ಗುರುವಾರ, ಆಗಸ್ಟ್ 27, 2009

ಹೊಸೂರು ರಸ್ತೆಗೆ ಬಿದ್ದಿದ್ದೇನೆ

ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. "life is like hosur road, there are no shortcuts!" ನಿಜ... ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ ರಸ್ತೆಯಲ್ಲಿ ಹೋಗಿ ಬಂದು ಕೆಲಸ ಮಾಡುತ್ತಾರಲ್ಲ ಎಂದು! ನಾನು ಇದುವರೆಗೂ ಕೆಲಸ ಮಾಡಿದ ಕಂಪನಿಗಳು ನಗರ ಮಿತಿಯ ಒಳಗೇ ಇದ್ದುದರಿಂದ ಓಡಾಡಲು ಅಷ್ಟೇನೂ ತೊಂದರೆಯಾಗಿರಲಿಲ್ಲ. ನಿಧಾನವಾದರೂ ತಾಸಿನೊಳಗೆ ತಲುಪುವಂತಿತ್ತು. ಆದರೆ ಈ ಹೊಸೂರು ರಸ್ತೆಗೆ ಇದೇ ಮೊದಲು ಬಂದಿರುವುದು ನಾನು. ನಾನಿರುವ ಏರಿಯಾದಿಂದ ಬಹಳ ದೂರ. ಜೊತೆಗೆ ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆಗಳೆಲ್ಲವೂ busy ರಸ್ತೆಗಳು. ಬೈಕ್ ನಲ್ಲಿ ಹೋದರೆ ತಾಸುಗಟ್ಟಲೇ ಹೋಗುತ್ತಲೇ ಇರಬೇಕು, ಹೋಗುತ್ತಾ ಹೋಗುತ್ತಾ ತಮಿಳುನಾಡಿಗೇ ಹೋಗಿಬಿಡುತ್ತೇನಾ ಅಂತ ಭಯವಾಗುತ್ತದೆ. ಸಿಟಿ ಬಸ್ಸಿನಲ್ಲಿ ಹೋದರೆ ಮಧ್ಯಾಹ್ನವಾದರೂ ತಲುಪುತ್ತೇನಾ ಇಲ್ಲವಾ ಅಥವಾ ಸಂಜೆ ವಾಪಸ್ ಹೊರಟರೆ ಮಧ್ಯರಾತ್ರಿಗಾದರೂ ಮನೆ ತಲುಪುತ್ತೇನಾ ಅಂತ ಸಂಶಯ ಶುರುವಾಗಿಬಿಡುತ್ತದೆ. ಇದು ನಗರದ ಮಿತಿಯೊಳಗೇ ಬರುವುದರಿಂದ ಕಂಪನಿಸಾರಿಗೆ ವ್ಯವಸ್ಥೆ ಇಲ್ಲ ಎಂದು ಕಂಪನಿಯವರು ಕೈಎತ್ತಿದ್ದಾರೆ. ಮೊದಲು ನನ್ನ ಸ್ನೇಹಿತರು ಕೆಲವರು ಹೊಸೂರು ರಸ್ತೆ ಟ್ರಾಫಿಕ್ ಬಗ್ಗೆ ಹೇಳುವುದನ್ನು ಕೇಳಿದಾಗ ಅಯ್ಯೋ ಪಾಪ ಅನ್ನಿಸುತ್ತಿತ್ತು. ಈಗ ನಾನೇ ಅಯ್ಯೋ ಪಾಪ ಆಗಿದ್ದೇನೆ. ಇದನ್ನೇ ಗೆಳೆಯರಿಗೆ ಹೇಳಿದರೆ ನಿನ್ನ ಕಂಪನಿ ಬಹಳ ಹತ್ತಿರವಿದೆ, ನಿನ್ನ ಪರಿಸ್ಥಿತಿ ಎಷ್ಟೋ ಪರವಾಗಿಲ್ಲ , ಇಷ್ಟಕ್ಕೇ ನೀನು ಹೀಗೆ ಅತ್ತರೆ ದಿನಾ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಇನ್ನೂ ಮುಂದೆ ಓಡಾಡುವವರ ಪಾಡು ಗೊತ್ತಾ ಅನ್ನುತ್ತಾರೆ. ಅವರು ಹೇಳುವ ಪ್ರಕಾರ ಈಗ ಹೊಸೂರು ರಸ್ತೆ ಎಷ್ಟೋ ಪರವಾಗಿಲ್ಲವಂತೆ. ಬಹಳ ಅಗಲ ಮಾಡಿದ್ದಾರಂತೆ. ಕೆಲ ಸಿಗ್ನಲ್ಲುಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಮಾತ್ರ ತೊಂದರೆ ಇದೆಯಂತೆ. ಹೌದು, ಏನೋ ರಸ್ತೆ ಕೆಲಸ ನೆಡೆಯುತ್ತಲೇ ಇದೆ. ಅದರಿಂದಲೇ ಅರ್ಧ ಟ್ರಾಫಿಕ್ ದಟ್ಟಣೆ. ಒಂದು ಫೈ ಓವರ್ ಕಟ್ಟುವಿಕೆಯೂ ನೆಡೆಯುತ್ತಿದೆ. ಅದು ಸೀದ ಇನ್ಫೋಸಿಸ್ ಒಳಗೇ ಇಳಿಯುತ್ತದಂತೆ! :) ಅದು ತಯಾರಾದ ಆದ ಮೇಲೆ ಅದರಲ್ಲಿ ಓಡಾಡಲು ಟೋಲ್ ಉಂಟಂತೆ. ಅದು ಖಾಲಿ ಹೊಡೆಯುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿದೆ. ನೋಡಬೇಕು. ಪಾಪ, ಇಂತ ರಸ್ತೆಗಳಲ್ಲಿ ದಿನವಿಡೀ ಬಸ್ ಓಡಿಸುವ ಬಿ.ಎಂ.ಟಿ.ಸಿ ಬಸ್ ಚಾಲಕರ ಶ್ರಮಕ್ಕೊಂದು ದೊಡ್ಡ ನಮಸ್ಕಾರ. peak hourನಲ್ಲಿ ಇಂಚಿಂಚಾಗಿ ಚಲಿಸುವುದಿದೆಯಲ್ಲ ಅದು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಸಂಜೆ ಎಲ್ಲರಿಗೂ ಮನೆಗೆ ಹೋಗಲು ಅದೇನೂ ಅವಸರವೋ. ಬಸ್, ಕಾರು, ಬೈಕ್ ಗಳಲ್ಲಿ ಎಲ್ಲರೂ ಹೇಗೆಗೆ ಆಗುತ್ತದೋ ಹಾಗೆಲ್ಲಾ ನುಗ್ಗುವುದನ್ನೂ ನೋಡಿಯೇ ಆನಂದಿಸಬೇಕು! ಅಲ್ಲೇ ಹತ್ತಿರದಲ್ಲಿ ಮನೆ ಮಾಡೋಣವೆಂದರೆ ನಾನಾ ತೊಡಕುಗಳು.

