ಮಂಗಳವಾರ, ಜೂನ್ 30, 2009

ಕನಸು ಬಿತ್ತು

ನನಗೊಂದು ಕನಸು ಬಿತ್ತು
ಅದರಲ್ಲಿ ನಾ ಅಳಿಲಾಗಿದ್ದೆ
ದಿಕ್ಕೇ ಇಲ್ಲದೆ ಓಡುತ್ತಿದ್ದೆ
ಮರದ ತುದಿಯವರೆಗೂ ಹತ್ತಿದ್ದೆ

ಮತ್ತೊಂದು ಕನಸು ಬಿತ್ತು
ಮನೆ ಅಂಗಳದ ತುಂಬೆಲ್ಲಾ ಹಾವುಗಳು
ಬಾಲದ ಮೇಲೆ ನಿಂತು ಕುಣಿಯುತ್ತಿದ್ದವು
ಮಧ್ಯದ ಕರಿನಾಗರ ನನ್ನನ್ನೇ ನೋಡುತ್ತಿತ್ತು

ಅಳಿಲು ಓಡುತ್ತಾ ಗುಂಡಿಯಲ್ಲಿ ಬಿತ್ತು
ಕರಿನಾಗರವ ಕಂಡು ದಿಗಿಲಾಗಿತ್ತು
ಅಳಿಲಿನ ಸ್ವಪ್ನ ಅಪರೂಪವಂತೆ
ಹಾವಿನ ಸ್ವಪ್ನ ಶುಭಸೂಚಕವಂತೆ !

ವಿ.ಸೂ : ಇದನ್ನು ಕವನವೆಂದು ತಪ್ಪು ತಿಳಿಯಬಾರದು. :)

17 ಕಾಮೆಂಟ್‌ಗಳು:

Unknown ಹೇಳಿದರು...

"idannu kavanave0du tappu tiLiyabaaradu"

matte atRupta aatmada kanavarikegaLe? e0du kareyale?

ಗೀತಾ ಗಣಪತಿ ಹೇಳಿದರು...

cholo iddu :)

ರಂಜನಾ ಹೆಗ್ಡೆ ಹೇಳಿದರು...

ವಿಕಾಸ್,
ಹೊಸ ಪ್ರಯೋಗ ಮಾಡಿದಿಯಾ.. ಚನ್ನಾಗಿ ಇದೆ. ಹನಿಗವನ ಹೇಳಿ ಕರಿಬಹುದು.
ಎನೋ ಊಟ ಎನಾದ್ರು ಹಾಕಿಸ್ತೀಯಾ ಮತ್ತೆ... :)

ಶ್ರೀನಿಧಿ.ಡಿ.ಎಸ್ ಹೇಳಿದರು...

ತಗಳಪಾ!

ವೆಲ್ ಕಮ್ಮೂ:)

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ಪ್ಚ್.. :)

Parisarapremi ಹೇಳಿದರು...

ಅಯ್ಯೋ, ಹಾವಿನ ಕನಸು ಒಳ್ಳೆಯದಾ? ನನಗೆ ಯಾರೋ ಕೆಟ್ಟದ್ದು ಎಂದು ಹೇಳಿ ನನ್ನಿಂದಲೂ ’ಕನಸಿನ’ ಬಗ್ಗೆ ಬರೆಸಿಬಿಟ್ಟರು! ಕರ್ಮಕಾಂಡ..

Shankar Prasad ಶಂಕರ ಪ್ರಸಾದ ಹೇಳಿದರು...

Physical Chemistry Equation ಥರ ಆಯ್ತಲ್ಲ ವಿಕ್ಕಿ ನಿನ್ನ ಕನಸು ? ಆ ಕಡೆ ಅಳಿಲು, ಈ ಕಡೆ ಕರಿ ನಾಗರ... Balanced Equation aaytalla..ಮತ್ತೆ ಯಾಕೆ ದಿಗಿಲು ?
ಅಪಶಕುನ & ಶುಭಶಕುನ ಎರಡೂ ಕಂಡ ಮೇಲೆ ಏಕೆ ಗಾಬರಿ.. :)

ಕಟ್ಟೆ ಶಂಕ್ರ

ನಾಗಪ್ಪ ಹೇಳಿದರು...

