ಸೋಮವಾರ, ನವೆಂಬರ್ 3, 2008

'ನಾಪೋಲಿ'ಯಲ್ಲಿ ಆರಾಮಿದ್ದೇನೆ

ನೀರಿ,

ನಾನು ಇಲ್ಲಿ ಆರಾಮಿದ್ದೇನೆ. ನೀನು ಕೂಡ ಆರೋಗ್ಯವೆಂದು ನಂಬಿದ್ದೇನೆ. ಇವತ್ತಿಗೆ ಇಲ್ಲಿಗೆ ಬಂದು ೧೦ ದಿನವಾಯಿತು. ಹಿಂದಿನ ಪತ್ರದಲ್ಲಿ ಬಂದು ತಲುಪಿದ ಸುದ್ದಿಯ ಜೊತೆಗೆ ಹೆಚ್ಚೇನನ್ನೂ ಬರೆಯಲಾಗಿರಲಿಲ್ಲ. ಈಗ ಸಮಯ ಸಿಕ್ಕಿರುವುದರಿಂದ ಬರೆಯುತ್ತಿದ್ದೇನೆ.

ನಾನು ಬಂದಿರುವುದು 'ನೇಪಲ್ಸ್' ಎಂಬ ಊರಿಗೆ ಎಂದು ನಿನಗೆ ತಿಳಿಸಿದ್ದೆ. ಈ ನಗರದ ನಿಜವಾದ ಹೆಸರು 'ನಾಪೋಲಿ' ಎಂದು. ಎಲ್ಲೆಡೆಯಂತೆ ಇಂಗ್ಲೀಷಿನವರು ಈ ಊರಿನ ಹೆಸರನ್ನೂ ಕೂಡ ಕುಲಗೆಡಿಸಿದ್ದಾರೆ. ದಕ್ಷಿಣ ಇಟಲಿಯಲ್ಲಿರುವ ಈ ನಗರ ಹೆಚ್ಚೂ ಕಮ್ಮಿ ನಮ್ಮ ಬೆಂಗಳೂರು ಇದ್ದಂತೆಯೇ ಇದೆ. ಕ್ರಿಸ್ತಪೂರ್ವದ ಇತಿಹಾಸವಿದೆ ಇದಕ್ಕೆ. ಅದಕ್ಕೋಸ್ಕರವೇ ಈಗ ಈ ಊರು ಒಂದು ಆಧುನಿಕ ನಗರದವಾಗಿದ್ದರೂ ಕೂಡ ಬಹಳ ಹಳೇ ಹಳೇ ಕಟ್ಟಡಗಳೂ, ಕೋಟೆ ಕೊತ್ತಲುಗಳೂ, ಅದರ ಪಳಿಯುಳಿಕೆಗಳೂ ಸಾಕಷ್ಟು ಕಾಣುತ್ತವೆ. ಯೂರೋಪಿನ ಇತಿಹಾಸದಲ್ಲಿ ಇದಕ್ಕೆ ರಾಜಕೀಯವಾಗಿ ವಿಶಿಷ್ಠ ಸ್ಥಾನವಿದೆ. ಇದು ಸಮುದ್ರ ತೀರದ ಊರಾದುದರಿಂದ ಇಲ್ಲಿನ ಬಂದರು ಮೊದಲಿನಿಂದಲೂ ಅಂದರೆ ರಾಜರ ಕಾಲದಿಂದಲೂ ಬಹುಮುಖ್ಯ ನೆಲೆಯಾಗಿತ್ತಂತೆ. ಇಲ್ಲಿನ ನಗರದ ಒಳಗಿನ ರಸ್ತೆಗಳು ನಮ್ಮ ಊರುಗಳಂತೆಯೇ ಒತ್ತೊತ್ತಾಗಿವೆ. ಸಣ್ಣ ಸಣ್ಣ ರಸ್ತೆಗಳಿಂದ ಕೂಡಿದೆ. ಉತ್ತರ ಇಟಲಿಯ ನಗರಗಳಷ್ಟು ಅಥವಾ ಯೂರೋಪಿನ ಇತರೆಡೆಗಳಲ್ಲಿರುವಂತೆ ಈ ನಗರ ಶಿಸ್ತಾಗಿಲ್ಲ ಎಂದು ಇಲ್ಲಿನವರೇ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನೂ, ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇರುವುದನ್ನೂ, ಕಂಡ ಕಂಡಲ್ಲಿ ಕೂತು ಕುಡಿಯುವುದನ್ನೂ, ಬಾಟಲಿ, ಸಿಗರೇಟು ಬಿಸಾಕುವುದನ್ನೂ, ಸಿಟಿ ಬಸ್ಸುಗಳಲ್ಲಿ, ಗೋಡೆ, ಬೆಂಚುಗಳ ಮೇಲೆಲ್ಲಾ ಗೀಚಿರುವುದನ್ನೂ ಕಾಣಬಹುದು. ಸಿಟಿ ಒಳಗೆ ಪಕ್ಕಾ ಭಾರತದ ವಾತಾವರಣವೇ ಇದೆ. ಜನರಲ್ಲೂ ಕೂಡ ನಾಗರೀಕ ಪ್ರಜ್ಞೆ, ನೈತಿಕ ಪ್ರಜ್ಞೆ ಕಡಿಮೆ ಎಂದೇ ಹೇಳಬಹುದು. ಕೆಲಸದಲ್ಲೂ ಕೂಡ ನಮ್ಮ ತರಹವೇ ಸ್ವಲ್ಪ ಓತ್ಲಾ ಪಾರ್ಟಿಗಳು. ಆದರೂ ನಮ್ಮ ಊರುಗಳಿಗಿಂತ ಸ್ವಲ್ಪ ವ್ಯವಸ್ಥಿತವಾಗಿದೆ. ಸಿಟಿ ಪ್ರದೇಶಗಳನ್ನು ಬಿಟ್ಟು ಸ್ವಲ್ಪ ಹೊರಗೆ ಹೋಗುತ್ತಿದ್ದಂತೇ ವಾತಾವರಣ, ಪರಿಸ್ಥಿತಿ ಚೆನ್ನಾಗಿದೆ. ಟ್ರಾಫಿಕ್ ತೊಂದರೆಯಿಲ್ಲ.:)

