ಬುಧವಾರ, ಅಕ್ಟೋಬರ್ 1, 2008

ಜೈ ಗಣೇಶ



ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್.. ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್..

ಶಬ್ದ ದೂರದಲ್ಲೆಲ್ಲೋ ಕೇಳಿಬರುತ್ತದೆ. ಕಿವಿ ಅರಳುತ್ತದೆ. ಶಬ್ದ ಹತ್ತಿರವಾಗುತ್ತಿದೆ. ಹೊರಗೆ ಬಂದು ನೋಡುತ್ತೇನೆ , ಅರ್ರೆ! ನಮ್ಮನೆ ಹತ್ತಿರಕ್ಕೇ ಬರುತ್ತಿದೆ ಆ ಶಬ್ದ. ಮನಸ್ಸು ಆಯಾಚಿತವಾಗಿ ಕುಣಿಲಾರಂಭಿಸುತ್ತದೆ. ಅದೇನು ತಾಳ, ಅದೇನು ಮೇಳ! ಶಬ್ದ ಹಾಗೇ ತಾರಕಕ್ಕೇರುತ್ತದೆ, ಮತ್ತೆ ಲಯದಲ್ಲಿ ಕೆಳಗಿಳಿಯುತ್ತಾ ಬರುತ್ತದೆ. ಟ್ರಾಕ್ಟರಿನ ಮೇಲೊಂದು ದೊಡ್ಡ ಗಣೇಶ. ಭಾರೀ ಅಲಂಕಾರ, ಜಗಮಗಿಸುವ ದೀಪಗಳು ಹರಿದಾಡುತ್ತಿವೆ. ಅದರ ಮುಂದೆ ಒಂದಿಷ್ಟು ಜನ ತಮಟೆ ಬಾರಿಸುತ್ತಿದ್ದಾರೆ. ಯಾವ ಸಂಗೀತ ಶಾಲೆಯಲ್ಲಿ ಕಲಿತವರಲ್ಲ, ಯಾವ ತರಬೇತಿ ಪಡೆದವರಲ್ಲ. ಮುಂದೆ ಒಂದಿಪ್ಪತ್ತು ಜನ ಕುಣಿಯುತ್ತಿದ್ದಾರೆ, ಮೈ ಮರೆತು.. ಪ್ರಪಂಚ ಮರೆತು. ಆಹ್, ಹೋಗಿ ಜೊತೆಗೊಂದು ಸ್ಟೆಪ್ ಹಾಕಲೇ? ಒಟ್ಟಾರೆ ಹಬ್ಬದ ವಾತಾವರಣವೆಂದರೆ ಇದು.

