಗಿಗೆ ೬ ವರ್ಷ ವಯಸ್ಸಾಯ್ತು. ಕನ್ನಡದಲ್ಲಿ ೪ ಸಾವಿರಕ್ಕಿಂತ ಜಾಸ್ತಿ ಬ್ಲಾಗ್ ಗಳಿವೆ ಅಂತ ಹೇಳುತ್ತಾರೆ. ಆದರೆ ಸಕ್ರಿಯ ಬ್ಲಾಗುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲಿ ಈ ವಿಕಾಸವಾದವೂ ಒಂದು. ಕೇವಲ ೩೦೦ ಕ್ಕಿಂತಲೂ ಕಡಿಮೆ ಬ್ಲಾಗುಗಳು ಮಾತ್ರ ಚಟುವಟಿಕೆಯಿಂದ ಕೂಡಿವೆಯಂತೆ ! ಒಂದು ಕಾಲದಲ್ಲಿ ಉತ್ಸಾಹದಿಂದ ಬ್ಲಾಗ್ ಬರೆಯುತ್ತಿದ್ದ ಹಲವರು ಇವತ್ತು ನಿಲ್ಲಿಸಿದ್ದಾರೆ ಅಥವಾ ಬಹಳ ಕಡಿಮೆ ಮಾಡಿದ್ದಾರೆ. ಓದುಗರೂ ಕಡಿಮೆಯಾಗಿದ್ದಾರೆ. ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಆ ಸ್ಥಾನಗಳನ್ನು ತುಂಬುತ್ತಿಲ್ಲ. ಇದಕ್ಕೆಲ್ಲಾ ಕಾರಣಗಳು ಹಲವಿರಬಹುದು. ಫೇಸ್ ಬುಕ್ ಕೂಡ ಒಂದು ಕಾರಣ ಅಂತ ಮಾತ್ರ ಹೇಳಬಲ್ಲೆ!