ಈಗ ಇಲ್ಲಿ ಚಳಿಗಾಲ ಶುರುವಾಗುತ್ತಿದೆ. ಸದ್ಯಕ್ಕೆ ಅಂತಹ ಚಳಿಯೇನೂ ಇಲ್ಲ. ಇಲ್ಲಿ ಸಸ್ಯಾಹಾರೀ ಆಹಾರವೆಂದರೆ ಬನ್ನು , ಬ್ರೆಡ್ಡು, ಹಣ್ಣು ಹಂಪಲು, ಹಸಿ ಅಥವಾ ಬೇಯಿಸಿ ಮಸಾಲೆ ಹಾಕಿದ ತರಕಾರಿಗಳು, ಹಾಲು, ಮೊಸರು ಇಂಥವಷ್ಟೆ. ಮಾಂಸಾಹಾರವಂತೂ ಚಿತ್ರವಿಚಿತ್ರವಾದುದೆಲ್ಲ ಸಿಗುತ್ತದೆ. ಸಮುದ್ರ ತಟದ ಊರಾದುದರಿಂದ ಏನೇನೋ ಸಮುದ್ರಜೀವಿಗಳನ್ನೂ ಕೂಡ ಆಹಾರವಾಗಿ ಬಳಸುತ್ತಾರೆ. ಶನಿವಾರ ಭಾನುವಾರಗಳಂತೂ ಇಲ್ಲಿ ಕೆಲವು ಕಡೆ ವಿವಿಧ ಮೀನುಗಳು, ಸಮುದ್ರ ಹಾವು, ಆಕ್ಟೋಪಸ್ ತರಹ ಇನ್ನೂ ತರತರಹದ ಸಮುದ್ರ ಜೀವಿಗಳ ಮಾರಾಟ ನೆಡೆಯುತ್ತದೆ. ನಪೋಲಿ ನಗರಕ್ಕೆ ತಾಗಿಕೊಂಡು ಬೀಚ್ ಇಲ್ಲ. ಆದರೆ ಬಂದರು ಇರುವ ಕಡೆ ಕಡಲ ಪಕ್ಕದಲ್ಲೇ ವಿಹರಿಸಲು ಬಹಳ ಸುಂದರವಾದ ರಸ್ತೆಗಳೂ, ತಾಣಗಳೂ ಇವೆ. ಮೈಲುಗಟ್ಟಲೇ ಸಮುದ್ರವನ್ನು ಆನಂದಿಸುತ್ತಾ ಸಾಗಬಹುದು.