ಈ ಬೆಂಗಳೂರಲ್ಲಿ ವಿಚಿತ್ರ. ನವಂಬರ್ ನಲ್ಲಿ ಟೆಂಟು ಕಟ್ಟುತ್ತಾ ಇರುತ್ತಾರೆ. "ಅಣ್ಣಾ, ರಾಜ್ಯೋತ್ಸವನಾ?" ಅಂತ ಕೇಳಿದ್ರೆ , "ರಾಜ್ಯೋಸ್ತವ ಅಲ್ಲ ಸಾರ್, ಗಣೇಶ" ಅಂತಾರೆ. ಆ ಟೆಂಟು, ಆ ವಿಚಿತ್ರ ಗಣೇಶ ಮೂರ್ತಿಗಳು, ಆ ಪೂಜೆ, ಆ ಪ್ರಸಾದ, ಆ ಮೈಕು, ಆ ಲೌಡ್ ಸ್ಪೀಕರು, ಆ ಹಾಡು, ಆ ಆರ್ಕೆಸ್ಟ್ರಾ ಯಾವುದೂ ನನ್ನ ಆಸಕ್ತಿ ಕೆರಳಿಸುವುದಿಲ್ಲ. ಸುಮ್ಮನೇ ಕಿರಿಕಿರಿ ಅಂದುಕೊಂಡು ಮುಂದೆ ಹೋಗುತ್ತೇನೆ. ಆದರೆ ಈ ತಮಟೆ ವಿಷಯಕ್ಕೆ ಬಂದಾಗ ಮಾತ್ರ ಎಲ್ಲಾ ಕಿರಿಕಿರಿಗಳೂ ಮರೆತುಹೋಗುತ್ತವೆ. ಪ್ರತಿವರ್ಷ ತಮಟೆ ಶಬ್ದ ಕೇಳಲಾದರೂ ಇವೆಲ್ಲಾ ಕಿರಿಕಿರಿಗಳನ್ನು ಸಹಿಸಿಕೊಳ್ಳಬಹುದು ಎನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲೂ ಕೂರಿಸಿದ್ದ ಗಣೇಶನನ್ನು ನೋಡುವುದಕ್ಕಿಂದ ಗಣೇಶನನ್ನು ಬಿಡುವುದನ್ನು ನೋಡುವುದು, ಆ ತಮಟೆ ಶಬ್ದ , ಆ ಹೆಜ್ಜೆ ತಪ್ಪಿದ ಕುಣಿತಗಳನ್ನು ಆನಂದಿಸುವುದೇ ಮಜಾ. ಗೆಳೆಯರು ನೀನು ಹರಿಶ್ಚಂದ್ರ ಘಾಟಿನ ಹತ್ತಿರವೆ ಮನೆ ಮಾಡು ಎನ್ನುತ್ತಾರೆ. ರಸ್ತೆಯಲ್ಲಿ ಗಣೇಶ ಹೊರಟನೆಂದರೆ ನೆಡೆಯುತ್ತಿದ್ದ ಕಾಲುಗಳು ಅಲ್ಲೇ ನಿಲ್ಲುತ್ತವೆ, ಓಡುತ್ತಿದ್ದ ಬೈಕಿಗೆ ಸೈಡ್ ಸ್ಟ್ಯಾಂಡು ಬೀಳುತ್ತದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೆ ನಾನು ತಬಲಾ ನುಡಿಸುವುದನ್ನು ಕಲಿಯುವ ಬದಲು ತಮಟೆ ಹೊಡೆಯುವುದನ್ನೇ ಕಲಿತುಬಿಡುತ್ತಿದ್ದನಾ! ಗೊತ್ತಿಲ್ಲ.


ದೇವರಿಂದ ಮನುಷ್ಯನೋ, ಮನುಷ್ಯನಿಂದ ದೇವರೋ ಎಂಬ ಮಾತು ಪಕ್ಕಕ್ಕಿರಲಿ.
ಇದೊಂದು ಕಾರಣಕ್ಕಾಗಿಯೇ ಯಾವ ಕಾರಣವೂ ಇಲ್ಲದೇ ಗಣೇಶನನ್ನು ಪ್ರೀತಿಸದೇ ಇರಲು ನನ್ನಿಂದ ಸಾಧ್ಯವಿಲ್ಲ. ನಾನೇನಿದ್ದರೂ ’ಫುಲ್ ಲೋಕಲ್ಲು’.

ಜೈ ಗಣೇಶ.



ಮೇಲಿನ ಚಿತ್ರದಲ್ಲಿರೋದು ಈ ಸಾರ್ತಿಯ ನಮ್ಮ ಗಲ್ಲಿಯ ಗಣಪ.

19 ಕಾಮೆಂಟ್‌ಗಳು:

Sree ಹೇಳಿದರು...

