ಶುಕ್ರವಾರ, ನವೆಂಬರ್ 2, 2007

ಚಿರಂಜೀವಿ ಮಗಳು ಓಡೋದ್ರೆ ನಮ್ಗೇನು ?

ಚಿರಂಜೀವವಲ್ಲದ ಸಂಬಂಧಗಳು - ಒಂದು ಯೋಚನೆ
ಮೊನ್ನೆ ಹೀಗೆ ಗೆಳೆಯರೆಲ್ಲಾ ಮಾತಾಡ್ತಾ ಕೂತಿದ್ದಾಗ ತೆಲುಗು ಚಿತ್ರನಟ ಚಿರಂಜೀವಿಯ ಮಗಳು ಓಡಿ ಹೋದ ವಿಷ್ಯ ಬಂತು. ಒಬ್ಬ ಅಂದ " ಹೇಳಿ ಕೇಳಿ ಚಿರಂಜೀವಿಯ ಮಗಳು ಅವಳು, ಅವ್ಳಿಗೇನು ಕಡಿಮೆ ಆಗಿತ್ತು ಮಾರಾಯ ಓಡೋಗಕ್ಕೆ?! " ಎಲ್ಲರೂ ದನಿಗೂಡಿಸಿದರು ಅದಕ್ಕೆ. ಎಲ್ಲರ ಬಾಯ್ಮುಚ್ಚಿಸುವಂತೆ ಮತ್ತೊಬ್ಬನಿಂದ ಬಂತು ಮಾತು "ಚಿರಂಜೀವಿ ಮಗಳಾದರೆ ಏನಂತೆ ಅವಳಿಗೂ ಏನೋ ಕೊರತೆ ಇತ್ತು ಅನ್ನಿಸುತ್ತೆ . ನಿಮಗೆ ಜೀವನದಲ್ಲಿ ಏನೂ ಕೊರತೆಯೇ ಇಲ್ವಾ ಆತ್ಮಸಾಕ್ಷಿಯಾಗಿ ಹೇಳಿ ?". ಒಂದಿಬ್ಬರು ಹಣದ ಕೊರತೆ ಇದೆ ಎಂದು ಒಪ್ಪಿಕೊಂಡರು. ನನ್ನನ್ನೂ ಹಿಡಿದು ಇನ್ನು ಕೆಲವರು ಎಲ್ಲವೂ ತೃಪ್ತಿಕರವಾಗಿದ್ದಂತೆ ಕಂಡರೂ ಹಾಗೆ ಹೊರಗಡೆ ಹೇಳಲಾಗದಂಥ ಏನೋ ಬೇಕು ಅನ್ನುವ ಕೊರತೆ ಇದೆ ನಮಗೂ ಇದೆ ಎಂದು ಒಪ್ಪಿಕೊಂಡೆವು. "ಹಾಗೆಯೇ ಚಿರಂಜೀವಿ ಮಗಳು ಕೂಡ. ಅವಳಿಗೆ ಎಲ್ಲಾ ಇದೆ ಅಂತ ನಮಗನಿಸಿದರೂ ಏನೋ ಕೊರತೆಯನ್ನು ಅವಳು ಅನುಭವಿಸುತ್ತಿದ್ದಳು ಅನಿಸುತ್ತದೆ. ಅವಳಿಗೆ ಬೇಕಾದ್ದು ಬೇರೆಲ್ಲೋ ಸಿಗುತ್ತದೆ ಎಂಬುದನ್ನು ಅವಳು ಯೋಚಿಸಿಯೇ ತೀರ್ಮಾನ ಮಾಡಿ ಹೋಗಿದ್ದಾಳೆ " ಎಂದ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡರು. ಮಾತು ಬೇರೆಡೆಗೆ ಹೊರಳಿತು.