ನಾನಂತೂ ಬರೆಯಲು ಹಲವಾರು ವಿಷಯಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದರೂ ಬರೆಯಲು ಮಹೂರ್ತ ಸಿಗುವುದೇ ಅಪರೂಪ! ಈ ನಡುವೆ ಬ್ಲಾಗಿಗೆ ಸಂಬಂಧಿಸಿದಂತೆ ಒಂದು ವಿಷಯ ಹಂಚಿಕೊಳ್ಳಬೇಕು. ನನ್ನ ಬ್ಲಾಗಿಗೆ feedjit ಎನ್ನುವ ಟೂಲ್ ಒಂದನ್ನು ಅಳವಡಿಸಿಕೊಂಡಿದ್ದೇನೆ. ಅದು ಈ ತಾಣಕ್ಕೆ ಯಾವ ಯಾವ ಊರಿನ, ರಾಜ್ಯದ ಅಥವಾ ದೇಶದ ಅಂತರಜಾಲ ಸಂಪರ್ಕಗಳಿಂದ ಭೇಟಿ ಕೊಡಲಾಯಿತು, ಯಾವ ಕೊಂಡಿ ಮೂಲಕ ಬಂದರು, ಯಾವ ಹೊತ್ತಿಗೆ ಬಂದರು ಎಂಬ ಮಾಹಿತಿ ತೋರಿಸುತ್ತದೆ. ಈ ಬ್ಲಾಗ್ ಪುಟದ ಕೆಳ ಬಲಭಾಗದಲ್ಲಿ ಅದನ್ನು ಯಾರಾದರೂ ನೋಡಬಹುದು. ಅದರ ಒಳಗೆ ಹೋದರೆ ಇಲ್ಲಿಗೆ ಭೇಟಿ ಕೊಟ್ಟವರದ್ದು ಯಾವ ಆಪರೇಟಿಂಗ್ ಸಿಸ್ಟಮ್, ಯಾವ ಬ್ರೌಸರ್, ಎಲ್ಲಿಂದ ಒಳಬಂದರು, ಹೊರಹೋದರು ಎನ್ನುವ ಪೂರ್ಣ ಮಾಹಿತಿ ನೋಡಬಹುದು. ಹಲವರು ಬೇರೆ ಬೇರೆ ಬ್ಲಾಗುಗಳ ಮೂಲಕ ಇಲ್ಲಿಗೆ ಬಂದಿದ್ದರೆ ಮತ್ತೂ ಹಲವರು ನೇರವಾಗಿ ಬಂದಿರುತ್ತಾರೆ. ಇದು ಎಲ್ಲ ಬ್ಲಾಗಿಗರಿಗೂ ತಮ್ಮ ತಮ್ಮ ಬ್ಲಾಗ್ ಭೇಟಿಗಳ ಬಗ್ಗೆ ಮಾಹಿತಿ ನೋಡಿದಾಗ ಗಮನಕ್ಕೆ ಬಂದಿರಬಹುದು. ಭಾರತದಿಂದ ಹೊರಗೆ ಕನ್ನಡಿಗರು ಸಾಮಾನ್ಯವಾಗಿ ಅಮೆರಿಕಾ, ಯೂರೋಪು, ಗಲ್ಫ್ ದೇಶಗಳಲ್ಲಿ ಹೆಚ್ಚು ಜನರಿದ್ದಾರೆ. ಅಲ್ಲಿಂದ ಪುಟಭೇಟಿಗಳಾಗುವುದು ಸಹಜ. ಅದಲ್ಲದೇ ಬೆಂಗಳೂರಿನಲ್ಲೇ ಇರುವ ಹಲವಾರು ಐ.ಟಿ. ಕಂಪನಿಗಳ ಅಂತರಜಾಲ ಸಂಪರ್ಕ ಬೇರೆ ದೇಶದ್ದಾಗಿರುತ್ತದೆ. ಹಾಗಾಗಿ ಇಲ್ಲಿಂದಲೇ ಯಾರೋ ಬ್ಲಾಗ್ ತೆಗೆದು ನೋಡಿದ್ದರೂ ಕೂಡ ಅದು ಬೇರೆ ಯಾವುದೋ ದೇಶದ ಹೆಸರು ತೋರಿಸಿರುತ್ತದೆ. ಉದಾಹರಣೆಗೆ ನನ್ನ ಆಫೀಸಿನದ್ದು ಸಿಂಗಾಪುರದ ಸಂಪರ್ಕ. ಆದರೆ ಎಲ್ಲಕ್ಕಿಂತ ಆಶ್ಚರ್ಯವಾಗುವುದು ಅಂದರೆ ಆಫ್ರಿಕಾ ಖಂಡದ ಹಲವು ದೇಶಗಳಿಂದ ಮತ್ತು ಜಗತ್ತಿನ ಕೆಲವು ದ್ವೀಪರಾಷ್ಟ್ರಗಳಿಂದ ಆಗುವ ಭೇಟಿಗಳು! ಅಲ್ಲೆಲ್ಲಾ ಯಾವ ಓದುಗರಿದ್ದಾರೋ ಗೊತ್ತಿಲ್ಲ. ಇದ್ದರೆ ಅವರೆಲ್ಲರಿಗೂ ಧನ್ಯವಾದಗಳು.