cute post:))
ಈಗ ಪಕ್ಕದ ರೋಡ್ ಗಣೇಶ ಮನೆಗೆ ಹೊರಡ್ತಿದಾನೆ,ನಿಮ್ಮ ಪೋಸ್ಟ್ ಓದ್ತಿರೋವಾಗ ಹಿನ್ನೆಲೆಯಲ್ಲಿ ಡಂಕನಕ್ಕ ಡಕ್ಕ ನಕ್ಕ...:)
ಇವ್ರೆಲ್ಲ ಸಂಗೀತಶಾಲೆಗಳಿಗೆ ಹೋಗಿ ಪಡೆದವರಲ್ಲ, ಆದ್ರೆ ಸುಮಾರ್ ಜನ ತಲೆತಲಾಂತರಗಳಿಂದ ತಮಟೆ ನುಡ್ಸೋ ಕುಟುಂಬಗಳಿಗೆ ಸೇರಿದವ್ರು...
’ಸ್ವಲ್ಪ ಹೆಚ್ಚುಕಮ್ಮಿಯಾಗಿದ್ದರೆ...’lol!! ನೀವೂ ಟೈಟಾಗಿ(ಈ ತಮಟೆ ನುಡ್ಸೋವ್ರಿಗೆ ಇಲ್ಲದಿದ್ರೆ ಕೈ ಓಡೊಲ್ಲವಂತೆ - ನಂ ಲೋಕಲ್ ವುಡುಗ್ರು ಹಂಗೇಳ್ತಾರೆ) ತಮಟೆ ಹಿಡ್ದು ಹೊರಟ ಹಾಗೆ imagine ಮಾಡ್ಕೊಳಿಂಗ್ಸ್:))

ಅನಾಮಧೇಯ ಹೇಳಿದರು...

ತಮಟೆನ ಹೆಚ್ಚಾಗಿ ಹೆಣ ಒಯ್ಯುವಾಗ ಬಾರಿಸುತ್ತಾರೆ. ಹೆಣದೆದುರು ಡಕ್ಕ ನಕ್ಕ ಅಂತ ಡಾನ್ಸ್ ಮಾಡೋದು ಅಂದ್ರೆ ತಮಟೆ ಬಾರಿಸ್ತಾ ಡಾನ್ಸ್ ಮಾಡೋದು ಅಂತರ್ಥ.

ತಮಟೆನಲ್ಲಿ ಒಂಥರಾ hypnotic factor ಇರೋದು ಮಾತ್ರ ಹೌದು. ಶ್ರೀ ಹೇಳ್ದಾಗೆ ಯಣ್ಣೆ ಹೊಡ್ಕೊಂಡು ತಮಟೆ ಬಾರ್ಸಿದ್ರೆ ಅದ್ರ ಮಜಾನೆ ಬೇರೆ.

-ತಮಟೆ ತಮ್ಮಯ್ಯ

Parisarapremi ಹೇಳಿದರು...

oLLe tamaTe..

aadre paapa, gaNeshange adadE haaDgaLna keTTa raagadalli keLOke bejaar aagilvalla antha nange aashcharya aagutte ee orchestragaLu kelavanna nOdidaaga.. I pity Ganesha.

Lakshmi Shashidhar Chaitanya ಹೇಳಿದರು...

ಹ್ಮ್ಮ್ಮ್...ತಮಟೆ ಕಥೆ ಒಂಥರಾ ಚೆನ್ನಾಗಿದೆ.

ಆ ಟೆಂಟು, ಆ ವಿಚಿತ್ರ ಗಣೇಶ ಮೂರ್ತಿಗಳು, ಆ ಪೂಜೆ, ಆ ಪ್ರಸಾದ, ಆ ಮೈಕು, ಆ ಲೌಡ್ ಸ್ಪೀಕರು, ಆ ಹಾಡು, ಆ ಆರ್ಕೆಸ್ಟ್ರಾ ...

ಮುಂಗಾರುಮಳೆ influence-u...ಗೊತ್ತಾಗತ್ತೆ !

ನಾನೇನಿದ್ದರೂ ’ಫುಲ್ ಲೋಕಲ್ಲು’...ಹೌದಾ ? ಕುಡಿಯುವಾಗ ಜೋಪಾನ ! ಬೆರೆಕೆ ಸರೀಗಿರ್ಬೇಕು ..ಇಲ್ಲಾಂದ್ರೆ..ಜೈ ಗಣೇಶ ! ;-)

Harisha - ಹರೀಶ ಹೇಳಿದರು...