ಹಾವು ಹುತ್ತ ಸೇರುವ ತನಕ ಈ ಕನವರಿಕೆ ಅಲವರಿಕೆ ಇದ್ದಿದ್ದೇ ತಗ.

ಹಾವು ಹುತ್ತ ಸೇರುವ ತನಕ ಈ ಕನವರಿಕೆ ಅಲವರಿಕೆ ಇದ್ದಿದ್ದೇ ತಗ.

ನಾಗ ಪ್ರತಿಷ್ಠೆ ಮಾಡಸ್ತ್ಯ ಅಥವಾ ಕಾಳ ಸರ್ಪ ಯಜ್ಞ ಮಾಡಸ್ತ್ಯ? ಮನ್ನೆ ಯಾರೋ ಆ ಬದಿಗೆ ರಾಜಕಾರಣಿ ಹಳೆ ಸಿನಿಮಾ ನಟಿ ಸಂಗ್ತಿಗೆ ಕಾಳ ಸರ್ಪ ಯಜ್ಞ ಮಾಡ್ಸಿದ್ದು ದೊಡ್ಡ ಸುದ್ದಿ ಆಗಿತ್ತಪ.

ನಾಗಪ್ಪ

ಬಾಲು ಹೇಳಿದರು...

ತಗಳಪ್ಪ!!!! ವಿ.ಸೂ : ಇದನ್ನು ಕವನವೆಂದು ತಪ್ಪು ತಿಳಿಯಬಾರದು. :)

ಮಾರಾಯ ನಿನ್ ಕನಸಲ್ಲಿ ಮುಂಗುಸಿ ಇರಲಿಲ್ವ? :) ಯಾರೋ ಹೇಳ್ತಾ ಇದ್ರೂ ಕನಸುಗಳ ಮೀನಿಂಗ್ ಗಳು ಅವು ಬೀಳೋ ಟೈಮ್ ಮೇಲೆ ಡಿಪೆಂಡ್ ಆಗುತ್ತೆ ಅಂತ.

ಅನಾಮಧೇಯ ಹೇಳಿದರು...

ಹೋಯ್‌ ಇದೇನು ಒಸಾ ಪ್ರಯೋಗ...?!! ಚೆನ್ನಾಗಿದೆ...
ಕೋಡ್ಸರ

ಚಿತ್ರಾ ಹೇಳಿದರು...

ವಿಕಾಸ,

ನೀವು ಬರೆದ ಪದ್ಯ (ಕವನ ಎಂದು ತಪ್ಪು ತಿಳಿಯಬಾರದು ಎಂದು ನೀವೇ ಹೇಳಿದ ಮೆಲೆ ಏನೆಂದು ಕರೆಯಲಿ ಗೊತಾಗಲಿಲ್ಲ !) ಚೆನಾಗಿದೆ.
ಈಗ ಶುಭ ಶಕುನವನ್ನು ಏನೆಂದು ಅರ್ಥೈಸೋಣ ??? ಸಿಹಿ ಊಟ ಏನಾದ್ರೂ .....

ವಿ.ರಾ.ಹೆ. ಹೇಳಿದರು...

ಪ್ರತಿಕ್ರಿಯೆಗಳಿಗೆ ಥ್ಯಾಂಕ್ಸ್.