ದಿನಾ ೩-೪ ತಾಸು ರಸ್ತೆಯಲ್ಲಿ ಕಳೆಯುವುದಿದೆಯಲ್ಲ, ಅದರಂತಹ ಟೈಮ್ ವೇಸ್ಟು ಬೇರೆ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಎಂತವನ ಸತ್ವವನ್ನೂ, ಉತ್ಸಾಹವನ್ನೂ ಉಡುಗಿಸಿಬಿಡುತ್ತದೆ.......ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ ಒಳ್ಳೆ ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? ಗೊತ್ತಿಲ್ಲ, ಕಾದು ನೋಡಬೇಕು. :-)

24 ಕಾಮೆಂಟ್‌ಗಳು:

Unknown ಹೇಳಿದರು...

೨ ವರ್ಷದ ಹಿಂದೆ ಬರ್ಬೇಕಿತ್ತು ನೀವು, ಈಗೀರೋದು, ಆವಾಗಿನ ೧೦% ಟ್ರಾಫಿಕ್ ಅಷ್ಟೇ.

ಬಾಲು ಹೇಳಿದರು...

ಕ೦ಪನಿ ಚೆ೦ಜ್ ಮಾಡಿದ್ಯೆನೊ? ನಿ೦ಗೆ ಅಲ್ ದಿ ಬೆಸ್ಟ್!!!
ಬಸ್ ನಲ್ಲಿ ಸೀಟ್ ಸಿಗುತ್ತಾ ನೊಡು. ಸಿಕ್ಕರೆ ಹೇಗೊ ಕಾಲ ಕಳೀ ಬಹುದು.

ಅಮೇಲೆ ಬಸವೇಶ್ವರ ನಗರದ ಒಳ್ಳೆ ಹುಡುಗ ಅ೦ದ್ಯಲ್ಲ ಅದ್ಯಾರು? ನಾನು ಇರೋದು ಸ೦ಪ೦ಗಿ ರಾಮ ನಗರ ದಲ್ಲಿ ಮರಾಯ!!! :)

Unknown ಹೇಳಿದರು...

ವಿಕಾಸ್ ಅವರೆ,
ನಿಮ್ಮ ಅಮೂಲ್ಯ ಕೆಲಸದ ಸಮಯವು ಹಾಳಗುವುದನ್ನು ಕೇಳಿ ವ್ಯಥೆ ಅನ್ನಿಸಿತು . ಮೆಟ್ರೋ ರೈಲ್ ಬ೦ದ ಮೇಲೆ ಸುದಾರಿಸ ಬಹುದು ಎ೦ದು ಒ೦ದು ಆಶಾ ಭಾವನೆಯನ್ನು ಇಡಿ ..:-( :-(..ನಿಮ್ಮ ಮೆಚ್ಚಿನ ಪದ್ಯ ಕೇಳಿ ,ಇಲ್ಲದಿದ್ದರೆ ಹೊರಗಿನ ವಾತಾವರಣವನ್ನು ಬೇಸರವಾದರೂ ಅನುಭವಿಸಲು ಪ್ರಯತ್ನಿಸಿ :-( :-(

sunaath ಹೇಳಿದರು...

ವಿಕಾಸ,
ಬಾಲು ಸಂಪಂಗಿರಾಮನಗರದಲ್ಲಿ ಇರ್ತೇನೆ ಅಂತ ಹೇಳ್ತಿದ್ದಾರೆ.
ನೀವು ಬಸವೇಶ್ವರನಗರ ಅಂತ ತಪ್ಪಾಗಿ ಬರದಿದ್ದೀರಾ?

ಯಜ್ಞೇಶ್ (yajnesh) ಹೇಳಿದರು...

ಕಳೆದ ಹಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಸಿಟಿ ಮತ್ತು ವಿಜಯನಗರ ಓಡಾಟ ನಡೆಯುತ್ತಾಯಿದೆ... ಬೆಳಿಗ್ಗೆ ಸ್ವಲ್ಪ ಓಕೆ... ಆದ್ರೆ ಸಂಜೆ ಮಾತ್ರ ವರ್ಣಿಸಲಾಧ್ಯ!!!.. ಬಸ್ಸು ಇಂಚಿಂಚು ಮೂವ್ ಆಗತ್ತೆ :(..