ಮತ್ತೊಂದು ವಿಶಿಷ್ಟ ಸಂಗತಿ ಎಂದರೆ ಈ feedjitನಲ್ಲಿ ಗೂಗಲ್ ಸರ್ಚ್ ಮಾಡುವ ಮೂಲಕ ಬಂದಿರುವ ಭೇಟಿಗಳ ಬಗ್ಗೆ ವಿವರ ದಾಖಲಾಗಿರುತ್ತದೆ. ಯಾವ ಹುಡುಕುಪದದ(search word) ಮೂಲಕ ಈ ಬ್ಲಾಗಿಗೆ ಸಂಪರ್ಕವಾಯಿತು ಎಂಬ ಮಾಹಿತಿ ಇರುತ್ತದೆ. ಕುತೂಹಲಕ್ಕೆ ಅದನ್ನು ನೋಡುತ್ತಿರುತ್ತೇನೆ. ಅದನ್ನು ಗಮನಿಸಿದಾಗ ತಿಳಿದು ಬಂದಿದ್ದೇನೆಂದರೆ ನನ್ನ ಬ್ಲಾಗಿಗೆ ಗೂಗಲ್ ಹುಡುಕಾಟದ ಮೂಲಕ  ಬರುವ ಭೇಟಿಗಳಲ್ಲಿ ಅತಿ ಹೆಚ್ಚು 'ಕನ್ನಡ ಟೈಪಿಂಗ್' ಬಗ್ಗೆ ಹುಡುಕಿ ಬಂದವರದ್ದಾಗಿರುತ್ತದೆ. ಕಂಪ್ಯೂಟರಲ್ಲಿ ಕನ್ನಡ ಬರೆಯಲು ಇರುವ ಸೌಲಭ್ಯಗಳ ಬಗ್ಗೆ ಎರಡು ವರ್ಷಗಳ ಹಿಂದೆ ಹಾಕಿದ್ದ ಈ ಬರಹ ಇವತ್ತಿಗೂ ಮೊದಲ ಸ್ಥಾನದಲ್ಲಿದೆ. ಇನ್ನೂ ಬಹಳಷ್ಟು ಜನ ಅಡುಗೆಯ ಬಗ್ಗೆ ಹುಡುಕುವುದರ ಮೂಲಕ ಬರುತ್ತಾರೆ. ಏಕೆಂದರೆ ಹೆಚ್ಚು ಭೇಟಿ ಪಡೆದುಕೊಳ್ಳಲು ಕಾರಣವಾದ ಕೆಲ ಪದಗಳೆಂದರೆ ’ದೋಸೆ’, ’ರುಚಿರುಚಿ’, ’ಅಡುಗೆ’ ಮುಂತಾದವು. ’ಸಾವು’ ಎಂಬ ಪದವನ್ನು ಹುಡುಕಿ ಬಂದ ಭೇಟಿಗಳೂ ಹಲವು ಇರುತ್ತವೆ ! ಅಪರೂಪಕ್ಕೆ ಪುಸ್ತಕ, ಸಿನೆಮಾ ಮುಂತಾದವುಗಳ ಬಗ್ಗೆ ಮಾಹಿತಿ ಹುಡುಕುತ್ತಾ ಬಂದವರಿರುತ್ತಾರೆ. ಇದೆಲ್ಲದರ ನಡುವೆ ಇನ್ನೊಂದು ಅತಿ ಹೆಚ್ಚು ಹುಡುಕುಪದ ಎಂದರೆ ’ಬೆತ್ತಲೆ’. ಜನ ಈ ಪದವನ್ನು ಅದೇಕೆ ಅಷ್ಟೆಲ್ಲಾ ಹುಡುಕುತ್ತಾರೋ ಗೊತ್ತಿಲ್ಲ. ಈ ಪದದ ಮೂಲಕ ೨೦೦೭ರಲ್ಲಿ ಬರೆದಿದ್ದ ಈ ಬರಹಕ್ಕೆ ಬರುತ್ತಿರುತ್ತಾರೆ. ಬೆತ್ತಲೆಗಿರುವ ಡಿಮ್ಯಾಂಡ್ ಅದು ! :-)

ಹಳಬರೆಲ್ಲಾ ಮದುವೆ, ಸಂಸಾರ, ಕೆಲಸ, ಜವಾಬ್ದಾರಿ, ನಿರುತ್ಸಾಹ ಮುಂತಾದ ಕಾರಣಗಳನ್ನು ದಾಟಿಬಂದು ಬ್ಲಾಗ್ ಬರೆಯಲಿ ಮತ್ತು ಹೊಸಬರೂ ಹೆಚ್ಚು ಹೆಚ್ಚು ಬರೆಯಲಿ, ಓದಲಿ ಎಂಬ ಆಶಯದೊಂದಿಗೆ ಈ ವಿಕಾಸವೂ ನಡೆಯುತ್ತಿರುತ್ತದೆ.

21 ಕಾಮೆಂಟ್‌ಗಳು:

Sheela Nayak ಹೇಳಿದರು...

ವಿಕಾಸ್,
ಮೊತ್ತ ಮೊದಲು ಅಭಿನಂದನೆ!
ನೀನ್ಹೇಳಿದ ಹಾಗೆ ಮೊದಲಿದ್ದಷ್ಟು ಜನರು ಸಕ್ರಿಯವಾಗಿ ಬ್ಲಾಗಿನಲ್ಲಿ ಬರೆಯುತ್ತಿಲ್ಲ.. ಅದಕ್ಕೆ ಕಾರಣ ಫೇಸ್ ಬುಕ್! ಇರಬಹುದೇನೋ.. ಅದು ನನ್ನ ಅನುಭವವಂತೂ ಅಲ್ಲ. ನನ್ನ ಬ್ಲಾಗ್ ಸಕ್ರಿಯವಾದದ್ದೇ ಫೇಸ್ ಬುಕ್ಕಿನಿಂದ ಅಂತನೇ ಹೇಳ್ಬಹುದು. ಈ ವಿಷಯದ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಬ್ಲಾಗ್ ಪೋಸ್ಟ್ ಆಗಬಹುದೇನೋ.