@ರೂಪಾ, ಬರೀ ಕನವರಿಕೆ ಅನ್ನಿ, ಬಡಬಡಿಕೆ ಅನ್ನಿ, ಅಲವರಿಕೆ ಅನ್ನಿ, ತುರಿಕೆ ಅನ್ನಿ, ಆದ್ರೆ ಅತೃಪ್ತ ಅತ್ಮ ಬೇಡ, ಕವನ ಬೇಡ ! :)

@ಗೀತಾ, ನಿಜ್ವಾಗ್ಲೂ ?!!

@ರಂಜನಾ, ಕವನ ಅಲ್ಲ ಅಂದ್ಮೇಲೆ ಹನಿಗವನವೂ ಅಲ್ಲ.

@ಶ್ರೀನಿಧಿ, ಎಲ್ಲಿಗೆ ವೆಲ್ಕಮ್ಮೂ? ನಾ ಕವನ ಲೋಕಕ್ಕೆ ಬರಲ್ಲ. :)

@ಪೂ, ಪ್ಚ್!

@ಪರಿಸರ, ಜನ ಎರಡು ತರನೂ ಹೇಳ್ತಾರೆ. ಬರ್ದಿದ್ದು ಒಳ್ಳೇದಾಯ್ತು ಬಿಡಿ.

@ಶಂಕ್ರು,.. ಸುಮ್ನೆ ಹೀಗೆ... equation balancing..

@ನಾಗಪ್ಪ, ಏನದು ಹಾವು ಹುತ್ತ!

@ಬಾಲು, ಹೌದಾ! ಯಾವ್ ಟೈಮು ಅಂತ ಮರ್ತೋಗಿದೆ, ಸೋ ಮೀನಿಂಗ್ ಸಿಗಲ್ಲ ಬಿಡು.

@ಕೋಡ್ಸರ್, ನನ್ ಮಟ್ಟಿಗೆ ಒಸಾದೇ!

@ಚಿತ್ರಾ, ಕವನ ಬಿಟ್ಟು ಬೇರೆ ಏನ್ ಕರದ್ರೂ ಓ.ಕೆ.
ಶಕುನ ಅರ್ಥೈಸೋದು ಕಷ್ಟ ಕಷ್ಟ.

Unknown ಹೇಳಿದರು...

nIvu yaavudannu gaaDavaagi bayasidaaga adu kanasinalli baruttade e0du Odida nenapu .. nIvu adu kavana alla e0du hELida mEle nanage adu atRupta aatmada
kanavarikegaLa haage ka0Da kaaraNa haage hELide nimage adu sariyenisadiddare atRupta manasina kanavarikegaLu e0du badalaayisiddEne :-) :-)

Kallare ಹೇಳಿದರು...

ವಿಕಾಸಾ,

ಮತ್ತೊಂದೆರಡು ಬರಲಿ...

ಇದೇನಾದ್ರೂ ಓ.ಸಿ ಜನರ ಕೈಗೆ ಸಿಕ್ಕಿದ್ರೆ ಕಾಸು ಕೊಟ್ಟು ಮತ್ತೊಂದ್ನಾಲ್ಕು ಬರೆ ಅನ್ನೋ ಚಾನ್ಸ್ ಇದೆ. ಹುಶಾರು!

ಧರಿತ್ರಿ ಹೇಳಿದರು...

ಶಿಶುವಾಣಿನೂ ಶುರುವಾಯ್ತಾ?!

ವಿ.ರಾ.ಹೆ. ಹೇಳಿದರು...

ರೂಪಾಜಿ, ಅತೃಪ್ತಿ ಪ್ರಶ್ನೆನೇ ಇಲ್ಲ ಅಲ್ಲಿ :)

ಮಹೇಶ, ಹ್ಹ ಹ್ಹ.. point noted :)

ಧರಿತ್ರಿ, ಹುಂ.. ಇನ್ನು ಯುಗಳ ಗೀತೆಯೂ ಬರತ್ತೆ ಇರು.

ಅನಾಮಧೇಯ ಹೇಳಿದರು...

super kano......... sogasagaithe ........ olleduntu......... innu enara baki i tha..............