ಆದ್ರೆ ಈಗ ಮೊದಲಿಗಿಂತ ಎಷ್ಟೋ ವಾಸಿ ಹೊಸೂರು ರಸ್ತೆ... ಅದ್ರೆ ಟ್ರಾಫಿಕ್ ಶುರುವಾಗೋದು ಮಡಿವಾಳದಿಂದ :) ಒಂದಷ್ಟು ದಿನ ಹೊಸೂರು ರಸ್ತೇಲಿ ಕಾರು ತಗೊಂಡು ಹೋದೆ... ನನ್ನ ಪರಿಸ್ಥಿತಿ ಚಿಂತಾಜನಕ.. ಯಾರೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡೊಲ್ಲ.. ಅದ್ರಲ್ಲಿ 2 ವೀಲರ್ಸ್.. ಮದ್ಯ ಮದ್ಯ ಬಂದು ವಕ್ಕರಿಸ್ತಾವೆ...ಎಷ್ಟು ಸಿಟ್ಟು ಬರತ್ತೆ ಅಂದ್ರೆ ಯಾರಿಗಾದ್ರು ನಾಲ್ಕು ತಟ್ಟಿ ಬಿಡೋಣ ಅನ್ಸತ್ತೆ...ವಾಪಾಸ್ ಡಬ್ಬಲ್ ಬಂದ್ರೆ ಅಂತ ಸುಮ್ನಾಗ್ತೀನಿ. ಅದ್ಕೆ ಕಾರು ತರೋದು ಬಿಟ್ಟು ಆಫೀಸು ಬಸ್ಸು ಹಿಡಿದಿದ್ದು..

ದುಡ್ಡಿನ ಬಗ್ಗೆ ಮುಖ ನೋಡದೇ ಅರಾಮಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬರ್ಬೇಕು ಅಂದ್ರೆ ನೈಸ್ ರಸ್ತೆ ಬೆಸ್ಟು.. ನಮ್ಗೆ ನೈಸಾಗಿ ಟೋಲ್ ಅಂತ ಚೌರ ಮಾಡ್ತಾರೆ.. ಚೌರಕ್ಕೆ ತಕ್ಕ ಹಾಗೆ ರಸ್ತೆಯಿದೆ... ಗಾಡಿ ಓಡ್ಸೋಕೆ ಸೂಪರ್ರು...ನಾನು ಕಾರು ತಗೊಂಡು ಬಂದ್ರೆ ನೈಸ್ ರಸ್ತೇನಲ್ಲೇ ಬರೊದಪ್ಪ..

ನಿನ್ನ ಹಾಗೆ ನಾನು ಮನೆ ಚೈಂಜು ಮಾಡೋಣ ಅಂತೆ ಹುಡುಕಿದ್ದೇ ಹುಡುಕಿದ್ದು..ಸಿಕ್ಕಾಪಟ್ಟೆ ರೆಂಟು..ಏರಿಯಾ ಅಷ್ಟು ಸರಿ ಇಲ್ಲಾ...ಓಟ್ನಲ್ಲಿ ನಮ್ಮ ವಿಜಯನಗರ, ಮಲ್ಲೇಶ್ವರಮ್ ಮತ್ತು ಬಸವೇಶ್ವರ ನಗರ ಬಿಟ್ಟು ಬೇರೆ ಕಡೆ ಹೋಗೋಕೆ ನಮ್ಗೆ ಮನ್ಸು ಇಲ್ಲಾ...

ಅನಿಕೇತನ ಸುನಿಲ್ ಹೇಳಿದರು...

:-) :-)

PARAANJAPE K.N. ಹೇಳಿದರು...

ಬಸವೇಶ್ವರ ನಗರದ ಒಳ್ಳೆಯ ಹುಡುಗನಿಗೆ ಶುಭವಾಗಲಿ

ಆಲಾಪಿನಿ ಹೇಳಿದರು...

ಬಸವೇಶ್ವರ ನಗರದ ಒಳ್ಳೆ ಹುಡುಗ !!!!!!! ಎಲ್ಲಿ ಬರೆಸಿದಿ ಬೋರ್ಡ್‌? ಈಗ ಹಾಕ್ಕೊಂಡೇ ಹೋಗೋದಾ ಆಫೀಸ್‌ಗೆ?

