ಬುಧವಾರ, ಏಪ್ರಿಲ್ 23, 2008

ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್

ಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಚಿತ್ರ ನಿರ್ದೇಶಕ ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ hit ಆಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಎಲ್ಲರೂ ಶುರು ಹಚ್ಚಿಕೊಂಡರು ಇಂತಹ ಸಬ್ ಟೈಟಲ್ ಗಳಿಡುವುದನ್ನು. ನಂತರ ಬಂದ ಗಾಳಿಪಟ ಚಿತ್ರದಲ್ಲೂ "ಮನದ ಮುಗಿಲಲ್ಲಿ ಮೊಹಬ್ಬತ್ " ಎಂದಿಟ್ಟರು ಭಟ್ಟರು. ’ನಂದ ಲವ್ಸ್ ನಂದಿತ’ ಎಂಬ ಚಿತ್ರದಲ್ಲೂ " ಪಾತಕ ಲೋಕದಲ್ಲೊಂದು ಮೊಹಬ್ಬತ್ " ಎನ್ನುವ ಸ್ಲೋಗನ್ನು. ಇದೀಗ ’ತಾಜ್ ಮಹಲ್ ’ ಎಂಬ ಚಿತ್ರದ ಪೋಸ್ಟರುಗಳಲ್ಲಿ ಹೆಸರಿನ ಜೊತೆ "ಕಣ್ ನೀರಿನ ಕಹಾನಿ" ಎನ್ನುವ ಸ್ಲೋಗನ್ನು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಕರ್ನಾಟಕದ ಯಾವ ಭಾಗದಲ್ಲೂ ಬಳಸದ ’ದುನಿಯಾ’, ’ಜಿಂದಗಿ’ ಎಂಬ ಹಿಂದಿ ಪದಗಳ ಹೆಸರಿನಿಂದ ಕನ್ನಡ ಚಿತ್ರಗಳು ತಯಾರಾಗಿವೆ/ತಯಾರಾಗುತ್ತಿವೆ. ಮೊದಲು "ಮಂಡ್ಯ - the land of masses" ಎನ್ನುವಂತಹ ವಿಲಕ್ಷಣ ಸ್ಲೋಗನ್ನುಗಳ ಜೊತೆಗೆ ತೆರೆಗೆ ಬರುತ್ತಿದ್ದ ಕನ್ನಡ ಚಿತ್ರಗಳಿಗೆ ಈಗ ಮೊಹಬ್ಬತ್, ಕಹಾನಿ ಎನ್ನುವ ಹಿಂದಿ(ಉರ್ದು?) ಪದಗಳನ್ನುಳ್ಳ ಸ್ಲೋಗನ್ನುಗಳಿಡುವ ಹೊಸ ಟ್ರೆಂಡು ಶುರುವಾಗಿದೆ. ಎಲ್ಲದಕ್ಕಿಂತಲೂ ಮುಂದೆ ಹೋಗಿ ಯಾವನೋ ಒಬ್ಬ ನಿರ್ದೇಶಕ ಶಿವರಾಜ್ ಕುಮಾರನ್ನು ಹಾಕಿಕೊಂಡು " ಪರಮೇಶ ಪಾನ್ ವಾಲಾ" ಎನ್ನುವ ದರಿದ್ರ ಹೆಸರಿನ ಸಿನೆಮಾ ತೆಗೆಯಲು ಮುಂದಾಗಿದ್ದಾನೆ. ಶಿವಣ್ಣ ಅದು ಹೇಗೆ ಒಪ್ಪಿಕೊಂಡರೋ ಏನೋ, ಶಾರುಖ್ ಖಾನನ ದೇಹಕ್ಕೆ ಶಿವಣ್ಣನ ಮುಖ ಅಂಟಿಸಿರುವ ಚಿತ್ರದ ಪೋಸ್ಟರುಗಳು ಊರ ತುಂಬ ರಾರಾಜಿಸುತ್ತಿವೆ.


