ಶುಕ್ರವಾರ, ಮಾರ್ಚ್ 13, 2009

ಚೆನ್ನೈ ರಿಕ್ಷಾದವನ ಲಾಜಿಕ್ಕು!

"ಪ್ಯಾರಿಸ್ ಸೆಂಟರ್ ಗೆ ಬರ್ತೀಯಾ" ಅಂತ ಚೆನ್ನೈನಲ್ಲಿ ರಿಕ್ಷಾದವನನ್ನು ಹಿಂದಿಯಲ್ಲಿ ಕೇಳಿದೆ.

"ಹಿಂದಿ ತೆರಿಯಾದು" ಅಂದ.

ಮತ್ತೆ ಪ್ಯಾರಿಸ್ ಸೆಂಟರ್ ಅಂತ ಕೈ ಸನ್ನೆ ಮಾಡಿ ತೋರಿಸಿದೆ.

"ಐವತ್ತು ರೂಪಾಯಿ ಆಗುತ್ತೆ" ಅಂದ ತಮಿಳಿನಲ್ಲಿ.

"ಮೂವತ್ತು ರೂಪಾಯಿ ತಗೋ , ಹತ್ತಿರವೇ ಇದೆಯಲ್ಲಾ" ಅಂದೆ ಹಿಂದಿಯಲ್ಲಿ.
ಮೀಟರ್ ಹಾಕಿದರೆ ಮೂವತ್ತೇ ಆಗುವಷ್ಟು ದೂರ ಇತ್ತು. ಆದರೆ ಚೆನ್ನೈಯಲ್ಲಿ ಮೀಟರ್ ಇಲ್ಲ!

"ಹಿಂದಿ ತೆರಿಯಾದು" ಅಂದ ಮತ್ತೆ.

"ಮುಪ್ಪತ್ತು ರುಪಾಯಿ ತಗೊಳಪ್ಪಾ" ಅಂದೆ ನನ್ನ ಮುರುಕು ತಮಿಳಿನಲ್ಲಿ.

"ಇಲ್ಲ ಸಾರ್,ನಲ್ವತ್ತು ರೂಪಾಯಿ ಕೊಡಿ" ಅಂದ.
ಸರಿ ಎಂದು ಹತ್ತಿ ಕುಳಿತೆ.

ಸ್ವಲ್ಪ ದೂರ ಹೋದ ಮೇಲೆ, ಸುಮ್ಮನೇ ಮಾತನಾಡಿಸಲು ಶುರುಮಾಡಿದೆ.
"ನೀವು ಹಿಂದಿಯಲ್ಲೇ ಹೇಳಿ ಸಾರ್, ಅರ್ಥಾಗತ್ತೆ, ನಾನು ತಮಿಳಿನಲ್ಲೇ ಉತ್ತರ ಕೊಡ್ತೀನಿ" ಅಂದ.

ಸುಮ್ನೆ ಒಂದು ಸೆಂಟಿ ಡೈಲಾಗು ಬಿಟ್ಟೆ.
"ಏನಪ್ಪ, ನಂಗೆ ತಮಿಳು ಬರಲ್ಲ ಅಂತ ಜಾಸ್ತಿ ದುಡ್ಡು ಕೇಳ್ತಿಯಾ? ಹೊರಗಡೆಯಿಂದ ಬಂದವರಿಗೆ ಹೀಗೆ ಮೋಸ ಮಾಡಬಾರದಲ್ವಾ?".

ಅವನು ಹೇಳಿದ, "ಅದು ಹಂಗಲ್ಲ ಸಾರ್, ನಂಗೆ ಹಿಂದಿ ತೆರಿಯಾದು, ನಿಮಗೆ ತಮಿಳು ತೆರಿಯಾದು, ಅದಕ್ಕೇ ೫೦ ರೂಪಾಯೂ ಬೇಡ, ೩೦ ರೂಪಾಯೂ ಬೇಡ, ಕಾಂಪ್ರೋಮೈಸ್ ಸಾರ್ , ೪೦ ರುಪೀಸ್" ಅಂದ!