ಇಲ್ಲಿ ಇಂಡಿಯನ್ ಹೋಟೆಲ್ಗಳು ಯಾವುವೂ ಇಲ್ಲ. ಬೆಂಗಳೂರಿನ ನನ್ನ ಗೆಳೆಯನೊಬ್ಬ ಹೇಳಿದ ದಾರಿ ಹಿಡಿದು ನಾನು ಪಾಕಿಸ್ತಾನಿ ಹೋಟೆಲ್ ಒಂದಕ್ಕೆ ಹೋಗಿದ್ದೆ. ಅಲ್ಲಿ ರೊಟ್ಟಿ, ಅನ್ನ ಎಲ್ಲ ಸಿಗುವುದೆಂದು ಹೇಳಿದ್ದ. ಅಲ್ಲಿ ಹೋದಾಗ ರೊಟ್ಟಿ, ಅನ್ನವೇನೋ ಸಿಕ್ಕಿತು ಆದರೆ ಜೊತೆಗೆ ವೆಜ್ ಐಟಂಗಳು ಏನೂ ಸಿಗದೇ ನಾನು ಹಾಗೇ ತಡಬಡಾಯಿಸುತ್ತಿರುವಾಗ ಅಲ್ಲಿ ಬಾಂಗ್ಲಾದೇಶದವನೊಬ್ಬ ಪರಿಚಯವಾಯಿತು. ಅವನು ನನ್ನನ್ನು ಇನ್ನೊಂದು ಬಾಂಗ್ಲಾದೇಶಿ ಹೋಟೆಲ್ಲಿಗೆ ಕರೆದುಕೊಂಡು ಹೋದ. ಇಂಡಿಯಾ ಬಾಂಗ್ಲಾ ಫಾಸ್ಟ್ ಪುಡ್ ಎಂದು ಅದರ ಹೆಸರು. ಅವನು ಹೇಳಿದಂತೆಯೇ ಅಲ್ಲಿ ನನಗೆ ಅನ್ನ, ದಾಲ್, ಚಪಾತಿ, ವೆಜೆಟೇಬಲ್ ಸಬ್ಜಿ ಮುಂತಾದವು ದೊರೆತವು. ಸದ್ಯ ಈಗ ರಾತ್ರಿ ಊಟಕ್ಕೆ ಮಾತ್ರ ತೊಂದರೆಯಿಲ್ಲ. ಮಧ್ಯಾಹ್ನ ಮಾತ್ರ ಆಫೀಸಿನಲ್ಲಿ ಅದೇ ಪಾಸ್ತಾ, ಸೊಪ್ಪು ತರಕಾರಿ, ಕಾಳು ಬೀಜ, ಹಣ್ಣು ಹಂಪಲೇ ಗತಿಯಾಗಿದೆ. ಬಗೆ ಬಗೆಯ ಪಿಜ್ಜಾಗಳು, ಕಾಫಿಗಳು ಇಲ್ಲಿ ಸಿಗುತ್ತವೆ. ಪಿಜ್ಜಾ ತಿನ್ನಲು ಹೋಗಿಲ್ಲ ಇನ್ನೂ, ಆದರೆ ದಿನಕ್ಕೊಂದು ತರಹದ ಕಾಫಿಯ ರುಚಿ ನೋಡುತ್ತಿದ್ದೇನೆ.:)


ಅಂದಹಾಗೆ ಹೇಳುವುದು ಮರೆತಿದ್ದೆ. ಈ ನಪೋಲಿ ನಗರದಲ್ಲಿ ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶೀಯರು ಸುಮಾರು ಜನ ಕಾಣಸಿಗುತ್ತಾರೆ. ಅವರಲ್ಲಿ ಹೆಚ್ಚು ಜನ ರಸ್ತೆ ಬದಿಯಲ್ಲಿ ವಸ್ತುಗಳನ್ನು ಮಾರುವವರು ಮತ್ತು ಬೇರೆ ಬೇರೆ ಕಡೆ ಅಂದರೆ ಬಂದರಿನಲ್ಲಿ, ಬಟ್ಟೆ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಕಮ್ಮಿ ಎಲ್ಲರೂ ಅಕ್ರಮ ವಲಸೆಗಾರರು. ಇಲ್ಲಿಯೇ ತಳವೂರಿರುವ ಕೆಲವರು ಈಗೀಗ ಕಿರಾಣಿ ಅಂಗಡಿಗಳನ್ನೂ, ಹೋಟೆಲ್ ಗಳನ್ನು ತೆಗೆದಿದ್ದಾರೆ. ಭಾರತದವರು ಅಂದರೆ ಬೆಂಗಳೂರು, ಮದ್ರಾಸು, ಗೋವಾ ಕಡೆಯವರೂ ಕೆಲವರು ಇಲ್ಲಿ ಹಡಗಿನಲ್ಲಿ ಕೆಲಸ ಮಾಡುತ್ತಾರಂತೆ. ಆದರೆ ಇಲ್ಲಿಯೇ ಉಳಿದುಕೊಳ್ಳುವವರು ಬಹಳ ಕಡಿಮೆಯಂತೆ. ಏಕೆಂದರೆ ಭಾರತದವರಿಗೆ ಇಲ್ಲಿಗಿಂತ ಭಾರತದ ಊರುಗಳೇ ಚಂದ ಅನಿಸುತ್ತದೆ. ಕೆಲವು ಪಂಜಾಬಿಗಳೂ ಅಲ್ಲಲ್ಲಿ ಅಪರೂಪಕ್ಕೆ ಕಾಣುತ್ತಾರೆ. ಪಾಕಿಸ್ತಾನಿ, ಬಾಂಗ್ಲಾದೇಶಿ ಮುಂತಾದ ಏಷ್ಯಾ ಜನರ ಮೇಲೆ ಇಲ್ಲಿನ ಸ್ಥಳೀಯರು ಸ್ವಲ್ಪ ಅಸಹನೆ ತೋರಿಸುತ್ತಾರೆ. ಏನಾದರೂ ಇಟಲಿಯಲ್ಲಿ ಮುಸ್ಲಿಂ ಉಗ್ರಗಾಮಿಗಳ ಕೈವಾಡದಿಂದ ಬಾಂಬ್ ಸ್ಪೋಟವಾದರೆ ಇಲ್ಲಿರುವ ಏಷ್ಯನ್ನರನ್ನು ಒದ್ದೋಡಿಸುವುದು ಗ್ಯಾರಂಟಿ. ಈ ನಪೋಲಿ ನಗರ ಮೊದಲಿನಿಂದಲೂ ಎಲ್ಲ ರೀತಿಯ ಕಪ್ಪು ದಂಧೆಗಳಿಗೆ ಪ್ರಸಿದ್ಧಿಯಂತೆ. ಕೆಲವೊಂದು ಪ್ರದೇಶಗಳಲ್ಲಿ ಸಂಜೆಯಾದ ಮೇಲೆ ಓಡಾಡುವುದೇ ಅಪಾಯವಂತೆ. ನಾನು ಉಳಿದುಕೊಂಡಿರುವ ಹೋಟೆಲ್ಲು ನಗರದ ಕೇಂದ್ರಭಾಗದಲ್ಲಿರುವ 'ಪಿಯಾಜಾ ಗೆರಿಬಾಲ್ಡಿ'(ಗೆರಿಬಾಲ್ಡಿ ಚೌಕ) ಎಂಬಲ್ಲಿ ಇರುವುದರಿಂದ ಏನೂ ತೊಂದರೆಯಿಲ್ಲ.