ಏನು ಕದನ-ವಿರಾಮ????

Shree ಹೇಳಿದರು...

ನಮ್ಮನೆ ಹಿಂದಿನ ರೋಡಲ್ಲಿ ಕೂಡ ಹುಡುಗ್ರು ಟೆಂಟ್ ಹಾಕ್ಕೊಂಡು ಗಲಾಟೆ ಮಾಡ್ತಿದ್ರು. ಪ್ರೀತ್ಸೆ ಪ್ರೀತ್ಸೆ..., ಅಮ್ಮಾ ಏ ಸಂಮಗ ಇತ್ಯಾದಿ ಹಾಡುಗಳು.. ಏನು ಅಂತ ನೋಡಿದ್ರೆ ಗಣೇಶನ ಕುಸಿ ಹಾಡ ಹಾಕಿದಾರೆ. ಅವ ಮೂರ್ತಿಯಾಗಿದ್ದಕ್ಕೆ ಬಚಾವ್. ಅದ್ಕಿಂತ ತಮಟೆಯೇ ಓಕೆ ಅನ್ಸಿತು ನಂಗೆ.

ಅನಾಮಧೇಯ ಹೇಳಿದರು...

vikaas,
nangondu article loss aayitu nimminda! ninne namma mane munde ganeshostva. tagole tagole...anta harkestra! deepaavali bandru ganeshostva ivarige anta baribeku andukondidde. neevu mugisibittidira...

vinayaka kodsara

Unknown ಹೇಳಿದರು...

ಹೌದು.ಹೌದು ಹೌದು
ನನಗೂ ತಮಟೆ ಶಬ್ದ ಹಾಗೂ ಈ ಪ್ರಪಂಚ ಮರೆತು ಕುಣಿಯುವ ಆ ಹುಡುಗರು ಎಂದರೆ ತುಂಬಾ ಇಷ್ಟ. ಬೆಂಗಳೂರಿಗೆ ಬಂದಾಗ ನಾನು ಅದಕ್ಕೆ ಮನಸೋತು ನಿಂತರೆ ಜತೆಯಲ್ಲಿದ್ದವರು ಉಗಿತಾರೆ. ಒಮ್ಂದು ದಿವಸ ಗುಲಬರ್ಗಾ ಕಡೆ ಹೋಗೆ ತಮಟೆ ಸದಿಗೆ ಕುಣಿದು ಬರಬೇಕು ಅಂತಾ ಇದ್ದೀನೆ. ಅಲ್ಲಿ ಯಾರೂ ಗುರುತಿನವರಿ ಇರೋದಿಲ್ಲ. ಬರೋ ಹಂಗಿದ್ರೆ ಬನ್ನಿ

ಸಂದೀಪ್ ಕಾಮತ್ ಹೇಳಿದರು...