ನಾನು ಯೋಚಿಸುತ್ತಿದ್ದೆ. ಹಾಗಿದ್ದರೆ ಇಷ್ಟು ದಿನ ಇದ್ದುದರಲ್ಲಿ ಏನೋ ಕೊರತೆ ಕಂಡಾಗ ಅದನ್ನು ಬಿಟ್ಟು ಹೋಗಿ ಬಿಡುವುದು ನ್ಯಾಯವೇ? ಅಷ್ಟಕ್ಕೂ ಇವತ್ತು ಒಂದು ಕಡೆ ಕೊರತೆ ಕಂಡು ಬಿಟ್ಟು ಹೋದವರಿಗೆ ಅವರು ಹೋದಲ್ಲಿ ಮತ್ತೆ ಇನ್ನೇನೋ ಕೊರತೆ ಕಂಡುಬಂದರೆ ಅದನ್ನೂ ಬಿಟ್ಟು ಹೋಗಿಬಿಡುತ್ತಾರಾ. ಹಾಗಿದ್ದರೆ ಇದೊಂದು ಸಂಪೂರ್ಣ ಸ್ವಾರ್ಥದ ಪ್ರಕ್ರಿಯೆಯಲ್ಲದೇ ಮತ್ತಿನ್ನೇನು ! ಸ್ವಾರ್ಥ ಇರಬೇಕಾದ್ದು ಹೌದು. ಅದಿಲ್ಲದೆ ಮನುಷ್ಯ ಬೆಳೆಯಲು ಸಾಧ್ಯವೇ ಇಲ್ಲ ನಿಜ. ಆದರೆ ಇದು ಈಗಿರುವ ಕಂಪನಿಯಲ್ಲಿ ಸಂಬಳ, ಸೌಲಭ್ಯ ಕಡಿಮೆ ಎಂದು ಅದನ್ನು ಬಿಟ್ಟು ಬೇರೆ ಕಂಪನಿಗೆ ಹೋದಂತೆ ಅಲ್ಲ. ಇದು ನಮ್ಮ ರಕ್ತ, ಸ್ನೇಹ ಸಂಬಂಧಗಳಿಗೆ, ನಂಬಿಕೆ ವಿಶ್ವಾಸ ಪ್ರೀತಿ ಎನ್ನುವ ಭಾವನೆಗಳಿಗೆ ಸಮಾಧಿ ಕಟ್ಟುವ ಸ್ವಾರ್ಥ !

ಚಿರಂಜೀವಿಯನ್ನೇ ತೆಗೆದುಕೊಳ್ಳಿ ಅಥವಾ ಯಾವ ತಂದೆ ತಾಯಿಯನ್ನೇ ತೆಗೆದುಕೊಳ್ಳಿ, ಅವರು ಉದ್ದೇಶಪೂರ್ವಕವಾಗಿ ತಮ್ಮ ಮಕ್ಕಳಿಗೆ ಇಂತದ್ದನ್ನು ಕಡಿಮೆ ಮಾಡಬೇಕೆಂದು ಅಂದುಕೊಂಡಿರುವುದಿಲ್ಲ. ಇವತ್ತು ಚಿರಂಜೀವಿಯಂಥ ಚಿರಂಜೀವಿಯನ್ನೇ ತೊರೆದು ಅವನ ಮಗಳು ಇನ್ಯಾರೊಂದಿಗೋ ಓಡಿಹೋದಳೆಂದಳೆ ಅವಳಿಗೆ ತನ್ನ ತಂದೆ ತಾಯಿಯಿಂದ ದೊರೆಯದ ಏನೋ ಒಂದು ಮತ್ತೊಬ್ಬರಲ್ಲಿ ದೊರೆತಿದೆ ಎಂಬುದು ಎಷ್ಟು ಸತ್ಯವೋ ನಂತರ ಮತ್ತೇನೋ ಅವಳು ಬಯಸಿದ್ದು ಆ ಮತ್ತೊಬ್ಬನಲ್ಲಿ ಸಿಗದಿದ್ದಾಗ ಅವನನ್ನೂ ತೊರೆಯುತ್ತಾಳೆಂಬುದು ಅಷ್ಟೆ ಸತ್ಯವಲ್ಲವೆ!.