ನನ್ನ ಆಫೀಸಿನ ಕೆಲಸಗಳು ಚೆನ್ನಾಗಿ ನೆಡೆಯುತ್ತಿವೆ. ಏನೂ ತೊಂದರೆಯಿಲ್ಲ. ನಮ್ಮ ಆಫೀಸಿನಲ್ಲಿ ಇಬ್ಬರಿಗೆ ಮಾತ್ರ ಇಂಗ್ಲೀಷು ಬರುತ್ತದೆ. ಉಳಿದವರ ಹತ್ತಿರ ಏನಿದ್ದರೂ ಸನ್ನೆಗಳಿಂದಲೇ ಮಾತು :). ಇಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು, ಕೆಲವು ಬಿಸಿನೆಸ್ ಮಾಡುವವರು, ತಾಂತ್ರಿಕ ಹುದ್ದೆಯಲ್ಲಿರುವವರಿಗೆ ಕೆಲವರಿಗೆ ಮಾತ್ರ ಇಂಗ್ಲೀಷು ನಿಧಾನಕ್ಕೆ ಮಾತಾಡಿದರೆ ಅರ್ಥವಾಗುತ್ತದೆ ಮತ್ತು ಕೆಲವರು ಇಂಗ್ಲೀಷು ಮಾತನಾಡುತ್ತಾರೆ. ಆದರೆ ಇಟಾಲಿಯನ್ ಭಾಷೆಗೆ ಲ್ಯಾಟಿನ್ ಲಿಪಿಯೇ ಆಗಿರುವುದರಿಂದ ಹೆಸರು ಇತ್ಯಾದಿ ಓದಲು ತೊಂದರೆಯಾಗುವುದಿಲ್ಲ.

ಅಲ್ಲಿಂದ ತಂದಿದ್ದ ಪುಸ್ತಗಳೆಲ್ಲಾ ಸುಮಾರು ಓದಿ ಮುಗಿದವು. ಕಾಕತಾಳೀಯವೊ ಎಂಬಂತೆ ಕಾರಂತರ ’ಅಪೂರ್ವ ಪಶ್ಚಿಮ’ ಎಂಬ ಪುಸ್ತಕವನ್ನೂ ತಂದಿದ್ದೆ. ಅದರಲ್ಲಿ ಕಾರಂತರು ನಪೋಲಿ ಊರಿನಲ್ಲಿ ತಿರುಗಾಡಿ ಬರೆದ ಸ್ವಲ್ಪ ವಿವರಣೆಯಿದೆ. ಆಶ್ಚರ್ಯವೆಂದರೆ ಅವರು ಅದನ್ನು ೧೯೫೪ ರಲ್ಲಿ ಬರೆದಿದ್ದಾದರೂ ಆ ವಿವರಣೆಗೂ ಈಗಿನ ವಾಸ್ತವಕ್ಕೂ ಹೆಚ್ಚು ವ್ಯತ್ಯಾಸವೇನೂ ಇಲ್ಲ! ಇಲ್ಲಿ ಹತ್ತಿರದಲ್ಲೇ ಕೆಲವು ನೋಡುವ ಸ್ಥಳಗಳಿಗೆ ಹೋಗಿದ್ದೆ. ಅದರ ಬಗ್ಗೆ ಮುಂದಿನ ಪತ್ರದಲ್ಲಿ ಬರೆಯುತ್ತೇನೆ.


ಮತ್ತೆಲ್ಲಾ ಕ್ಷೇಮ.