ರಿಕ್ಷಾದವನ ಈ ಲಾಜಿಕ್ಕಿಗೆ ಮುಂದೆ ಏನು ಮಾತಾಡಬೇಕೋ ತಿಳಿಯದೇ ಸುಮ್ಮನೇ ಕುಳಿತೆ.

19 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

:D :)

shivu.k ಹೇಳಿದರು...

ವಿಕಾಸ್,

ಇನ್ನೂ ಅನೇಕ
ಚೆನ್ನೆ ಆಟೋದವರ ಲಾಜಿಕ್ಕುಗಳನ್ನು ನನ್ನ ಗೆಳೆಯರು ಹೇಳುತ್ತಾರೆ....

Shankar Prasad ಶಂಕರ ಪ್ರಸಾದ ಹೇಳಿದರು...

ಅಹಹಹ್ಹ...ಏನಪ್ಪಾ ಇದು ??
ಅದ್ಸರಿ, ಚೆನ್ನೈ ನಲ್ಲಿ ರಿಕ್ಷಾದವರಷ್ಟು ಸುಲಿಗೆ ಮಾಡೋರು ಯಾರೂ ಇಲ್ಲ.
ಸರಿಯಾಗಿ ಅನುಭವಿಸಿದೀನಪ್ಪ ನಾನು. ಸುಮಾರಾಗಿ ತಮಿಳು ಮಾತಾಡ್ತೀನಿ, ಅಂದ್ರೂ ಕೂಡ ಸತಾಯಿಸ್ತಾರೆ.
ನೀನ್ ಯಾಕೆ ಚೆನ್ನೈ ಗೆ ಹೋಗಿದ್ದೆ?
ಈ ರಿಕ್ಷಾದವನ ಲಾಜಿಕ್ಕೂ ಸರಿಯಾಗೇ ಇದೆ..
ಅದ್ಸರಿ, ಅಮೇರಿಕನ್ ಎಂಬೆಸಿ ಅಥವಾ ಜರ್ಮನ್ ಎಂಬೇಸಿಗೆ ಹೋಗಿದ್ಯಾ?

ಕಟ್ಟೆ ಶಂಕ್ರ

Keshav.Kulkarni ಹೇಳಿದರು...

ಆಯಾ ದೇಶದ ಆಯಾ ರಾಜ್ಯದ ಭಾಷೆ ಬರದಿದ್ದರೆ ದಂಡ ಕಟ್ಟಬೇಕು ಅಂತ ಲಿಖಿತ ಕಾನೂನು ಇಲ್ಲವಲ್ಲ, ಸದ್ಯ! ದಿಲ್ಲಿಯಲ್ಲಿ ನಮ್ಮ ಹಿಂದಿ ಕೇಳುತ್ತಲೇ ನಮ್ಮನ್ನು "ಮದ್ರಾಸೀ" ಅಂತ ಗುರುತಿಸಿ ಸರಿಯಾಗಿ ಟೊಪ್ಪಿ ಹಾಕುತ್ತಾರೆ.
- ಕೇಶವ (www.kannada-nudi.blogspot.com)

Ittigecement ಹೇಳಿದರು...

ಭಾಷಾ... ದುರಭಿಮಾನ..!

Santhosh Rao ಹೇಳಿದರು...

:)... :)

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ha ha haaa... Sooper laajikku guroo ;)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸ...