ಇದು ಬರಿ ಹುಡುಗಿಯರು ಈ ರೀತಿ ಮಾಡುತ್ತಾರೆ ಅಥವಾ ಚಿರಂಜೀವಿ ಮಗಳು ಮಾಡಿದಳು ಎಂಬ ಅರ್ಥವಲ್ಲ. ಇಂತವು ಬೇಕಾದಷ್ಟು ಸಾಮಾನ್ಯ ಜನರಲ್ಲೂ ನೆಡೆಯುತ್ತಲೇ ಇರುತ್ತದೆ. ಹುಡುಗರೂ ಕೂಡ ಇದರಿಂದ ಹೊರತಾಗಿಲ್ಲ. ಪ್ರೀತಿಯೆಂಬುದು ಸ್ವಾರ್ಥದ ಇನ್ನೊಂದು ಸ್ವಷ್ಟ ಮುಖವೆಂದು ಅಭಿಪ್ರಾಯ ಬರುವುದೇ ಆವಾಗ. ಯಾರಿಗಾದರೂ ನಾವು ನಮ್ಮ ಕೈಲಾದಷ್ಟೂ ಪ್ರೀತಿ ಕೊಟ್ಟರೂ ಕೂಡ ಅವರು ನಮ್ಮನ್ನೇ ಬಿಟ್ಟು ಹೋದಾಗ ನಾನು ಇಷ್ಟು ಪ್ರೀತಿ ಕೊಟ್ಟರೂ ಬಿಟ್ಟು ಹೋದರು ಎಂಬ ನೋವಿಗಿಂತ ಅವರ್ಯಾಕೆ ನಮ್ಮನ್ನು ಬಿಟ್ಟರು ನಮ್ಮ ಪ್ರೀತಿಯಲ್ಲಿ ಏನು ಕೊರತೆಯಿತ್ತು ಎನ್ನುವ ನೋವೇ ಹೆಚ್ಚಿರುತ್ತದೆಂಬ ಭಾವನೆ ನನ್ನದು. ನಮ್ಮಿಂದ ಅವರಿಗೆ ಏನು ಕೊರತೆಯಾಯಿತೆಂಬುದು ನಮಗೆ ತಿಳಿಯುವುದು ಹೇಗೆ ! ತಾನು ಏನು ಕಡಿಮೆ ಮಾಡಿದ್ದೇನೆಂದು, ಅಥವಾ ತಾನು ಕೊಡಲಾರದಂತಹುದ್ದನ್ನು ಇನ್ಯಾರೋ ಕೊಡುತ್ತಾರೆಂದುಕೊಂಡು ತನ್ನನ್ನೇ ಬಿಟ್ಟುಹೋದ ಮಗಳಿಂದ ಅಪ್ಪನಿಗೆ ತಾನೇನು ಕೊಡಬೇಕಿತ್ತು ಅಥವಾ ತನ್ನ ಮಗಳು ತನ್ನಿಂದೇನು ಬಯಸಿದ್ದಳು ಎಂದು ತಿಳಿಯುವುದು ಹೇಗೆ ! ಇದರಲ್ಲಿ ಎಲ್ಲವನ್ನೂ ಕೇಳಿ ಪಡೆಯಲು ಸಾಧ್ಯವಿಲ್ಲದಿರುವುದರಿಂದ ತಾವಾಗಿಯೇ ತಿಳಿದುಕೊಳ್ಳುವಂತದ್ದೂ ಬಹಳಷ್ಟಿರುತ್ತದೆ.