ಇಂತಿ,
ವಿಕಾಸ್

25 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ಪ್ರೀತಿಯ ವಿಕ್ಕಿ,
ನಿನ್ನ ಪತ್ರ ತಲುಪಿತು, ಆದ್ರೆ ಇನ್ಲ್ಯಾಂಡ್ ಲೆಟರ್ ನಲ್ಲಿ ಉತ್ತರ ಕೊಡೋಣಾ ಅಂದುಕೊಂಡೆ, ಆದ್ರೆ ಇಲ್ಲಿಂದ ಕಳ್ಸೋಕ್ಕೆ ಆಗ್ಲಿಲ್ಲ. ನಾನು ಈಗ ಸಧ್ಯಕ್ಕೆ ಜರ್ಮನಿ ಯಾ ಹ್ಯಾಂಬರ್ಗ್ ನಗರದಲ್ಲಿ ಇದ್ದೀನಿ.
ಚಳಿ ಶುರು ಆಗಿದೆ. ಮಿಕ್ಕಿದ್ದನ್ನು, ರಾತ್ರಿ ಮನೆಯಲ್ಲಿ ಬೆಚ್ಚಗೆ ಕುಳಿತು ಬರೀತೀನಿ.

ಸೋಮಾರಿ ಶಂಕ್ರ

Harisha - ಹರೀಶ ಹೇಳಿದರು...

ನೀರಿ??? ಹಂಗಂದ್ರೆ ಯಾರು? :-P

ಹೇಳ್ದೆ ಕೇಳ್ದೆ ಇದ್ದಕ್ಕಿದ್ದಂತೆ ಪೋಟಾಯ್ದ್ಯಲ... ನಪೋಲಿಯ ಪೋಲಿ ;-)

ಹುಷಾರಾಗಿರು :-)

ಅನಾಮಧೇಯ ಹೇಳಿದರು...

ನೀರಿ ಗೀರಿ ಅಂದ್ರೆ ಮುಖ ಮುಸಡಿ ನೋಡದೆ ಗೀರಿ ಬಿಟ್ಟಾಳೋ!!!

'ನೆಪೋಲಿ'ಯಿಂದ ಪೋಲಿ ಲೇಖನ ಬರೆಯೋ!!

ನೀರಿ ಅಂದ್ರೆ ಏನಿರಬಹುದು? ನಿರುಪಮಾನ?

ನಿಮ್ಮ ದೈತ್ಯ ಬರಹಗಾರರು ನೆರಿಗೆ ಲಂಗದ ಹುಡುಗಿ ಅಂತ ತಲೆ ತಿಂದರು. ನೀವು ಈಗ ನೀರಿ ಅನ್ತಿದಿರ.

ಸಂದೀಪ್ ಕಾಮತ್ ಹೇಳಿದರು...

मस्त् म्जा ಮಾಡಿ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಈ ಪೋಸ್ಟ್ ಗೆ ಕಾಯ್ತಾ ಇದಿದಿ:) ನೈಸ್! ಚೊಕ್ಕ ಬರಹ.

ವಿ.ರಾ.ಹೆ. ಹೇಳಿದರು...

ಅಭಿಮಾನಿಗಳ ಕಾಳಜಿ, ಕಾತುರ ನೋಡಿ ಖುಷಿ ಆಯ್ತು :-) thanx

ಬರ್ದಿರೋ ವಿಶ್ಯಕ್ಕಿಂತ 'ನೀರಿ' ಬಗ್ಗೆನೇ ಜಾಸ್ತಿ ಕುತೂಹಲ ನಮ್ಮ್ ಹುಡುಗ್ರಿಗೆ !

Parisarapremi ಹೇಳಿದರು...

ಇಟಲಿಯೆಂದ ತಕ್ಷಣ ನನಗೆ ಗೆಲಿಲಿಯೋ ಮತ್ತು ಪೀಸಾ ಟವರ್ ನೆನಪಾಗುತ್ತೆ ಕಣ್ರೀ.. ಅದರ ಬಗ್ಗೆ ಬರೀರಿಪ್ಪಾ ಹೇಗೋ ಟೈಮ್ ಮಾಡ್ಕೊಂಡು ಅಲ್ಲಿ ಹೋಗಿ ನೋಡ್ಕೊಂಡ್ ಬಂದ್ಬುಟ್ಟು! :-)

ಸೊಗಸಾದ ನಿರೂಪಣೆ!

Harisha - ಹರೀಶ ಹೇಳಿದರು...

@ವಿಕಾಸ, ನಂಗ ಕೇಳಿದ್ದು clarificationಗೆ.. ಹೆಸರು ಹೇಳ್ಬಿಡು.. ಸುಮ್ಮನೆ ಅಪಾರ್ಥ ಯಾಕೆ?

@Ramana ನೀರಜ್, ನೀರಜಾ ಕೂಡ ಇರಬಹುದು!!

@Parisarapremi, ಗೆಲಿಲಿಯೋ ಇಟಲಿಯಲ್ಲಿ ಈಗ್ಲೂ ಸಿಗ್ತಾನಾ?? ;-)

Veena Shivanna ಹೇಳಿದರು...

Vikas avare,
neevu ee blog post annu heege barediddaru idarashte effecct create maadtha ittu, nepoliyallina nimma anubhava kathana bareyudenu bekaagiye illa.:-)

Neeri,
naanu kshema, neenu hegideeya?
mathe patra bareyuve.
-Vikas

Seema S. Hegde ಹೇಳಿದರು...