ಹೊಸದಾಗಿ ಬೆಂಗಳೂರಿಗೆ ಬಂದಿದ್ದಾಗ ನಾನೂ ಅವ್ರ ಜೊತೆ ಕುಣೀತಾ ಇದ್ದೆ .ಯಾಕೋ ತಮಟೆ ಸದ್ದಿಗೆ ಸೊಂಟ ನಿಲ್ಲೋದೇ ಇಲ್ಲ !ಈಗ ಇರೋ ಕೆಲ್ಸಾನೇ ಜಾಸ್ತಿಯಾಗಿದೆ:(
ಒಂದು ಸಲ ಹೀಗೆ ರಾತ್ರಿ ಹನ್ನೊಂದು ಗಂಟೆಗೆ ಒಂದು ಮೆರವಣಿಗೆ ಹೋಗ್ತಾ ಇತ್ತು ಮನೆ ಹತ್ತಿರ ,ನಾನೂ ನನ್ನ ಸ್ನೇಹಿತರು ಎದ್ದೆವೋ ಬಿದ್ದೆವೋ ಅಂತ ಓಡಿ ಹೋಗಿ ಸೇರ್ಕೊಂಡು ಬಿಟ್ಟೆವು ಮೆರವಣಿಗೆನ.ಸುಮಾರು ಒಂದು ಕಿಲೋ ಮೀಟರ್ ಹೋದ ಮೇಲೆ ಹಿಂದೆ ಟ್ರಾಕ್ಟರ್ ನಲ್ಲಿ ಬರೆದಿದ್ದಿದು ಕಾಣಿಸಿತು ’LG ಹಳ್ಳಿ ಸ್ಲಂ ನಿವಾಸಿಗಳ ಸಂಘ ’ ಅಂತ (ಸ್ಲಂ ನಿವಾಸಿಗಳಿಗೂ ಸಂಘ ಇರುತ್ತೆ ಅಂತ ಅಲ್ಲಿ ತನಕ ಗೊತ್ತೇ ಇರಲಿಲ್ಲ)! ಸ್ವಲ್ಪ ಮುಜುಗರವಾದ್ರೂ ಸುಧಾರಿಸಿಕೊಂಡು ಕುಣಿದದ್ದೇ ಕುಣಿದದ್ದು .ಪಾಪ ಆ ಸ್ಲಂ ಹುಡುಗ್ರಿಗೂ ಖುಷಿ ಆಯ್ತು ನಮ್ಮ ಸಪೋರ್ಟ್ ನೋಡಿ.
ಇನ್ನೊಂದು ಸಲ ’ಕುಲದಲ್ಲಿ ಮೇಲ್ಯಾವುದೋ ’ ಹಾಡಿಗೆ ಎಲ್ಲರಂತೆ ಸ್ಟೇಜ್ ಹತ್ತಿ ಕುಣಿದಿದ್ವಿ .ಜೋಶ್ ನಲ್ಲಿ ಏನೂ ಗೊತ್ತೇ ಆಗಿಲ್ಲ ನಮಗೆ.ಮರುದಿನ ತಿಂಡಿ ತಿನ್ನೋದಕ್ಕೆ ಹೋಟೆಲ್ ಗೆ ತಿಂಡಿ ತಿನ್ನೋದಕ್ಕೆ ಹೋದ್ರೆ ಎಲ್ಲ ನಮ್ಮನ್ನೇ ನೋಡಿ ನಗ್ತಾ ಇದ್ರು .ಕ್ಯಾಶಿಯರ್ ಅಂತೂ ’ಏನ್ ಡ್ಯಾನ್ಸ್ ಗುರು ನಿಂ ಗ್ರೂಪ್ ದು ’ ಅನ್ನೋದಾ!! ನೀನೆಲ್ಲಿ ನೋಡಿದೆ ಅಂದ್ರೆ ’ನಿನ್ನೆ ಸಿಟಿ ಕೇಬಲ್ ’ನಲ್ಲಿ live ಬರ್ತಾ ಇತ್ತಲ್ವ ’ ಅಂದುಬಿಟ್ಟ:(

ಯಜ್ಞೇಶ್ (yajnesh) ಹೇಳಿದರು...

ವಿಕಾಸ... ಒಳ್ಳೇ ಸಬ್ಜೆಕ್ಟು ಮತ್ತೆ ಒಳ್ಳೇ ಬರವಣಿಗೆ.
ಪೋಸ್ಟ್ ಹೆಡ್ಡಿಂಗು ನೋಡಿ ಗಣೇಶೋತ್ಸವದ ಬಗ್ಗೆ ಇದ್ದಿಕ್ಕು ಮಾಡಿದಿ. ಕೊನೆಗೆ ಗೊತ್ತಾಗಿದ್ದು ತಮಟೆ ಪುರಾಣ...

ತಮಟೆಯ ಲಯಕ್ಕೆ ಎಲ್ಲರಿಗೂ ಒಂದು ಸ್ಟೆಪ್ ಹಾಕಣ ಅನ್ಸದು ಸಹಜ. ನಂಗೂ ಹಂಗೆ ಅನಿಸ್ತು..ಆದ್ರೆ ಯಾರಾದ್ರು ನಗಾಡಿದ್ರೆ ಕಷ್ಟ ಅಂತ ಸುಮ್ನಾಗ್ತಿ!!!
ನಗಾಡಿದ್ರೆ ಕತ್ತೆ ಬಾಲ..ಕುದುರೆ ಜುಟ್ಟು ಅಲ್ದಾ..