ಹಾ, ಈ ಫೀಡ್ ಜಿ.. ಬಹಳ ಹಿಂದೆನೇ ನಾನದನ್ನು ನನ್ನ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ.. ಹೆಚ್ಚಾಗಿ ಡಾಶ್ ಬೋರ್ಡಿನಲ್ಲೇ ಇದ್ದು ಪೋಸ್ಟ್ ಹಾಕಿ ಹೋಗುವುದಾದರೂ ಒಮ್ಮೊಮ್ಮೆ ಪೋಸ್ಟ್ ನಲ್ಲಿ ಕೆಲವೊಮ್ಮೆ ತೊಂದರೆ ಕಾಣಿಸುತ್ತದೆ ಮತ್ತು ಬ್ಲಾಗಿಗೇ ಹೋಗಿ ನೋಡಬೇಕಾದಾಗ ಈ ಫೀಡ್ ಜಿ ಮಾಮ ನಮ್ಮ ಬಗ್ಗೆ ನಮ್ಗೇ ಹೇಳುತ್ತೆ.. ಹೇಗಂತಿಯಾ? ಉದಾ ನಾನು ಮಂಗಳೂರಿನವಳಾದರೂ ಒಮ್ಮೆ ಹುಬ್ಳಿ. ಮತ್ತೊಮ್ಮೆ ಧಾರವಾಡ.. ಮತ್ತೆ ಕೆಲವೊಮ್ಮೆ ಮಂಗಳೂರಿನಿಂದ ಬಂದವಳೆಂದು ತೋರಿಸುತ್ತದೆ.. ಅಲ್ಲದೆ ನಮ್ಮ ಭೇಟಿಯನ್ನು ಅಳಿಸಲೂ ಬಹುದು.. ನಾನಂತೂ ಪ್ರತಿಸಾರಿ ಬ್ಲಾಗಿಗೆ ಬಂದಾಗಲೆಲ್ಲ ಅಳಿಸಿಬಿಡುತ್ತೇನೆ.
ಹೌದು ಯಾವ ಪದ ಹುಡುಕಿ ಬರುತ್ತಾರೆಂದು ತಿಳಿಸುತ್ತದೆ..ಗೂಗಲ್ ನ ಸ್ಟಾಟ್ ನಲ್ಲೂ ಈ ಸೌಲಭ್ಯವಿದೆ..
ಕೆಲವು ಪದಗಳನ್ನು ಹುಡುಕಿ ಬಂದ ಅನೇಕ ವಿಹಾರಿಗಳಿಗಂತೂ ನನ್ನ ಬ್ಲಾಗ್ ಭೇಟಿ ಖಂಡಿತ ನಿರಾಶೆ ಕೊಟ್ಟಿದೆ.
ಶುಭವಾಗಲಿ!
- ಶೀಲಕ್ಕ

sunaath ಹೇಳಿದರು...

Hearty congratulations on the sixth anniversary. Wish you all success.

Laxmi prasad ಹೇಳಿದರು...

ವಿಕಾಸ್ ,
ನಿಮಗೆ ಅಭಿನಂದನೆ ,ನನಗೆ ಬ್ಲಾಗ್ ಬರಹಗಳ ಕುರಿತಾಗಿ ಪತ್ರಿಕೆಗಳಲ್ಲಿ ಓದಿದಾಗ ಅವರಿವರು ಹೇಳುವುದನ್ನು ಕೇಳಿದಾಗ ನನಗೂ ಬ್ಲಾಗ್ ಬರೆಯ ಬೇಕು ಎನಿಸುತ್ತಿತ್ತು .ಆದರೆ ಕಂಪ್ಯೂಟರ್ ಜ್ಞಾನದ ಕೊರತೆ ಇದಕ್ಕೆ ಅಡ್ಡಿಯಾಗಿತ್ತು .ಇತ್ತೀಚಿಗೆ ಬ್ಲಾಗ್ ಬರೆಯುವುದಕ್ಕಾಗಿಯೇ ಕಂಪ್ಯೂಟರ್ ಖರೀದಿಸಿ ಕಲಿತು laxmipras.blogspot.com ಎಂಬ ಬ್ಲಾಗ್ ಬರೆಯುತ್ತಿದ್ದೇನೆ ಕಳೆದ ವಾರ ನಮ್ಮ ಕಡೆಯ ಹವ್ಯಕ ಭಾಷೆಗೆ ಸಂಬಂಧಿಸಿದಂತೆ laxmihavyaka.blogspot.com ಅಂತ ಇನ್ನೊಂದು ಬ್ಲಾಗ್ ತೆರೆದಿದ್ದೇನೆ .ನೋಡಿ ಸಲಹೆಗಳನ್ನು ನೀಡಿ