ವಿಕಾಸ,
ಜಪಾನಿಗೆ ಬಾ... ತಂಬ್ಳಿ, ಮಜ್ಜಿಗೆ ಪಳದ್ಯ, ಅಪ್ಪೆಹುಳಿ ಎಲ್ಲಾ ಮಾಡಿ ಹಾಕ್ತಿ ಅಂದಿ.
ಇಟಲಿಗೆ ಹೋಗಿ ಬರೀ ಹಾಳು ಮೂಳು ತಿಂತಾ ಇದ್ಯ?
Take care. All the very best!

ವಿ.ರಾ.ಹೆ. ಹೇಳಿದರು...

ಪರಿಸರ ಪ್ರೇಮಿಗಳೇ, ನಂಗೂ ಏನೇನೋ ನೆನಪಾಗತ್ತೆ, ಆದ್ರೆ... ಬೆಂಗಳೂರಲ್ಲಿದ್ದವ್ನಿಗೆ ಜೈಪುರ ನೋಡ್ಕಂಡು ಬಂದು ಬರಿಯಪ್ಪ ಅಂತಿದಿರ..ಹ್ಮ್ಮ್. ನೋಡಣ. :)

ಹರೀಶ, ಹಂಗೆಲ್ಲ ಹೇಳಂಗಿಲ್ಲಮ್ಮ :)

ವೀಣಾ ಅವ್ರೆ, ಆವಾಗ ಅದು ಎಸ್ಸೆಮ್ಮೆಸ್ ಆಗ್ತಿತ್ತು :)

ಸೀಮಕ್ಕ ,ಏನ್ ಮಾಡ್ಲಿ, ಜಪಾನಿಗೆ ಅಂತಾನೆ ತಯಾರಾಗಿದ್ದಿದ್ದಿ, ಆದ್ರೆ ದಿಕ್ಕು ತಿರ್ಗೋತು :(

ಯಜ್ಞೇಶ್ (yajnesh) ಹೇಳಿದರು...

ಶ್ರೀ |ಕ್ಷೇಮ| ದಿನಾಂಕ:06-11-2008

ಆತ್ಮೀಯ ವಿಕಾಸನಿಗೆ ಆಶೀರ್ವಾದಗಳು,

ನಿನ್ನ ಪತ್ರ ಬಂದು ತಲುಪಿತು. ನಾನು ಅರಾಮು. ನೀನು ಅರಾಮಿದ್ದೀಯೆಂದು ಭಾವಿಸಿದ್ದೇನೆ. "ದೇಶ ಸುತ್ತು ಮತ್ತು ಕೋಶ ಓದು" ನಾಣ್ಣುಡಿಯಂತೆ ಎರಡನ್ನೂ ಮಾಡುವ ಸುಯೋಗ ನಿನಗೆ ಬಂದಿದ್ದು ಕೇಳಿ ಸಂತೋಷವಾಯಿತು. ಆಫೀಸಿನ ಕೆಲಸ ಯಾವಾಗಲೂ ಇರೋದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ದುಡ್ಡು ಉಳಿಸಬೇಕು ಅಂತ ಸುಮ್ಮನೇ ಹೋಟೆಲ್ಲಿನಲ್ಲಿ ಕುತ್ಗೋಬೇಡ. ಆದಷ್ಟು ಹೊಸತು ಹೊಸತನ್ನು ನೋಡು ಮತ್ತು ಅನುಭವಿಸು. ಆಹಾರದ ಬಗ್ಗೆ ಕಾಳಜಿ ಇರಲಿ.

ಬಿಡುವಾದಾಗ ಪತ್ರ ಬರಿ...

ಹಾಂ, ನೀನು ಪತ್ರವನ್ನು ನೀರಿಗೆ ಬರೆದಿದ್ದರೂ ನಾನು ಉತ್ತರಿಸುತ್ತಿದ್ದೇನೆ. ಮುಂದೆ ಬರೆಯುವಾಗ ನನ್ನ ಹೆಸರನ್ನು ಹಾಕು..ಹ್ಹ ಹ್ಹ ಹ್ಹ

ಅನಾಮಧೇಯ ಹೇಳಿದರು...

Yavagappa Hoje allige? helidde ilyalo maraya.. Ok Take care..
Enjoy maadi :)

Raveendra

ಚಿತ್ರಾ ಸಂತೋಷ್ ಹೇಳಿದರು...

ತರ್ಲೆ ಅಜ್ಜಿ ಬೆಡಿ...
ನಿಮ್ ಪತ್ರ ತಲುಪಿತ್ತು..ನಾವೆಲ್ಲಾ ಆರಾಮವಾಗಿದ್ದೇವೆ. ನಮ್ ಅಜ್ಜಿ ವಿಕಾಸು ಯಾವಾಗ ಬರ್ತಾನೆ ಅಂತಾ ಕೇಳ್ತಾನೆ ಇದೆ ಕಣ್ರೀ..ಅಂದ ಹಾಗೆ..ತುಂಬಾ ಚೆನ್ನಾಗಿದೆ ಬರಹ. ನಮ್ ಭಾರತ ಮತ್ತು ಅಲ್ಲಿಗಿರುವ ಡಿಫರೆನ್ಸುಗಳನ್ನೆಲ್ಲಾ ಬರೀರಿ.ಇನ್ನು ಬರಕ್ಕೆ 14 ದಿನ ಇದೆ ಅಲ್ವಾ? ಬೇಗ ಸೇಫಾಗಿ ಬಂದುಬಿಡ್ರೀ..ಇನ್ನೊಂದು ಪತ್ರಾನ 'ನೀರಿ' ಹೆಸ್ರಲ್ಲಿ ಗೀರಬೇಡಿ..ಒಂಚೂರು ನನ್ ಹೆಸ್ರೂ ಹಾಕ್ರೀ..(:)
ಶುಭವಾಗ್ಲೀ...
ಇಂತೀ,
ಪ್ರೀತಿಯಿಂದ
'ಬದನೆಕಾಯಿ ಗೊಜ್ಜು'