ಇದು ಎಲ್ಲಾ ಮಾನವ ಸಂಬಂಧಗಳಿಗೂ ಅನ್ವಯಿಸುವಂತದ್ದು. ಎಲ್ಲಾ ಸಂಬಂಧಗಳಲ್ಲೂ ಇಂತದ್ದೇ ಸ್ವಾರ್ಥವು ಬರುತ್ತಾ ಹೋದಾಗ ಯಾವ ಸಂಬಂಧಕ್ಕೂ ಅರ್ಥವಿಲ್ಲದಂತಾಗುವುದಿಲ್ಲವೆ? ವರ್ಷಗಟ್ಟಲೇ ಪ್ರೀತಿ ಮಾಡಿ ಯಾವುದೊ ಒಂದು ಬಾಲಿಶ ವಿಷಯಕ್ಕೆ ಬೇರಾದ ಪ್ರೇಮಕ್ಕೂ, ವರ್ಷಗಟ್ಟಲೇ ಸಂಸಾರ ಮಾಡಿ ಚಿಕ್ಕ ಜಗಳ ಬೆಳೆದು ವಿಚ್ಛೇದನದವರೆಗೆ ನೆಡೆದ ದಾಂಪತ್ಯಕ್ಕೂ ಅರ್ಥ ಕಳೆದು ಹೋಗುವುದೇ ಆವಾಗ. ಎಷ್ಟೋ ಕಾಲದಿಂದ ಜೊತೆ ಇದ್ದು, ಮನಸ್ಸಿಗೆ ಒಪ್ಪಿಗೆಯಾಗಿ ನಂತರ ಮತ್ಯಾವತ್ತೋ ಅವರ ಹೆಸರು ಕೇಳಿದರೆ ಕಿರಿಕಿರಿಯಾಗುವ ಸ್ಥಿತಿ ಬರುವದೇಕೆ? ಹಾಗಿದ್ದರೆ ಎಲ್ಲವೂ ನೀರಿನ ಮೇಲಿನ ಗುಳ್ಳೆಯಂತೆ ಅಂದುಕೊಂಡು ಯಾವುದನ್ನೂ ಹಚ್ಚಿಕೊಳ್ಳದೇ, ಯಾರಿಗೂ ಪ್ರೀತಿ ಕೊಡದೇ ಸಾಧ್ಯವಾದರೆ ತನ್ನನ್ನಷ್ಟೇ ತಾನು ಪ್ರೀತಿ ಮಾಡಿಕೊಂಡು ಬದುಕುವುದೇ ಜೀವನವಾ ? ಏಕೆಂದರೆ ನಿನ್ನೆ ’ನಿನ್ನ ಬಿಟ್ಟು ಹೇಗಿರಲಿ’ ಎಂದವರು ಇವತ್ತು ’ನಿನ್ನ ದ್ವೇಷಿಸುತ್ತೇನೆ’ ಅಂದು ನಾಳೆ ’ನೀನ್ಯಾರು?’ ಅನ್ನುವದಿಲ್ಲ ಎಂದೇನು ಖಾತರಿ?! ಹಾಗಿದ್ದರೆ better ಅನ್ನಿಸುವೆಡೆಗೆ ನೆಡೆದು ಹೋಗುವುದೂ ತಪ್ಪಾ?! ಯಾಕೆಂದರೆ ಯಾವ ಮಗಳಿಗೂ ತನ್ನಪ್ಪನಿಗೆ ತನ್ನನ್ನು ಪ್ರೀತಿ ಮಾಡು ಎಂದು ಗೋಗರೆಯಲಿಕ್ಕಂತೂ ಆಗದಿದ್ದರೂ ಆ ಪ್ರೀತಿ ಪಡೆಯುವದಕ್ಕಾಗಿ ಬೇರೊಬ್ಬನೊಂದಿಗೆ ಹೋಗುವದಕ್ಕಂತೂ ಸಾಧ್ಯವಿದೆಯಲ್ಲ !! ಅಂದರೆ ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಯಾವುದೂ ’ಚಿರಂಜೀವಿ’(ಶಾಶ್ವತ) ಯಲ್ಲ !