ಇದನ್ನು ಕನ್ನಡಿಗರ ಕೀಳರಿಮೆ ಎನ್ನಬೇಕೋ ಅಥವಾ ಚಿತ್ರರಂಗಕ್ಕೆ ಹಿಡಿದಿರುವ ದರಿದ್ರ ಎನ್ನಬೇಕೋ ತಿಳಿಯುತ್ತಿಲ್ಲ. ಈ ವಿಷಯದಲ್ಲಿ ಕನ್ನಡಿಗರು ತಮಿಳರಿಂದ ಕಲಿಯುವುದು ಸಾಕಷ್ಟಿದೆ. "ಮುಂಗಾರು ಮಳೆ"ಯಂತಹ ಪ್ರಸಿದ್ಧ ಚಿತ್ರಗಳನ್ನು ಸುಮ್ಮನೇ ಕುತೂಹಲಕ್ಕೂ ಕೂಡ ನೋಡದೇ ’ಯು,ಮಿ ಔರ್ ಹಮ್’ ತರಹದ ವೇಸ್ಟ್ ಹಿಂದಿ ಚಿತ್ರಗಳನ್ನು ಮಾರ್ನಿಂಗ್ ಶೋನಲ್ಲೇ ನೋಡಿ ಧನ್ಯರಾಗುವ ಮತ್ತು ತಮಿಳು,ತೆಲುಗು ಚಿತ್ರಗಳ ಸೀಡಿಗಳನ್ನು ತಂದು ಶ್ರದ್ಧೆಯಿಂದ ನೋಡಿ ಕೃತಾರ್ಥರಾಗುವ ಕನ್ನಡಿಗರೂ ಇರುವಾಗ ಇದೇನು ದೊಡ್ಡದಲ್ಲ ಅನ್ನುತ್ತೀರ?

11 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಹೌದು ಮಾರಾಯ.. ಎಷ್ಟೊಂದ್ ಜನ ಕನ್ನಡಿಗರು ಇನ್ನೂ ಮುಂಗಾರು ಮಳೆ ನೋಡಲ್ಲೆ.. ಕೇಳಿದ್ರೆ ನಂಗೆ ಕನ್ನಡ ಫಿಲ್ಮ್ ಇಷ್ಟ ಇಲ್ಲೇ ಅಂತ ಮುಖಕ್ಕೆ ಹೊಡೆದ ಹಂಗೆ ಹೇಳ್ತ...

Shankar Prasad ಹೇಳಿದರು...

ಲೇ ವಿಕಾಸ, ಚೆನ್ನಾಗಿದೆ ನಿನ್ನ observationನ್ನು..
ಬಹಳ ಸಲ ನಾನ್ ಕೂಡಾ ಇದರ ಬಗ್ಗೆ ಯೋಚನೆ ಮಾಡಿದ್ದೆ. ಅದೇನು ರೋಗವಪ್ಪಾ ಇವರಿಗೆ ಕನ್ನಡದಲ್ಲಿ ಬಾಟಮ್ ಲೈನ್ ಕೊಡಕ್ಕೆ ??

ಕಟ್ಟೆ ಶಂಕ್ರ

Unknown ಹೇಳಿದರು...

Hi, Vikas
Its good observation but In what way it makes difference, we got other issues where we need to look into. Using hindi or english or urdu it wont affect anyone.
Praveen

ಅನಾಮಧೇಯ ಹೇಳಿದರು...

ಹರೀಶ್, ಶಂಕರ್.. thanx.

Praveen, thanx for ur opinion. Right,there are other issues to bother. But this issue is about copying and using of Hindi stuffs which is not at all necessary. Have u seen any Tamil, Telgu films using Hindi names or subtitles? or have u seen any Hindi movie using Kannada word? Why we kannadigas shud be negligent or inferior abt using of Kannada instead of developing a trend of using other language. Definitely it affects.

ಅನಾಮಧೇಯ ಹೇಳಿದರು...

Why such hue and cry about language these days? 'Munagarumale' has been watched my many non-kannadigas - so what if few kannadigas did not watch! We should thank the mushrooming FM channels though they have spoilt the beauty of kannada language to the extent possible - but they have been able to make many non-kannadigas pick few kannada words and also develop interest in listening to kannada songs and finally watch kannada movies. Many of of my hindi/tamil speaking friends have watched and appreciated mungaru male, duniya, milana etc. We NEED NOT be like OTHERS just to prove the point.

ಅನಾಮಧೇಯ ಹೇಳಿದರು...