ಬೆಳ ಬೆಳಿಗ್ಗೆ ನಗಿಸಿದ್ದಕ್ಕೆ ಧನ್ಯವಾದ.
ನಿಜ ಹೇಳ್ಲಾ? ನೀನು ಆಟೋದವರ ಈ ಲಾಜಿಕ್ ಅನ್ನು ತಣ್ಣಗೆ ಸ್ವೀಕರಿಸಿ ಇಲ್ಲಿ ನಮ್ಮೆಲ್ಲರೊಂದಿಗೆ ಹಂಚಿಕೊಂಡ ಶೈಲಿ ಇನ್ನಷ್ಟು ಇಷ್ಟವಾಯ್ತು.

sunaath ಹೇಳಿದರು...

ಓಹೋ, ಇದು ತಮಿಳು ಲಾಜಿಕ್ಕು.
"ತಮಿಳು ತಲೆಗಳ ನಡುವೆ" ಪುಸ್ತಕ ಓದಿದ್ದೀರಲ್ವೆ?

ಚಿತ್ರಾ ಹೇಳಿದರು...

ವಿಕಾಸ್,
ಒಳ್ಳೇ ಲಾಜಿಕ್ ಮಾರಾಯಾ. ಇತ್ತೀಚಿನ ಸ್ಥಿತಿ ನೊಡಿದ್ರೆ ಬೆಂಗಳೂರಲ್ಲೂ ಈ ಲಾಜಿಕ್ ( ಕನ್ನಡ ತೆರಿಯಾದು ಸ್ವಾಮೀ ) ಬರೋದು ಕಷ್ಟ ಇಲ್ಲ ಅನ್ಸತ್ತೆ !! ಕಾಕಾ ಹೇಳಿದ ಹಾಗೇ , ’ ತಮಿಳು ತಲೆಗಳ ನಡುವೆ’ ಪುಸ್ತಕ ಓದಿದ್ರೆ ಇನ್ನೂ ಅಷ್ಟು ಲಾಜಿಕ್ ಮುಂಚೆನೇ ಗೊತ್ತುಮಾಡ್ಕೊಂಡು ಹೋಗಬಹುದು ಚೆನ್ನೈಗೆ !!!

Prabhuraj Moogi ಹೇಳಿದರು...

ಅಯ್ಯೊ ಒಳ್ಳೇದಾಯ್ತು ಬಿಡಿ ನಿಮಗೆ ತಮಿಳು ತಿಳಿದು, ಅವನಿಗೆ ಹಿಂದಿ ತಿಳಿದಿದ್ರೆ ಎರಡೂ ಸೇರಿ ೫೦+೩೦=೮೦ ರೂಪಾಯಿ ಕೊಡಿ ಅಂದಿದ್ದರೆ!!!

ಅನಾಮಧೇಯ ಹೇಳಿದರು...

ಬೆಂಗಳೂರ್ ಆಟೋದವರ ಲಾಜಿಕ್ ಕೇಳ್ತೀರ?
ಇತ್ತೀಚಿಗೆ ಫೋರಮ್ ಹೋಗಬೇಕಿತ್ತು. ಆಟೋದವರತ್ರ ಕೇಳಿದ್ರೆ ಮೂವತ್ ರೂಪಾಯಿ ಅಂತ ಹೇಳಿದ್ರು.
ಏನ್ರೀ ಇದು, ಬರೀ ಮೂರ್ ಕಿ.ಮೀ. ಇರೋದು, ಅದಕ್ಕೆ ಮೂವತ್ ಹೇಳ್ತೀರ ಅಂದ್ರೆ ಹಂಗಾರೆ ಮೂವಾತೈದ್ ಕೊಡಿ ಮೇಡಂ ಅನ್ನೋದಾ!

Raveesh Kumar ಹೇಳಿದರು...

ಇದು ಚೆನ್ನೈ ನ ಪಾಡಾದರೆ ಬೆ೦ಗಳೂರಿನ ರಿಕ್ಷಾ ಚಾಲಕರು ಕನ್ನಡ ಮರೆತು ’ಕಹಾ೦ ಜಾನಾ ಹೈ?’ ಅ೦ತ ಹಿ೦ದಿಯಲ್ಲೇ ಕೇಳಿಬಿಡುತ್ತಾರೆ! ಹೀಗೆ ಇವರು ಬೆ೦ಗಳೂರಿಗರಿಗೇ ಟೋಪಿ ಹಾಕಲು ನೋಡುತ್ತಾರೆ. ಹೇಗಿದೆ ವೈರುಧ್ಯ?