ತೇಜಸ್ವಿನಿ ಹೆಗಡೆ ಹೇಳಿದರು...

ವಿಕ್ಸ್,

ನಿಜ.. ಬೆಂಗಳೂರಿನ ಟ್ರಾಫಿಕ್ ಹೊರೆಗೆ ಹೋಗುವುದೇ ಬೇಡ ಎನ್ನಿಸುವಂತೆ ಮಾಡಿದೆ !! ಆದರೆ ಒಮ್ಮೆ ಯೋಚಿಸು.. ಮನೆಯಲ್ಲೂ ದುಡಿದು, ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ, ಮತ್ತೆ ಸಂಜೆ ಆಫೀಸ್ ಕೆಲಸದಿಂದ ಸುಸ್ತಾಗಿ ಮನೆಗೆ ಬಂದು, ಮನೆಗೆಲಸಗಳನ್ನೆಲ್ಲಾ ಮಾಡಿಕೊಳ್ಳುವ ಹೆಣ್ಮಕ್ಕಳ ಕಷ್ಟವನ್ನು.. ಅವರೂ ಅಂತಹ ರಸ್ತೆಗಳನ್ನೇ ದಾಟಿ ಹೋಗಬೇಕಾಗಿರುತ್ತದೆ. ಅವರ ಕಷ್ಟ, ತಾಳ್ಮೆಯ ಮುಂದೆ ತಮ್ಮದು ತುಸು ಅಲ್ಪವೇ ಅಲ್ಲವೇ?:) ಅಯ್ಯೋ ಇನ್ನು ನನ್ನನ್ನು ಮಹಿಳಾವಾದಿ ಎಂದೋ, ಪಕ್ಕಾ Feministಎಂದೋ ಕರೆಯಬೇಡಪ್ಪಾ..:) ನಾನು ಪಕ್ಕಾ ಸಮಾನತಾವಾದಿ :) "ನಮಗಿಂತಲೂ ಕಷ್ಟದಲ್ಲಿರುವವರನ್ನು ನೋಡಿ ಸಮಾಧಾನಿಸಿಕೊಳ್ಳಬೇಕಂತೆ" ಹಾಗಾಗಿ ಇನ್ನು ಮುಂದೆ ಟ್ರಾಫಿಕ್‌ನಿಂದಾಗಿ ತಲೆನೋವಾದರೆ ನಿನಗಿಂತಲೂ ಕಷ್ಟದಲ್ಲಿರುವವರೂ ಅದೇ ರಸ್ತೆಯಲ್ಲಿದ್ದಾರೆಂದು ಎಣಿಸಿಬಿಡು. ಎಲ್ಲಾ ಮಂಗ ಮಾಯವಾಗುವುದು :) :)

ಬಸವೇಶ್ವರ ನಗರದ ಬಲಮುರಿ ಗಣಪತಿಯಲ್ಲಿ ಕೇಳಬೇಕು ನೋಡು.. ಒಳ್ಳೇ ಹುಡುಗನೊಬ್ಬ ಆ ಏರಿಯಾದಲ್ಲಿದ್ದಾನೆಯೇ ಎಂದು :-p

ಸಂದೀಪ್ ಕಾಮತ್ ಹೇಳಿದರು...

ಬಸವೇಶ್ವರ ನಗರ ಈಗ ನೆಮ್ಮದಿಯಿಂದಿರುತ್ತೇನೋ ! ಹೊಸೂರು ರಸ್ತೆಯ ಆಸುಪಾಸಿನವರನ್ನು ಆ ದೇವರೇ ಕಾಪಾಡಬೇಕು:)

ಅನಾಮಧೇಯ ಹೇಳಿದರು...

basaweshwara nagarada bahupaalu hudugeeru kanniru idta iddarante nodu! hudgeera kannalli neerubarsidre ninge streeshaapa baratte!!!
kodsara

shivu.k ಹೇಳಿದರು...