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಚಿರಂಜೀವಿ ಮಗಳು ಓಡಿ ಹೊಪಲೇ ಕೊರತೆ ಎಂತ ಕೊರತೆ? ಮದ್ವೆ ಮಾಡಿಕೆಳಕಾಗಿತ್ತು ಅದಕ್ಕೇ ಹೋತು. ಅಷ್ಟೇಯ. ಮದ್ವೆ ಬ್ಯಾರೆ ಹುಡುಗನ್ನ ಸಂಗ್ತಿಗೆ ಮಾಡಿಕ್ಲ್ಯಳವು. ಮನೆಯವರ ಸಂಗ್ತಿಗೆ ಅಂತು ಆಗ್ಥಿಲ್ಲ್ಯ? ಅಷ್ಟೇಯ. ಅದನ್ನ ಕೊರತೆ ಅಂದ್ರೆ ಮನೆಯವು ಎಂತ ಮಾಡ್ತಾ. ಟೊಮ್ಮೆ.

-ಕೆಲಸಿ ರಾಮಾ

ವಿ.ರಾ.ಹೆ. ಹೇಳಿದರು...

ರಾಮಾ, ಚೊಲೋ ಕುಶಾಲು ಮಾಡ್ತ್ಯಲ್ಲೋ !

Pradeep ಹೇಳಿದರು...

better ಅನ್ನಿಸುವೆಡೆಗೆ ನೆಡೆದು ಹೋಗುವುದೂ ತಪ್ಪಾ?!

Preethiya vishayadalli swarthi yagiddare melina prashnege uttara "SARI" , thyagiyagiddare "THAPPU".

better annisida kadegella hoguvudadare (swarthadinda) adakke kone iruvudilla(nemmadi iruvudilla).yavudadru ondu dina, ello nillabekaguttade..andare thyagadindale nijavada nemmadi/preethi...ada ariyuavarigu manushya swarthi!!

inthi,
Pradeep

ಸಂತೋಷಕುಮಾರ ಹೇಳಿದರು...

"ಚಿರಂಜೀವಿಯಂಥ ಚಿರಂಜೀವಿಯನ್ನೇ ತೊರೆದು"
ಅಂದ್ರೆ ಏನರ್ಥ? ಎಲ್ಲಾ ತಂದೆ ತಾಯಿಗಳು ಒಂದೇ ಅಲ್ವಾ? ಇಲ್ಲಿ ಚಿರಂಜೀವಿನ ಯಾಕೆ ವೈಭರಿಕರಿಸಿದ್ದೀರಾ ಅಂತ ಅರ್ಥ ಅಗ್ತಿಲ್ಲಾ. ಚಿರಂಜೀವಿ ತಪ್ಪು ಮಾಡಬಾರದು ಅಂತ ಏನಿಲ್ವಲ್ಲಾ!

ವಿ.ರಾ.ಹೆ. ಹೇಳಿದರು...

ಪ್ರದೀಪ್, ನಿಮ್ಮ ಉತ್ತರ ಬಹಳ ಹಿಡಿಸಿತು. Thanx

ಚಿರವಿರಹಿಗಳೇ, ಲೌಕಿಕವಾಗಿ ತಗೊಂಡ್ರೆ ಅವನಲ್ಲಿ ’ಎಲ್ಲವೂ’(ಹಣ, ಕೀರ್ತಿ, ಸೌಲಭ್ಯ, ಸುರಕ್ಷತೆ ಇತ್ಯಾದಿ) ಇತ್ತು ಎಂದು ಎಲ್ಲರಿಗೂ ಅನ್ನಿಸುವುದಿಲ್ಲವೇ? ಆದರೂ ಅವನನ್ನು ಅವಳ ಮಗಳೇ ಬಿಟ್ಟಳು ಅಲ್ವಾ? ಅದಕ್ಕೇ ಹಾಗಂದೆ ಅಷ್ಟೆ. ಒಬ್ಬ ತಂದೆಯಾಗಿ ತಪ್ಪು ಅವನದ್ದೇ ಇರಬಹುದು , ಇಲ್ಲದಿರಬಹುದು. ಅದು ಬೇರೆ ವಿಷಯ.
ಏನಂತೀರಾ? Thanx

ರಂಜನಾ ಹೆಗ್ಡೆ ಹೇಳಿದರು...