ಕಾಮತರೇ..ನಿಮ್ಮ ಡ್ಯಾನ್ಸ್ ಕಥೆ ಚೆನ್ನಾಗಿದೇರಿ.

ಚಿತ್ರಾ ಸಂತೋಷ್ ಹೇಳಿದರು...

ಆ ಟೆಂಟು, ಆ ವಿಚಿತ್ರ ಗಣೇಶ ಮೂರ್ತಿಗಳು, ಆ ಪೂಜೆ, ಆ ಪ್ರಸಾದ, ಆ ಮೈಕು, ಆ ಲೌಡ್ ಸ್ಪೀಕರು, ಆ ಹಾಡು, ಆ ಆರ್ಕೆಸ್ಟ್ರಾ .....ಅಬ್ಬಬ್ಬಾ! ಪುಣ್ಯಾತ್ಮ...ಹರಿಶ್ಚಂದ್ರ ಘಾಟ್ ಹತ್ರ ಮನೆ ಮಾಡಿದ್ರೆ ಕನಿಷ್ಠ ದಿನಕ್ಕೆರಡು ಬಾರಿಯಾದ್ರೂ ಡಂಕ ನಕ...ತಮಟೆ ಶಬ್ಧ ಕೇಳಬಹುದು!! ಚೆನ್ನಾಗಿದೆ ವಿಕಾಸ್..keep it up!

ಬಾಲು ಹೇಳಿದರು...

hoon kano... but nan bad luck andre company change madi city madya bandu bittidini, hale ofc hattira aagaga thamate keltha irthittu.. nanu n nan colg danka naka antha step haaktha idvi.. olle maja irtha ittu.

i m missin tamate shabda in these days...

Unknown ಹೇಳಿದರು...

ವಿಕಾಸ ಅವ್ರೆ
ನೀವು ಒಂದುಸಲ ನಮ್ಮೂರು ಬಾಗಲಕೋಟೆಗೆ ಬನ್ನಿ ಸ್ವಾಮಿ ಹೋಳಿ ಹಬ್ಬದ ದಿನ ನಮ್ದಂತು ಫುಲ್ ಡಾನ್ಸ್. ಒಂದು ವಾರ ಇರ್ತದ ಫುಲ್ ಎಣ್ಣೆ ಮತ್ತು ತಮಟೆ (ನಮ್ಕಡೆ ಹಲಗಿ ಅಂತರ ಇದದ್ದ್ಕ) ಮತ್ತು ಭಜಿ ಏನ್ ಕಾಮ್ಬಿನಶನ್ ಸರ್ :)
ಪ್ರವೀಣ್

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್

ಎಲ್ಲರಿಗೂ ಟಮಟೆ ಹುಚ್ಚು ಹಿಡಿಸಿ, ಅದ್ರ ಶಬ್ದ ಕೇಳಲೆ ಬಿಟ್ಟಿಕ್ಕಿ ನೀ ಎಲ್ಲಿ ಮಾಯಾದೆ ಮರಾಯಾ? :) ನಂಗಂತೂ ಈ ಟಮಟೆ ಶಬ್ದ ಕೇಳಿರೇ ತಲೆ ನೋವು ಬತ್ತು. ಅದ್ರಲ್ಲೂ ಗಣೇಶನ ಮುಂದೆ ಹಾಕುವ ಚಿತ್ರ ವಿಚಿತ್ರ ಹಾಡುಗಳನ್ನು ಕೇಳ್ದಾಗಂತೂ ಗಣೇಶನ ಮೇಲೇ ಕರುಣೆ ಬತ್ತು. ನಿಜ್ವಾಗ್ಲೂ ಗಣೇಶ ಎಲ್ಲಾ ದೇವ್ರಿಗಿಂತಲೂ ತುಂಬಾ ಸಹನೆ ಇಪ್ಪವ ಅನಸ್ತಾ ಇದ್ದು ಈಗ..:)

ಗಣಪತಿ ಬಪ್ಪ ಮೋರೆಯಾ

shivu.k ಹೇಳಿದರು...

