ನನಗೆ ಫೋಟೋಗ್ರಫಿಯಲ್ಲಿ ಯಾವುದೇ ಅಭ್ಯಾಸ ಇಲ್ಲವಾದರೂ ಅದರ ಬಗ್ಗೆ ವಿಶೇಷ ಆಸಕ್ತಿ, ಕುತೂಹಲವಂತೂ ಇದೆ. ಆದರೆ ಕಂಡಕಂಡಲ್ಲಿ ಫೋಟೋ ತೆಗೆಯಲು ನಿಲ್ಲುವ, ಇಪ್ಪತ್ತು ಸಾರಿ ಕ್ಲಿಕ್ಕಿಸಿದ್ದನ್ನೇ ಕ್ಲಿಕ್ಕಿಸುವ, ಕಾರ್ಯಕ್ರಮಗಳಲ್ಲಿ ಅಡ್ಡಡ್ದ ಬರುವ ಫೋಟೋಗ್ರಾಫರುಗಳೆಂದರೆ ಒಂಥರಾ ಕಿರಿಕಿರಿ. ಕೈಯಲ್ಲಿ ಡಿಎಸ್ಸೆಲ್ಲಾರ್ ಕ್ಯಾಮೆರಾ ಇದೆ ಎಂದು ಕೆಲವರದ್ದು ಸುಮ್ಮನೇ ಫೋಟೋಗ್ರಫಿ. ಆದರೆ ಸೀರಿಯಸ್ ಪೋಟೋಗ್ರಫಿಯ ವಿಚಾರವೇ ಬೇರೆ ಎಂಬುದು ನಿಜ. ಹಾಗಾಗಿ ನನಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆನಿಸಿದ್ದರೂ ಅವರಿವರಿಂದ ಸ್ವಲ್ಪ ಸ್ವಲ್ಪ ಕೇಳಿ ಗೊತ್ತಿತ್ತೇ ಹೊರತು ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ.

ಒಂದಂತೂ ನಿಜ, ನಾವು ಫೋಟೋಗ್ರಫಿ ಮಾಡುತ್ತಿವೋ ಬಿಡುತ್ತೀವೋ ಅದು ಬೇರೆ ವಿಷ್ಯ. ಆದರೆ ಫೋಟೋಗ್ರಫಿ ಸಂಬಂಧಿತ ಹಲವಾರು ವಿಷಯಗಳಿಂದ ತುಂಬಿದ ಈ ಪುಸ್ತಕ ಓದಿದರೆ ಫೋಟೋಗ್ರಫಿ ಎಂಬ ಆಸಕ್ತಿಕರ ವಿಷಯದ ಬಗ್ಗೆ ತಿಳಿದುಕೊಳ್ಳುವ ಲಾಭವಂತೂ ಖಂಡಿತ. ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವ ಮುನ್ನ ಮನಸ್ಸಿನಲ್ಲೇ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಶುರುವಾಗುವುದು ಫೋಟೋಗ್ರಫಿಯ ಲಕ್ಷಣವೆನ್ನುವುದನ್ನು ಯಶಸ್ವಿಯಾಗಿ ಓದುಗನಿಗೆ ದಾಟಿಸುವಂತಹ ಈ ಪುಸ್ತಕ ಫೋಟೋಗ್ರಫಿಯ ಆಸಕ್ತಿಗೆ, ಕಲಿಕೆಗಂತೂ ಒಳ್ಳೆಯ ಮುನ್ನುಡಿಯಾಗಬಲ್ಲುದು.
ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ವಿಷಯ ಹೇಳಬೇಕು. ದಪ್ಪಕಾಗದವನ್ನು ಬಳಸಿ ಹಲವಾರು ಚಿತ್ರಗಳನ್ನು ಮುದ್ರಿಸಿರುವುದರಿಂದ ಸಹಜವಾಗಿಯೇ ಪುಸ್ತಕದ ಬೆಲೆ ಹೆಚ್ಚಿದೆ. ಆದರೆ ಬೆಲೆಗೆ ತಕ್ಕ content ಕೂಡ ಇದೆ. ಕನ್ನಡದಲ್ಲಿ ಇಂತಹ ಪುಸ್ತಕ ಬರೆದು ಪ್ರಕಟಿಸಿದ ಶಿವು (Shivu KA) ಅವರಿಗೆ ತಡವಾದರೂ ವಿಶೇಷ ಅಭಿನಂದನೆ, ಧನ್ಯವಾದ ಹೇಳಲೇಬೇಕು. ಅಂದಹಾಗೆ, ಪುಸ್ತಕದ ಮುಖಪುಟದಲ್ಲಿ ಲೇಖಕರ ಹೆಸರಿನ ಜೊತೆ ಕಾಣುತ್ತಿರುವ EFAIP, ARPS ಅಂದ್ರೆ ಅದ್ಯಾವ ಡಿಗ್ರಿಗಳು ಅಂತ ಸಂಶಯ ಬಂದರೆ ಅದನ್ನು ತಿಳಿದುಕೊಳ್ಳಲು ಈ ಪುಸ್ತಕದಲ್ಲೇ ಒಂದು ಅಧ್ಯಾಯ ಇದೆ.
***
ಪುಸ್ತಕವು ನವಕರ್ನಾಟಕ, ಸಪ್ನಾ, ಟೋಟಲ್ ಕನ್ನಡ ಮುಂತಾದಲ್ಲಿ ಸಿಗುತ್ತದೆ. ನೇರವಾಗಿ ಲೇಖಕರಿಗೆ ಫೋನ್ (9845147695) ಮಾಡಿಯೂ ತರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
1 ಕಾಮೆಂಟ್:
ಫೋಟೋಗ್ರಾಫಿಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಹಾಗು ಶಿವು ಅವರ ಪುಸ್ತಕದ ಬಗೆಗೆ ಸ್ವಲ್ಪದರಲ್ಲಿಯೇ ಸಮಗ್ರ ಪರಿಚಯವನ್ನು ನಿಮ್ಮ ಲೇಖನದಲ್ಲಿ ನೀಡಿದ್ದೀರಿ. ಇದು ಒಂದು ಉಪಯುಕ್ತ ಲೇಖನವಾಗಿದೆ. ಅಭಿನಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