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,
ಶುಭಾಶಯಗಳು. ಕನ್ನಡದ ಉತ್ತಮ ಬ್ಲಾಗುಗಳಲ್ಲಿ ವಿಕಾಸವಾದವೂ ಒಂದು. ಬರೆಯುತ್ತಾ ಇರಿ.

SUHAS ಹೇಳಿದರು...

There might be hundreds of blogs ,,but only few of them are worth reading and proud and happy to say that Vikasawada is one of them :)) keep writing Dude :))))) Long live Vikasawada

:)))

Sachin Bhat ಹೇಳಿದರು...

Congrats Bro..nice blog...:)

Subrahmanya ಹೇಳಿದರು...

ಶುಭಾಶಯಗಳು. ತುಂಬ ಜನ ಕೆಲವೇ ಪದಗಳನ್ನು ಹುಡುಕಿಕೊಂಡು ನಿಮ್ಮ ಬರುತ್ತಿದ್ದಾರೆ ಅಂದ್ರೆ, ಅದಕ್ಕೆ ಕಾರಣ ನಿಮ್ಮ ಬ್ಲಾಗಿನಲ್ಲಿ ನೀವು ಕಲ್ಪಿಸಿರುವ ಮುಕ್ತ ವಾತಾವರಣವೇ‌ಕಾರಣ ಅನ್ನಿಸುತ್ತೆ :P :).

Sushrutha Dodderi ಹೇಳಿದರು...

kangraTsooo.. :-)

ಸುಮ ಹೇಳಿದರು...

ಶುಭಾಶಯ ವಿಕಾಸ್ . ಈ ವರ್ಷದಿಂದ ನಿನ್ನ ಬ್ಲಾಗ್ ಹೆಚ್ಚು ಸಕ್ರಿಯವಾಗಲಿ ಎಂಬುದು ನನ್ನ ಹಾರೈಕೆ.

ಅನಾಮಧೇಯ ಹೇಳಿದರು...

ಆರು ವರ್ಷ ಆಯಿತಲ್ಲ. ಇನ್ನು ಶಾಲೆಗೆ ಸೇರಿಸಬಹುದು. ಅಭಿನ೦ದನೆಗಳು.
ನಿಮ್ಮ೦ತಹವರು ಬರೆದರೆ ನಮ್ಮ೦ತಹ ಮೈಗಳ್ಳ ಶಿಖಾಮಣಿಗಳಿಗೆ ಮೈಕೊಡವಿ ಬರೆಯುವ ಉಲ್ಲಾಸ ಬರುತ್ತದೆ :)
ವರ್ಡ್ ಪ್ರೆಸ್ ನಲ್ಲಿ feedjit ನ೦ತಹದು ಏನೂ ಇಲ್ಲ ಎ೦ಬುದು ಬೇಸರದ ಸ೦ಗತಿ ಅಥವಾ ನನಗೆ ಗೊತ್ತಿಲ್ಲ.~ ಪ್ರಮೋದ್

Patavardhan, Praveen ಹೇಳಿದರು...


ಬಹಳ ಚೆನ್ನಾಗಿದೆ.... ಇನ್ನಷ್ಟು ಬರೆಯಿರಿ. ನಿಮ್ಮ ಲೇಖನಗಳನ್ನು ಓದುವುದರಿಂದ ನಮ್ಮ ಬರವಣಿಗೆಯೂ ವಿಕಾಸವಾಗಲಿ.. ನಿಮಗೆ ಶುಭವಾಗಲಿ :)

ಪ್ರಕೊಪ

Sree ಹೇಳಿದರು...