ಟ್ರಾಫಿಕನ್ನು ejoy ಮಾಡಿ...ನಾನು ಈಗ ನಿತ್ಯ ಮಾಡುತ್ತೇನಲ್ಲ....ನೀವು ಅದಕ್ಕೆ ಹೊಂದಿಕೊಳ್ಳಿ..

Lakshmi Shashidhar Chaitanya ಹೇಳಿದರು...

basaveshwaranagarakke nimminda vimochane aaguvudara bagge nanage santosha ide ! :P

ಚಿತ್ರಾ ಹೇಳಿದರು...

ಹೊಸಾ ಕಂಪನಿಯ ಹೊಸಾ ಕೆಲಸಕ್ಕೆ ಅಭಿನಂದನೆಗಳು ! ಈ ಟ್ರಾಫಿಕ್ ನದು ಯಾವ ಪಟ್ಟಣಕ್ಕೆ ಹೋದರೂಅದೇ ಕಥೆ ಎನಿಸುತ್ತದೆ. ಇಲ್ಲೂ ಅಷ್ಟೆ , ನಾವಿರುವ ಚಿಂಚವಾಡದಿಂದ ಕೇವಲ ೧೮ ಕಿ. ಮೀ ದೂರದ ಪುಣೆಗೆ ಹೋಗುವುದಕ್ಕಿಂತ ೮೦ ಕಿ. ಮೀ ದೂರದ ನವಿ ಮುಂಬಯಿ ಗೆ ಹೋಗುವುದೇ ಸುಲಭ ಎನಿಸಿಬಿಡುತ್ತದೆ!
ಅಂದಹಾಗೇ , ಒಳ್ಳೆಯ ಹುಡುಗ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಲೂ ಧೈರ್ಯ ಬೇಕು ! ಅಭಿನಂದನೆಗಳು !
ಪಾಪ , ಬಸವೇಶ್ವರ ನಗರದ ಹುಡುಗಿಯರು !!

Prabhuraj Moogi ಹೇಳಿದರು...

ಬಸ ಪ್ರಯಾಣ ಆದ್ರೆ ಅಲ್ಲೇ ಬ್ಲಾಗಗೆ ಪೊಸ್ಟ ಬರೀಬಹುದಿತ್ತು. ಬೈಕ ಅಂದ್ರೆ ತೊಂದ್ರೆ, ಮೆಟ್ರೊ ಆದ್ರೆ ಒಳ್ಳೇದೇ, ಆಗೊವರೆಗೆ ಇರೋ ರೋಡುಗಳೂ ಅಧ್ವಾನ ಆಗಿವೆ.

ವಿ.ರಾ.ಹೆ. ಹೇಳಿದರು...

ಸಂತ್ರಸ್ತನಿಗೆ ಸಾಂತ್ವನದ ಪ್ರತಿಕ್ರಿಯೆಗಳಿಗೆ ಥ್ಯಾಂಕ್ಸ್...

@ಮಧು, ಹೌದಾ!! ಅಯ್ಯೋ.. ಸದ್ಯ.

ಬಾಲು, ಥ್ಯಾಂಕ್ಸ್, ಸೀಟು ಸಿಗತ್ತೆ ಬೆಳಗ್ಗೆ, ಆದ್ರೆ ಬರ್ತಾ ಕಷ್ಟ. ವೋಲ್ವೋದಲ್ಲಿ ಸಿಗತ್ತೆ.. ಅದ್ಕೇ ಬಚಾವ್ !
ನೀನು ಸಂ.ರಾ. ನಗರದ ಒಳ್ಳೆ ಹುಡುಗ ಬಿಡು.:)

ರೂಪಾ, ಹ್ಮ್..ಆಶಾಭಾವನೆ ಇಟ್ಕೊಳ್ಳೋದೊಂದೇ ದಾರಿ.