ಅನಾಮಧೇಯ ಹೇಳಿದರು...

ಹುಡ್ಗಾ...

ನಾನು ಓದುವ ಮೊದಲೇ ಬಹಳಷ್ಟು ಜನ ಪತ್ರ ಓದಿಬಿಟ್ಟಿದ್ದಾರೆ.. ಇರಲಿ, ನೀನು ಹೇಳಿದ್ದೆಲ್ಲಾ ವೇದ್ಯವಾಯಿತು. ನೀನಿಲ್ಲದೆ, ನಿನ್ನ ತುಂಟತನಗಳಿಲ್ಲದೆ ಇಲ್ಲಿ ಬೋರು. ಬೇಗ ಬಾ ಅಂತ ಹೇಳಲ್ಲ.ಆರೋಗ್ಯ ನೋಡ್ಕೋ, ಹಾಳು ಮೂಳು ತಿನ್ಬೇಡ ಅಂತ ಎಲ್ಲಾರು ಹೇಳಾಗಿದೆ ಮತ್ತೆ ನಾನು ಹೇಳಬೇಕಿಲ್ಲ. ಬರೀತಿರು. ಕಾಯ್ತಿರ್ತೀನಿ.

ನೀರು

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಮೊದ್ಲಿಗೆ ನೀ ಆರಾಮಿದ್ದೆ ಹೇಳಿ ಗೊತ್ತಾಗಿ ಸಮಾಧಾನ ಆತು. ಅಂತೂ ನೀರಿನೇ ನಿಂಗೆ ಕಾಮೆಂಟ್ ಹಾಕಿದ್ದು ನೋಡು :) ಖುಶಿ ಆತಾ? ಹೇ.. ಸೋನಿಯಮ್ಮನ ತವರು ಮನೆಯವು ಹೇಂಗಿದ್ದೋ? ಹೋಗಿದ್ಯಾ ಮನಿಗೆ? :) ಆರಾಮಿರು.

ತೇಜಸ್ವಿನಿ ಹೆಗಡೆ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

ವಿಕಾಸ,

ನಾನು ನೀರಿ ಅಮ್ಮ ಭೂಮಿ. ನೀನು ನೀರಿಗೆ ಬಹಿರಂಗವಾಗಿ ಬರೆದ ಪತ್ರ ಅವಳಿನ್ನು ಓದಿಲ್ಲ. ಕಾರಣ ನಿನ್ನೆ ಅವಳು ಜಾಸ್ತಿ ನೀರು ಕುಡಿದ್ದಿದ್ದರಿಂದ ನೆಗಡಿಯಾಗಿದೆ. ಮೇಲ್ಗಡೆ ಯಾರೋ ಡುಪ್ಲಿಕೇಟ್ ನೀರಿ ರಿಪ್ಲೈ ಮಾಡಿದ್ದಾರೆ. ಅವಳು ನಿನ್ನ ತಂಗಿ ನೀರಿ ಅಲ್ಲ. ನೀರಿಗೆ ನೀನು ಬರುವಾಗ ರಾಖಿಯನ್ನು ತರಲು ಮರೆಯಬೇಡ.

ಮತ್ತೆಲ್ಲಾ ಅರಾಮು

ಭೂಮಿ

Sushrutha Dodderi ಹೇಳಿದರು...

:D
nice! both- post and comments!

ಪಲ್ಲವಿ ಎಸ್‌. ಹೇಳಿದರು...

ನಪೋಲಿಯಲ್ಲಿ ನೀರಾವರಿ ನಡೆದಿದೆ ಅನಿಸುತ್ತದೆ. ಅದಕ್ಕೆಂದೇ ಥೇಟ್‌ ಆಂಧ್ರ ರೈತರ ಶೈಲಿಯಲ್ಲಿ ನಿಮ್ಮ ಕೃಷಿ ಸಾಮ್ರಾಜ್ಯ ವಿಕಾಸ ಮಾಡಲು ಹೋಗಿದ್ದೀರಾ?

ಅದರ್ಲಿ, ಬರೋದು ಯಾವಾಗ? ಹೇಗಿದೆ ಚಳಿ ಅಲ್ಲಿ?

- ಪಲ್ಲವಿ ಎಸ್‌.

Niranjan ಹೇಳಿದರು...