ನೀವೇಳಿದಂತೆ ನನ್ನ ಮನೆ ಹರಿಶ್ಚಂದ್ರ ಘಾಟಿಗೆ ಹತ್ತಿರೆ ಮಲ್ಲೇಶ್ವರ ರೈಲ್ವೇ ನಿಲ್ದಾಣದ ಬಳಿ. ಡಿಸೆಂಬರಲ್ಲೂ ಗಣೇಶ ಮಾಡಿತ್ತಾರೆ. ಆಕ್ಟೋಬರಿನಿಂದ ಡಿಸೆಂಬರುವರೆಗೂ ಪ್ರತಿಭಾನುವಾರ ಡಂಕುನಕ ನಕ್ಕ ನಕ್ಕ, ನಡೆಯುತ್ತಿರುತ್ತದೆ. ರಾತ್ರಿಯಾದರೆ ಸಾಕು ಆ ಶಬ್ದದಿಂದಾಗಿ ಎಲ್ಲಾದರೂ ಓಡಿಹೋಗೋಣ ಎನಿಸುತ್ತದೆ. ನಾವು ಈ ಕಾರಣಕ್ಕಾಗಿಯೆ ವಿಕೆಂಡ್ ಅಲ್ಲಿರುವುದಿಲ್ಲ. ನಿವಂತು ಪುಲ್ ಲೋಕಲ್. ಅದ್ರೆ ನಾನು ಆ ಟೈಮಲ್ಲಿ ಬಡಾವಣೆಯಲ್ಲಿರುವುದಿಲ್ಲ.
ಶಿವು.ಕೆ.

ವಿ.ರಾ.ಹೆ. ಹೇಳಿದರು...

ಎಲ್ಲರಿಗೂ ಥ್ಯಾಂಕ್ಸ್.

@ಶ್ರೀ, ಸುಮ್ನೆ ಇಮಾಜಿನ್ ಎಲ್ಲಾ ಮಾಡ್ಕೋಬೇಡಿ, ನಿಜ್ವಾಗ್ಲೂ ತೋರಿಸ್ತೀನಿ ಒಂದಿನ ತಮಟೆ ಹಿಡ್ಕೊಂಡು ,ಹೊಡ್ಕೊಂಡು :)

@ತಮ್ಮಯ್ಯ, ಹೌದಾ! ಅದೂ ಮಾಡಣ ಅದ್ಕೇನು? :)

ಪರಿಸರಪ್ರೇಮಿಗಳೇ, ಅದಕ್ಕೇ ಆ ಗಣೇಶನ್ನ ’ದೇವರು’ ಅನ್ನೋದು :)

@ಲಕ್ಷ್ಮಿ, :-)

@ಹರೀಶ, ಕಿಲಾಡಿ ನೀನು :)

@ನೂರುಕನಸು , ವಿನಾಯಕ,
:-)

@ಸಂದೀಪ, ಹ್ಹ ಹ್ಹ.. ಒಳ್ಳೇ ಕತೆ ನಿಂದು. ನಿಮ್ ಟೀಮನ್ನ ಯಾವ್ದಾರೂ ಫಂಕ್ಷನ್ ಗೆ ಕರೆಸೋಣ ಅಂತ ಅನ್ಕೊಂಡಿದಿನಿ. ರೆಡಿಯಾಗಿರಿ. :)

@ಶ್ರೀ.ಶಂ ಶರ್ಮಣ್ಣ,
ಅಲ್ನೋಡಿ, ಪ್ರವೀಣ್ ಬಾಗಲಕೋಟೆಗೆ ಕರೀತಿದ್ದಾರೆ, ಮುಂದಿನ ಸಲ ಅಲ್ಲಿಗೇ ಹೋಗಿ ಜೈ ಅನ್ನೋಣ :)