ವಿಕಾಸ್
ಎಲ್ಲಾರ ಮನೆ ದೋಸೆನೂ ತೂತೆ ಅನ್ನೊ ಗಾದೆ ಈ ಚಿರಂಜೀವಿ ಕೆಸ್ ಗೆ ಒಪ್ಪುವಂತಹದ್ದು.
ಎಲ್ಲಾ ಸಂಭಂದಗಳಲ್ಲೂ ಸ್ವಾರ್ಥ ಇರಲೇ ಬೇಕು ಆದರೆ ಆ ಸ್ವಾರ್ಥ harmfull ಸ್ವಾರ್ಥ ಆಗಿರಬಾರದು ಅಷ್ಟೆ. ನಮ್ಮ ಸ್ವಾರ್ಥ ಬೇರೆಯವರನ್ನೂ ತುಳಿಯುವಂತೆ ಇರಬಾರದು. healthy ಸ್ವಾರ್ಥ ಆಗಿರಬೇಕು.

ಯಾವುದನ್ನೂ ಹಚ್ಚಿಕೊಳ್ಳದೇ ಇರುವುದು ಬದುಕಲ್ಲ ಆದರೆ ಕೆಸವಿನ ಎಲೆಯ ಮೇಲೆ ನೀರು ಇದ್ದಂತೆ ಇರಬೇಕು. ನಮ್ಮನ್ನಷ್ಟೆ ನಾವು ಪ್ರೀತಿ ಮಾಡುತ್ತಾ ಬದುಕಲೂ ಸಾದ್ಯವೇ ಇಲ್ಲಾ.
ಮತ್ತೆ ಜಗತ್ತಿನಲ್ಲಿ ಯಾವುದು ಶಾಶ್ವತ ಅಲ್ಲವೋ ಹಾಗೆ ಯಾರು ಪರಿಪೂರ್ಣರಲ್ಲ. ಅದು ರಂಜನಾ ಹೆಗ್ಡೆ ಇರಬಹುದು, ವಿಕಾಸ್ ಹೆಗಡೆ ಇರಬಹುದು ಅಥವಾ ಚಿರಂಜೀವಿ ಇರಬಹುದು.

ವಿ.ರಾ.ಹೆ. ಹೇಳಿದರು...

ಹೌದು ರಂಜನಾ, ನೀವು ಹೇಳೋದು ಸರಿ.
ಆದರೂ ಈ ಸಂಬಂಧಗಳ ಏರ್ಪಡುವಿಕೆ ಮತ್ತು ಬೇರ್ಪಡುವಿಕೆ ಭಾರೀ ವಿಚಿತ್ರ ಅನ್ನಿಸುತ್ತೆ ನಂಗೆ. any how .. thank u :)

Kanthi ಹೇಳಿದರು...

Vikas, ee vishyada bagge yochne maadtaa hodangoo teera complicate ansadantoo nija. Namma deshadalli madve annadu baree hudga, hudgi decision mele depend aagade, avra tande, taayi, idee family and many times society li jana enu tilkatta anno complications mele ella sambhandagaloo nintiddu. Ellara ego bittu baree feelings ge bele kotre most of the relationsships life long ulkattu, kelavondu nee helidange "better" hudkyandu hogtikku. Aadre sambhandagalanna saryagi artha maadkyandavru yaroo oodi hogadille, matte appa amma nu odi hogakke bidadille. Idella clash between our own egos and ethics astene.