ನಮಸ್ಕಾರ ...ನಾನು ಚೆನ್ನಾಗಿದ್ದೀನಿ ....ಧನ್ಯವಾದಗಳು ...
ಕಣ್ಣಿಗೆ ಕಟ್ಟುವಂತೆ ಬರೆದಿರುವೆ ...
ಸರಿ ಮತ್ತೆ ಮುಂದಿನ ಪತ್ರದಲ್ಲಿ ಅವರ Tecchnology,developemets ,visions ಮತ್ತು ಅಭಿವೃದ್ದಿಯ ಪರ ಅವರು ತೋರಿಸಿರುವ ದಾರಿಗಳ್ಳನ್ನು ತಿಳಿಸು .

ವಿ.ರಾ.ಹೆ. ಹೇಳಿದರು...

ಯಜ್ಞ್ಯೇಶಣ್ಣ , ನಿಮ್ಮ ಉತ್ತರ ನೋಡಿ ಸಂತೋಷವಾಯಿತು. ನಿಮ್ಮ ಸಲಹೆಗಳನ್ನು ಪಾಲಿಸುವೆ. ಎಲ್ಲಾ ನೋಡ್ತಾ ಇದ್ದಿ , ಆದ್ರೆ ಅನುಭವಿಸದು ಅಂದ್ರೆ ...... :) :)

ರವೀಂದ್ರ, :-)

ಚಿತ್ರಾಗೊಜ್ಜು , ನಿಮ್ಮಜ್ಜಿಗೆ ವಿಕಾಸು ಬರಲ್ವಂತೆ ಅಂತ ಹೇಳಿ. :) thanx

ಹುಡ್ಗಿ(ನೀರು), ನಂಗು ನೀನಿಲ್ದೆ ಬೋರು. ನೀ ಹೇಳದಿದ್ರೂ ಬೇಗ ಬರ್ತೀನಿ. thanx

ತೇಜಕ್ಸ್, ಆ ಸೋನಿಯಮ್ಮನ್ ಕಟ್ಕಂಡು.. ಬಿಡು ಹೋಗ್ಲಿ.. thanx

ಸುಶು, :D

ಪಲ್ಲವಿ, ಏನ್ ನೀರಾವರಿನು ಇಲ್ಲ, ಬೀಜ ಬಿತ್ತನೆನು ಇಲ್ಲ :) ಇನ್ನೊಂದು ಹುಣ್ಣಿಮೆ ಆಗಿ, ಅಮಾವಾಸ್ಯೆ ಬರೋದ್ರೊಳಗೆ ವಾಪಾಸ್ ಬರ್ತೀನಿ, ಚಳಿ ಈಗ ಶುರುವಾಗ್ತಾ ಇದೆ.

ನಿರಂಜನ್, ಸರಿನಮ್ಮ ಬರೀತೀನಿ. thanx

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸಾ....

‘ಎಲ್ಲಾದರೂ ಇರು ಎಂತಾದರು ಇರು’
ಯಾವತ್ತೂ ನೀ ಆರಾಮಾಗಿರು :-)
ಎರಡು ಹೆಸ್ರಿನ ಒಂದೊಂದ್ ಅಕ್ಷರ ತೆಗ್ದು ಒಂದು ಹೆಸ್ರು ಮಾಡಿದಂಗೆ ಕಾಣಿಸ್ತು...:-)
ಹಿಂಗೆ ಚಂದ ಚಂದದ ಪತ್ರ ಬರೀತಾ ಇರು ನೀರಿಗೆ, ಯಂಗ ಎಲ್ಲ ಓದ್ತಾ ಇರ್ತ್ಯ.

ಯಜ್ಞೇಶ್ (yajnesh) ಹೇಳಿದರು...

ಅವರವರ ಭಾವಕ್ಕೆ ಅವರವರ ಭಕುತಿಗೆ ಅಂತ ನಾಣ್ಣುಡಿಯಂತೆ ಅನುಭವ ಅಂದ್ರೆ ಅವರ ಸಾಮರ್ಥ್ಯಕ್ಕೆ ತಕ್ಕ ಹಂಗೆ ಜನ ಅರ್ಥ ಮಾಡ್ಕಿತ್ತ.

ಕೆಲವರು ಒಳ್ಳೆ ಅರ್ಥ(ಪ್ರಕೃತಿಯ ಸೌಂದರ್ಯ ಅನುಭವಿಸಿದೆ) ಅಂತ ತಿಳ್ಕೊಂಡ್ರೆ ಇನ್ನೂ ಕೆಲವರು ಬೇರೆ ರೀತಿ ತಿಳ್ಕತ್ತ. ನಾನು ಹೇಳಿದ್ದು ಒಳ್ಳೆ ಅರ್ಥದಲ್ಲಿ. ನೀನು ಒಳ್ಳೇ ಅರ್ಥದಲ್ಲೇ ಯೋಚಿಸಿದ್ದೆ ಅಂತ ಭಾವಿಸಿದ್ದಿ.

:)

ವಿ.ರಾ.ಹೆ. ಹೇಳಿದರು...

shantalakk,
thanx ;)

yajneshanna,
na olle reetiyalle artha madkandiddi ;) ha ha.