@yajnesh, balu
ಎಲ್ರೂ ಸೇರಿ ಯಾವಾಗಾದ್ರೂ ಸ್ಟೆಪ್ ಹಾಕೋಣ ಖಂಡಿತ :)

@praveen, ಚಿತ್ರಾ
ಜೈ ;)

@tEjakka, shivu
ಏನ್ರೀ ನೀವು, ತಮಟೆ ಶಬ್ದ ಅಂದ್ರೆ ಆಗಲ್ಲ ಅಂತೀರಲ್ಲ! ಛೇ ಛೇ. ಹೋಗ್ಲಿ ಬಿಡಿ. ಡಂಕಣಕ ಣಕ್ಕಣಕ


ಮುಂದಿನ ಸಲ ಬ್ಲಾಗರ್ಸ್ ಮೀಟ್ ಮಾಡಿದಾಗ ’ತಮಟೆ ಕುಣಿತ ’ ಇಡಲು ಎಲ್ಲರೂ ಸೇರಿ ಒತ್ತಾಯ ಹಾಕೋಣ. :)

ಅಹರ್ನಿಶಿ ಹೇಳಿದರು...

ವಿಕಾಸ್,
ಇ೦ಡಿಯದಲ್ಲಿ ಏನು ಮಾಡಿದ್ರು ಗಲಾಟೆನೇ,ತಡೆಯೊಕಾಗೊಲ್ಲ.ಅಲ್ವಾ.ಬನ್ನಿ ತಾ೦ಜಾನಿಯಾಕ್ಕೆ ನಮ್ ಗಣೇಶ ಬಹಳ ಸೈಲೆ೦ಟು.ಅದೇ ನಮ್ ಹೈಲೈಟು.ಶ್ರೀ..ಮನೆಯಲ್ಲಿ ಹಾಕಿದ್ದೇನೆ.

ಅನಾಮಧೇಯ ಹೇಳಿದರು...

nice kano....damma takka damma takka... :)

ಅನಾಮಧೇಯ ಹೇಳಿದರು...

ವಿಕಾಸ,
ನಮ್ಮೂರಲ್ಲಿ ಜಾತ್ರೇಲಿ, ಗಣೇಶ ಹಬ್ಬದಲ್ಲಿ, ಹೋಳಿ ಹಣ್ಣಿಮೆಯಲ್ಲಿ ಕೊನೆಯಲಿ ಸತ್ತಾಗ ಸುಡಗಾಡು ಸೇರಿಸುವಲ್ಲಿ ಹಲಗೆಯ(ತಮಟೆ) ಪಾತ್ರ ಬಹಳ ದೊಡ್ಡದು. ಆದರೆ ಇಲ್ಲಿ ಬೇಸರ ತರೋ ಪಧ್ಧತಿಯೆಂದರೆ, ತಿಂಗಳಾನುಗಟ್ಟಲೆ ಗಣೇಶನ ಹಬ್ಬ ಆಚರಿಸೋದು. ತಿಂಗಳಾನುಗಟ್ಟಲೇ ರಾಜ್ಯೋತ್ವವ ಆಚರಿಸೋದು. ಇಲ್ಲಿ ಇವೆರಡಂತೂ ಖರೆ ಹೇಳಬೇಕಂದ್ರ ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಕಂಬದ ಮೇಲಿನ ಬಾವುಟ ಗಾಳಿ,ಮಳೆ,ಬಿಸಿಲು ಧೂಳಿಗೆ ಚಿಂದಿಯಾಗಿ ಹೋಗಿರುತ್ತೆ, ಒಂದು ವರ್ಷದ ತನಕ ಯಾರಿಗೂ ಅದರ ಯೋಚನೆ ಇರಲ್ಲ. ನನಗಂತು ಹೊಟ್ಟೆ ಉರಿಯುತ್ತೆ.