Radhika Namaste, The issue is different here. The use of other languages here and there is not a problem. But if it becomes a habit or trend it will affect growth or existance of language as it is happening in Bengaluru now. It gives a feeling that one language is inferior that other. First KannaDigas shud have pride about our language, then only we can bring others. Now a days what we C is even kannaDigas watch crap other language movies where as with prejudice they comment on Kannada movies as bad. Thats y i quoted that. any how. Thanx

ಅನಾಮಧೇಯ ಹೇಳಿದರು...

anything to everything related to hindi is superior and kannada is always inferior,,

this is what is the genaral tendency in KA.

Hindi has penetrated so deep in our kananda society that hindi movies get alot of hype in both english and local media.

north indian immigration jaasti aagala namma janara hindi premaanu ondu kaarana.. id ivattalla,, naale dina mumbai li marathigarige iro stithi bandaaga artha aagutte.

ಅನಾಮಧೇಯ ಹೇಳಿದರು...

ಹಿಂದೀ ಅಥವಾ ಉರ್ದು ಭಾಷೆಗಳಿಂದ ಕಡ ತಂದ ಪದಗಳನ್ನ ಅಡಿ ಬರಹಗಳಲ್ಲಿ ಬಳಸಬಾರದೆಂದೇನೂ ಇಲ್ಲ. ಆದರೆ ಕಾಪಿ ಹೊಡಿಯೋ ತೋಪು ನಿರ್ದೇಶಕರಿಗೆ ಒಂದಿಷ್ಟು ಬುದ್ಧಿ ಬರಬೇಕಷ್ಟೇ. ಗಾಳಿಪಟದಿಂದ ಮೊಹಬ್ಬತ್ ಶಬ್ದ ಬಳಕೆ ಎಷ್ಟು ಜನಪ್ರಿಯವಾಯಿತು ಅಂದ್ರೆ, ಅದನ್ನ "ನಂದ ನಂದಿತ" ನಿರ್ದೇಶಕ ಕಾಪಿ ಮಾಡಿಬಿಟ್ಟ. ಮುಂಗಾರು ಮಳೆ ನಂತರ ಒಂದೂ ಚಿತ್ರ ಸರಿಯಾಗಿ ಮಾಡದೇ ಅತಿಥಿ ಪಾತ್ರದಲ್ಲೇ ಸರ್ವಸ್ವವನ್ನ ಕಾಣುತ್ತಿರುವ ನಾಯಕಿ ಪೂಜಾ ಗಾಂಧೀ ನಟಿಸಿದ ಮಹಾನ್ ಚಿತ್ರ "ತಾಜ್ ಮಹಲ್" ಕಣ್ ಹನಿಗಳ ಕಹಾನಿ ಅಂತಾ ಬರೆದುಬಿಟ್ಟ.

ಇನ್ನು ಕರ್ನಾಟಕದ ಮಣ್ಣಿಗೆ ಒಂದಷ್ಟೂ ಸಂಬಂಧ ಪಡದ "ಪಾನ್ ವಾಲಾ" ವಿಚಾರ. ಬನಾರಸ್ ಶ್ರೇಷ್ಟ ಪಾನ್ ಗಳಿಗೆ ಪ್ರಸಿದ್ಧಿ. ಆದ್ರೆ, ಪಾನ್ ವಾಲಾ ಎಂಬ ಪಾತ್ರ ಉತ್ತರಭಾರತದಲ್ಲಿ ಚಾಲ್ತಿಯೇ ಹೊರತು ದಕ್ಷಿಣದಲ್ಲಲ್ಲ. ಉತ್ತರದಿಂದ ದಕ್ಷಿಣಕ್ಕೆ ತರುತ್ತೇವೆ ಅನ್ನುವ ನಿರ್ದೇಶಕ ಚಿತ್ರದಲ್ಲಿ ಅಲ್ಲಿಯ ಸೊಗಡನ್ನೇ ಉಳಿಸಿಕೊಂಡರೆ ಮಾತ್ರ ಸಾರ್ಥಕ. ಅದು ಬಿಟ್ಟು ಶಿವಣ್ಣನ್ನ ಹಾಕಿಕೊಂಡು ಪಾನ್ ವಾಲಾ ಅಂದ್ರೆ, ಸಮಂಜಸ ಅನ್ನಿಸೋಲ್ಲ.

ಒಟ್ಟಿನಲ್ಲಿ ಬರಹ clean observation ನ್ನ ತೋರಿಸುತ್ತೆ. ಧನ್ಯವಾದ

ಗಣೇಶ್.ಕೆ

ಇಲ್ಲಿ ಬಳಕೆಗಿಂತಲೂ, ಪ್ರಯೋಗಶೀಲತೆಗಿಂತಲೂ ನನ್ನನ್ನು ಕಾಡುವುದು ನಕಲು ಮಾಡುವುದು.