ಕಂಗ್ರಾಟ್ಸಪ್ಪ!:) ಬರೀತಿರು, ಓದ್ತಾ ಇರ್ತೀವಿ :) ಓದ್ತಾ ಓದ್ತಾ ನಂಗೂ ಯಾವತ್ತೋ ಒಂದ್ ದಿನ ಹುಕ್ಕಿ ಬರಬಹುದು ಮತ್ತೆ ಬರಿಯೋಕೆ

ಯಜ್ಞೇಶ್ (yajnesh) ಹೇಳಿದರು...

Congrats Vikasa,

Baravanige hege munduvareyali

neelanjala ಹೇಳಿದರು...

aaru varsha!! monne monne nodidangide, :) congrats :)

ಮನಸು ಹೇಳಿದರು...

ನಿಮ್ಮ ಬ್ಲಾಗ್ ಬರಹಗಳನ್ನು ಯಾವಾಗಲೂ ಓದುತ್ತಲೇ ಬಂದಿದ್ದೇನೆ... ಸದಾ ಒಳ್ಳೊಳ್ಳೆಯ ಲೇಖನಗಳನ್ನು ನೀಡಿದ್ದೀರಿ.... ಶುಭಾಶಯಗಳು ೬ ವರ್ಷದ ಸಂಭ್ರಮಕ್ಕೆ

Shrinidhi Hande ಹೇಳಿದರು...

ಅಭಿನಂದನೆಗಳು

nenapina sanchy inda ಹೇಳಿದರು...

Congrats Tamma!! i should say though i come here only through the link of ur comments in my blog..but liked what u write
try and update when free
good luck
:-)
malathi akka

ಮನೆಯ ಶಕ್ತಿ ಹೇಳಿದರು...

baraha munduvaresi...

ವಿ.ರಾ.ಹೆ. ಹೇಳಿದರು...

ಶೀಲಕ್ಕ, ಸುನಾಥಕಾಕಾ, ರಾಜೇಶ್ ನಾಯ್ಕರು, ಸುಹಾಸ್, ಸುಶ್ರುತ, ಸಚಿನ್, ಸುಮಕ್ಕ, Yajnesh, ನೀಲಾಂಜಲ, ಸುಗುಣ (ಮನಸು), ಶ್ರೀನಿಧಿ ಹಂದೆ, ಮಾಲತಕ್ಕ, ಚಂದ್ರಿಕಾ (ಮನೆಯ ಶಕ್ತಿ), ಶ್ರೀಮಾತಾ, ಸುಬ್ರಹ್ಮಣ್ಯ, ಲಕ್ಷ್ಮಿಪ್ರಸಾದ್, ಪ್ರವೀಣ ಪಟವರ್ಧನ್, ಪ್ರಮೋದ, ಎಲ್ಲರಿಗೂ ಧನ್ಯವಾದಗಳು.

ಕಮೆಂಟ್ ಹಾಕಿದವರಲ್ಲಿ ಬ್ಲಾಗರುಗಳಿದ್ದವರಿಗೆ ನೀವೂ ಕೂಡ ಬರೆಯಲು ಶುರುಮಾಡಿ ಎಂದು ಕೋರಿಕೆ, ಆಗ್ರಹ, ಒತ್ತಾಯ etc etc.. :)

hamsanandi ಹೇಳಿದರು...

ಸ್ವಲ್ಪ ಹಳೆಯ ಪೋಸ್ಟಿಗೆ ಇವತ್ತು ಬಂದು ನೋಡ್ತಿದೀನಿ.. ಆರು ಕಳೆದು ಏಳಕ್ಕೆ ಬಿದ್ದಿದ್ದಕ್ಕೆ ಹಾರೈಕೆಗಳು. ಹೀಗೇ ಬರೀತಾ ಇರಿ!

hamsanandi ಹೇಳಿದರು...

ಸ್ವಲ್ಪ ಹಳೆಯ ಪೋಸ್ಟಿಗೆ ಇವತ್ತು ಬಂದು ನೋಡ್ತಿದೀನಿ.. ಆರು ಕಳೆದು ಏಳಕ್ಕೆ ಬಿದ್ದಿದ್ದಕ್ಕೆ ಹಾರೈಕೆಗಳು. ಹೀಗೇ ಬರೀತಾ ಇರಿ!