ಸುಧೇಶ್ ಶೆಟ್ಟಿ ಹೇಳಿದರು...

ರವೀಶ್ ಅವರ ಅನುಭವ ನನಗೂ ಆಗಿದೆ. ಈ ಬೆ೦ಗಳೂರು ರಿಕ್ಷಾ ಚಾಲಕರು ಕನ್ನಡದಲ್ಲಿ ಮಾತನಾಡಿದರೂ ಹಿ೦ದಿಯಲ್ಲಿ ಮಾತನಾಡುತ್ತಾರೆ ಕನ್ನಡದಲ್ಲಿ ಮಾತನಾಡಿದ್ದು ಕೇಳದವರ೦ತೆ. ಧುರಭಿಮಾನ....

ಅನಾಮಧೇಯ ಹೇಳಿದರು...

ವಿಕಾಸ್ ಅವರೆ,
ನೀವೇನೋ ಬಚಾವ್ ಆದ್ರೀಂತ ಕಾಣ್ಸುತ್ತೆ... ಈಗೀಗ ಚೆನ್ನೈ ರಿಕ್ಷಾವಾಲರಿಗೆ 100ಕ್ಕಿಂತ ಕಡಿಮೆಯ ಸಂಖ್ಯೆಯೇ ಗೊತ್ತಿಲ್ಲ ಅಂತ ತಿಳ್ಕೊಂಡಿದ್ದೆ...

ಬೆಂಗಳೂರಿನ ಆಟೋದವರ ಲಾಜಿಕ್ಕಿನ ಬಗ್ಗೆ ನಾನೊಂದು ಲೇಖನ ಹಿಂದೆ ಬರೆದಿದ್ದೆ.

ಅನಾಮಧೇಯ ಹೇಳಿದರು...

ಮಿತ್ರರೆ,

ಚೆನ್ನೈಯ ನಿವಾಸಿ ಕನ್ನಡಿಗನಾದ ನನ್ನ ಮಾತು ಕೇಳಿ...ಇಲ್ಲಿ ಆಟೊರಿಕ್ಶಾದವರ ಓನರ್ ಗಳೆಲ್ಲ ಪೋಲಿಸ್ ನವರೇ ಮುಕ್ಕಾಲುವಾಸಿಯಿದ್ದಾರೆ...ಬೇಲಿಯೇ ಎದ್ದು ಹೊಲ ಮೇಯುತ್ತಿದೆ...ಹಾಗಾಗಿ ಯಾರ ಭಯವಿಲ್ಲ!

ಆದರೆ , ಇಲ್ಲಿ ಶೇರ್ ಆಟೊ ಎಂಬ ಸರ್ಕಸ್ ಒಂದಿದೆ...ಅದು ಸ್ವಲ್ಪ ಪರವಾಗಿಲ್ಲಾ...ದೊಡ್ಡ ಡಿಸೆಲ್ ಆಟೊದಲ್ಲಿ ೮ ವಯಸ್ಕರನ್ನು ಗುಡ್ಡೆಹಾಕಿಕೊಂಡು ಕರೆದೊಯ್ಯುತ್ತಾರೆ...
ಐ.ಟಿ/ಬಿ.ಟಿ ಯ ಯುವಜನತೆ ಕತ್ತಲ್ಲಿ ಬ್ಯಾಡ್ಜ್ ತಗಲಿಸಿಕೊಂಡು ಇದರಲ್ಲಿ ಎಗ್ಗಿಲ್ಲದೆ ದಿನನಿತ್ಯ ಸಾಗುತ್ತಾರೆ...