ಅನಾಮಧೇಯ ಹೇಳಿದರು...

@ಬೆಲ್ಲದ
ಹೌದು.. ಕನ್ನಡಿಗರಿಗೆ ತಮ್ಮದೊಂದು ಬಿಟ್ಟು ಉಳಿದಿದ್ದೆಲ್ಲಾ ಶ್ರೇಷ್ಠ ಅನ್ನುವ ಕೀಳರಿಮೆ, ಅಭಿಮಾನ್ಯಶೂನ್ಯತೆ. ಅದ್ಯಾವುದೋ ಕಿತ್ತೋಗಿರೋ ಹಿಂದಿ ಫಿಲಂ ಬಗ್ಗೆ ಕನ್ನಡ ಚಾನೆಲ್ ಗಳಲ್ಲಿ ತೋರಿಸುತ್ತಾರೆ. ನಮ್ಮ ಜನ ಬಾಯಿಬಿಟ್ಕೊಂಡು ನೋಡ್ತಾರೆ. ನಾನ್ ಸೆನ್ಸ್.

@ಗಣೇಶ್ (ಪಂಚ್ ಲೈನ್ ಗಣೇಶ್?)
ಬಳಕೆ ತಪ್ಪೇನೂ ಇಲ್ಲ. ಆದರೆ ಅನಗತ್ಯ ಬಳಕೆ ತಪ್ಪು. ಯಾವನೋ ಒಬ್ಬ ಇಟ್ಟ ಅಂತ ಎಲ್ರೂ ಅದೇ ಮಾಡುವುದು ಇಲ್ಲಿಗೆ ಸಂಬಂಧವೇ ಇಲ್ಲದ ಹೆಸರುಗಳನ್ನ ತಂದಿಡುವುದು , ಹಿಂದಿ ನಟನ ದೇಹಕ್ಕೆ ಕನ್ನಡದ ನಾಯಕ ನಟನ ಮುಖ ಅಂಟಿಸಿ ಪ್ರಚಾರ ಮಾಡುವುದು.. ಇದೆಲ್ಲಾ.. ಅಸಹ್ಯ.

ಪ್ರತಿಕ್ರಿಯೆಗಾಗಿ ಇಬ್ಬರಿಗೂ ಧನ್ಯವಾದಗಳು. ಬರುತ್ತಿರಿ.

ಮನಸ್ವಿ ಹೇಳಿದರು...

ವಿಕಾಸ್ ಅವರೇ ಚನ್ನಾಗಿ ಬರೆದಿದ್ದೀರಿ,
ನಿರ್ಮಾಪಕರಿಗೆ ಹಿಂದಿ ಅಥವಾ ಉರ್ದುವಿನಲ್ಲಿ ಸ್ಲೋಗನ್ನು ಇದ್ದರೆ ತಮ್ಮ ಸಿನಿಮಾ ಹಿಟ್ ಆಗುತ್ತದೆ ಎಂಬ ಭ್ರಮೆ ಇದೆಯೇನೋ !, ಅಥವಾ ನಿರ್ದೇಶಕರಿಗೆ ಕನ್ನಡದಲ್ಲಿ ಪಂಚು ಕೊಡುವಂತ ಸ್ಲೋಗನ್ ಬರೆಯಲು ಬರುವುದಿಲ್ಲವೋ ಏನೋ??!!!
ಒಟ್ಟಿನಲ್ಲಿ ಕನ್ನಡಿಗರಿಗೆ ಮೂರಕ್ಷರದ ಟೈಟಲ್ ಜೊತೆ ಇಷ್ಟುದ್ದ ಹಿಂದಿ ಉರ್ದು ಕಂಗ್ಲಿಷ್ subtitle ಓದುವ ದುರ್ಗತಿ.... ಇದಕ್ಕೆಲ್ಲ ಮುಕ್ತಿ ಯಾವಾಗ ಆ ದೇವರೇ ಹೇಳಬೇಕೆನೋ.

ವಿ.ರಾ.ಹೆ. ಹೇಳಿದರು...

@ಮನಸ್ವಿ

ಹ್ಮ್.. :(