ಸುನಾಥಕಾಕಾ, ಹ್ಹ ಹ್ಹ.. ಬಾಲುಗೆ ಹೊಟ್ಟೆ ಉರಿ ಬಿಡಿ.

ಯಜ್ಞೇಶಣ್ಣ, ಹೌದು, ಈ ಕಡೆ ಏರಿಯಾಗಳ ಮೇಲೆ ಏನೋ ಭಾವನಾತ್ಮಕ ಸಂಬಂಧ ಇದೆ. ನೋಡಬೇಕು ಏನಾಗುತ್ತದೋ ಏನೋ... ಕಾರ್ ನವರಿಗೆ ಭಾರೀ ತೊಂದರೆ ಪಾಪ, ಟೂ ವೀಲರ್ ಆದ್ರೆ ಹೇಗೋ ನುಗ್ಗಿ ಹೋಗಿಬಿಡಬಹುದು...

ಅನಿಕೇತನ, :-)

ಪರಾಂಜಪೆ, ಒಪ್ಪಿಕೊಂಡು ಹಾರೈಸಿದ್ದಕ್ಕೆ ಥ್ಯಾಂಕ್ಸ್ !:)

ಆಲಾಪಿನಿ, ಅದೆಲ್ಲಾ ಬೋರ್ಡ್ ಬರೆಸಬೇಕಾ, ಎಲ್ಲಾರ್ಗೂ ಗೊತ್ತು ಬಿಡು. :)

ತೇಜಸ್ವಿನಿ, ಹೌದು , ಬಹಳ ಕಷ್ಟ ಪಾಪ, ಏನ್ ಮಾಡೋದು ಹೇಳಿ, ಸಿಟಿ ಲೈಫು :(


ಸಂದೀಪ್, ಸುಮ್ನಿರಿ.. ಸುಸ್ತಾಗಿದೆ :)

ಕೋಡ್ಸರ್, ಈಗಾಗ್ಲೇ ಬೇಜಾನ್ ಶಾಪಗಳಿವೆ ಬಿಡು, ಜೊತೆಗೆ ಇದೊಂದು.. ಜೈ..

ಶಿವು, ಹ್ಮ್... ಪ್ರಯತ್ನ ಮಾಡ್ತೇನೆ.

ಲಕ್ಷ್ಮಿ, ನಿಮಗ್ಯಾಕೆ ಸಂತೋಷ.. grrr..

ಚಿತ್ರಾ, thanx, ನೀವೊಬ್ರೇ ಸರಿಯಾಗಿ ಅರ್ಥ ಮಾಡ್ಕಂಡಿದ್ದು ನನ್ನ.

ಪ್ರಭು, ಹ್ಮ್.. ಎಲ್ಲಾ ಚೆನ್ನಾಗಾಗತ್ತೆ ಇನ್ನೊಂದೈದು ವರ್ಷದಲ್ಲಿ ಅಂತ ಕಾಯೋಣ! :)

Pramod ಹೇಳಿದರು...

ಹೊಸ + ಊರು = ಹೊಸೂರ != ಅಷ್ಟೊ೦ದು ಹೊಸ ಊರು.
ನಮ್ಮ ಫ್ರೆ೦ಡು ಹೇಳ್ತಿದ್ದ ಇ೦ಫಿ, ವಿಪ್ರೋ ಹಾಗು ಸೀಮನ್ಸ್ ಗೆ ರಜಾ ಕೊಟ್ರೆ ಹೊಸೂರು ರೋಡ್ ನಲ್ಲಿ ಕ್ರಿಕೆಟ್ ಆಡ್ಬೋದು ಅ೦ತಾ.. :(

Roopa ಹೇಳಿದರು...

ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ 7ರಿಂದ ಹತ್ತು ಗಂಟೆಯವರೆಗೂ ಬರಬಾರದು
ಸಾಯಂಕಾಲ ಐದರ ಮೇಲೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಗಡೆ ಹೊರಡಬಾರದು
ಒಮ್ಮೆ ಊರಿಗೆಂದು ರಾತ್ರಿ ಹತ್ತು ಘಂಟೇಗೆ ಬಸ್ ಟಿಕೆಟ್ ಬುಕ್ ಮಾಡಿಸಿದ್ದೆವು.
ಹೊರಟಿದ್ದು ಸಾಯಂಕಾಲ ಆರುಘಂಟೆಗೆ ಅಲ್ಲಿ ಸೇರಿದ್ದು ಒಂಬತ್ತು ಐವತ್ತಕ್ಕೆ ಸಧ್ಯ ಬಚಾವ್ ಸ್ವಲ್ಪದರಲ್ಲಿ.
ನಿಮಗೆ ಹೊಸೂರು ರೋಡಿಗೆ ಅಲ್ಲಿನ ನಿವಾಸಿಗಳ ಪರವಾಗಿ ಆತ್ಮೀಯ ಸ್ವಾಗತ

ವಿ.ರಾ.ಹೆ. ಹೇಳಿದರು...

Pramod, noDONa, avarige flyover mAdta iddare.. amele cricket aDboda enu anta ! :)

Roopa, Thank u so much... neevu majestic talupodroLage nAvu nammUrige hOgirtivi :)

Harisha - ಹರೀಶ ಹೇಳಿದರು...

ಇದೇನಾ ಇದು ವಿ.ರಾ.ಹೆ? "ವರಾಹ"ದ ಅಪರಾವತಾರನ? ಹಂದಿಜ್ವರಕ್ಕೂ ನೀನು ಈ ರೀತಿ ಹೆಸರು ಹಾಕ್ಯಂಡಿರದಕ್ಕೂ ಸರಿ ಹೋಯ್ದು ನೋಡು..

ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ "ಒಳ್ಳೆ" ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? - ಖಂಡಿತ ಇಲ್ಲ

ಧರಿತ್ರಿ ಹೇಳಿದರು...

ಒಳ್ಲೆದಾತು..ಹಂಗೆ ಆಗಬೇಕು. ನಾವೆಲ್ಲಾ ಇದನ್ನೆಲ್ಲಾ ಯಾವಾಗಲೋ ನೋಡಿದ್ದೀವಿ ಮಾರಾಯ.
-ಧರಿತ್ರಿ

Unknown ಹೇಳಿದರು...

Nanu Basaveshwara nagarada vasiyagiddu alle intaha olleya barahagara iddanendu tilididde indu...........adaru bengaloorina traffic jam gagi tamma time waste madikolluva naukarara paadu healateeradu......

olleyadagali......

ಮನಸಿನ ಮಾತುಗಳು ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ವಿ.ರಾ.ಹೆ. ಹೇಳಿದರು...

ಹರೀಶ, ಸುಮ್ನಿರು. ನಿಂಗೊತ್ತಿಲ್ಲ :)

ಧರಿತ್ರಿ, ದೊಡ್ಡೋರು ನೀವು , ಎಲ್ಲಾ ನೋಡಿರ್ತೀರ.. ಹ್ಮ್

ಶ್ರೀ.. thank you. ಸರಿಯಾಗಿ ಹೇಳಿದ್ದೀರ ಕೊನೇ ವಾಕ್ಯ. :)

ದಿವ್ಯಾ, ಸುಮ್ನೆ ಎಫೆಕ್ಟು ಕೊಡಕ್ಕೆ ಹಂಗಂದಿದ್ದು. ಹ್ಹ ಹ್ಹ.. ಈಗ ಇರುವ ಫ್ಲೈ ಓವರ್ ನಿಂದ ತಮ್ಮ ಕ್ಯಾಂಪಸ್ ಗೆ ಒಂದು ಮಿನಿ ಫ್ಲೈಓವರ್ ಕಟ್ಟಿಕೊಳ್ಳೋಕೆ ಇನ್ಫೋಸಿಸ್ ನವರಿಗೆ ಹೇಳಿ.:)