ಮತ್ತೆ ಹಾರುವ ರೈಲ್ ( ಪರಕ್ಕುಂ ರೈಲ್) ಸುಮಾರು ಸ್ತೇಶನ್ ಗಳನ್ನು ಕವರ್ ಮಾಡುತ್ತದೆ...
ಅಲ್ಲದೆ ಮೈನ್ ಲೈನ್ ಟ್ರೈನ್ ಕೂಡಾ ಇದೆ..ಇವೆರೆಡು ಇಲ್ಲಿನ ನಿವಾಸಿಗಳಿಗೆ ವರಪ್ರದ ವಾಗಿವೆ

ಈಗೀಗ ಬಸ್ ಗಳು ಕೂಡಾ ಹೊಸ ಅವತಾರದಲ್ಲಿ, ಸೌಲಭ್ಯಗಳೊಂದಿಗೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿವೆ..ಈ ಸಾರ್ವಜನಿಕ ವಾಹನಗಳ ಬೆಲೆಯೂ ಕೈಗೆಟುಕುವಂತದ್ದೆ..

ಬೆಂಗಳೂರಿನ ರಾಕ್ಷಸ ಟ್ರಾಫಿಕ್ ಗೆ ಹೊಲಿಸಿದರೆ ಹಲವು ಪಟ್ಟು ಸುಗಮ ಸಂಚಾರ ವ್ಯವಸ್ಥೆ ಇಲ್ಲಿದೆ...
ಕನ್ನಡಿಗರಲ್ಲಿ ಹಲವರಿಗೆ ಇಂತಾ ಕಟುಸತ್ಯಗಳನ್ನು ಜೀರ್ಣಿಸಿಕೊಳ್ಳುವುದು ಆಗದು, ಬಿಡಿ! ಅದೂ ತಮಿಳಿನವರ ಬಗ್ಗೆ..!!.ಇದು ಫೂರ್ವಾಗ್ರಹಫೀಡಿತ ಮನೋಭಾವವೇ ಸರಿ..

~ಶೃಂಗಾರ!

ಅನಾಮಧೇಯ ಹೇಳಿದರು...

Bengaloorinavrenoo kadime illa alva? Ivru yaargoo gottagdaange dudu maadtaare....

Pramod ಹೇಳಿದರು...

:D lol

ವಿ.ರಾ.ಹೆ. ಹೇಳಿದರು...

ಎಲ್ಲರಿಗೂ ರುಂಬ ಥ್ಯಾಂಕ್ಸ್.

ನಮ್ ಬೆಂಗಳೂರಿನ ಆಟೋದವರು ಕನ್ನಡ ಬರದೇ ಇದ್ದವರನ್ನು ಹುಡುಕಿ ಹತ್ತಿಸಿಕೊಳ್ಳಲು ಕಾಯ್ತಿರ್ತಾರೆ. ಫೋರಮ್ ಮುಂತಾದ ಕಡೆ ಹಿಂದಿವಾಲಾಗಳು ಜಾಸ್ತಿ ಇರುತ್ತಾರಾದ್ದರಿಂದ ಕನ್ನಡದವರನ್ನು ಕಡೆಗಣಿಸಿ ಅವರಿಗೆ ಮಣೆ ಹಾಕುತ್ತಾರೆ.! ಜಾಸ್ತಿ ದುಡ್ಡು ಕೀಳಬಹುದು ಅಂತ!

ಆದ್ರೂ ತಮಿಳಿನವರದ್ದು ದುರಭಿಮಾನ ಅಂತ ಏನೂ ಅನ್ನಿಸಲಿಲ್ಲ, ಅವರ ಅರ್ಧಭಾಗ ಅಭಿಮಾನವಾದರೂ ಕನ್ನಡದವರಲ್ಲಿ ಇದ್ದಿದ್ದರೆ ಇವತ್ತು ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಅನಿಸಿತು!